Tuesday, September 9, 2014

ಈದ್ ಜಾತ್ರೆ ಭಾಗ - ೧

ಹಿಂದಿಯ ಪ್ರಸಿದ್ಧ ಸಾಹಿತಿ ಪ್ರೇಮಚಂದ್ ಅವರು ಬರೆದ ಒಂದು ಸಣ್ಣ ಕಥೆ "ಈದ್ಗಾಹ"(ईदगाह) ಅದರ ಕನ್ನಡ ಅನುವಾದ .
ಭಾಗ - ೧
ರಂಜಾನ್ ಉಪವಾಸದ ೩೦ ದಿವಸ ಪೂರ್ಣವಾದ ನಂತರ ಈದ್ ಬಂದಿದೆ. 

ಎಲ್ಲೆಡೆ ಎಷ್ಟು ಮನೋಹರ ಎಷ್ಟು ಪಾವನ ಪ್ರಭಾವ, ಮರಗಳಲ್ಲಿ ಒಂದು ವಿಚಿತ್ರ ಹಸಿರುತನ ಹಬ್ಬಿದೆ, ಹೊಲ ತೋಟಗಳಲ್ಲಿ ಒಂದು ವಿಚಿತ್ರ ಸಂಭ್ರಮ ಕಾಣುತ್ತಿದೆ, ಆಕಾಶ ಕೆಂಪೇರಿ ಒಂದು ವಿಚಿತ್ರ ಅನುಭವ ನೀಡುತ್ತಿದೆ,  ಇಂದಿನ ಸೂರ್ಯ, ಎಷ್ಟು ಸುಂದರ ಎಷ್ಟು ಶೀತಲ, ಅಂದರೆ ಅದು ಪೂರ್ಣ ಜಗತ್ತಿಗೆ ಈದ್ ಹಬ್ಬದ ಶುಭಾಶಯ ನೀಡುತ್ತಿದೆ. 
ಊರಲ್ಲಿ ಅದೆಷ್ಟು ಉಲ್ಲಾಸ, ಮಸೀದಿಗೆ ಹೋಗುವ ತಯಾರಿ ನಡೆಯುತ್ತಿದೆ, ಯಾರು ಅಂಗಿಯ ಗುಬ್ಬಿ ಇಲ್ಲದೆ, ನೆರೆಯ ಮನೆಯಿಂದ ಸೂಜಿ ದಾರ ತರಲು ಓಡುತ್ತಿದ್ದ, ಯಾರು ಚಪ್ಪಲಿನ ಚರ್ಮ ದೃಡವಾದ ಕಾರಣ ಅದಕ್ಕೆ ಎಣ್ಣೆ ಹಚ್ಚಲು, ಎಣ್ಣೆ ತರಲು ಓಡುತ್ತಿದ್ದ, ಕೆಲವರು ಹಿಂತಿರುಗಿ ಬರುವಾಗ ಮಧ್ಯಾಹ್ನ ಆಗಬಹುದು ಎಂದು ದನಗಳಿಗೆ ಹುಲ್ಲು ನೀರು ಇಡುತ್ತಿದ್ದರು, ಒಟ್ಟಾರೆ ಎಲ್ಲರೂ ಬೇಗ ಬೇಗ ಕೆಲಸ ಮುಗಿಸಿ ತೆರಳಲು ಸಿದ್ಧವಾಗುತ್ತಿದ್ದರು, ಮೂವತ್ತು ಮೈಲು ನಡೆಯಬೇಕು, ನಂತರ ಹಲವು ಜನರನ್ನು ಭೇಟಿಯಾಗಬೇಕು, ಮಧ್ಯಾಹ್ನದ ಮುಂಚೆ ಬರಲು ಸಾಧ್ಯವೇ ಇಲ್ಲ. 

ಮಕ್ಕಳೆಲ್ಲರೂ ತುಂಬಾ ಉತ್ಸಾಹ ಉಲ್ಲಾಸದಲ್ಲಿದ್ದರು, ಯಾರು ಒಂದು ರೋಜ (ಉಪವಾಸ) ಇಟ್ಟಿದ್ದರು, ಅದೂ ಮಧ್ಯಾಹ್ನ ತನಕ, ಯಾರು ಅಷ್ಟು ಸಹ ಇಟ್ಟಿರಲಿಲ್ಲ, ಆದರೆ ಮಸೀದಿಯ ಅಂಗಳದಲ್ಲಿ ಜರಗುವ ಜಾತ್ರೆಗೆ ಹೋಗುವ ಖುಷಿ ಅವರ ಆತುರತೆ ಸಹಜ, ರೋಜ ಹಿರಿಯರಿಗೆ ಇರಬಹುದು, ಇವರಿಗಂತೂ ಕೇವಲ ಈದ್ ಹಬ್ಬ, ದಿನ ನಿತ್ಯ ಈದ್ ಈದ್ ಎಂದು ಪಠಿಸುತ್ತಿದ್ದವರಿಗೆ, ಇಂದು ಆ ದಿವಸ ಬಂದೆ ಬಂತು, ಈಗ ಅವಸರದಲ್ಲಿದ್ದರೆ ಮಸೀದಿಯ ಅಂಗಳಕ್ಕೆ ಹೋಗಲು, ಇವರಿಗೆ ಸಂಸಾರದ ಕಷ್ಟ ಎಲ್ಲಿ ತಿಳಿದಿದೆ, ಮನೆಯಲ್ಲಿ ಸೇವಿಗೆಯ ಪಾಯಸ ಮಾಡಲು ಹಾಲು, ಸಕ್ಕರೆ ಇದೆಯಾ ಇಲ್ಲವ ಇವರಿಗೇನು ಬಿದ್ದುಹೋಗಿದೆ, ಇವರಿಗಂತೂ ಪಾಯಸ ತಿನ್ನಲಿಕ್ಕೆ ಇದೆ, ಇವರಿಗೇನು ತಿಳಿದಿದೆ ಅಬ್ಬಜಾನ್ ಯಾಕೆ ಸಾಹುಕಾರ ಕಾಯಮ್ ಅಲಿಯ ಮನೆಯತ್ತ ಓಡುತ್ತಿದ್ದಾನೆಯೆಂದು, ಇವರಿಗೇನು ತಿಳಿದಿದೆ ಒಂದು ವೇಳೆ ಸಾಹುಕಾರ ಕಣ್ಣು ತಿರುಗಿಸಿದರೆ ಈ ಎಲ್ಲ ಈದ್ ಮೊಹರಂ ಆಗಬಹುದೆಂದು, ಇವರಂತು  ಜೇಬುಗಳಲ್ಲಿ ಇಂದು ಕುಬೇರ ನೆಲೆಸಿದ್ದಾನೆ, ಇವರಿಗೆ ಪದೇ ಪದೇ ಜೇಬಿನಿಂದ ತೆಗೆದು ತನ್ನ ಖಜಾನೆ ಎಣಿಸುವುದು ನಂತರ ಸಂತೋಷದಿಂದ ಪುನಃ ಅದನ್ನು ಜೇಬಿನಲ್ಲಿ ಇಡುವುದೊಂದೇ ಕೆಲಸವಾಗಿದೆ, ಮೆಹಮೂದ್ ಎಣಿಸುತ್ತಾನೆ ಒಂದು, ಎರಡು, ಹತ್ತು ಹನ್ನೆರಡು ಅವನ ಹತ್ತಿರ ಹನ್ನೆರಡು ಪೈಸೆ ಇದೆ, ಮೋಹಸಿನನ ಹತ್ತಿರ ಒಂದು, ಎರಡು, ಎಂಟು, ಒಂಬತ್ತು, ಹದಿನೈದು ಪೈಸೆ ಇದೆ, ಇಷ್ಟೆಲ್ಲಾ ಹಣದಿಂದ ಅದೆಷ್ಟೋ ವಸ್ತುಗಳನ್ನು ಖರೀದಿಸಬಹುದು, ಆಟಿಕೆ , ಮಿಠಾಯಿ, ಚೆಂಡು ಮತ್ತೆ ಏನೇನು.

ಮತ್ತೆ ಎಲ್ಲರಿಂದ ಹೆಚ್ಚು ಖುಷಿಯಲ್ಲಿದ್ದ ಹಮೀದ್, ಹಮೀದ್ ನಾಲ್ಕು ಐದು ವರ್ಷದ ಮುದ್ದು ಮುಖದ ತೆಳ್ಳನೆಯ ಶರೀರದ ಸಣ್ಣ  ಹುಡುಗನಾಗಿದ್ದ, ಅವನ ತಂದೆ ಕಳೆದ ವರ್ಷ ಕಾಲರಾ ರೋಗದಿಂದ ತೀರಿ ಹೋಗಿದ್ದರು ಮತ್ತು ಅವನ ತಾಯಿ ಅದೇಗೋ ಹಳದಿ ಹಳದಿಯಾಗಿ ಒಂದು ದಿನ ಅವಳು ಸಹ ಮೃತ್ಯು ಮಾರ್ಗಕ್ಕೆ ತೆರಳಿದಳು, ಯಾರಿಗೊತ್ತು ಯಾವ ರೋಗವಿತ್ತೆಂದು, ಅವಳು ಒಂದು ವೇಳೆ ಹೇಳುತ್ತಿದ್ದರೂ, ಯಾರಿಲ್ಲಿ ಕೇಳುವವರಿದ್ದರು? ತನ್ನ ದುಃಖವನ್ನು ಮನಸ್ಸಲ್ಲೇ ಅಡಗಿಸಿ ಒಂದು ದಿನ ಜಗತ್ತಿಗೆ ವಿದಾಯ ಹೇಳಿದಳು ಪಾಪ.

ಈಗ ಪುಟ್ಟ ಹಮೀದ್ ತನ್ನ ಮುದಿ ಅಜ್ಜಿ ಅಮೀನಾಳ ಮಡಿಲಲ್ಲಿ ಮಲಗುತ್ತಿದ್ದ ಹಾಗು ಅಷ್ಟೇ ಸಂತೋಷದಲ್ಲಿರುತ್ತಿದ್ದ, ಅಜ್ಜಿಯ ಮಾತು ಕೇಳಿ ಅದೆಷ್ಟೋ ಕನಸು ಕಟ್ಟಿದ್ದಅಬ್ಬಜಾನ್ ರೂಪಾಯಿ ಗಳಿಸಲು ಹೋಗಿದ್ದಾರೆ, ಬರುವಾಗ ಅದೆಷ್ಟೋ ದೊಡ್ಡ ದೊಡ್ಡ ಚೀಲ ತುಂಬಿ ತರುತ್ತಾರೆ, ಅಮ್ಮಿಜಾನ್ ಅಲ್ಲಾ ಮೀಯಾನ ಮನೆಗೆ ಹೋಗಿದ್ದಾರೆ, ಅಲ್ಲಿಂದ ಬರುವಾಗ ಒಳ್ಳೆ ಒಳ್ಳೆ ವಸ್ತು ತರುತ್ತಾರೆ, ಅದಕ್ಕಾಗಿ ಹಮೀದ್ ಖುಷಿಯಲ್ಲಿದ್ದ, ಅವನ ಈ ಭರವಸೆಯ ಕಾರಣ ಅವನ ಅಜ್ಜಿ ಹೇಳುತ್ತಿದ್ದ ಸುಳ್ಳು ಕಥೆಗಳು, ಭರವಸೆ ದೊಡ್ಡ ವಿಷಯ, ಅದರ ಮೇಲೆ ಮಕ್ಕಳ ಭರವಸೆ ಅಂದರೆ, ಅವರು ಕಲ್ಪನೆಯ ಆಗಸದಲ್ಲಿ ವಿಹರಿಸುತ್ತಾ ಎಲ್ಲಿಂದ ಎಲ್ಲಿ ಹೋಗುತ್ತಾರೆ, ಹಮೀದನ ಕಾಲಲ್ಲಿ ಚಪ್ಪಲಿ ಸಹ ಇರಲಿಲ್ಲ, ತಲೆಯಲ್ಲಿ ಒಂದು ಹಳೆಯ ಟೋಪಿ ಇತ್ತು, ಅದೂ ಕಪ್ಪುಗಟ್ಟಿದೆ, ಆದರೂ ಅವನು ಖುಷಿಯಲ್ಲಿದ್ದಾನೆ, ಅವನ ಅಬ್ಬಜಾನ್, ಅಮ್ಮಿಜಾನ್ ತುಂಬಾ ವಸ್ತುಗಳನ್ನು ತಂದಾಗತನ್ನ ಈ ಎಲ್ಲ ಆಸೆಯನ್ನು ಈಡೇರುಸುತ್ತೇನೆ, ನಂತರ ನೋಡುವೆ ಹೇಗೆ ಮೋಹಸಿನ್, ನೂರೆ, ಸಮ್ಮಿ ಅವರೆಲ್ಲ ಎಲ್ಲಿಂದ ಅವನಷ್ಟು ಹಣ ತರುತ್ತಾರೆಯೆಂದು.

ದುರ್ದೈವಿ ಅಮೀನಾ ಕೋಣೆಯಲ್ಲಿ ಕುಳಿತು ಅಳುತ್ತಿದ್ದಳು, ಇಂದು ಈದ್, ಆದರೂ ಅವಳ ಮನೆಯಲ್ಲಿ ಒಂದು ಕಾಳು ಸಹ ಇಲ್ಲ, ಇಂದು ಒಂದು ವೇಳೆ ಅಬೀದ್ (ಹಮೀದನ ತಂದೆ) ಇರುತ್ತಿದ್ದರೆ, ಈ ರೀತಿ ಏನು ಈದ್ ಬರುತಿತ್ತಾ, ಅಂಧಕಾರ ಹಾಗು ನಿರಾಸೆಯಲ್ಲಿ ಅವಳು ಮುಲುಗಿದ್ದಳು. ಯಾಕೆ ಬಂತು ಈ ಈದ್, ಇಲ್ಲಿ ಅದರದೇನೂ ಕೆಲಸ ಇಲ್ಲ, ಆದರೆ ಹಮೀದ್, ಯಾರ ಬದುಕು ಸಾವಿನಿಂದ ಅವನಿಗೆ ಏನು, ಅವನ ಒಳಗೆ ಪ್ರಕಾಶವಿದೆ ಹೊರಗೆ ಭರವಸೆ, ಅಯ್ಯೋ ವಿಪತ್ತು ತನ್ನ ಪೂರ್ಣ ಶಕ್ತಿಯೊಂದಿಗೆ ಬಂದಿದೆ, ಹಮೀದನ ಸಂತೋಷದಲ್ಲಿದ ಈ ಕಣ್ಣುಗಳು ಅವಳ ವಿಧ್ವಂಸ ಮಾಡಬಹುದು.

ಹಮೀದ್ ಒಳಗೆ ಬಂದು ಅಜ್ಜಿಯಿಂದ "ಅಮ್ಮ ನೀನು ಹೆದರಬೇಡ, ಎಲ್ಲರಿಂದ ಮುಂಚೆ ನಾನು ಬರುತ್ತೇನೆ, ಸ್ವಲ್ಪ ಸಹ ಹೆದರಬೇಡ, ಅಮೀನಾಳ ಹೃದಯ ಕಿತ್ತು ಹೋದಂತಾಯಿತು, ಊರಿನ ಎಲ್ಲ ಮಕ್ಕಳು ತನ್ನ ತಂದೆಯ ಜೊತೆ ಹೋಗುತ್ತಾರೆ, ಆದರೆ ಹಮೀದ್, ಅವನ ನನ್ನ ಹೊರತು ಇಲ್ಲಿ ಯಾರಿದ್ದಾರೆ, ಹೇಗೆ ಅವನಿಗೆ ನಾನು ಜಾತ್ರೆಗೆ ಹೋಗಲು ಬಿಡುವುದು, ಎಲ್ಲಿ ಅವನು ಕಳೆದು ಹೋದರೆಇಲ್ಲ ಅಮೀನಾ ಅವನನ್ನು ಹೀಗೆ ಹೋಗಲು ಬಿಡುವುದಿಲ್ಲ, ಪುಟ್ಟ ಮಗು! ಮೂವತ್ತು ಮೈಲು ನಡೆಯುವುದು ಆದರೂ ಹೇಗೆ, ಕಾಲಿಗೆ ಗಾಯವಾಗಬಹುದು, ಚಪ್ಪಲಿ ಸಹ ಇಲ್ಲ, ಅವಳು ಹೋಗುತ್ತಿದ್ದರೆ ಅವನ್ನು ಎತ್ತಿಕೊಂಡು ಹೋಗುತ್ತಿದ್ದಳು, ಆದರೆ ಅವಳು ಹೋಗುವುದು ಹೇಗೆ, ಅವಳು ಹೋದರೆ ಇಲ್ಲಿ ಪಾಯಸ ಯಾರು ಮಾಡುವುದು? ಹಣ ಇರುತ್ತಿದ್ದರೆ, ಅಲ್ಲಿಂದ ಬರುವಾಗ ಸಾಮಾನು ತಂದು ತಕ್ಷಣವೇ ಪಾಯಸ ಮಾಡಬಹುದಿತ್ತು, ಆದರೆ ಈಗ ಸಾಮಾನು ಒಟ್ಟು ಮಾಡುವುದರಲ್ಲಿ ಅದೆಷ್ಟು ಸಮಯ ಹೋಗುವುದೋ, ಈಗ ನೆರೆಹೊರೆಯಿಂದ ಕೇಳುವುದೊಂದೇ ಆಸರೆ, ಆ ದಿನ ಫಾಹಿಮನ್ ಅವನ ಬಟ್ಟೆ ಹೊಲಿದು ಕೊಟ್ಟಿದ್ದೆ, ಅದರ ಅವನು ೫೦ ಪೈಸೆ ಕೊಟ್ಟಿದ್ದ, ಅದನ್ನು ಈದ್ ಹಬ್ಬಕ್ಕಾಗಿ ಜತನದಿಂದ ಇಟ್ಟಿದೆ, ಆದರೆ ಹಾಲು ಕೊಡುವವಳು ಹಣಕ್ಕಾಗಿ ತಲೆಗೆ ಬಂದು ನಿಂತಳು, ಏನಿಲ್ಲದಿದ್ದರೂ ಹಮೀದ್ ಗೋಸ್ಕರ ೨ ಪೈಸೆಯ ಹಾಲಾದರೂ ಬೇಕಲ್ಲವೇ, ಈಗ ಅವಳಿಗೆ ಹಣ ಕೊಟ್ಟು ೮ ಪೈಸೆ ಉಳಿದಿದೆ. ಅದರಲ್ಲಿ ೩ ಪೈಸೆ ಹಮೀದನಿಗೆ ಕೊಟ್ಟಿದೇನೆ, ೫ ಪೈಸೆ ನನ್ನ ಬಳಿ ಉಳಿದಿದೆ, ಈ ಸ್ಥಿತಿ ಇದೆ ಹಾಗು ಈದ್ ಹಬ್ಬ, ಅಲ್ಲಾನೆ ಈಗ ಕಾಪಾಡಬೇಕು, ಮತ್ತೆ ಮಡಿವಾಳ, ಕ್ಷೌರಿಕ ಅವರು ಇವರೆಂದು ಎಷ್ಟೇ ಜನರು ಬರುತ್ತಾರೆ, ಸ್ವಲ್ಪ ಪಾಯಸ ಕೊಟ್ಟರೆ ಅವರಿಗೆ ಸಾಕಾಗುವುದಿಲ್ಲ, ಯಾರಿಂದ ತಾನೇ ಅವಳು ತನ್ನ ಮುಖ ಅಡಗಿಸುವುದು, ಮತ್ತೆ ಯಾಕೆ ಮುಖ ಅಡಗಿಸಲಿ, ವರ್ಷಕ್ಕೊಮ್ಮೆ ಬರುವ ಪವಿತ್ರ ಹಬ್ಬ, ನಮ್ಮ ಜೀವನ ಸುಗಮವಾಗಲಿ ಅಷ್ಟೇ ತಾನೇ ಅವರು ಬಯಸುವುದು, ಅವರೆಲ್ಲರ ಭಾಗ್ಯ ಸಹ ನಮ್ಮ ಜೊತೆ ಸೇರಿದೆ ತಾನೇ, ಮಗು ಹೋಗಿ ಬರಲಿ, ಬೇರೆ ಊರಿನ ಇತರ ಮಕ್ಕಳು ಸಹ ಇದ್ದಾರೆ ಜೊತೆಯಲ್ಲಿ, ಅಲ್ಲಾ ಒಳ್ಳೆಯದ್ದೆ ಮಾಡುವನು, ಈ ದಿನ ಸಹ ಕಳೆದು ಹೋಗುವುದು ಎಂದು ಅಮೀನಾ ಈ ಎಲ್ಲ ಯೋಚನೆಯಿಂದ ಹೊರ ಬಂದಳು.

(ಮುಂದುವರಿಯುವುದು)

ಮೂಲ : ಪ್ರೇಮಚಂದ್

ಕನ್ನಡ ಅನುವಾದ : ಹರೀಶ್ ಶೆಟ್ಟಿ, ಶಿರ್ವ

1 comment:

  1. ಪ್ರೇಮ್ ಚಂದ್ ಅವರು ರಂಜಾನನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿಕೊಟ್ಟಿದ್ದಾರೆ.

    ಹಮೀದ್ ಮತ್ತು ಅಮೀನಾರ ಮೂಲಕ ಬಡತನ ಮತ್ತು ಆ ಕಾಲದ ಪೈಸೆಗಳ ಲೆಕ್ಕವು, ನನ್ನ ಬಾಲ್ಯವನ್ನೂ ನೆನಪಿಸಿತು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...