Saturday 6 September 2014

ನನ್ನೊಲವೆ ನಿನಗೆ

ನನ್ನೊಲವೆ ನಿನಗೆ
ನನ್ನ ಪ್ರೀತಿಯ ಆಣೆ
ಮತ್ತೊಮ್ಮೆ ನಿನ್ನ
ಅರಳುವ ಕಂಗಳ ಆಸರೆ ನೀಡು
ನನ್ನ ಕಳೆದೋದ
ವರ್ಣಮಯ ನೋಟಗಳ ಉಡುಗೊರೆ ನೀಡು

ಓ ನನ್ನ ಕನಸಿನ ಅರ್ಥವೇ
ನನ್ನ ಸಾಹಿತ್ಯದ ರಾಣಿಯೇ
ಜೀವನ ನನ್ನ
ನಿನ್ನನ್ನು ನೆನಪಿಸುತ್ತಿರುತ್ತದೆ
ಹಗಲು ರಾತ್ರಿ ನನ್ನನ್ನು
ಸತಾಯಿಸುತ್ತಿರುತ್ತದೆ ಕಲ್ಪನೆ ನಿನ್ನ
ಹೃದಯದ ಬಡಿತ
ನಿನ್ನನ್ನು ಕರೆಯುತ್ತಿರುತ್ತದೆ
ಬಾ ನನಗೆ ನಿನ್ನ ಧ್ವನಿಗಳ ಆಸರೆ ನೀಡು
ನನ್ನ ಕಳೆದೋದ...

ಮರೆಯಲಾರದು ಈ ಕಂಗಳು
ಆ ಮೋಹಕ ದೃಶ್ಯ
ಅಂದು ನಿನ್ನ ಯೌವನ ಮತ್ತು
ನನ್ನ ಪ್ರೀತಿಯ ಸಾಕ್ಷಾತ್ಕಾರವಾಗಿತ್ತು
ಹಾಗು ಹಾದಿಯಲಿ ಹರಡಿತ್ತು
ಸಾವಿರಾರು ಗೀತೆಗಳು
ಹೃದಯ ಸಂಗೀತಕ್ಕೆ ಆ ಗೀತೆಗಳ ಆಸರೆ ನೀಡು
ನನ್ನ ಕಳೆದೋದ...

ನೆನಪಿದೆ ನನಗೆ ನನ್ನ ವಯಸ್ಸಿನ
ಮೊದಲ ಆ ಕ್ಷಣ
ನಿನ್ನ ಕಂಗಳಿಂದ
ಅದ್ಯಾವುದೇ ಅಮೃತ ಕುಡಿದಿದ್ದೆ ನಾನು
ನಿನ್ನ ನಾಜೂಕು ಕೈಗಳನ್ನು ಸ್ಪರ್ಶಿಸಿದಾಗ
ನನ್ನ ರೋಮ ರೋಮದಲಿ ಕಿಡಿ ಓಡಿ ದಂತಾಗಿತ್ತು
ಬಾ ನನಗೆ ಅದೇ ಕೈಗಳ ಆಸರೆ ನೀಡು
ನನ್ನ ಕಳೆದೋದ...

ನಾನೊಂದು ಸಲವೇ
ನಿನ್ನ ನೋಟ ನೋಡಿದ್ದೆ
ನಿನ್ನನ್ನು ಭೇಟಿಯಾಗಬೇಕು ಎಂಬ ಬಯಕೆಯಾಗಿದೆ
ನಿನ್ನ ನೆರಳನ್ನು
ಸುಂದರ ತಾಜ್ ಮಹಲ್ ಎಂದು ಅರ್ಥೈಸಿ
ಹುಣ್ಣಿಮೆ ರಾತ್ರಿಯಲಿ
ದೃಷ್ಟಿಯಿಂದಲೇ ನಿನ್ನನ್ನು ಪ್ರೀತಿಸುವೆ
ಬಾ ನಿನ್ನ ಸುಗಂಧಿತ ಕೇಶಗಳ ಆಸರೆ ನೀಡು
ನನ್ನ ಕಳೆದೋದ...

ಹುಡುಕುವೆ ನಿನ್ನನ್ನು
ಪ್ರತಿಯೊಂದು ಹಾದಿಯಲಿ ಪ್ರತಿಯೊಂದು ಸಭೆಯಲಿ
ಆಯಸಗೊಂಡಿದೆ
ನನ್ನ ಬಯಕೆಗಳ ಪಾದಗಳು
ಇಂದಿನ ದಿನ
ನನ್ನ ಭರವಸೆಯ ಕೊನೆಯ ದಿನವಾಗಿದೆ
ನಾಳೆ ಅದ್ಯಾರಿಗೆ ತಿಳಿದಿದೆ
ನೀನೆಲ್ಲೋ ನಾನೆಲ್ಲೋ
ಬಾ ಎರಡು ಕ್ಷಣ ನಿನ್ನ ನಯನಗಳ ಆಸರೆ ನೀಡು
ನನ್ನ ಕಳೆದೋದ...

ಎದುರು ಬಂದು ಸ್ವಲ್ಪ
ಮುಖಪರದೆಯನ್ನು ಸರಿಸು
ಇದೊಂದೇ ನನ್ನ
ದುಃಖ ಏಕಾಂತದ ಔಷದಿಯಾಗಿದೆ
ನಿನ್ನ ಅಗಲಿಕೆಯಿಂದ ವಿಚಲಿತಗೊಂಡಿದ್ದೇನೆ
ಈಗಂತೂ ಬಂದು ಬಿಡು
ಅಂದರೆ ಇನ್ನು ನನ್ನ ಈ ಜೀವ ನನ್ನ ಹತೋಟಿಯಲ್ಲಿಲ್ಲ
ಬಾ ಹೃದಯಕ್ಕೆ ಮರೆತೋದ ನೆನಪುಗಳ ಆಸರೆ ನೀಡು
ನನ್ನ ಕಳೆದೋದ...

ಮೂಲ : ಶಕೀಲ್ ಬದಾಯುನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು: ಮೊಹಮ್ಮದ್ ರಫಿ
ಸಂಗೀತ : ನೌಶಾದ್
ಚಿತ್ರ : ಮೇರೆ ಮೆಹಬೂಬ್

मेरे महबूब तुझे मेरी मोहब्बत की कसम
फिर मुझे नर्गिसी आँखों का सहारा दे दे
मेरा खोया हुआ रंगीन नज़ारा दे दे

ऐ मेरे ख्वाब की ताबिर, मेरी जान-ए-ग़ज़ल
जिंदगी मेरी तुझे याद किए जाती है
रात दिन मुझ को सताता है तसव्वुर तेरा
दिल की धड़कन तुझे आवाज़ दिए जाती है
आ मुझे अपनी सदाओं का सहारा दे दे

भूल सकती नहीं आँखे वो सुहाना मंज़र
जब तेरा हुस्न मेरे इश्क से टकराया था
और फिर राह में बिखरे थे हज़ारो नग्में
मैं वो नग्में तेरी आवाज़ को दे आया था
साज-ए-दिल को उन्ही गीतों का सहारा दे दे

याद है मुझको मेरी उम्र की पहली वो घड़ी
तेरी आँखोंसे कोई जाम पिया था मैने
मेरी रग रग में कोई बर्क सी लहराई थी
जब तेरे मर्मरी हाथों को छुआ था मैने
आ मुझे फिर उन्ही हाथों का सहारा दे दे

मैने एक बार तेरी एक झलक देखी है
मेरी हसरत है के मैं फिर तेरा दीदार करू
तेरे साए को समझ कर मैं हसीं ताजमहल
चाँदनी रात में नज़रोंसे तुझे प्यार करू
अपनी महकी हुई जुल्फों का सहारा दे दे

ढूंढता हूँ तुझे हर राह में हर महफील में
थक गये है मेरी मजबूर तमन्ना के कदम
आज का दिन मेरी उम्मीद का है आखरी दिन
कल ना जाने मैं कहा और कहा तू हो सनम
दो घड़ी अपनी निगाहों का सहारा दे दे

सामने आ के ज़रा परदा उठा दे रुख़ से
एक यही मेरा इलाज-ए-गम-ए-तनहाई है
तेरी फ़ुर्क़त ने परेशान किया है मुझको
अब तो मिल जा के मेरी जान पे बन आई है
दिल को भूली हुई यादों का सहारा दे दे
(song courtesy :geetmanjusha)
http://www.youtube.com/watch?v=agxjCItG7EM

2 comments:

 1. ಶಕೀಲ್ ಬದಾಯುನ್ವಿ ಅವರ ಬಗ್ಗೆ ಇದೀಗ ಓದಿಕೊಂಡೆ. 70 ರಲ್ಲಿ ಮಡಿದ ಈ ಕವಿಯ ರಚನೆಗಳು ನೆಚ್ಚಿಗೆಯಾದವು.
  ’ಆಯಸಗೊಂಡಿದೆ
  ನನ್ನ ಬಯಕೆಗಳ ಪಾದಗಳು’ ಕ್ಯಾ ಬಾತ್ ಹೈ...
  ರಫೀ ಸಾಬ್ ultimate.

  ಜಿ. ಸಿಂಗರ ಛಾಯಾಗ್ರಹಣವಿತ್ತು.

  ReplyDelete
 2. ತುಂಬಾ ಧನ್ಯವಾದಗಳು ಬದರಿ ಸರ್.

  ReplyDelete