Tuesday, September 16, 2014

ಅದು ನಾನೇನಲ್ಲ

ಹಗಲು ಸಂಜೆ
ನಿನ್ನ ನಾಮ ಜಪಿಸಿ
ನಿನ್ನ ಹಿಂದೆ ಮುಂದೆ
ಓಡಾಡುತ್ತಿದ್ದವನು
ಅದು ನಾನೇನಲ್ಲ

ಪತ್ರ ಬರೆದು
ಹತ್ತಿರ ಕರೆದು
ಪ್ರೀತಿಸುವೆಯೆಂದು ಹೇಳದೆ
ಮೂಕನಂತೆ ಸುಮ್ಮನೆ ನಿಂತವನು
ಅದು ನಾನೇನಲ್ಲ

ನನ್ನ ಮೌನ ಭಾಷೆ ಅರಿತು
ಪ್ರೀತಿಗೆ ನಿನ್ನ ಒಪ್ಪಿಗೆ
ಸಿಕ್ಕಿದ ನಂತರ
ಹರ್ಷದಿ ನಿನ್ನನ್ನು ಅಪ್ಪಿಕೊಂಡವನು
ಅದು ನಾನೇನಲ್ಲ

ನದಿಯ ಕಿನಾರೆ
ನಿನ್ನ ಮಡಿಲಲ್ಲಿ ಮಲಗಿ
ನಿನ್ನೊಟ್ಟಿಗೆ ಅದೆಷ್ಟೋ
ಹಗಲುಗನಸು ಕಟ್ಟಿದವನು
ಅದು ನಾನೇನಲ್ಲ

ಅವಸರದಿ ಬಂದು
ನಾವು ಈಗಲೇ
ಓಡಿ ಹೋಗಿ ಮದುವೆಯಾಗುವ
ಎಂದು ಹಠ ಹಿಡಿದರೂ ಕೇಳದವನು
ಅದು ನಾನೇನಲ್ಲ

ನಿನ್ನ ಮದುವೆಯಂದು
ಅತ್ತು ಅತ್ತು
ಊರ ಸುತ್ತು ಸುತ್ತು
ಹುಚ್ಚನಂತೆ ತಿರುಗುತ್ತಿದ್ದವನು
ಅದು ನಾನೇನಲ್ಲ

ಹೌದು
ಅದು ನಾನಲ್ಲ
ನನ್ನಲ್ಲಿದ್ದ ಒಬ್ಬ
ಗತಿಸಿದ ಪ್ರೇಮಿ
ಅದು ನಾನೇನಲ್ಲ

by ಹರೀಶ್ ಶೆಟ್ಟಿ, ಶಿರ್ವ

2 comments:

  1. ನಾನೂ ಒಬ್ಬ 'ಗತಿಸಿದ ಪ್ರೇಮಿ'. ಅದಕ್ಕೇ ಈಗ ಕವಿ ಎಂಬ ಹಣೆ ಪಟ್ಟಿ ಕಟ್ಟಿಕೊಂಡು ಓಡಾಡುತ್ತಿರುವೆ!

    ReplyDelete
    Replies
    1. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್. :)

      Delete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...