Wednesday 10 September 2014

ಬದುಕ ಬಂಡಿ

ಬಂಡಿ
ಸಾಗುವುದಿಲ್ಲ
ಅದರಲ್ಲಿ
ತುಂಬಾ ಭಾರವನ್ನು
ತುಂಬಿದ್ದರೆ
ನಮ್ಮ ಬದುಕು ಸಹ
ಹಾಗೆಯೇ ಗೆಳತಿ
ಸಂಶಯ, ದುರಹಂಕಾರ
ಹಠ, ಮೌನ, ಕ್ರೋಧಗಳ
ಭಾರ ನಮ್ಮ ಬದುಕಲಿ
ತುಂಬಿದರೆ
ಬದುಕ ಬಂಡಿ ಸಾಗದು
ವಿಶ್ವಾಸ ಪ್ರೀತಿ
ಕಾಳಜಿಯ ತೂಕ
ತುಂಬಾ ಹಗುರ
ಅದನ್ನೇ ತುಂಬಿಸಿ
ಸಾಗಿದರೆ
ಜೀವನ ಸುಗಮ

by ಹರೀಶ್ ಶೆಟ್ಟಿ,ಶಿರ್ವ  

2 comments:

  1. ಚಿಂತೆಗಳು ಚಿತೆಗಳೊಳಗೇ ಮನದಿ
    ಹರುಷವೊಂದೇ ಹಗುರ ಎದೆ ಗೂಡಿಗೆ

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete