Wednesday, September 3, 2014

ಹಾತೊರೆದು ನನ್ನನ್ನು

!!ಹಾತೊರೆದು ನನ್ನನ್ನು
ಹೀಗೆ ಹೋಗಬೇಡ ನೀನು
ನಿನಗೆ ನನ್ನಾಣೆ
ಹಿಂತಿರುಗಿ ಬಾ ನೀನು!!

!!ನೋಡು ಆ
ಕರಿ ಕರಿ ಮೋಡಗಳನ್ನು
ಕದ್ದುಕೊಳ್ಳದಿರಲಿ ಕೇಶದ ಮುಗಿಲನ್ನು
ಮೆಲ್ಲ ಮೆಲ್ಲನೆ ಬಂದು
ತುಂಟ ಮಿಂಚುಗಳು
ಕದ್ದುಕೊಳ್ಳದಿರಲಿ ನಿನ್ನ ನಿಖರತೆಯನ್ನು
ಹೀಗೆ ಮುಂದೆ ಹೆಜ್ಜೆಯನ್ನು ಇಡದಿರು ನೀನು!!
ನಿನಗೆ ನನ್ನ ಆಣೆ...

!!ನೋಡು ಆ
ಗುಲಾಬಿಯ ಶಾಖೆಗಳನ್ನು
ಚುಂಬಿಸದಿರಲಿ ಮುಂದೆ ಬಂದು ನಿನ್ನ ಹೆಜ್ಜೆಗಳನ್ನು
ಸೋತು ಹೋದ
ಭ್ರಮರಗಳು ಇದೆ ಉದ್ಯಾನದಲಿ
ಯಾರು ಬಂದು ತನ್ನ ಪ್ರೇಯಸಿ ಮಾಡದಿರಲಿ ನಿನ್ನನ್ನು
ಅಮಲಲ್ಲಿದ್ದ ದೃಷ್ಟಿಯಿಂದ ತನ್ನನ್ನು ರಕ್ಷಿಸು ನೀನು!!
ನಿನಗೆ ನನ್ನ ಆಣೆ....

!!ಜೀವನದ ಹಾದಿ
ವಿಚಿತ್ರವಾಗಿದೆ
ಇದರಲ್ಲಿ ಹೀಗೆ ನಡೆಯಲು ಕಲಿದುಕೊಳ್ಳು
ಇದರಲ್ಲಿಯೇ
ನಿನ್ನ ಒಳಿತಿದೆ
ಯಾರನ್ನಾದರೂ ತನ್ನ ಜೊತೆಗಾರ ಮಾಡು ನೀನು
ಕೇಳಿ ಹೃದಯದ ಮಾತನ್ನು ಹೀಗೆ ನಗದಿರು ನೀನು!!
ನಿನಗೆ ನನ್ನ ಆಣೆ....

ಮೂಲ : ಶಕೀಲ್ ಬದಾಯುನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು/ಸಂಗೀತ : ಹೇಮಂತ್ ಕುಮಾರ್
ಚಿತ್ರ : ಬೀಸ್ ಸಾಲ್ ಬಾದ್

Bekarar karke hume yu naa jayiye, aapko hamari kasam laut aayiye - (2)

 Dekhiye woh kalee kalee badliya, julf kee ghata churana le kahee
 Chori chori aake shokh bijliya, aapki ada churana le kahee
 Yu kadam akele naa aage badhayiye, aapko humari kasam laut aayiye
 Bekarar karke.........

 Dekhiye gulab kee woh daliya, badhke chum le naa aap ke kadam - (2)
 Khoye khoye bhanwre bhee hain bag me, koyee aapko bana naa le sanam
 Behki behki najaro se khud ko bachaiye
 Bekarar karke.........

 Jindagi ke raste ajib hain, inn me iss tarah chalana kijiye
 Khair hai isee me aapki hujur, apna koyee sathi dhund lijiye
 Sunke dil kee bat yu naa muskuraiye, aapko humari kasam laut aayiye
 Bekarar karke.........
http://www.youtube.com/watch?v=L3PnsBniFNM


No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...