Thursday 25 September 2014

ಮಲ್ಲಿಗೆ

                                                                  ಚಿತ್ರಕೃಪೆ :ಅಂತರ್ಜಾಲ
ಮಲ್ಲಿಗೆ
-------

ಗಾಳಿಯಲಿ
ಮಲ್ಲಿಗೆಯ ಕಂಪು
ಇದು ಅವಳ ಆಗಮನವೆ?

---

ದಾರದಲಿ ಪೋಣಿಸಿದ
ಮಲ್ಲಿಗೆ ಹೂವು
ಉದುರಿ ಹೋಗಿದೆ
ದಾರ ಈಗಲೂ
ಘಮಘಮಿಸುತ್ತಿದೆ
---

ಮಲ್ಲಿಗೆಯ
ತೋಟದಲಿ
ಅವಳ ಉಪಸ್ಥಿತಿ
ಹೂಗಳು ಪ್ರಸನ್ನ ಅತಿ ಅತಿ
---

ಪುಸ್ತಕ
ತೆರೆದರೆ ಅದರಲಿ
ಅವಲ್ಲಿಟ್ಟಿದ್ದ
ಒಣಗಿದ ಮಲ್ಲಿಗೆ
ಪುಸ್ತಕದಲಿ ಈಗಲೂ
ಅವಳ ಸುವಾಸನೆ
---

ಪೇಟೆಯಲಿ
ತುಂಬಿದೆ
ಮಲ್ಲಿಗೆ ಹೂಗಳು
ಮುತ್ತಿತು ನನ್ನನ್ನು
ಅವಳ ನೆನಪುಗಳು

by ಹರೀಶ್ ಶೆಟ್ಟಿ, ಶಿರ್ವ 

2 comments:

  1. ಮಲ್ಲಿಗೆಯ ನೆಪದಲ್ಲಿ ನಲ್ಲೆಯ ನೆನಪು ಮಾಡಿಕೊಟ್ಟಿರಿ ಕವಿವರ್ಯ...

    ReplyDelete
  2. :) ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete