Tuesday, September 2, 2014

ನೀ ಬಂದೆ ಬೆಳಕಾಯಿತು

ನೀ ಬಂದೆ ಬೆಳಕಾಯಿತು
ಇಲ್ಲದಿದ್ದರೆ ದೀಪದಿಂದ ಜ್ಯೋತಿ ಮರೆಯಾಗುತ್ತಿತ್ತು
ಬದುಕಲು ನಿನ್ನಿಂದಲೇ ಕಾರಣ ಸಿಕ್ಕಿತು
ತುಂಬಾ ಅನಾವಶ್ಯಕ ಜೀವನ ಸಾಗುತ್ತಿತ್ತು

ಎಲ್ಲಿಂದ ಹೊರಟಿದೆ ಅದೆಲ್ಲಿಗೆ
ಇದರ ಅರಿವಿರಲಿಲ್ಲ ಆದರೆ
ತಾಣ ಸಿಕ್ಕಿದಲ್ಲಿ
ನೀನೂ ಸಿಗುವೆ ಎಂದು ತಿಳಿದಿತ್ತು
ಅಂದರೆ ನನ್ನಲ್ಲಿ ನಿನ್ನ
ಬಯಕೆ ಬರುತ್ತಿತ್ತು
ನೀ ಬಂದೆ ಬೆಳಕಾಯಿತು...

ಹಗಲು ಮುಗಿಯಲಿಲ್ಲ
ರಾತ್ರಿ ಕವಿಯಲಿಲ್ಲ
ಇದೆಂತಹ ಪಯಣವೋ
ಕನಸ ದೀಪವನ್ನು
ಕಣ್ಣಲ್ಲಿ ತುಂಬಿ
ನಾನಲ್ಲೇ ಬರುತ್ತಿದ್ದೆ
ಅದೆಲ್ಲಿಂದ ನಿನ್ನ ಧ್ವನಿ ಬರುತ್ತಿತ್ತೋ
ನೀ ಬಂದೆ ಬೆಳಕಾಯಿತು...

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್/ಲತಾ ಮಂಗೇಶ್ಕರ್
ಸಂಗೀತ : ಆರ್. ಡಿ. ಬರ್ಮನ್
ಚಿತ್ರ : ಆಂಧಿ

तुम आ गए हो, नूर आ गया है
नहीं तो चरागों से लौ जा रही थी
जीने की तुमसे, वजह मिल गयी है
बड़ी बेवजह जिन्दगी जा रही थी

कहाँ से चले, कहाँ के लिए
ये खबर नहीं थी मगर
कोई भी सिरा, जहाँ जा मिला
वही तुम मिलोगे
के हम तक तुम्हारी दुआ आ रही थी
तुम आ गए हो...

दिन डूबा नहीं, रात डूबी नहीं
जाने कैसा है सफ़र
ख़्वाबों के दीये, आँखों में लिए
वहीँ आ रहे थे
जहाँ से तुम्हारी सदा आ रही थी
तुम आ गए हो…
http://www.youtube.com/watch?v=bTCX_M-meHc

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...