Monday, September 15, 2014

ಈದ್ ಜಾತ್ರೆ ಭಾಗ -೬ (ಅಂತಿಮ)

ಈದ್ ಜಾತ್ರೆ
ಭಾಗ -೬ (ಅಂತಿಮ)
ವಿಜೇತನಿಗೆ ಸೋತವರಿಂದ ಯಾವ ರೀತಿಯ ಸತ್ಕಾರ ಸಿಗಬೇಕೋ, ಅಂತಹದ್ದೇ ಸತ್ಕಾರ ಹಮೀದನಿಗೆ ಸಿಕ್ಕಿತು,ಇತರರಿಗೆ ಮೂರಾಣೆ, ನಾಲ್ಕಾಣೆ ಖರ್ಚು ಮಾಡಿ ಸಹ ಯಾವುದೇ ಉಪಯೋಗದ ವಸ್ತು ಖರೀದಿ ಮಾಡಲಾಗಲಿಲ್ಲ, ಹಮೀದ್ ಕೇವಲ ಮೂರು ಪೈಸೆಯಿಂದಲೇ ತನ್ನ ಶ್ರೇಷ್ಟತೆ ಸ್ಥಾಪಿಸಿದ, ಸತ್ಯ ಅಲ್ಲವೇ ಆಟಿಕೆಗಳ ಏನು ಭರವಸೆ? ಮುರಿಯುವುದು, ಆದರೆ ಹಮೀದನ ಚಿಮ್ಮಟಕ್ಕೆ ವರ್ಷಗಟ್ಟಲೆ ಏನೂ ಆಗದು.

ಒಪ್ಪಂದದ ಕುರಿತು ಬಗ್ಗೆ ಚರ್ಚೆ ನಡೆಯಿತು, ಮೋಹಸಿನ್ ಹೇಳಿದ "ಸ್ವಲ್ಪ ನಿನ್ನ ಚಿಮ್ಮಟ ಕೊಡು, ನಾವು ನೋಡುತ್ತೇವೆ, ನೀನು ನನ್ನ 'ನೀರು ವಾಹಕತೆಗೆದುಕೊಂಡು ನೋಡು."

ಮಹಮೂದ್, ನೂರೆ ಸಹ ತನ್ನ ತನ್ನ ಆಟಿಕೆಗಳನ್ನು ನೀಡಿದರು.

ಹಮೀದನಿಗೆ ಈ ಒಪ್ಪಂದದಿಂದ ಯಾವುದೇ ಆಕ್ಷೇಪಣೆ ಇರಲಿಲ್ಲ, ಚಿಮ್ಮಟ ಎಲ್ಲರ ಕೈಗೆ ಸಾಲು ಸಾಲಾಗಿ ಹೋಯಿತು ಹಾಗು ಅವರ ಆಟಿಕೆ ಹಮೀದನ ಕೈಗೆ ಬಂತು, ಎಷ್ಟು ಒಳ್ಳೆಯ ಆಟಿಕೆಗಳು.

ಹಮೀದ್ ಸೋತವರ ಕಣ್ಣೀರು ಒರೆಸಿದ "ನಾನು ನಿಮ್ಮ ಕೀಟಲೆ ಮಾಡುತ್ತಿದ್ದೆ ಹೌದು ಆದರೆ  ಸತ್ಯಯಂದರೆ  ಈ ಚಿಮ್ಮಟ, ಈ ಆಟಿಕೆಗಳ ಸಾಟಿಗೆ ಎಲ್ಲಿಯೂ ನಿಲ್ಲುವುದಿಲ್ಲ."

ಆದರೆ ಮೋಹಸಿನನಿಗೆ ಹಮೀದನ ಈ ಸಾಂತ್ವನೆಯಿಂದ ಸಂತೋಷವಾಗುವುದಿಲ್ಲ, ಅವನಿಗೆ ಇನ್ನು ಸಮಾಧಾನ ಪಡಿಸಲು ಹಮೀದ್ "ನೋಡು ಈ ಚಿಮ್ಮಟಕ್ಕೆ ಅಂಟಿದ ಕಾಗದ ನೀರಿನಿಂದಲೂ ಹೋಗುವುದಿಲ್ಲ, ಇದರ ಕಡೆ ಸಹ ಸರಿ ಇಲ್ಲ."

ಮೋಹಸಿನ್ "ಆದರೆ ನಮ್ಮ ಈ ಆಟಿಕೆಗಳಿಗೆ ಯಾರು ನಮ್ಮನ್ನು ಕೊಂಡಾಡುದಿಲ್ಲವಲ್ಲ."

ಮಹಮೂದ್ "ನೀನು ಕೊಂಡಾಡುವುದನ್ನು ಬಯಸುವೆ, ಪೆಟ್ಟೊಂದು ಸಿಗದಿದ್ದರೆ ಸಾಕು, ಅಮ್ಮ ಖಂಡಿತ ಹೇಳುವಳು "ಜಾತ್ರೆಯಲ್ಲಿ ನಿಮ ಈ ಮಣ್ಣಿನ ಆಟಿಕೆಯೇ ಸಿಕ್ಕಿತ್ತಾ ಎಂದು?"

ಈಗಂತೂ ಹಮೀದನಿಗೆ ಸಹ ಮಹಮೂದನ ಮಾತಿಗೆ ಒಪ್ಪಿಗೆ ನೀಡಬೇಕಾಯಿತು, ನನ್ನ ಚಿಮ್ಮಟ ನೋಡಿ ಅಮ್ಮನಿಗೆ ಆಗುವಷ್ಟು ಸಂತೋಷ, ಈ ಆಟಿಕೆಗಳನ್ನು ನೋಡಿ  ಯಾರ ತಾಯಿಗೆ ಸಹ ಅಷ್ಟು ಸಂತೋಷವಾಗದು, ಮೂರು ಪೈಸೆಯಲ್ಲಿ ಅವನಿಗೆ ಎಲ್ಲವೂ ಮಾಡಲಿಕ್ಕೆ ಇತ್ತು, ಆ ಪೈಸೆಯ ಉಪಯೋಗದ ಬಗ್ಗೆ ಪಶ್ಚಾತ್ತಾಪ ಪಡುವ ಇನ್ನು ಅಗತ್ಯವೇ ಇಲ್ಲ, ಈಗಂತೂ ಚಿಮ್ಮಟ ಭಾರತ ವೀರ, ಎಲ್ಲ ಆಟಿಕೆಗಳ ರಾಜ.

ರಸ್ತೆಯಲ್ಲಿ ಮಹಾಮೂದನಿಗೆ ಹಸಿವೆ ಆಯಿತು, ಅವನ ತಂದೆ ಅವನಿಗೆ ತಿನ್ನಲು ಬಾಳೆಹಣ್ಣು ಕೊಟ್ಟ, ಮಹಮೂದ್ ಅದನ್ನು ಕೇವಲ ಹಮೀದನೊಟ್ಟಿಗೆ ಹಂಚಿ ತಿಂದ, ಅವನ ಇತರ ಮಿತ್ರರು ಮುಖ ನೋಡುತ್ತಾ ನಿಂತರು, ಇದು ಚಿಮ್ಮಟದ ಪ್ರಸಾದವಾಗಿತ್ತು.

ಹನ್ನೊಂದು ಗಂಟೆಗೆ ಊರಿನಲ್ಲಿ ಕೋಲಾಹಲ ಶುರುವಾಯಿತು, ಜಾತ್ರೆಗೆ ಹೋದವರು ಬಂದರು, ಜಾತ್ರೆಗೆ ಹೋದವರು ಬಂದರೆಂದು.

ಮೋಹಸಿನನ ತಂಗಿ ಓಡಿ ಬಂದು ಅವನ ಕೈಯಿಂದ 'ನೀರು ವಾಹಕ' ಕಸಿದುಕೊಂಡಳು, ಖುಷಿಯಿಂದ ಓಡಾಡುವಾಗ ಅವಳ ಕೈಯಿಂದ 'ನೀರು ವಾಹಕ" ಕೆಳಗೆ ಬಿದ್ದು ಸ್ವರ್ಗಲೋಕಕ್ಕೆ ತೆರಳಿದ, ಇದಕ್ಕೆ ಅಣ್ಣ ತಂಗಿಯ ಮಧ್ಯೆ ಜಗಳವಾಯಿತು, ಇಬ್ಬರೂ ತುಂಬಾ ಅತ್ತರು, ಅವರ ಬೊಬ್ಬೆ ಕೇಳಿ ಅವರ ಅಮ್ಮ ಬಂದು ಮೇಲಿಂದ ಅವರಿಗೆ ಇನ್ನು ಎರಡು ಎರಡು ಏಟು ಬಾರಿಸಿ ಹೋದರು.

ನೂರೆ ತಂದ ವಕೀಲನ ಅ೦ತ್ಯ ಅದರ ಪ್ರತಿಷ್ಠೆಯ ಅನುಕೂಲ ತುಂಬಾ ಗೌರವದಿಂದ ಆಯಿತು, ವಕೀಲ ನೆಲದಲ್ಲಂತೂ ಕುಳಿತುಕೊಳ್ಳುವುದಿಲ್ಲ, ಅವನ ಮರ್ಯಾದೆಯ ಸಹ ವಿಚಾರ ಮಾಡಬೇಕಲ್ಲವೇ, ಗೋಡೆಗೆ ಮೊಳೆ ಹೊಡೆಯಲಾಯಿತು, ಅದರ ಮೇಲೆ ಒಂದು ಮರದ ತುಂಡು ಇಡಲಾಯಿತು, ಅದರ ಮೇಲೆ ಕಾಗದದ ಹಾಳೆ ಹಾಸಲಾಯಿತು, ವಕೀಲ ರಾಜ ಭೋಜನ ಹಾಗೆ ಸಿಂಹಾಸನದ ಮೇಲೆ ವಿರಾಜಿಸಿದ. ಮೂಲೆಯಲ್ಲಿ ಬಿದ್ದ ರಟ್ಟಿನಿಂದ ಫ್ಯಾನ್ ತಯಾರಿಸಲಾಯಿತು, ನೂರೆ ಅದರಿಂದ ವಕೀಲ ಸಾಹೇಬರಿಗೆ ಗಾಳಿ ಬೀಸಲಾರಂಭಿಸಿದ, ನ್ಯಾಯಾಲಯದಲ್ಲಂತೂ ವಿದ್ಯುತ್ ಫ್ಯಾನ್ ಇರುತ್ತದೆ, ಇಲ್ಲಿ ಮಾಮೂಲಿ ಫ್ಯಾನ್ ಆದರೂ ಬೇಕಲ್ಲವೇ, ಇಲ್ಲಾದರೆ ವಕೀಲ ಸಾಹೇಬರಿಂದ ಕಾನೂನಿನ ತಾಪ ಸಹಿಸಲಾಗದಿದ್ದರೆ, ನೂರೆ ತುಂಬಾ ರಭಸದಿಂದ ರಟ್ಟಿನ ಫ್ಯಾನ್ ಬೀಸಲಾರಂಭಿಸಿದ, ಹಠತ್ತಾನೆ ಫ್ಯಾನಿನ ಏಟು ತಾಗಿ ವಕೀಲ ಕೆಳಗೆ ಬಿದ್ದು ಮಣ್ಣು ಪಾಲಾಗಿ ಮೃತ್ಯುಲೋಕಕ್ಕೆ ಸೇರಿದ, ಅಲ್ಲಿಗೆ ವಕೀಲನ ಕಥೆ ಮುಗಿಯಿತು, ತುಂಬಾ ಜೋರಿನಿಂದ ಶೋಕಾಚರಣೆ ನಡೆಯಿತು, ಕಡೆಗೆ ವಕೀಲನ ಅಸ್ತಿಯನ್ನು ಕಸದ ಬುಟ್ಟಿಗೆ ಹಾಕಲಾಯಿತು.

ಈಗ ಉಳಿದ ಮಹಮೂದನ ಸಿಪಾಯಿ, ಅವನಿಗೆ ಕೂಡಲೇ ಊರಿನ ರಕ್ಷಣೆ ಭಾರ ವಹಿಸಲಾಯಿತು, ಪೋಲಿಸಿನ  ಸಿಪಾಯಿ ಅಂದರೆ ಮಾಮೂಲಿ ವ್ಯಕ್ತಿ ಏನಲ್ಲ, ನಡೆದುಕೊಂಡು ಹೋಗಲು, ಅವನಂತೂ ಪಾಲಕಿಯ ಮೇಲೆ ಕುಳಿತು ಹೋಗುವನು. ಒಂದು ಬುಟ್ಟಿ ತರಿಸಲಾಯಿತು, ಅದರ ಒಳಗೆ ಕೆಂಪು ಹರಿದ ಕೆಲವು ಚಿಂದಿ ಇಡಲಾಯಿತು, ಅದರ ಮೇಲೆ ಸಿಪಾಯಿ ಸಾಹೇಬರು ಆರಾಮದಿಂದ ಮಲಗಿದರು, ಮಹಮೂದ್ ಈ ಬುಟ್ಟಿಯನ್ನು ತಲೆಯ ಮೇಲೆ ಇಟ್ಟು ಮನೆಯ ಸುತ್ತು ತಿರುಗಲಾರಂಭಿಸಿದ, ಅವನ ಹಿಂದೆ ಅವನ ಎರಡು ಸಣ್ಣ ತಮ್ಮಂದಿರು ಸಿಪಾಯಿಯ ಹಾಗೆ "ಮಲಗಿದವರೇ, ಎಚ್ಚರಿಕೆಯಲ್ಲಿರಿ" ಎಂದು ಕರೆ ನೀಡುತ ನಡೆಯಲಾರಂಭಿಸಿದರು, ಆದರೆ ರಾತ್ರಿ ಅಂದರೆ ಕತ್ತಲೆ ಇರಬೇಕು, ಈ ಕತ್ತಲೆ ನಿರ್ಮಿಸುವ ಗಡಿಬಿಡಿಯಲ್ಲಿ ಮಹಮೂದನ ಕಾಲು ಕಲ್ಲಿಗೆ ತಾಗಿ ಅವನ ತಲೆಯಲ್ಲಿದ್ದ ಬುಟ್ಟಿ ಕೆಳಗೆ ಬಿತ್ತು, ಅದರಲ್ಲಿದ್ದ ಮೀಯಾ ಸಿಪಾಯಿ ತನ್ನ ಬಂದೂಕಿನ ಜೊತೆ ನೆಲದ ಮೇಲೆ ಬಿದ್ದ, ಪಾಪ ಅವನ ಒಂದು ಕಾಲು ತುಂಡಾಗಿ ವಿಕಾರ ಉಂಟಾಯಿತು. ಆದರೆ ಮಹಮೂದನಿಗೆ ಇಂದು ತಿಳಿಯಿತು ಅವನೊಬ್ಬ ಒಳ್ಳೆ ಡಾಕ್ಟರ ಎಂದು, ಅವನಿಗೆ ಅಂತಹ ಮುಲಾಮು ಗೊತ್ತಿದೆ ಅಂದರೆ ಅವನು ಅದರಿಂದ ಸಿಪಾಯಿಯ ಕಾಲನ್ನು ಜೋಡಿಸಬಹುದು, ಕೇವಲ ಅದಕ್ಕಾಗಿ ಸ್ಯ್ಕಾಮೊರ್ ವೃಕ್ಷದ ಹಾಲು ಬೇಕು ಅಷ್ಟೇ, ಆಯಿತು ಹಾಲೂ ಬಂತು, ಶಸ್ತ್ರಕ್ರಿಯೆ ಶುರುವಾಯಿತು, ಆದರೆ ಕಾಲು ಸರಿಯಾಗಲಿಲ್ಲ, ಇನ್ನೊಂದು ಕಾಲನ್ನು ತುಂಡು ಮಾಡಲಾಯಿತು, ಈಗ ಸರಿ ಆಯಿತು ಎರಡೂ ಕಾಲಿಲ್ಲ, ಈಗ ಸಿಪಾಯಿ ಸನ್ಯಾಸಿ ಆದ, ಈಗ ಅವನು ಕುಲಿತ್ತಲ್ಲೇ ಕಾವಲು ನೀಡುವನು. ಕೆಲವೊಮ್ಮೆ ಅವನು ದೇವರು ಆಗುತ್ತಾನೆ, ತಲೆಯನ್ನು ಸ್ವಲ್ಪ ಕೆತ್ತಲಾಯಿತು, ಆ ನಂತರ ಅವನ ಹಲವು ತರಹದ ರೂಪಾಂತರ ಮಾಡಲಾಯಿತು, ಕೆಲವೊಮ್ಮೆ ಅವನ್ನು ತೂಕದ ರೂಪದಲ್ಲಿಯೂ ಉಪಯೋಗಿಸಲಾಯಿತು.

ಇನ್ನು ಮೀಯಾ ಹಮೀದನ ಅವಸ್ಥೆ ಕೇಳಿ, ಅಮೀನಾ ಅವನ ಸ್ವರ ಕೇಳಿ ಓಡಿ ಬಂದು ಅವನನ್ನು ಅಪ್ಪಿಕೊಂಡು ಮುದ್ದಿಸ ತೊಡಗಿದಳು, ಇದ್ದಕ್ಕಿದ್ದಂತೆ ಅವನ ಕೈಯಲ್ಲಿ ಚಿಮ್ಮಟ ನೋಡಿ ಆಶ್ಚರ್ಯ ಗೊಂಡಳು.

"ಈ ಚಿಮ್ಮಟ ಎಲ್ಲಿಂದ?"

"ನಾನು ಖರೀದಿ ಮಾಡಿ ತಂದದ್ದು."

"ಎಷ್ಟಕ್ಕೆ?"

"ಮೂರು ಪೈಸೆಗೆ."

ಅಮೀನಾ ರೋಧಿಸಿದಳು "ಅಯ್ಯೋ ಅಲ್ಲಾ, ಎಂಥ ಅವಿವೇಕಿ ಮಗು ಅಂದರೆ ಮಧ್ಯಾಹ್ನ ಆಯಿತು ಏನು ತಿನ್ನಲಿಲ್ಲ, ಏನು ಕುಡಿಯಲಿಲ್ಲ, ತಂದ ಏನು ಚಿಮ್ಮಟ!"

"ಎಲ್ಲ ಜಾತ್ರೆಯಲ್ಲಿ ನಿನಗೆ ಬೇರೇನೂ ಸಿಗಲಿಲ್ಲ, ಈ ಚಿಮ್ಮಟ ಅಲ್ಲದೆ?"

ಹಮೀದ್ ಅಪರಾಧ ಭಾವದಲ್ಲಿ "ನಿನ್ನ ಬೆರಳು ತವೆಯಲ್ಲಿ ಸುಟ್ಟು ಹೋಗುತ್ತದೆ, ಅದಕ್ಕಾಗಿ ನಾನು ತಂದೆ."

ಅಮೀನಾಳ ಕೋಪ ಕೂಡಲೇ ಸ್ನೇಹದಲ್ಲಿ ಪರಿವರ್ತಿಸಿತು, ಸ್ನೇಹ ಸಹ ಅಂತಹ ಅಲ್ಲಸೂಕ್ಷ್ಮಮತಿಯ ಅಲ್ಲ, ಕೇವಲ ಶಬ್ದಗಳಲ್ಲಿ ಕಾಣುವಂತಹದಲ್ಲ, ಇದು ಮೂಕ ಸ್ನೇಹವಾಗಿತ್ತು, ತುಂಬಾ ವಿಶ್ವಸನೀಯರಸಮಯ, ರುಚಿಯಾದದ್ದು, ಮಗುವಿನಲ್ಲಿ ಎಷ್ಟು ತ್ಯಾಗ, ಎಷ್ಟು ಸದ್ಭಾವ, ಎಷ್ಟು ವಿವೇಕ ಇದೆ, ಇತರರನ್ನು ಮಿಠಾಯಿ ತಿನ್ನುವುದು, ಆಟಿಕೆ ಖರೀದಿ ಮಾಡುವುದನ್ನು ನೋಡಿ ಇವನ ಮನಸ್ಸಲ್ಲಿ ಎಷ್ಟು ಆಸೆ ಹುಟ್ಟಿರಬೇಕು, ಇವನಲ್ಲಿ ಇಷ್ಟು ನಿಯಂತ್ರಣಶಕ್ತಿ ಬಂತು ಎಲ್ಲಿಂದ? ಅಲ್ಲಿಯೂ ಈ ಮುದಿ ಅಜ್ಜಿಯ ನೆನಪು ಹೋಗಲಿಲ್ಲ, ಅಮೀನಾಳ ಹೃದಯದಲ್ಲಿ ಪ್ರೇಮ ಉಕ್ಕಿ ಬಂತು.

ಮತ್ತು ಈಗ ಇನ್ನೊಂದು ವಿಚಿತ್ರ ಮಾತಾಯಿತು, ಹಮೀದನ ಈ ಚಿಮ್ಮಟಕ್ಕಿಂತಲೂ ವಿಚಿತ್ರ, ಮಗು ಹಮೀದ್ ಈಗ ಮುದುಕನ ರೂಪ ತಾಳಿದ, ಅಮೀನಾ ಬಾಲಿಕೆಯಾದಳು, ಅವಳು ಅಳುತ್ತಿದ್ದಳು, ಹಮೀದ್ ಅವಳ ತಲೆ ಸವರುತ್ತಾ ಸಾಂತ್ವನ ನೀಡುತ್ತಿದ್ದ, ಕೈಯನ್ನು ಎತ್ತಿ ಅಮೀನಾ ಹಮೀದ್ ಗೋಸ್ಕರ ಅದೆಷ್ಟೋ ಆಶೀರ್ವಾದ ಬೇಡಿದಳು, ಕಣ್ಣೀರು ಹನಿ ಹನಿ ಹರಿಯುತ್ತಲೇ ಇತ್ತು, ಪಾಪ ಹಮೀದನಿಗೆ ಇದರ ರಹಸ್ಯ  ಹೇಗೆ ತಾನೇ ತಿಳಿಯುವುದು!

(ಮುಗಿಯಿತು)
ಮೂಲ : ಪ್ರೇಮಚಂದ್

ಕನ್ನಡ ಅನುವಾದ : ಹರೀಶ್ ಶೆಟ್ಟಿ, ಶಿರ್ವ

2 comments:

  1. ಇದ್ದರೆ ಹಮೀದನಂತಹ ಮಗನಿರಬೇಕು.
    ನಿರುಪಯೋಗಿ ವಸ್ತುಗಳು ಆ ಕ್ಷಣಕ್ಕೆ ಖುಷಿ ಕೊಡಬಲ್ಲದಷ್ಟೇ. ಅಮೀನಾಳಿಗೆ ಸಿಕ್ಕ ಉಡುಗೊರೆ ಮನಸ್ಸಿನಲಿ ಉಳಿವ ಶ್ರೇಷ್ಟ ವಸ್ತು.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್, ಬಹುಶಃ ನೀವು ಭಾಗ-೫ ಓದಲಿಲ್ಲ, ದಯಾಮಾಡಿ ಓದಬೇಕೆಂದು ವಿನಂತಿ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...