Tuesday, September 2, 2014

ನೀಲ ಗಗನದ ಅಡಿಯಲಿ

ನೀಲ ಗಗನದ ಅಡಿಯಲಿ
ಧರೆ ಮೆರೆಯುತ್ತಿದೆ ಪ್ರೀತಿಯಲಿ
ನೀಲ ಗಗನದ…

ಹೀಗೆಯೇ ಜಗದಲಿ
ರವಿಯ ಆಗಮನ
ಹೀಗೆಯೇ ನಿರ್ಗಮನ
ಸಂಧ್ಯೆಯಲಿ  
ನೀಲ ಗಗನದ…

ಇಬ್ಬನಿಯ ಮುತ್ತು ಮಾಲೆ
ಅಲಂಕೃತವಾಗಿದೆ ಪುಷ್ಪಗಳ ಮೇಲೆ
ಎರಡರ ಆಸೆಯೂ
ಫಲಿಸುತ್ತಿದೆ ಜೊತೆಯಲಿ
ನೀಲ ಗಗನದ…

ಸುನಮ್ಯ ಲತೆಗಳು
ಹೊಸ ಚೈತನ್ಯದಿ
ವೃಕ್ಷಗಳನ್ನು ಅಪ್ಪಿಕೊಂಡು
ಕುಣಿದಾಡುತ್ತಿದೆ ಮೋಜಿನಲಿ
ನೀಲ ಗಗನದ…

ಹೊಳೆಯ ನೀರು
ನದಿಯ ಜೊತೆ ಕೂಡಿ
ಸೇರಲೋಗುತ್ತಿದೆ
ಸಾಗರದಲಿ
ನೀಲ ಗಗನದ…

ಮೂಲ : ಸಾಹೀರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮಹೇಂದ್ರ ಕಪೂರ್
ಸಂಗೀತ : ರವಿ
ಚಿತ್ರ : ಹಮ್ರಾಜ್

हे...नीले गगन के तले
धरती का प्यार पले

हे...नीले गगन के तले
धरती का प्यार पले
ऐसे ही जग में आती हैं सुबहें
ऐसे ही शाम ढले
हे...नीले गगन के तले

शबनम के मोती, फूलों पे बिखरे
दोनों की आस फले, हे नीले...

बलखाती बेलें, मस्ती में खेलें
पेड़ों से मिलके गले, हे नीले...

नदियाँ का पानी दरिया से मिलके
सागर की और चले,

हे...नीले गगन के तले
धरती का प्यार पले
http://www.youtube.com/watch?v=pSE9QzQ-EKY

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...