Tuesday, 26 August, 2014

ನಾಸ್ತಿಕ

ನಾಸ್ತಿಕನೆಂದು
ಪ್ರಸಿದ್ಧಿ ಪಡೆದ ಮಗ
ಅಮ್ಮ ಆಸ್ಪತ್ರೆಯಲ್ಲಿದ್ದಾಗ
ದೇವಸ್ಥಾನ ಹೋಗಿ
ದೇವರ ಮುಂದೆ ಅತ್ತು
ತನ್ನ ಮೊರೆ ಇಡುತ್ತಿದ್ದ

---

ಗಂಡ ನಾಸ್ತಿಕ
ಹೆಂಡತಿ ದೈವ ಭಕ್ತೆ,
ಪ್ರಸವ ವೇದನೆಯಲ್ಲಿದ್ದ
ಹೆಂಡತಿಯನ್ನು ನೋಡಿ
ತಳಮಳದಲ್ಲಿದ್ದ
ಗಂಡ ಓಡಿ ಹೋಗಿ
ಗಣಪತಿ ವಿಗ್ರಹದ
ಮುಂದೆ ಬೇಡಲಾರಂಭಿಸಿದ

---

ನಾವು ಅಷ್ಟೊಂದು ದೊಡ್ಡ
ದೈವ ಭಕ್ತರಲ್ಲ ಎಂದು
ಹೇಳುತ್ತಿದ್ದ ಕುಟುಂಬ
ಅವರಿಗೆ
ಸಂಕಟ ಒದಗಿದಾಗ
ನೆರೆಯ ದೈವ ಭಕ್ತ
ಕುಟುಂಬದವರ
ಒಟ್ಟಿಗೆ ಹೋಗಿ
ಧರ್ಮ ಸ್ಥಾನಗಳ ದರ್ಶನ
ಮಾಡಿ ಬಂದರು

by ಹರೀಶ್ ಶೆಟ್ಟಿ, ಶಿರ್ವ 

2 comments:

  1. ದೇವರು ನೆನಪಾಗುವುದೇ ಕಷ್ಟ ಕಾಲದಲ್ಲಿ, ಉಳಿದ ಹೊತ್ತಲ್ಲಿ ಆಸ್ತಕನೂ, ಸುಖಃದ ಅಮಳಿ ನಾಸ್ತಿಕನೇ!

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete