Sunday, August 10, 2014

ಅಣ್ಣ ನನ್ನ ನಿಭಾಯಿಸು

ಅಣ್ಣ ನನ್ನ
ನಿಭಾಯಿಸು ರಾಖಿಯ ಬಂಧವನ್ನ
ಅಣ್ಣ ನನ್ನ
ಮರೆಯದಿರು ಈ ಪುಟ್ಟ ತಂಗಿಯನ್ನ
ನೋಡು ನಿಭಾಯಿಸು ಈ ಸಂಬಂಧವನ್ನ
ಸಂಬಂಧವನ್ನ
ಅಣ್ಣ ನನ್ನ....

ಈ ದಿನ ಈ ಉತ್ಸವ ಖುಷಿಯ
ನದಿಯ ನೀರಿನಂತೆ ಪಾವನ
ಅಣ್ಣನ ತೇಜಸ್ಸು ಹಣೆಗೆ
ಸೋದರಿ ಹಚ್ಚುವಳು ತಿಲಕವನ್ನ
ನೋಡಿ ಈ ಮಳೆಯ ಸೊಗಸನ್ನ
ಅಣ್ಣ ನನ್ನ....

ಕಟ್ಟಿ ಈ ರೇಶಮಿ ದಾರವನ್ನ
ಇಟ್ಟಿದ್ದೇನೆ ನಿನ್ನಿಂದ ಭರವಸೆಯನ್ನ
ನಾಜೂಕು ಇದು ಉಸಿರಿನಂತೆ
ಆದರೆ ಜೀವನ ಪರ್ಯಂತ
ಮುರಿಯಲಾಗದು ಇದನ್ನ
ಅರಿತ್ತಿದ್ದಾರೆ ಜಗವೆಲ್ಲ ಇದನ್ನ
ಅಣ್ಣ ನನ್ನ....

ಬಹುಶಃ ಅಂತಹ
ವರ್ಷ ಋತು ಸಹ ಬರಬಹುದು
ಮೊದಲಂತಹ ವರ್ಣಮಯ ಇರಲಾರದು
ಸೋದರಿ ಪರದೇಶದಲಿ ನೆಲೆಸಿರಬಹುದು
ಒಂದು ವೇಳೆ ಅವಳು ನಿನ್ನಲ್ಲಿಗೆ ಬರದಿದ್ದರೆ
ದೀಪಕ ಬೆಳಗಿಸು ನೆನಪಿನ
ಅಣ್ಣ ನನ್ನ....

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ :ಶರ್ನ್ಕರ್ ಜೈ ಕಿಶನ್
ಚಿತ್ರ : ಚೋಟಿ ಬಹನ್

भैया मेरे, राखी के बंधन को निभाना
भैया मेरे, छोटी बहन को ना भुलाना
देखो ये नाता निभाना
भैया मेरे राखी...

ये दिन ये त्यौहार खुशी का, पावन जैसे नीर नदी का
भाई के उजले माथे पे, बहन लगाए मंगल टीका
झूमे ये सावन सुहाना
भैया मेरे राखी के बंधन...

बाँध के हमने रेशम डोरी, तुमसे वो उम्मीद है जोड़ी
नाज़ुक है जो सांस के जैसे, पर जीवन भर जाए न तोड़ी
जाने ये सारा ज़माना
भैया मेरे राखी के बंधन...

शायद वो सावन भी आए, जो पहला सा रंग न लाए
बहन पराए देश बसी हो, अगर वो तुम तक पहुँच न पाए
याद का दीपक जलाना
भैया मेरे राखी के बंधन.
http://www.youtube.com/watch?v=ItCxB6tRXJM

2 comments:

  1. ಈವತ್ತಿನ ರಾಖೀ ದಿನದ ಪ್ರಯುಕ್ತ ಿದೀಗ ನಮ್ಮ ವಾಹಿನಿಯಲ್ಲೂ ಈ ಹಾಡು ಪ್ರಸಾರವಾಯಿತು.
    ಶೈಲೇಂದ್ರ ಅವರ ೊಳ್ಳೆಯ ಸಾಹಿತ್ಯ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...