Saturday 16 August 2014

ಜಗ ಕೃಷ್ಣಮಯ ಇಂದು

ಜಗ ಕೃಷ್ಣಮಯ ಇಂದು
ಜಗದೊಳು ಇಟ್ಟ ಪಾದ ಮುಕುಂದ
ಮೂರು ಲೋಕದಲಿ ಹರುಷವ ತಂದ
ಜಗ ಕೃಷ್ಣಮಯ ಇಂದು

ಕೊಳಲ ಉದುತಾ
ಧರೆಯನು ಒಲಿಸುತ
ನವ ಚೈತನ್ಯ ತಂದ
ಜಗ ಕೃಷ್ಣಮಯ ಇಂದು

ತಾಯಿಯ ಮಮತೆ ಅಳುತ್ತಿತ್ತು
ತಂದೆಯ ವಾತ್ಸಲ್ಯ ಭಯದಲ್ಲಿತ್ತು
ಆದರೆ ನಗುತ್ತಿದ್ದ ವಾಸುದೇವ ದೇವಕಿಯ ಕಂದ
ಜಗ ಕೃಷ್ಣಮಯ ಇಂದು

ಧನ್ಯ ಯಶೋದೆ
ಧನ್ಯ ಧರತಿ
ಧನ್ಯ ಗೋಕುಲ ನಂದ
ಜಗ ಕೃಷ್ಣಮಯ ಇಂದು

ಹಸುಗಳ ಮೂಲೆಗಳಲ್ಲಿ ಹಾಲು ತುಂಬಿತು
ಕರುಗಳ ಮುಖದಲಿ ಹರ್ಷ ಹರಿಯಿತು
ಹಬ್ಬಿತು ಗೋಪ ಗೋಪಿಯರ ಮುಖದಲಿ ಆನಂದ
ಜಗ ಕೃಷ್ಣಮಯ ಇಂದು

ಜಗ ಕೃಷ್ಣಮಯ ಇಂದು
ಜಗ ಕೃಷ್ಣಮಯ ಇಂದು
ಜಗ ಕೃಷ್ಣಮಯ ಇಂದು

by ಹರೀಶ್ ಶೆಟ್ಟಿ, ಶಿರ್ವ

2 comments:

  1. ಮಧುರತೆ ಮತ್ತು ಪುಳಕಗೊಳಿಸುವ ರಚನೆ.
    ಓದಿಸಿ ನಮ್ಮ ಮನವನೂ ಕೃಷ್ಣಾರ್ಪಣ ಮಾಡಿದಿರಿ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete