Wednesday, August 27, 2014

ಮುಗ್ಧ ವ್ಯಾಮೋಹ

ಯಾವಗಲು ನೆನಪಾಗುತ್ತದೆ ಅವಳ
ಮುಂಜಾನೆ ಎದ್ದ ಕೂಡಲೇ
ಎದುರು ಮನೆಯ ಟೆರೇಸ್
ಮೇಲೆ ದೃಷ್ಟಿ ಹೋದಾಗ
ಬಟ್ಟೆ ಒಣಗಲು ಹಾಕುತ್ತಿರುವ
ಅವಳ ಮುಖ ಕಣ್ಣ ಮುಂದೆ ನಲಿಯುತ್ತದೆ

ಬಟ್ಟೆ ಒಣಗಿಸಲು ಬಂದಾಗ
ಮನೆಯ ಕಿಟಕಿಯಿಂದ ನಾನು
ಅವಳ ಹೆಸರು ಕರೆದು
ಅಡಗಿ ಕುಳಿತುಕೊಳ್ಳುವುದು
ಅವಳು ಹಿಂದೆ ಮುಂದೆ ನೋಡಿ
ಮತ್ತೆ ಕೋಪದಿಂದ
ಬಟ್ಟೆಯನ್ನು ಜೋರಿನಿಂದ ಹಿಂಡುವುದು
ನಾನು ಜೋರಿನಿಂದ ನಕ್ಕು
ಪುನಃ ಕರೆದು ಚಿಡಾಯಿಸುವುದು

ಮಧ್ಯಾಹ್ನ ನಾನು
ಕಿಟಕಿಯ ಬದಿಯಲಿ
ಕುಳಿತು ಓದುವಾಗ
ಅವಳು ತನ್ನ ಸಣ್ಣ ರೇಡಿಯೋ
ಜೊತೆಯಲ್ಲಿಟ್ಟು ಟೆರೇಸ್'ಗೆ
ಒಣ ಬಟ್ಟೆ ತೆಗೆಯಲು ಬಂದಾಗ
ನನ್ನನ್ನು ಓದುವುದನ್ನು ನೋಡಿ
ನನಗೆ ಸತಾಯಿಸಲೆಂದು
ರೇಡಿಯೋದ ದ್ವನಿ ಜೋರಾಗಿ ಇಡುವುದು
ನಾನು ಬಯ್ಯುವುದು
ಯಾವಗಲು ಆಗುವ
ನಮ್ಮ ಚಿಕ್ಕ ಪುಟ್ಟ ಜಗಳ

ಅವಳ ಮದುವೆ ನಿಶ್ಚಿತವಾದಾಗ
ನನ್ನನ್ನು ಎಷ್ಟು ರೇಗಿಸಿದರೂ
ನನ್ನ ಮೌನ ಕಂಡು
ಅವಳ ಪ್ರತಿ ಇದ್ದ
ನನ್ನ ಪ್ರೀತಿ ಅರಿತು
ಬೇಸರಿಸಿದ ಅವಳು
ಮನೆಗೆ ಬಂದು
ಅವಳಿಂದ ಪ್ರಾಯದಲ್ಲಿ
ಎಷ್ಟೋ ಚಿಕ್ಕ ಇದ್ದ ನನಗೆ
ಗಲ್ಲಕ್ಕೆ ಮುತ್ತು ನೀಡಿ
ಒಟ್ಟಿಗೆ ತಂದ ಉಡುಗೊರೆ ಕೊಟ್ಟು
ನನ್ನನ್ನು ರಮಿಸಿದ ಅವಳ ನೆನಾಪಾಗುತ್ತದೆ
ತುಂಬಾ ನೆನಪಾಗುತ್ತದೆ
ಯಾವಗಲು ನೆನಪಾಗುತ್ತದೆ

by ಹರೀಶ್ ಶೆಟ್ಟಿ, ಶಿರ್ವ 

2 comments:

  1. ಎದುರು ಮನೆ ತಾರಸಿಯ ಅವಳು ಬಟ್ಟೆ ಒಣಗಿಸಲು ಬರುವ ಈ ದೃಶ್ಯ ನನಗೆ ಇಪ್ಪತ್ತೈದು ವರ್ಷಗಳ ಹಿಂದಿನ ಸವಿಯಾದ ಹಿನ್ನೋಟ ಕೊಟ್ಟಿತು.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...