Tuesday, August 26, 2014

ಆಧುನಿಕತೆ

ಬೆಳಿಗ್ಗೆ ಎದ್ದಾಗ
ಕಂಡ ಕನಸನ್ನು ನೆನಪಿಸಿದೆ
ಸ್ವಲ್ಪ ಸ್ವಲ್ಪ ನೆನಪಾಯಿತು
ದೂಳು ತುಂಬಿದ ಪುಸ್ತಕಗಳು
ಹಾರುವ ಹಾಳೆಗಳು
ಮುರಿದ ಪೆನ್ನುಗಳು
ನಗುವ ಕಂಪ್ಯೂಟರ್

---
ಕಪಾಟು ತೆರೆದೇ
ಹಳೆ ಪತ್ರಗಳ ಗಂಟು ಬಿತ್ತು
ಸಂಬಂಧಗಳ ಕಟ್ಟು
ಅದೆಷ್ಟೋ ನೆನಪುಗಳು
ಜೋಪಾನವಾಗಿ ಇಟ್ಟೆ,
ಇದ್ದಕಿದ್ದಂತೆ ಮೊಬೈಲ್ ರಿಂಗಾಯಿಸಿತು
ಮಾತಾಯಿತು
ಮರೆತು ಸಹ ಹೋಯಿತು

---
ಫ್ರಿಜ್ ತೆರೆದೇ
ನೀರು ಕುಡಿಯಲೆಂದು,
ಅದರೊಳಗೆ ಮಾವಿನ ಹಣ್ಣುಗಳು
ಎಷ್ಟೋ ದಿನದಿಂದ ಬಿದ್ದಿತ್ತು
ನೆನಪಾಯಿತು
ಊರಿನ ಹಳೆ ಮಾವಿನ ಮರ
ಓಡಾಡುವ ಇಣಚಿ
ಅದು ತಿಂದ ಕೆಲವು ಅರ್ಧ ಹಣ್ಣುಗಳು
ಆ ಅರ್ಧ ಹಣ್ಣಿನ ರುಚಿ

---
ಮನೆಯಲ್ಲಿ
ಅದೆಷ್ಟೋ ಹೊಸ ಹೊಸ
ಕೈ ಗಡಿಯಾರ
ಆದರೆ ಸರಿಯಾದ ಸಮಯ
ನೋಡಬೇಕಾದರೆ
ಗಮನ ಮನೆಯ
ಆ ಹಳೆ ಗಡಿಯಾರದ ಮೇಲೆ

---
ಈಗ ರೇಡಿಯೋ ಅಂದರೆ
ಮೊಬೈಲಲ್ಲಿ
ಅದೆಷ್ಟೋ ಚಾನೆಲ್,
ಆದರೆ ನೆನಪಾಗುತ್ತದೆ
ಅಜ್ಜನ ಆ ಹಳೆ ರೇಡಿಯೋ ಮತ್ತು
ಸಂಜೆ ಬರುವ ಅವರ ಮೆಚ್ಚಿನ
ಆಟದ (ಯಕ್ಷಗಾನ)  ಕಾರ್ಯಕ್ರಮ ಹಾಗು
ಅದನ್ನು ಕೇಳಿ
ಮುಖದಲಿ ಅರಳುವ ಅವರ ನಗು

by ಹರೀಶ್ ಶೆಟ್ಟಿ, ಶಿರ್ವ



2 comments:

  1. ಹಳತು - ಹೊಸದು, ಜಾಗೃತಾಸ್ಥೆ - ಸುಪ್ತಾವಸ್ಥೆ ಹೀಗೆ ವಿವರವಾಗಿ ತೆರೆದುಕೊಳ್ಳುವ ಈ ಕವನವು ತಮ್ಮ ಕೃತಿಗಳಲ್ಲೇ ವಿಭಿನ್ನ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...