Saturday, August 23, 2014

ಸಂಸಾರದಿಂದ ಓಡೋಡಿ ತಿರುಗುತ್ತಿರುವೆ

!!ಸಂಸಾರದಿಂದ ಓಡೋಡಿ ತಿರುಗುತ್ತಿರುವೆ
ದೇವರನ್ನು ನೀನೇನು ಪಡೆಯುವೆ
ಈ ಲೋಕವನ್ನೂ ಸ್ವೀಕರಿಸದವನು
ಆ ಲೋಕದಲ್ಲೂ ದುಃಖಿಸುವೆ!!
ಸಂಸಾರದಿಂದ......

!!ಈ ಪಾಪ ಏನು
ಈ ಪುಣ್ಯ ಏನು
ರೂಢಿಗಳ ಮೇಲೆ
ಧರ್ಮದ ಚಿಹ್ನೆಗಳು ಅಷ್ಟೇ
ಪ್ರತಿ ಯುಗದಲಿ ಬದಲಾಗುವ ಧರ್ಮಗಳನ್ನು
ಹೇಗೆ ತಾನೇ ಆದರ್ಶ ಮಾಡುವೆ!!
ಸಂಸಾರದಿಂದ....

!!ಈ ಭೋಗ ಸಹ
ಒಂದು ತಪಸ್ಸು
ನಿನ್ನಂತಹ ತ್ಯಜಿಸಿ ಹೋದವನಿಗೆ
ಹೇಗೆ ತಾನೇ ತಿಳಿಯುವುದು
ರಚಿಸಿದವನ ಅವಮಾನವಾಗಬಹುದು
ರಚನೆಯನ್ನು ಒಂದು ವೇಳೆ ಹೀಗೆ ತಿರಸ್ಕರಿಸಿದರೆ!!
ಸಂಸಾರದಿಂದ....

!!ನಾವು ಹೇಳುವುದು
ಈ ಜಗ ನಮ್ಮದೆಂದು
ನೀನು ಹೇಳುವೆ
ಅದು ಸುಳ್ಳು ಕನಸೆಂದು
ನಾವು ಜನ್ಮವನ್ನು ಸಾರ್ಥಕಗೊಳಿಸಿ ಹೋಗುವೆವು
ನೀನು ಜನ್ಮ ನಷ್ಟಗೊಳಿಸಿ ಹೋಗುವೆ!!
ಸಂಸಾರದಿಂದ....

ಮೂಲ : ಸಾಹಿರ್ ಲುಧ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ರೋಶನ್
ಚಿತ್ರ : ಚಿತ್ರಲೇಖ

संसारसे भागे फिरते हो, भगवान को तुम क्या पाओगे
इस लोक को भी अपना ना सके, उस लोक में भी पछताओगे

ये पाप हैं क्या, ये पुण्य हैं क्या, रीतोंपर धर्म की मुहरे हैं
हर युग में बदलते धर्मोंको कैसे आदर्श बनाओगे

ये भोग भी एक तपस्या हैं, तुम त्याग के मारे क्या जानो
अपमान रचेता का होगा, रचना को अगर ठुकराओगे

हम कहते हैं ये जग अपना हैं, तुम कहते हो झूठा सपना हैं
हम जनम बीताकर जाएंगे, तुम जनम गवाकर जाओगे
http://www.youtube.com/watch?v=pueoTXV6FLY

2 comments:

  1. ಸಾಹಿರ್ ಲುಧ್ಯಾನ್ವಿ ಅವರ ಉತ್ತಮ ರಚನೆ. ರೋಶನ್ ಅವರ ಸಂಗೀತವೂ ಒಪ್ಪುವಂತಿದೆ.
    ’ರಚಿಸಿದವನ ಅವಮಾನವಾಗಬಹುದು
    ರಚನೆಯನ್ನು ಒಂದು ವೇಳೆ ಹೀಗೆ ತಿರಸ್ಕರಿಸಿದರೆ!!’ ಒಳ್ಳೆಯ ಭಾವಾನುವಾದಕ್ಕೆ ಉದಾಹರಣೆ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...