Monday, August 18, 2014

ಬರುವ ಕ್ಷಣ ಹೋಗಲಿದೆ

ಇಂದು ಗುಲ್ಜಾರ್ ಸಾಬ್ ಅವರ ಜನ್ಮ ದಿವಸ. ಗುಲ್ಜಾರ್, 1936 ರ ಆಗಸ್ಟ್ 18 ರಂದು ಜನಿಸಿದರು. ಅವರ ನಿಜ ಹೆಸರು ಸಂಪೂರ್ಣ್ ಸಿಂಗ್ ಕಾಲ್ರ ಎಂದು.

ನನ್ನ ತುಂಬಾ ಇಷ್ಟದ ಅವರ ಒಂದು ಹಿಂದಿ ಹಾಡು ಕನ್ನಡದಲಿ ನಿಮಗಾಗಿ.


ಬರುವ ಕ್ಷಣ ಹೋಗಲಿದೆ
ಬರುವ ಕ್ಷಣ ಹೋಗಲಿದೆ
ಸಾಧ್ಯವಾದರೆ ಇದರಲಿ
ಜೀವನ ಕಳೆಯಿರಿ
ಕ್ಷಣ ಇದು ಹೋಗಲಿದೆ
ಓ ಹೊ...
ಬರುವ ಕ್ಷಣ ಹೋಗಲಿದೆ...

ಒಂದು ಸಲ ಹೀಗೆ ಸಿಕ್ಕಿತು
ಮುದ್ದು ನಾಜೂಕು ಮೊಗ್ಗೊಂದು
ಅರಳುತ ನುಡಿಯಿತು
ನಾನು ಸಂತೋಷದಲ್ಲಿದ್ದೇನೆಯೆಂದು
ನೋಡಿದರೆ ಅಲ್ಲೇ ಇದೆ
ಹುಡುಕಿದರೆ ಅಲ್ಲಿಲ್ಲ
ಕ್ಷಣ ಇದು ಹೋಗಲಿದೆ
ಓ ಹೊ...
ಬರುವ ಕ್ಷಣ ಹೋಗಲಿದೆ...

ಒಂದು ಸಲ ಸಮಯದಿಂದ
ಕ್ಷಣ ಎಲ್ಲೋ ಬಿದ್ದೋಯಿತು
ಅಲ್ಲಿ ಕಥೆ ಸಿಕ್ಕಿತು
ಕ್ಷಣ ಎಲ್ಲೂ ಇಲ್ಲ
ಸ್ವಲ್ಪ ನಗು ನೀಡಿ
ಸ್ವಲ್ಪ ಅಳಲು ನೀಡಿ
ಸಮಯ ಇದು ಹೋಗಲಿದೆ
ಓ ಹೊ...
ಬರುವ ಕ್ಷಣ ಹೋಗಲಿದೆ...

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ . ಡಿ. ಬರ್ಮನ್
ಚಿತ್ರ : ಗೋಲ್ ಮಾಲ್

o ho....
aanewala pal jaanewala hai
aanewala pal jaanewala hai
ho sake to is me zindagi bitado
pal jo ye jaanewala hai
o ho
aanewala pal jaanewala hai
ho sake to is me zindagi bitado
pal jo ye jaanewala hai

ek baar yu mili masoom si kali
ek baar yu mili masoom si kali
ho khilte hue kaha kush pash mai chali
dekha to yahi hai dhundha to nahin hai
pal jo ye jaanewala hai
o ho
aanewala pal jaanewala hai
ho sake to is me zindagi bitado
pal jo ye jaanewala hai

ek baar waqt se lamha gira kahi
ek baar waqt se lamha gira kahi
waha dastan mili lamha kahi nahi
thoda sa hasa ke thoda sa rula ke
pal ye bhi jaanewala hai
o ho
aanewala pal jaanewala hai
ho sake to is me zindagi bitado
pal jo ye jaanewala hai
o ho
aanewala pal jaanewala hai
aanewala pal jaanewala hai
http://www.youtube.com/watch?v=AFRAFHtU-PE

1 comment:

  1. ನನ್ನ ನೆಚ್ಚಿನ ಗೀತೆ. ಈ ಸನ್ನಿವೇಶದಲ್ಲಿ ಗೀತೆ ಹಿಂದಿಯಲ್ಲೂ ಕನ್ನಡದಲ್ಲೂ ತುಂಬ ಚೆನ್ನಾಗಿವೆ. ಕನ್ನಡದಲ್ಲಿ 'ಕೆಣಕುತಿದೆ ನಿನ್ನ ಕಣ್ಣೋಟ...'

    ಗುಲ್ಜಾರರ ಶ್ರೇಷ್ಟ ಸಾಹಿತ್ಯಕ್ಕೆ ಒಪ್ಪುವ ಭಾವಾನುವಾದ.

    ಗೋಲ್ ಮಾಲ್ ಚಿತ್ರಕ್ಕೆ ಜಯವಂತ್ ಪತ್ರೇ ಅವರ ಛಾಯಾಗ್ರಹಣವಿತ್ತು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...