Saturday, August 16, 2014

ಅಮ್ಮ ನನ್ನ ನಾನು ಬೆಣ್ಣೆ ತಿಂದಿಲ್ಲ

ಅಮ್ಮ ನನ್ನ
ನಾನು ಬೆಣ್ಣೆ ತಿಂದಿಲ್ಲ

ಮುಂಜಾವ ನಾನು ಮಧುಬನದಲಿ
ಹಸುಗಳನ್ನು ಮೇಯಿಸಿ ಬಂದೆ
ತದನಂತರ ನಾನು ಕೊಳಲನ್ನು
ಊದುತಾ ಹಾಡುತಾ ಅಲ್ಲಿಲ್ಲಿ ಅಲೆದೆ
ಸಂಜೆಯಾದಂತೆ ಮನೆಗೆ ಬಂದೆ

ಅಮ್ಮ
ನಾನ್ಯಾವಾಗ ಬೆಣ್ಣೆ  ತಿಂದೆ?

ನಾನು ಬಾಲಕ
ತುಂಬಾ ಸಣ್ಣವ
ಬೆಣ್ಣೆ ಭರಣಿ
ತುಂಬಾ ಎತ್ತರ
ಹೇಗೆ ತಾನೇ
ತಲುಪುವುದು ನನ್ನ ಕೈಗೆ ಅದೆಲ್ಲ?

ಅಮ್ಮ ನನ್ನ
ನಾನು ಬೆಣ್ಣೆ ತಿಂದಿಲ್ಲ

ಯಶೋದೆ :
ಹೀಗೆ ನೀನು ಮಾತನ್ನು ತಿರುಗಿಸಿ
ಒಲಿಸುವೆ ಎನ್ನದಿರು ನನ್ನನ್ನು ವಂಚಿಸಿ
ಕಾಣುತ್ತಿದೆ ಈಗಲೂ ಬೆಣ್ಣೆ
ನಿನ್ನ ತುಟಿಯಲಿ ಹಸಿ ಹಸಿ

ಗೋಪ ಗೋಪಿಯರು
ನನ್ನಿಂದ ಪಗೆ ಇಡುವರು
ಬೆಣ್ಣೆ ತುಪ್ಪ ತಿಂದು
ನನ್ನ ಮುಖಕ್ಕೆ ಹಚ್ಚಿ
ಓಡಿ ಹೋಗುವರು ಅವರೆಲ್ಲ

ಅಮ್ಮ ನನ್ನ
ನಾನು ಬೆಣ್ಣೆ ತಿಂದಿಲ್ಲ

ನೀನು ಜನನಿ
ತುಂಬಾ ಮುಗ್ದೆ
ಇತರರ ಮಾತು ಕೇಳಿ
ನನ್ನನ್ನು ತಪ್ಪಿತಸ್ತನೆಂದು ತಿಳಿದೇ
ತೆಗೋ ನಿನ್ನ ಬೆತ್ತ ಕಂಬಳಿ
ತುಂಬಾ ನನ್ನನ್ನು ನೀನು ನಲಿಸಿದೆ
ನಿನ್ನ ಹೃದಯದಲಿ ಭೇದ ಉದ್ಭವಿಸಿದೆ
ಸಾಕು ಮಗ ನಾನು
ನಿನಗೆ ಪ್ರೀತಿ ನನ್ನಲ್ಲಿಲ್ಲ
ನೀನು ಮಲತಾಯಿ
ನನ್ನಮ್ಮ ನೀನಲ್ಲ

ಯಶೋದೆ ನಕ್ಕು
ಮುದ್ದು ಕೃಷ್ಣನನ್ನು ಅಪ್ಪಿಕೊಂಡು
"ಹೌದು ಪುಟ್ಟ ನೀನು ಬೆಣ್ಣೆ ತಿಂದಿಲ್ಲ"

ಅಮ್ಮ ನನ್ನ
ನಾನು ಬೆಣ್ಣೆ ತಿನ್ನಲಿಲ್ಲ

ರಚನೆ : ಸೂರದಾಸ್

ಕನ್ನಡದಲ್ಲಿ : ಹರೀಶ್ ಶೆಟ್ಟಿ,ಶಿರ್ವ



मैया मोरी, मैं नही माखन खायो



भोर भयो गैयन के पाछे, मधुवन मोहि पठायो ।

चार पहर वंशीवट भटक्यो, सांझ परे घर आयो ॥

॥ मैया मोरी ………. १ ॥



मैं बालक बहियन को छोटो, छींको किहि विधि पायो .

ग्वाल-बाल सब बैर परे हैं, बरबस मुख लपटायो ..



॥ मैया मोरी ………. २ ॥



तू जननी मन की अति भोली, इनके कहे पतियायो .

यह ले अपनी लकुटि कम्बलिया, तुने बहुतहि नाच नचायो .

जिय तेते कछु भेद उपजिहै , जानि परायो जायो ..

“सूरदास” तब हँसी यशोदा, लै उर-कंठ लगायो ..

॥ मैया मोरी ……….
http://www.youtube.com/watch?v=5IBbP9CGZu8

2 comments:

  1. ಸೂರದಾಸರ ಮನೋಜ್ಞ ರಚನೆ ಇದು.
    'ಕಾಣುತ್ತಿದೆ ಈಗಲೂ ಬೆಣ್ಣೆ
    ನಿನ್ನ ತುಟಿಯಲಿ ಹಸಿ ಹಸಿ'
    ಉತ್ತಮ ಭಾವಾನುವಾದ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್,ನಿಮ್ಮ ಆರೈಕೆಯ ನುಡಿಯೇ ನನ್ನ ಬರಹದ ಉಸಿರು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...