Thursday, July 3, 2014

ಅಂಬರದ ಒಂದು ಪವಿತ್ರ ಕುಡಿಕೆಯಲಿ

!!ಅಂಬರದ ಒಂದು ಪವಿತ್ರ ಕುಡಿಕೆಯಲಿ
ಮೋಡದ ಒಂದು ಪಾನೀಯ ತುಂಬಿಸಿ
ಬೆಳದಿಂಗಳ ಸವಿ ಆಸ್ವಾದಿಸಿದೆ ನಾನು
ಮಾತು ಅವಿಶ್ವಾಸದ ನುಡಿದೆ ನಾನು!!
ಅಂಬರದ...

!!ಹೇಗೆ ಇದರ ಋಣ ತೀರಿಸಲಿ
ಕೇಳಿ ಮೃತ್ಯುವಿನ ಕೈಯಿಂದ
ವಯಸ್ಸಿನ ರವಿಕೆ ಹೊಲಿದೆ ನಾನು
ಮಾತು ಅವಿಶ್ವಾಸದ ನುಡಿದೆ ನಾನು!!
ಅಂಬರದ...

!!ನನ್ನ ಇದರಲಿ ಏನೂ ಇಲ್ಲ
ಉಪವಾಸ ಹಬ್ಬ ಅವನ ಠೇವಣಿ
ಅವನಿಗೆ ಅದೇ ನೀಡಿದೆ ನಾನು
ಮಾತು ಅವಿಶ್ವಾಸದ ನುಡಿದೆ ನಾನು!!
ಅಂಬರದ...

ಮೂಲ : ಅಮೃತ ಪ್ರೀತಂ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಅಶಾ ಭೋಸ್ಲೆ
ಸಂಗೀತ : ಉಸ್ತಾದ್ ವಿಲಾಯತ್ ಖಾನ್
ಚಿತ್ರ : ಕಾದಂಬರಿ

अम्बर की एक पाक सुराही
बादल का एक जाम उठाकर
घूंट चांदनी पी हैं हमने
बात कुफ्र की की हैं हमने

कैसे इसका क़र्ज़ चुकाये
मांग के अपनी मौत के हाथों
उम्र की चोली सी हैं हमने
बात कुफ्र की की हैं हमने

अपना इस में कुछ भी नहीं हैं
रोज़े या जलसे उसकी अमानत
उसको वही तो दी हैं हमने
बात कुफ्र की की हैं हमने
http://www.youtube.com/watch?v=3sJeppHDQ2M

2 comments:

  1. ಖ್ಯಾತ ನಾಮರಾದ ಅಮೃತ ಪ್ರೀತಂ ಅವರ ಲೇಖನಿಯಿಂದ ಮೂಡಿಬಂದ ಈ ಗೀತೆ ಮಧುರವಾಗಿದೆ.
    ಉಸ್ತಾದ್ ವಿಲಾಯತ್ ಖಾನ್ ಅವರ ಸಂಗೀತವೂ ಸಮ್ಮಿಲಿತವಾಗಿದೆ.
    ತಮ್ಮ ಭಾವಾನುವಾದವೂ ಸೈ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್. ಈ ಹಾಡು ಅತ್ಯಂತ ವಿಚಾರಶೀಲ ಖ್ಯಾತ ಪಂಜಾಬಿ ಲೇಖಕಿ ಅಮೃತ ಪ್ರೀತಂ ಅವರದ್ದು, ಈ ಹಾಡಿನ ಅರ್ಥ ತುಂಬಾ ಆಳ ಹಾಗು ಗೂಢ ಇದೆ, ನನಗೆ ತಿಳಿದಷ್ಟು ಮಟ್ಟಿಗೆ ಕೇವಲ ಅರ್ಥಾನುವಾದ ಮಾಡಿದೆ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...