Thursday, 31 July, 2014

ಬರೆದಾಗ ಪತ್ರ ನಿನಗೆ

ಬರೆದಾಗ ಪತ್ರ ನಿನಗೆ
ಓ ನಿನ್ನ ನೆನಪಿನಲ್ಲಿ
ಸಾವಿರಾರು ಬಣ್ಣದ
ನೋಟ ನಿರ್ಮಾಣವಾಯಿತು
ಬೆಳಗಾದಾಗ ಹೂವಾಯಿತು
ರಾತ್ರಿ ಬಂದಾಗ ತಾರೆಗಳಾಯಿತು

ಯಾವುದೇ ಹಾಡು
ಎಲ್ಲಿಯೋ ಧ್ವನಿಸಿತು
ಮನಸ್ಸು ನೀ
ಬಂದೆಯೆಂದು ನುಡಿಯಿತು
ಎಲ್ಲಿಯೋ ಯಾವುದೇ
ಮೊಗ್ಗು ಬಿರಿದಾಗ
ನಾನು ತಿಳಿದೆ
ನೀನು ನಾಚಿಸಿದೆಯೆಂದು
ಯಾವುದೇ ಸುಗಂಧ
ಎಲ್ಲಿಯೋ ಹರಡಿತು
ನನಗೆ ನಿನ್ನ ಕೇಶ ಹರಡಿದಂತಾಯಿತು
ಬರೆದಾಗ ಪತ್ರ ನಿನಗೆ...

ಪರಿಸರ ವರ್ಣಮಯ
ಶೈಲಿ ವರ್ಣಮಯ
ಈ ಮೃದು ನಡೆ
ಈ ನಿನ್ನ ಲಜ್ಜೆ
ಈ ಮೈ ಮುರಿಯುವಿಕೆ
ಈ ಏಕಾಂತತೆ
ಈ ನಿನ್ನ ನನ್ನನ್ನು ಪೀಡಿಸಿ
ಹಿಂತಿರುಗಿ ಹೋಗುವುದು
ಯಾರಿಗೆ ಹೇಗೆ ಮಾಡಲಾರದು
ಈ ನಿನ್ನ ಯುವ ಮಾಯೆ ಮರುಳು
ಬರೆದಾಗ ಪತ್ರ ನಿನಗೆ...

ಎಲ್ಲಿ ನೀನು
ಅಲ್ಲಿ ನಾನು
ನನ್ನ ಹೃದಯದ
ಮಿಡಿತ ನೀನು
ಯಾತ್ರಿ ನಾನು
ತಾಣ ನೀನು
ನಾನು ತೃಷೆ
ವರ್ಷ ನೀನು
ನನ್ನ ಪ್ರಪಂಚ
ಈ ನಿನ್ನ ಕಂಗಳು
ನನ್ನ ಸ್ವರ್ಗ ಈ ಮಡಿಲು
ಬರೆದಾಗ ಪತ್ರ ನಿನಗೆ...

ಮೂಲ : ನೀರಜ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಕನ್ಯದಾನ್

likhe jo khat tujhe
vo teri yaad me
hazaaro rag ke
nazaare ban gae

saveraa jab huaa
to phul ban gae
jo raat aa_i to
sitaare ban gae

koi nagamaa kahi gunjaa, kahaa dil ne ke tu aayi
kahi chataki kali koi, mai ye samajhaa tu sharamaayi
koi khushabu kahi bikhari, lagaa ye zulf laharaayi

fizaa ragi adaa ragi, ye ithalaanaa ye sharamaanaa
ye agadaayi ye tanahaayi, ye tarasaa kar chale jaanaa
banaa de naa kahi mujhako, javaa jaadu ye divaanaa

jahaan tu hai vahaan mai hun, mere dil ki tu dhadakan hai
musaafir mai tu mazil hai, mai pyaasaa hun tu saavan hai
meri duniyaa ye nazare hai, meri jannat ye daaman hai
http://www.youtube.com/watch?v=Ax8OWmkhOEQ

Wednesday, 30 July, 2014

ಓ ದೇಹವೇ,

ಓ ದೇಹವೇ,
ವಯಸ್ಸು ಓಡುತ್ತಿರುವಂತೆ
ನೀನ್ಯಾಕೆ ಭಾರ ಭಾರವಾಗುತ್ತ ಹೋಗುತ್ತಿರುವೆ
ರೋಗಗಳನ್ನು ಯಾಕೆ ಆಹ್ವಾನಿಸುವೆ
ಯಾಕೆ ಅವುಗಳನ್ನು ತನ್ನೊಳಗೆ ನೆಲೆಸುವೆ

ದಿನನಿತ್ಯ ನಿನಗೆ ಯೋಗ ನೀಡುವೆ
ಮುಂಜಾವು ಎದ್ದು ಎಷ್ಟೋ ಸುತ್ತು ನಡೆಯುವೆ
ಒತ್ತಾಯದಿಂದ ಕೆಲವು ಸುತ್ತು ಓಡುವೆ
ಆದರೂ ನೀನ್ಯಾಕೆ ದುಂಡು ದುಂಡಾಗಿರುವೆ

ಈಗಲೂ ನಿನಗೆ
ಒಳ್ಳೆ ಆಹಾರ ನೀಡುತ್ತಿರುವೆ
ಶಕ್ತಿವರ್ಧಕ ಗುಳಿಗೆ ಕೊಡುತ್ತಿರುವೆ
ಆದರೆ ನೀನ್ಯಾಕೆ ಬೇಗನೆ ಆಯಾಸ ನೀಡುತ್ತಿರುವೆ

ಕನ್ನಡಿಯಲಿ
ನಿನ್ನನ್ನು ನೋಡುವಾಗ ಅದೇಕೋ ಬೇಸರ
ಸಪೂರ ಸುಂದರವಾಗಿದ್ದ ನೀನು ಕಳೆದಿರುವೆ ನಿನ್ನ ಆಕಾರ
ಅದೇಕೆ ನೀನು ನಿನ್ನ ಗತಕಾಲ ಮರೆತಿರುವೆ

by ಹರೀಶ್ ಶೆಟ್ಟಿ, ಶಿರ್ವ

ನಿನ್ನ ಸುಂದರ ಮುಖದಲಿ

ನಿನ್ನ ಸುಂದರ ಮುಖದಲಿ 
ಇಂದು ಹೊಸ ಹೊಳಪಿದೆ 
ನನ್ನ ಹೃದಯ ಮಿಡಿಯಿತೆಂದರೆ 
ನನ್ನ ತಪ್ಪು ಏನಿದೆ 
ನಿನ್ನ ಕಂಗಳು ಖಂಡಿತ 
ಏನಾದರೂ ನುಡಿದಿದೆ 
ನನ್ನ ಹೃದಯ ಮಿಡಿಯಿತೆಂದರೆ 
ನನ್ನ ತಪ್ಪು ಏನಿದೆ 

ತೆರೆದ ಕೇಶದ ನೆರಳಲಿ 
ರೂಪ ನಿನ್ನ ಅರಳಿದೆ-೨
ಮೇಘದಲಿ ಮುಂಜಾನೆಯ 
ಬಿಸಿಲು ಹರಡಿದಂತಿದೆ
ಎಲ್ಲಿಯೂ ನೋಡಿದರೂ
ಅಲ್ಲಿ ನಿನ್ನದೇ ಅಮಲಿದೆ 
ನನ್ನ ಹೃದಯ ಮಿಡಿಯಿತೆಂದರೆ 
ನನ್ನ ತಪ್ಪು ಏನಿದೆ 
ನಿನ್ನ ಕಂಗಳು...

ತಗ್ಗು ತಗ್ಗಿದ ಕಂಗಳಲಿ 

ಚಂಚಲತೆ ಅಡಗಿದೆ
ಸಿಹಿ ಸಿಹಿ ನಗುವಿನಲಿ 

ಮಿಂಚು ಫಳ ಫಳಿಸುತ್ತಿದೆ
ಯೌವನ ನಿನ್ನ
ಸ್ವತಃ ಅಮಲಲಿ ಮುಳುಗಿದೆ
ನನ್ನ ಹೃದಯ ಮಿಡಿಯಿತೆಂದರೆ 

ನನ್ನ ತಪ್ಪು ಏನಿದೆ
ನಿನ್ನ ಕಂಗಳು...

ಎಲ್ಲೆಲ್ಲಿ ಹೆಜ್ಜೆ ಬಿದ್ದಲಿ 

ಪರಿಸರ ಬದಲಾಗಿದೆ
ಅಂದರೆ ಎಲ್ಲವೂ ಸಂಪೂರ್ಣವಾಗಿ 

ನಿನ್ನಲ್ಲಿಯೇ ಇಳಿದಿದೆ
ಆಕರ್ಷಣೆ ಇಂತಹದ್ದು
ಹುಡುಗಿ ಬೇರೆ ಇನ್ನು ಯಾರಲ್ಲಿದೆ
ನನ್ನ ಹೃದಯ ಮಿಡಿಯಿತೆಂದರೆ 

ನನ್ನ ತಪ್ಪು ಏನಿದೆ
ನಿನ್ನ ಕಂಗಳು...

ಮೂಲ : ಅಂಜಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಓ .ಪಿ. ನಯ್ಯರ್
ಚಿತ್ರ : ಬಹಾರೆ ಫಿರ್ ಭಿ ಆಯೆಗಿ

ap ke hasin rukh pe aaj naya noor hain
mera dil machal gaya to mera kya kasoor hain
ap ke nigah ne kaha to kuchh jarur hain
mera dil machal gaya to mera kya kasoor hain

khuli laton ki chhanv me khila khila ye rup hain
khuli laton ki chhanv me khila khila ye rup hain
ghata se jaise chhan rahi subah subah ki dhoop hain
jidhar naajar moodi jidhar naajar moodi
udhar surur hi surur hain
mera dil machal gaya to mera kya kasoor hain
ap ke hasin rukh pe aaj naya noor hain
mera dil machal gaya to mera kya kasoor hain

zuki zuki nigah me bhi hain bala ki shaukhiyan
zuki zuki nigah me bhi hain bala ki shaukhiyan
dabi dabi hasi me bhi tadap rahi hain bijaliyan
shabab aap ka shabab aap ka
nashe me khud hi choor choor hain
mera dil machal gaya to mera kya kasoor hain
ap ke hasin rukh pe aaj naya noor hain
mera dil machal gaya to mera kya kasoor hain

jahan jahan pade kadam wahan fija badal gayi
jahan jahan pade kadam wahan fija badal gayi
ke jaise sarabasar bahar ap hi me dhal gayi
kisi me ye kashish kisi me ye kashish
kaha jo ap me hujoor hain
mera dil machal gaya to mera kya kasoor hain
ap ke hasin rukh pe aaj naya noor hain
mera dil machal gaya to mera kya kasoor hain
ap ke hasin rukh pe aaj naya noor hain
mera dil machal gaya to mera kya kasoor hain
ap ke nigah ne kaha to kuchh jarur hain
mera dil machal gaya to mera kya kasoor hain

http://www.youtube.com/watch?v=xagb1WMVXCo

Saturday, 26 July, 2014

ಬಿಂದುವಿಂದ ಬಿಂದು ತನಕ ಗೆರೆ ಎಳೆ

ಬಿಂದುವಿಂದ ಬಿಂದು ತನಕ ಗೆರೆ ಎಳೆ
ಒಂದು ಹೊಸ ದಾರಿ ನಿರ್ಮಾಣವಾಗಲಿ
ಮನಸ್ಸಿಂದ ಮನಸ್ಸು ಸೇರಲಿ
ಜಗತ್ತು ಹಸಿರಲಿ

ಬಿಂದುವಿಂದ ಬಿಂದು ತನಕ ಗೆರೆ ಎಳೆ
ಹೊಸ ಧೈರ್ಯ ಹುಟ್ಟಲಿ
ಅತ್ಯಾಚಾರ ಮಾಡುವವರನ್ನು ಮುಗಿಸಲಿ
ಹೆಣ್ಣೆಂಬ ಪಾವನ ಸೊತ್ತು ಸುರಕ್ಷಿತವಾಗಲಿ

ಬಿಂದುವಿಂದ ಬಿಂದು ತನಕ ಗೆರೆ ಎಳೆ
ಹುಚ್ಚು ವಿಚಾರ ಬರದಿರಲಿ
ಮನಸ್ಸು ನಿರ್ಮಲವಾಗಲಿ
ಬದುಕು ಸಾರ್ಥಕವಾಗಲಿ

ಬಿಂದುವಿಂದ ಬಿಂದು ತನಕ ಗೆರೆ ಎಳೆ
ಯಾರೂ ಪರಕೀಯರಲ್ಲವೆಂಬ ಭಾವನೆ ಹುಟ್ಟಲಿ
ಎಲ್ಲರೂ ನಿನ್ನವರೆ ಎಂಬ ವಿಚಾರವಿರಲಿ
ಪ್ರೀತಿ ವಿಶ್ವಾಸ ಬೆಳೆಯಲಿ

by ಹರೀಶ್ ಶೆಟ್ಟಿ,ಶಿರ್ವ

Thursday, 24 July, 2014

ಅಮ್ಮ

ಮುನವ್ವರ್ ರಾಣ ಅವರ "ಅಮ್ಮ" ಕುರಿತು ಬರೆದ ಶಾಯರಿ.

ಕತ್ತಲೆ,
ನೋಡು ನಿನ್ನ ಮುಖ ಕಪ್ಪಾಯಿತು
ಅಮ್ಮ ಕಣ್ಣು ತೆರೆದಳು
ಮನೆಯಲ್ಲಿ ಬೆಳಕಾಯಿತು
---
ಯಾರಿಗೆ ಮನೆ ಸಿಕ್ಕಿತು ಪಾಲಲ್ಲಿ
ಅಥವಾ ಯಾವುದೇ ಅಂಗಡಿ ಬಂತು ಪಾಲಿಗೆ
ನಾನು ಮನೆಯಲ್ಲಿ ಚಿಕ್ಕವ
ಅಮ್ಮ ಬಂದಳು ನನ್ನ ಪಾಲಿಗೆ
---
ಈ ತರಹ ನನ್ನ ತಪ್ಪನ್ನು
ಅವಳು ಅಡಗಿಸುತ್ತಾಳೆ
ತುಂಬಾ ಕೋಪದಲ್ಲಿದ್ದಾಗ
ಅಮ್ಮ ಅಳುತ್ತಾಳೆ
---
ನನಗೆ ಪುನಃ
ಇಚ್ಚೆಯಾಗಿದೆ ದೇವರಾಗಬೇಕೆಂದು
ಅಮ್ಮನನ್ನು ಹೀಗೆ ಅಪ್ಪಿಕೊಳ್ಳುವೆ
ಅಂದರೆ ಮಗುವಾಗುವೆ ನಾನಿಂದು
---
ನನ್ನ ಚರಿತ್ರೆಯ ಮೇಲೆ ಎಂದಾದರು
ದೋಷ ಬಂದದ್ದು ಕಂಡಾಗ
ತುಂಬಾ ತಡ ತನಕ ಏಕಾಂತದಲ್ಲಿ
ಯಾರೋ ಅಳುತ್ತಿದ್ದರು
---
ಈಗ ಅಮ್ಮ ಜೀವಿತವಾಗಿದ್ದಾಳೆ
ನನಗೆ ಏನೂ ಆಗದು
ನಾನು ಮನೆಯಿಂದ ಹೊರಡುವಾಗ
ಅವಳ ಆಶೀರ್ವಾದ ಸಹ ಒಟ್ಟಿಗೆ ಹೊರಡುವುದು
---
ನನಗೆ ಮೃದು ತಲೆದಿಂಬಿನ ಅಗತ್ಯವೇನು
ಯಾರದ್ದೋ ಕೈ ಈಗಲೂ ನನ್ನ ತಲೆಯ ಅಡಿಯಲ್ಲಿದೆ
---
ಅಮ್ಮ ಕಳುಹಿಸಿದ್ದಾಳೆ ತಿಂಡಿಗಳನ್ನು
ಹಳಸಿದರೂ ರುಚಿ ಅದೇ ಇದೆ

ಮೂಲ :ಮುನವ್ವರ್ ರಾಣ
ಅನುವಾದ : ಹರೀಶ್ ಶೆಟ್ಟಿ,ಶಿರ್ವ

ऐ अँधेरे! देख ले मुँह तेरा काला हो गया
माँ ने आँखें खोल दीं घर में उजाला हो गया

किसी को घर मिला हिस्से में या कोई दुकाँ आई
मैं घर में सब से छोटा था मेरे हिस्से में माँ आई

इस तरह मेरे गुनाहों को वो धो देती है
माँ बहुत ग़ुस्से में होती है तो रो देती है

मेरी ख़्वाहिश है कि मैं फिर से फ़रिश्ता हो जाऊँ
माँ से इस तरह लिपट जाऊँ कि बच्चा हो जाऊँ

जब भी देखा मेरे किरदार पे धब्बा कोई
देर तक बैठ के तन्हाई में रोया कोई

अभी ज़िन्दा है माँ मेरी मुझे कु्छ भी नहीं होगा
मैं जब घर से निकलता हूँ दुआ भी साथ चलती है

मुझे कढ़े हुए तकिये की क्या ज़रूरत है
किसी का हाथ अभी मेरे सर के नीचे है

खाने की चीज़ें माँ ने जो भेजी हैं गाँव से
बासी भी हो गई हैं तो लज़्ज़त वही रही

Tuesday, 22 July, 2014

ಹಾಡುವೆ ನಾನಿಂದು ಗೀತೆವೊಂದು ಸುಂದರ

ಹಾಡುವೆ ನಾನಿಂದು
ಗೀತೆವೊಂದು ಸುಂದರ
ಹರ್ಷದ ಉಲ್ಲಾಸದ
ಗಾನ ಸುಮಧುರ

ನಲಿಯುತ್ತಿದೆ ಖುಷಿಯಿಂದ
ಪುಲಕಿತ ಮನಸ್ಸಿಂದು
ಹೃದಯದ ದ್ವಾರದಲಿ
ನಿಂತಿರುವೆ ನೀ ಬಂದು
ಅಲಂಕೃತವಾಗಿದೆ ಇಂದು
ನನ್ನ ಹೃದಯ ಮಂದಿರ

ಹಾಡುವೆ ನಾನಿಂದು
ಗೀತೆವೊಂದು ಸುಂದರ
ಹರ್ಷದ ಉಲ್ಲಾಸದ
ಗಾನ ಸುಮಧುರ

ಅದೆಷ್ಟೋ ಸಮಯದ ನಂತರ
ಬಂದಿದೆ ಸಂತಸದ ಕ್ಷಣ ಇದು
ಅಂತರಂಗದ ಸುಮಗಳಿಗೆ
ಬಂದಿದೆ ವಸಂತ ಇಂದು
ಅರಳುತ್ತಿದೆ ಬಯಕೆಗಳ
ಕುಸುಮಗಳು ತರಹ ತರಹ

ಹಾಡುವೆ ನಾನಿಂದು
ಗೀತೆವೊಂದು ಸುಂದರ
ಹರ್ಷದ ಉಲ್ಲಾಸದ
ಗಾನ ಸುಮಧುರ

ಸಿಹಿ ಸಿಹಿ ಧ್ವನಿ ಹೊರಡುತ್ತಿದೆ
ಮನ ಕೋಗಿಲೆಯಿಂದ ಇಂದು
ಅಂಬರದ ಉತ್ತುಂಗಕ್ಕೆ ಏರಿದೆ
ನನ್ನ ಹುಮ್ಮಸ್ಸು ಉತ್ಸಾಹ ಇಂದು
ಅಪೇಕ್ಷೆ ಇಚ್ಚೆಯ ಹಕ್ಕಿಗಳು ಹಾರುತ್ತಿದೆ
ತೆರೆದು ಬಂಧನದ ಪಂಜರ

ಹಾಡುವೆ ನಾನಿಂದು
ಗೀತೆವೊಂದು ಸುಂದರ
ಹರ್ಷದ ಉಲ್ಲಾಸದ
ಗಾನ ಸುಮಧುರ

by ಹರೀಶ್ ಶೆಟ್ಟಿ, ಶಿರ್ವ 

Monday, 21 July, 2014

ದೂರ ದೂರ ಇರದಿರು ಸಖಿಯೇ

ದೂರ ದೂರ ಇರದಿರು ಸಖಿಯೇ
ಸ್ವಲ್ಪ ಸನಿಹ ಬಾ ಒಲವೇ
ಕೇವಲ ಮೌನ ಸಂದೇಶ ಕಳಿಸದಿರು
ಎರಡು ಮಾತನ್ನೂ ನುಡಿ ಪ್ರೀತಿಯೇ

ಅರಿವಿದೆ ನನಗೆ
ನಿನ್ನ ಹೃದಯವೂ ಮಿಡಿಯುತ್ತದೆ
ನನ್ನ ಹಾಗೆಯೆಂದು
ಗೊತ್ತು ನನಗೆ
ನಿನ್ನ ಮನಸ್ಸೂ ಪ್ರೇಮ ಗೀತೆ ಹಾಡುತ್ತದೆ
ನನ್ನ ಹಾಗೆಯೆಂದು
ಹೀಗೆ ನೀನು ಹೆದರದಿರು ಸಖಿಯೇ
ನಿನ್ನ ಹೃದಯವನ್ನು ನನ್ನ ಮುಂದೆ
ಬಿಚ್ಚಿಡು ಪ್ರೇಯಸಿಯೇ

ದೂರ ದೂರ ಇರದಿರು ಸಖಿಯೇ
ಸ್ವಲ್ಪ ಸನಿಹ ಬಾ ಒಲವೇ
ಕೇವಲ ಮೌನ ಸಂದೇಶ ಕಳಿಸದಿರು
ಎರಡು ಮಾತನ್ನೂ ನುಡಿ ಪ್ರೀತಿಯೇ

ಈ ನಿನ್ನ ಲಜ್ಜೆ
ನನ್ನ ಹೃದಯವನ್ನು ಕೊಲ್ಲುತ್ತಿದೆ
ದಿನ ದಿನ
ನಿನ್ನ ಈ ಮುಗ್ಧತೆ
ನನ್ನನ್ನು ಮರುಳುಗೊಳಿಸುತ್ತಿದೆ
ದಿನ ದಿನ
ಹೀಗೆ ನನ್ನನ್ನು ನೀನು ಸತಾಯಿಸದಿರು ಗೆಳತಿಯೇ
ನಿನ್ನ ಮನಸ್ಸ ಗುಟ್ಟನ್ನು ನನ್ನ ಮುಂದೆ
ಬಹಿರಂಗಗೊಳಿಸು ಪ್ರೀತಿಯೇ

ದೂರ ದೂರ ಇರದಿರು ಸಖಿಯೇ
ಸ್ವಲ್ಪ ಸನಿಹ ಬಾ ಒಲವೇ
ಕೇವಲ ಮೌನ ಸಂದೇಶ ಕಳಿಸದಿರು
ಎರಡು ಮಾತನ್ನೂ ನುಡಿ ಪ್ರೀತಿಯೇ

by ಹರೀಶ್ ಶೆಟ್ಟಿ, ಶಿರ್ವ 

Sunday, 20 July, 2014

ಕಂಬನಿ ಹರಿಸದಿರು ಚೆಲುವೆ

ಕಂಬನಿ ಹರಿಸದಿರು ಚೆಲುವೆ
ನಿನ್ನ ಜೊತೆ ಎಂದೆಂದಿಗೂ ನಾನಿರುವೆ
ಜೀವನ ಸುಖ ದುಃಖದ ನಾವೆ
ಸಹಜವಾಗಿ ತೇಲಿಕೊಂಡು ಹೋದರೆ
ಪಡೆಯುವೆ ಕಿನಾರೆ

ಕಂಬನಿ ಹರಿಸದಿರು ಚೆಲುವೆ
ನಿನ್ನ ಜೊತೆ ಎಂದೆಂದಿಗೂ ನಾನಿರುವೆ

ಗಾಳಿ ಬಿರುಗಾಳಿ ಚಂಡಮಾರುತ
ಬದುಕಲಿ ಇದೆಲ್ಲ ಸಹಜವೇ
ಸತತ ಹೋರಾಟವೇ ಜೀವನ
ಇಂದಿನ ಕಷ್ಟ ಸಹಿಸಿದರೆ
ನಾಳೆ ಸಿಗುವುದು ಸುಖದ ದಿನವೇ
ಹೆದರದಿರು ನೀನು ಸಖಿಯೇ
ನೀನೆಲ್ಲಿ ಹೋದರು
ಜೊತೆಯಾಗಿ ನಾನೂ ಬರುವೆ

ಕಂಬನಿ ಹರಿಸದಿರು ಚೆಲುವೆ
ನಿನ್ನ ಜೊತೆ ಎಂದೆಂದಿಗೂ ನಾನಿರುವೆ

ಕಷ್ಟದ ಏನು
ಅದು ನಮ್ಮಂತಹ ಬಡವರ ಒಡವೆ
ಏರು ಪೇರಿನ ಜೀವನ
ಇಂದು ಅನುಭವ ಕಹಿ ಬೇವಿನ
ನಾಳೆ ಹರಿಯುವುದು ಹೊಳೆ ಜೇನಿನ
ಭಯ ಪಡದಿರು ಪ್ರೀತಿಯೇ
ನಿನ್ನೆಲ್ಲ ಕಷ್ಟವನ್ನು
ನಿನ್ನ ಜೊತೆ ನಾನೂ ಎದುರಿಸುವೆ

ಕಂಬನಿ ಹರಿಸದಿರು ಚೆಲುವೆ
ನಿನ್ನ ಜೊತೆ ಎಂದೆಂದಿಗೂ ನಾನಿರುವೆ

by ಹರೀಶ್ ಶೆಟ್ಟಿ,ಶಿರ್ವ 

Saturday, 19 July, 2014

ಸಂಜೆ ನೀ ಸ್ವಲ್ಪ ತಡವಾಗಿ ಬಾ

ಸಂಜೆ ನೀ ಸ್ವಲ್ಪ
ತಡವಾಗಿ ಬಾ
ನನ್ನವಳು ಬರಲಿ
ಸ್ವಲ್ಪ ನಿದಾನವಾಗಿ ಬಾ
ಸಂಜೆ ನೀ ಸ್ವಲ್ಪ
ತಡವಾಗಿ ಬಾ

ಸೂರ್ಯನ ತಾಪ
ನಾ ಸಹಿಸಲು ಸಿದ್ಧ
ಬೆವರಲಿ ಮುಳುಗಲು
ನಾನು ಸಿದ್ಧ
ಪ್ರೀತಿಯ ಬಿಸುಪು
ತಣಿದಾಗ ಬಾ
ಸಂಜೆ ನೀ ಸ್ವಲ್ಪ
ತಡವಾಗಿ ಬಾ

ಪ್ರೀತಿಯ ನಿರೀಕ್ಷೆಗೆ
ಕಣ್ಣಿಲ್ಲ ನೋಡು
ಹೃದಯದ ಮಿಡಿತಕ್ಕೆ
ನಿಯಂತ್ರಣವಿಲ್ಲ ನೋಡು
ಕನಸಿನ ಕೋಗಿಲೆ
ಸಂಧ್ಯಾರಾಗ ಹಾಡಿದಾಗ ಬಾ
ಸಂಜೆ ನೀ ಸ್ವಲ್ಪ
ತಡವಾಗಿ ಬಾ

ಗೊತ್ತು ನಿನ್ನ ಗತಿ
ನಿಲ್ಲುವುದಿಲ್ಲವೆಂದು
ನಿಸರ್ಗದ ನಿತ್ಯಕ್ರಮ
ಬದಲಾಗುವುದಿಲ್ಲವೆಂದು
ಆದರೂ ನಮ್ಮ ಪ್ರೇಮ ಪಲ್ಲವಿ
ಧ್ವನಿಸಿದಾಗ ಬಾ
ಸಂಜೆ ನೀ ಸ್ವಲ್ಪ
ತಡವಾಗಿ ಬಾ

by ಹರೀಶ್ ಶೆಟ್ಟಿ,ಶಿರ್ವ 

Friday, 18 July, 2014

ಹಗಲಲ್ಲಿ ಬಾ ನೀ ಇರುಳಲ್ಲಿ ಬಾ ನೀ

ಹಗಲಲ್ಲಿ ಬಾ ನೀ
ಇರುಳಲ್ಲಿ ಬಾ ನೀ
ಬಂದೆ ಬಿಡು ಇನ್ನು 
ಸೋತಿದೆ ಮನ ಇಲ್ಲಿ 

ಬಂದೆ ಬಿಡು ಇನ್ನು 
ಸೋತಿದೆ ಮನ ಇಲ್ಲಿ 

ಸಾಗರದಲಿ ತರಂಗ 
ಏರುತ್ತಿದೆ ರಭಸದಲಿ
ನಿನ್ನ ನೆನಪ ಅಲೆಗಳು
ನನ್ನ ಹೃದಯದಲಿ
ಹರಿಯುತ್ತಿದೆ ಕಣ್ಣೀರು
ಈ ನಿರೀಕ್ಷೆಯ ಕಂಗಳಲಿ

ಬಂದೆ ಬಿಡು ಇನ್ನು
ಸೋತಿದೆ ಮನ ಇಲ್ಲಿ

ಹಗಲಲ್ಲಿ ಬಾ ನೀ
ಇರುಳಲ್ಲಿ ಬಾ ನೀ
ಬಂದೆ ಬಿಡು ಇನ್ನು
ಸೋತಿದೆ ಮನ ಇಲ್ಲಿ

ಕಾಗದದಲಿ ಬರೆದು
ನಿನ್ನ ಹೆಸರನ್ನ
ದೋಣಿ ಮಾಡಿ ಬಿಡುವೆ
ಸಾಗರದಲಿ ಅದನ್ನ
ತೇಲುತ್ತಿದೆ ನನ್ನ
ವಿಚಲಿತ ಹೃದಯ ಅದರಲ್ಲಿ

ಬಂದೆ ಬಿಡು ಇನ್ನು
ಸೋತಿದೆ ಮನ ಇಲ್ಲಿ

ಹಗಲಲ್ಲಿ ಬಾ ನೀ
ಇರುಳಲ್ಲಿ ಬಾ ನೀ
ಬಂದೆ ಬಿಡು ಇನ್ನು
ಸೋತಿದೆ ಮನ ಇಲ್ಲಿ

by ಹರೀಶ್ ಶೆಟ್ಟಿ, ಶಿರ್ವ

Wednesday, 16 July, 2014

Kabir Doha (ಕಬೀರ ದೋಹ )

ಕಬೀರ ದೋಹ
ಅನ್ಯರ ದೋಷ ನೋಡಿ, ನಗು ನಗುತ್ತಲೇ ಹೋದನಲ್ಲ!
ತನ್ನದು ನೆನಪಾಗಲಿಲ್ಲ, ಅದರ ಆದಿಯಿಲ್ಲ ಅಂತ್ಯವಿಲ್ಲ!!

कबीर दोहा  
दोस पराए देखि करि, चला हसन्त हसन्त,
अपने याद न आवई, जिनका आदि न अंत।

ಅನುವಾದ : by ಹರೀಶ್ ಶೆಟ್ಟಿ, ಶಿರ್ವ 

Tuesday, 15 July, 2014

ಬೇಡಿಕೆ

ದೇವರೇ 
ನೀರಿನಂತೆ ಆಗಲಿ ನನ್ನ ಮನಸ್ಸು 
ಇತರರ ಬೇಡಿಕೆಯ ದಾಹ ತಣಿಸಲಿ
ನನ್ನಲ್ಲಿ ಸಮಾಜದ ಕೊಳಕನ್ನು ಶುಚಿ ಮಾಡುವ ಶಕ್ತಿ ಸಾಮರ್ಥ್ಯವಿರಲಿ
ನನ್ನಿಂದ ನಿರ್ಮಲವಾಗಲಿ ಈ ಜಗತ್ತು
ನೀರಿನಂತೆ ಆಗಲಿ ನನ್ನ ಮನಸ್ಸು 

by ಹರೀಶ್ ಶೆಟ್ಟಿ, ಶಿರ್ವ

---

ದೇವರೇ 
ಒಳ್ಳೆಯದನ್ನು ಕಾಪಾಡುವೆ 
ಕೆಟ್ಟದನ್ನು ನಿರ್ಲಕ್ಷಿಸುವೆ 
ನನ್ನಲ್ಲಿದ್ದ ಕೆಟ್ಟ ನಡೆಯನ್ನು ಪದೇ ಪದೇ ವಿರೋಧಿಸುವೆ 
ನನ್ನಲ್ಲಿದ್ದ ಕೆಟ್ಟತನವನ್ನು ಹೊರ ದೂಡಲು ಪ್ರಯತ್ನಿಸುವೆ 
ಜಗತ್ತಲ್ಲಿದ್ದ ಒಳ್ಳೆತನ ಹುಡುಕುವೆ 
ಒಳ್ಳೆತನದ ಹಾದಿಯಲಿ ನಡೆಯುವೆ
ಈ ಕಲ್ಮಶ ಮನಸ್ಸನ್ನು ದಿನ ಪ್ರತಿ ದಿನ 
ಶುಚಿಗೊಳಿಸಲು ಪ್ರಯತ್ನಿಸುವೆ 
ಒಳ್ಳೆಯವನಾಗಲು ಪ್ರಯತ್ನಿಸುವೆ ದೇವ 

ಒಳ್ಳೆಯವನಾಗಲು ಪ್ರಯತ್ನಿಸುವೆ

by ಹರೀಶ್ ಶೆಟ್ಟಿ, ಶಿರ್ವ


---

ನಾನೇ ದೇವರು
ಎನ್ನುವ ಮಾನವನೇ,
ನೀನು ತಯಾರಿಸಿದ ಭಕ್ಷ
ರುಚಿಸಲಿಲ್ಲ ಪ್ರಭುವೇ
ಅದರಲ್ಲಿ ಸತ್ಯದ ಸಿಹಿ ಪ್ರಮಾಣವಿರಲಿಲ್ಲ
ಸುಳ್ಳಿನ ಮಸಾಲೆ ತುಂಬಿತ್ತು

by ಹರೀಶ್ ಶೆಟ್ಟಿ, ಶಿರ್ವ


---

ಗುರುವೇ,
ನಿನ್ನ ಅನೇಕ ಉಪಕಾರ
ನನ್ನ ಮೇಲೆ
ನನ್ನನ್ನು ರಚಿಸಿದಕ್ಕೆ
ನಿನ್ನ ಚರಣ ತೊಳೆದು
ಚರಣಾಮೃತ ಕುಡಿದೆ
ಆದರೂ ಗುರುವೇ
ಇನ್ನೂ ಅಹಂ ದೂರವಾಗಲಿಲ್ಲ
ಕೋಪ ತಣಿಯಲಿಲ್ಲ
ಆಸೆ ಇಳಿಯಲಿಲ್ಲ 
ಆದರೆ ನಿನ್ನ ಕೃಪೆ ಗುರುವೇ
ಈ ತನಕ ಮನುಷ್ಯನಾಗಿ ಬದುಕುತ್ತಿದ್ದೇನೆ

by ಹರೀಶ್ ಶೆಟ್ಟಿ, ಶಿರ್ವ


Monday, 14 July, 2014

ಮುಖಪುಸ್ತಕ

ಗೆಳತಿ, 
ದೂರವಿದ್ದವರೆಲ್ಲ ನಿನ್ನವರೆಂದು 
ನೀನು ಭಾವಿಸಿರಬಹುದು
ಆದರೆ ಅವರ ಮನಸ್ಸಲ್ಲಿ 
ನೀನ್ಯಾರೆಂದು ಗೊತ್ತಿಲ್ಲವೆಂಬ 
ಭಾವ ಇದ್ದಿರಬೇಕು 

ನೀನೇನೋ ಎಲ್ಲರನ್ನೂ 
ತನ್ನ ಹೃದಯದ ಬಳಿ ಇಟ್ಟಿರುವೆ 
ಆದರೆ ಮುಖಪುಸ್ತಕದವರನ್ನು 
ಎಲ್ಲರೂ ಅಷ್ಟೇನೂ
ಬಳಿ ತರುವುದಿಲ್ಲ

ಆದರೆ ನಿನ್ನಿಂದ ದೂರವಿರುವವರೆಲ್ಲ
ನಿನ್ನನ್ನು ಇಷ್ಟ ಪಡುವುದಿಲ್ಲ ವೆಂದೆನಿಲ್ಲ
ಕೆಲವರಿಗೆ ತೋರಿಕೆಯ ಅಭ್ಯಾಸ ಇರುವುದಿಲ್ಲ
ತೋರದೆ ನಿನ್ನನ್ನು ಇಷ್ಟ ಪಡುವವರೆ
ನಿನ್ನ ನಿಜ ಪ್ರಶಂಸಕರು

ಆದರೆ ನಿನ್ನ ಹೃದಯದ ಪ್ರಪಂಚ
ಹೀಗೆಯ ವ್ಯಾಪಕವಾಗಿರಲಿ
ಅದರಲ್ಲಿ ಇಷ್ಟ ಪಡುವವರ ಜೊತೆ
ನಿನ್ನನ್ನು ಇಷ್ಟ ಪಡದವರಿಗೂ
ನಿನ್ನ ಹೃದಯದಲಿ ವಿಶಿಷ್ಟ ಸ್ಥಾನವಿರಲಿ

by ಹರೀಶ್ ಶೆಟ್ಟಿ,ಶಿರ್ವ

Saturday, 12 July, 2014

ಈ ರಾತ್ರಿ ಹೊಸತು ಹಳತು

ಈ ರಾತ್ರಿ ಹೊಸತು ಹಳತು
ಬಂದು
ಬಂದೋಗಿ ನುಡಿಯುತ್ತದೆ  
ಯಾವುದೇ ಕಥೆ ಇದು

ಬರುತ್ತಿದ್ದಾರೆ ನೋಡಿ ಯಾರೋ
ಹೋಗುತ್ತಿದ್ದಾರೆ ನೋಡಿ ಯಾರೋ
ಎಲ್ಲರ ಹೃದಯ ಎಚ್ಚರದಲ್ಲಿ
ಎಲ್ಲರ ಕಂಗಳು ಮಸುಕು ಮಸುಕು
ಮೌನ ನುಡಿಯುತ್ತದೆ ಮಾತು
ಈ ರಾತ್ರಿ ಹೊಸತು ಹಳತು....

ಎಂತಹ ವಾತಾವರಣ ಇದು
ಹೂಗಳಿಂದ ಸುಗಂಧ ಹರಡುತ್ತಿದ್ದಂತೆ
ಸುಖ ನಿದಿರೆಯಲಿ
ಕಣ್ರೆಪ್ಪೆಯ ಗಲ್ಲಿಯಿಂದ
ಸುಂದರ ಕನಸ ಮೆರವಣಿಗೆ
ಹೋದಂತೆ ಹಾದು
ಈ ರಾತ್ರಿ ಹೊಸತು ಹಳತು....

ಯಾರಿಗೆ ತಿಳಿದಿದೆ
ಯಾವಾಗ ಬೀಸುವುದು
ಯಾವ ಕಡೆಯಿಂದ ಈ ಗಾಳಿ
ಒಂದು ವರ್ಷವಾದರೂ ನೆನಪಿಡು
ಈ ರಾತ್ರಿಯ ಭೇಟಿಗಳನ್ನು
ಹೋಗಬೇಡ ಇದನ್ನು ಮರೆತು
ಈ ರಾತ್ರಿ ಹೊಸತು ಹಳತು....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಸಂಗೀತ : ರಾಜೇಶ್ ರೋಶನ್
ಹಾಡಿದವರು : ಲತಾ ಮಂಗೇಶ್ಕರ್
ಚಿತ್ರ : ಜೂಲಿ

ये रातें नयी पुरानी
आते, आते जाते कहती हैं कोई कहानी

आ रहा है देखो कोई
जा रहा है देखो कोई
सब के दिल हैं जागे जागे
सब की आँखें खोई खोई
ख़ामोशी करती हैं बातें

क्या समा है जैसे ख़ुशबू
उड़ रही हो कलियों से
गुजरी हो निंदिया में
पलकों की गलियों से
सुन्दर सपनों की बरातें

कौन जाने कब चलेंगी
किस तरफ से ये हवाएं
साल भर तो याद रखना
ऐसा ना हो भूल जाए
इस रात की मुलाक़ातें
http://www.youtube.com/watch?v=KkNDS7TfJ5s

ಕಣ್ಣೀರ ಮುತ್ತು

ನನ್ನ ಸನಿಹ ಬರದಿದ್ದರೂ
ಅಡ್ಡಿ ಇಲ್ಲ 
ಆದರೆ ಹೃದಯದಿಂದ ದೂರ 
ಹೋಗದಿರು 

ಮುನಿಸಿ ಮೌನ ತಾಳಿದರೂ
ಅಡ್ಡಿ ಇಲ್ಲ 
ಆದರೆ ಮನಸ್ಸ ಅಂತರ 
ಏರಿಸದಿರು 

ನೀನು ನೀಡಿದ ಸಜೆಯಿಂದ ನನಗ್ಯಾವುದೇ
ಅಡ್ಡಿ ಇಲ್ಲ
ಆದರೆ ನೀನು ಮನಸ್ಸಲ್ಲಿ ಪಶ್ಚಾತಾಪ
ಪಡದಿರು

ನನ್ನಿಂದ ಮಾತನಾಡದಿದ್ದರೂ
ಅಡ್ಡಿ ಇಲ್ಲ
ಆದರೆ ನಮ್ಮಲ್ಲಿದ್ದ ಪ್ರೀತಿ ಕಡಿಮೆ
ಮಾಡದಿರು

ನನ್ನ ಕಣ್ಣೀರ ತೊರೆ ಹರಿದರೂ
ಅಡ್ಡಿ ಇಲ್ಲ
ಆದರೆ ನಿನ್ನ ಕಣ್ಣೀರ ಮುತ್ತು
ವ್ಯಯ ಮಾಡದಿರು

by ಹರೀಶ್ ಶೆಟ್ಟಿ, ಶಿರ್ವ

Thursday, 10 July, 2014

ಹೃದಯದ ಗಂಟನ್ನು ಬಿಚ್ಚಿಬಿಡು

!!ಹೃದಯದ ಗಂಟನ್ನು ಬಿಚ್ಚಿಬಿಡು
ಮೌನ ಇರದಿರು
ಯಾವುದೇ ಹಾಡನ್ನು ಹಾಡು
ಸಭೆಯಲಿ ಈಗ ಯಾರಿದ್ದಾರೆ ಅಪರಿಚಿತ
ನೀನು ನನ್ನ ಬಳಿ ಬಂದುಬಿಡು!!

!!ಸಿಗಲಿ ಈಗ ಹೃದಯದಿಂದ ಹೃದಯವನ್ನು
ಅಳಿಸಿಬಿಡು ಎಲ್ಲ ಅಸಹಾಯಕತೆಯನ್ನು
ಅಮಲಲಿ ಮುಳುಗಿಸಿ ತನ್ನನ್ನು
ದೂರ ಮಾಡು ಎಲ್ಲ ಅಂತರವನ್ನು
ಕಣ್ಣಲ್ಲಿ ನಿನ್ನ ನಾನು ನಗುವೆ
ಒಂದು ವೇಳೆ ನೀನು ನಗುವೆ ಎಂದಾದರೆ !!
ಸಭೆಯಲಿ ಈಗ.....

!!ನಾವಾಗಿ ಉಳಿಯಲಿಲ್ಲ ಈಗ ನಾವು
ಈಗ ಬೇರೇನೋ ಆಗಿ ಹೋದೆವು ನಾವು
ಕನಸಿನ ಜಗಮಗ ನಗರದಲಿ
ಅದೆಲ್ಲಿಯೋ ಮರೆಯಾಗಿ ಹೋದೆವು ನಾವು
ಹಾದಿ ಯಾರಿಂದಲೂ ಕೇಳಬೇಡ
ಯಾರಿಗೂ ನೀನು ತನ್ನ ತಾಣ ತಿಳಿಸದಿರು!!
ಸಭೆಯಲಿ ಈಗ.....

!!ನಾಳೆ ಯಾರೂ ನನ್ನಲ್ಲಿ ಕೇಳದಿರಲಿ
ಏನಾಗಿತ್ತು ನಿನಗೆ ನಿನ್ನೆ ರಾತ್ರಿಯಲಿ
ತಿರುಗಿ ನೋಡುವುದಿಲ್ಲ ನಾನು
ಹೃದಯ ಹೇಳಿದೆ ಸಾಗುತ್ತಿರೆಂದು
ಯಾರು ದೂರ ಉಳಿದರೋ
ಅವರನ್ನು ಪುನಃ ನೀನು ಕರೆಯದಿರು!!
ಸಭೆಯಲಿ ಈಗ.....

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್, ಮನ್ನಾ ಡೇ
ಸಂಗೀತ: ಶಂಕರ್ ಜೈ ಕಿಶನ್
ಚಿತ್ರ : ರಾತ್ ಔರ್ ದಿನ್

dil ki girah khol do, chup na baitho, koi geet gao
dil ki girah khol do, chup na baitho, koi geet gao
mehaphil me ab kon hai ajanabi, tum mere pass aao
dil ki girah khol do, chup na baitho, koi geet gao

milne do ab dil se dil ko, mitne do majburiyon ko
shishe me apne dubo do, sab faslo duriyon ko
ankhon me mai muskuraoon tumahari jo tum muskurao
mehaphil me ab kon hai ajanabi, tum mere pass aao
dil ki girah khol do, chup na baitho, koi geet gao

hum tum na hum tum rahe ab, kuch aur hi ho gaye ab
sapanoki zilmil nagar me, jaane kaha kho gaye ab
humrah puche kisi se na tum apni manjil batao
mehaphil me ab kon hai ajanabi, tum mere pass aao
dil ki girah khol do, chup na baitho, koi geet gao

kal hamse puche na koi, kya ho gaya tha tumhe kal
mudkar nahi dekhate hum, dil me kaha hai chala chal
jo dur piche kahi rah gaye ab unhe mat bulao
mehaphil me ab kon hai ajanabi, tum mere pass aao
dil ki girah khol do, chup na baitho, koi geet gao
http://www.youtube.com/watch?v=nX86j-rQBjo

Wednesday, 9 July, 2014

ನಿನ್ನ ನನ್ನ ಪ್ರೀತಿ ಅಮರವಾಗಿದೆ

!!ನಿನ್ನ ನನ್ನ ಪ್ರೀತಿ ಅಮರವಾಗಿದೆ
ಮತ್ಯಾಕೆ ನನಗೆ ಭಯವಾಗುತ್ತಿದೆ
ನನ್ನ ಬಾಳ ಸಂಗಾತಿ ಹೇಳು ನನಗೆ
ಯಾಕೆ ಈ ಹೃದಯ ಮಿಡಿಯುತ್ತಿದೆ ಪದೇ ಪದೇ!!

!!ಏನು ಹೇಳಿದೆ ಈ ಚಂದಿರ
ಅದನ್ನು ಕೇಳಿ ಬೆಳದಿಂಗಳು
ಪ್ರತಿ ತರಂಗದಲಿ ಉತ್ಸಾಹದಿಂದ
ಯಾಕೆ ಹೀಗೆ ನಲಿಯುತ್ತಿದೆ
ಒಲವಿನ ಪ್ರಭಾವ
ಎಲ್ಲೆಡೆ ಇದೆ!!
ಮತ್ಯಾಕೆ ನನಗೆ ಭಯವಾಗುತ್ತಿದೆ

!!ಹೇಳುತ್ತಿದೆ ನನ್ನ ಮನಸ್ಸು
ಈಗ ಈ ರಾತ್ರಿ ಕವಿಯದಿರಲಿ
ಹರ್ಷದ ಈ ಸರಣಿ
ಹೀಗೆಯೇ ನಡೆಯುತ್ತಿರಲಿ
ನಿನ್ನನ್ನೇ ಕಾಣುತ್ತಿದ್ದೇನೆ
ನೋಡಿದ್ದರೆ ಎಲ್ಲಿಯೇ!!
ಮತ್ಯಾಕೆ ನನಗೆ ಭಯವಾಗುತ್ತಿದೆ

!!ಈ ಉತ್ಸಾಹ ಶಿಖರದಲ್ಲಿದೆ
ಪ್ರತಿ ಆನಂದ ಯುವವಾಗಿದೆ
ನನ್ನ ಎರಡು ಬಾಹುಗಳಲಿ
ಪೂರ್ಣ ಅಂಬರ ಇದ್ದಂತಾಗಿದೆ
ನಡೆಯುತ್ತಿದ್ದೇನೆ ನಾನು
ತಾರೆಗಳ ಮೇಲೆಯೇ!!
ಮತ್ಯಾಕೆ ನನಗೆ ಭಯವಾಗುತ್ತಿದೆ

ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ: ಶಂಕರ್ ಜೈ ಕಿಶನ್
ಚಿತ್ರ : ಅಸಲಿ ನಕಲಿ


tera mera pyar amar, phir kyo mujhko lagta hai dar
tera mera pyar amar, phir kyo mujhko lagta hai dar
mere jivan saathi bata, dil kyo dhadake rah-rah kar

kya kaha hai chand ne, jisko sunke  chandani
har lahar pe jhumake, kyo ye nachane lagi
chahat ka hai harsu asar, phir kyo mujhko lagta hai dar
tera mera pyar amar, phir kyo mujhko lagta hai dar

kah raha hai mera dil, ab ye raat na dhale
khushiyo ka ye silasila, aise hi chala rahe
tujhko dekhu dekhu jidhar, phir kyo mujhko lagta hai dar
tera mera pyar amar, phir kyo mujhko lagta hai dar

hai shabab par umang, har khushi javaan hai
meri dono baho me, jaise aasman hai
chalti hu mai taro par, phir kyo mujhko lagta hai dar
tera mera pyar amar, phir kyo mujhko lagta hai dar
http://www.youtube.com/watch?v=hP0fThpw80c

Tuesday, 8 July, 2014

ನೀನು ಚಂದಿರ ನಾನು ಬೆಳದಿಂಗಳು

ನೀನು ಚಂದಿರ
ನಾನು ಬೆಳದಿಂಗಳು
ನೀನು ಮರ
ನಾನು ಶಾಖೆ
ನೀನು ಮುಗಿಲು
ನಾನು ಮಿಂಚು
ನೀನು ಹಕ್ಕಿ
ನಾನು ಕದಿರು

ನೀನು ಮುಗಿಲು
ನಾನು ಮಿಂಚು
ನೀನು ಹಕ್ಕಿ
ನಾನು ಕದಿರು

ನೀನು ಚಂದಿರ
ನಾನು ಬೆಳದಿಂಗಳು

ಸರೋವರ ಇಲ್ಲ
ಬಾವಿ ಇಲ್ಲ
ತಂಪು ನೆರಳಿಲ್ಲ
ಕೋಗಿಲೆ ಇಲ್ಲ
ಇಂಚರಕ್ಕಿ ಇಲ್ಲ
ಹೀಗೆ ನನ್ನ ಊರು ನಲ್ಲ
ಎಲ್ಲಿ ತಣಿಯುವುದು ಮೈಯ ತಾಪ
ಓ ನಲ್ಲ ಶಿರಗೌರ
ಚಂದ್ರ ಕಿರಣವನ್ನು ಬಿಟ್ಟು
ಎಲ್ಲಿಗೆ ಹೋಗುವುದು ಚಕೋರ
ಇನಿಯ ನನ್ನ ತಾರುಣ್ಯದ ದಾಹ ಎದ್ದಿದೆ
ನಲ್ಲ ಬೆಂಬೂದಿ ಸಹ ಇಂದೂ
ಮಧುಚಂದ್ರವೆಂದು ಬಾಸವಾಗುತ್ತಿದೆ

ನೀನು ಚಂದಿರ.....

ಸೆರಗಲ್ಲಿ ನಾನಿಡುವೆ
ಓ ಇನಿಯ ನಿನ್ನನ್ನು
ಕಪ್ಪು ಗುಂಗುರು ಕೇಶದಿಂದ
ಕಟ್ಟುವೆ ಈ ಕಾಲನ್ನು
ಅಲಿಂಗನದಲಿ ಹೀಗೆ ಬಂಧಿಸುವೆ
ಅಂದರೆ ಬಿಡಿಸಲಾಗದು
ನಿನ್ನ ಕನಸು ನಲ್ಲ ಈಗ ಮುರಿಯದು
ಮೆಹಂದಿ ರಚಿಸಲಾಗಿದೆ ನನ್ನ ಈ ಕೈಗಳಿಗೆ
ನನ್ನ ಕಂಗಳಲಿ ತುಂಬಿದೆ ಕಾಡಿಗೆ
ಕ್ಷಣ ಕ್ಷಣ ನಿನ್ನನ್ನು ಕರೆಯುವೆ
ಇನಿಯ ಕ್ಷಣ ಕ್ಷಣ ನಿನ್ನನ್ನು ಕರೆಯುವೆ
ನೆಮ್ಮದಿ ಇಲ್ಲದೆ

ನೆಮ್ಮದಿ ಇಲ್ಲದೆ

ನೀನು ಚಂದಿರ.....

ಓ ನನ್ನ ಪ್ರೀಯತಮ
ಓ ನನ್ನ ಹಣೆ ಕುಂಕುಮ
ಪ್ರೀಯತಮ ಜೊತೆ ಪ್ರೀಯತಮೆಯಾದೆ
ಮಯೂರ ನಿಸರ್ಗ ಜೊತೆ
ಬೆಳದಿಂಗಳ ರಾತ್ರಿ ನನ್ನೊಟ್ಟಿಗೆ ಕಳೆ ನೀನು
ತನ್ನ ಕೈಯಿಂದ ನನಗೆ ಉಡಿಸು ಕೆಂಪು ಸೆರಗನು
ಧರತಿ ಕೇಸರಿ ಕಾಣುತ್ತಿದೆ
ಅಂಬರ ಕೆಂಪು ಕೆಂಪೇರಿದೆ
ನಲ್ಲ ಅಪ್ಪಿಕೊಂಡು ನನ್ನನ್ನು
ಪ್ರಸನ್ನಗೊಳಿಸು ನನ್ನನ್ನು

ನೀನು ಚಂದಿರ.....

ಮೂಲ : ಬಾಲ್ ಕವಿ ಬೈರಾಗಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಜೈದೇವ್
ಚಿತ್ರ : ರೇಶ್ಮ ಆರ್ ಶೇರಾ


तू चंदा मैं चांदनी, तू तरुवर मैं शाख रे
तू बादल मैं बिजुरी, तू पंछी मैं पात रे

ना सरोवर, ना बावड़ी, ना कोई ठंडी छांव
ना कोयल, ना पपीहरा, ऐसा मेरा गांव रे
कहाँ बुझे तन की तपन, ओ सैयां सिरमोड़
चंद्र-किरन को छोड़ कर, जाए कहाँ चकोर
जाग उठी है सांवरे, मेरी कुँवारी प्यास रे
(पिया) अंगारे भी लगने लगे, आज मुझे मधुमास रे

तुझे आंचल मैं रखूँगी ओ सांवरे
काली अलकों से बाँधूँगी ये पांव रे
गल बैयाँ वो डालूं की छूटे नहीं
तेरा सपना साजन अब टूटे नहीं
मेंहदी रची हथेलियाँ, मेरे काजर-वारे नैन रे
(पिया) पल पल तुझे पुकारते, हो हो कर बेचैन रे

ओ मेरे सावन साजन, ओ मेरे सिंदूर
साजन संग सजनी बनी, मौसम संग मयूर
चार पहर की चांदनी, मेरे संग बिता
अपने हाथों से पिया मोहे लाल चुनर उढ़ा
केसरिया धरती लगे, अम्बर लालम-लाल रे
अंग लगा कर साहेबा रे, कर दे मुझे निहाल रे
तू चंदा मैं चांदनी...
http://www.youtube.com/watch?v=vh1-Ba-Hnhw

Sunday, 6 July, 2014

ಸ್ವಲ್ಪ ಸ್ವಲ್ಪವೇ ಸಿಗುತ್ತದೆ

ಸ್ವಲ್ಪ ಸ್ವಲ್ಪವೇ ಸಿಗುತ್ತದೆ
ಸ್ವಲ್ಪ ಸ್ವಲ್ಪವೇ ಜೀವಿಸಲು ಕೊಡು
ಜೀವನ ಇದು, ಜೀವನ ಇದು
ಹರಿಯಲು ಬಿಡು, ಹರಿಯಲು ಬಿಡು
ದಾಹದಲ್ಲಿರುವೆ ನಾನು, ದಾಹದಲ್ಲಿರಲು ಬಿಡು
ಇರಲಿ ಬಿಡು, ಇರಲಿ ಬಿಡು

ನಿನ್ನೆಯೂ ಹೀಗೆಯೇ ಆಗಿತ್ತು
ನಿದ್ರೆಯಲ್ಲಿದ್ದೆ ನಾನು ನೀನು ಸ್ಪರ್ಶಿಸಿದಾಗ
ಬಿದ್ದಂತಾಯಿತು ನಿನ್ನ ಬಾಹುಗಳಲಿ
ಆದರೆ ಆ ಬಾಹುಗಳ ಬಂಧನದಿಂದ ಉಳಿದುಕೊಂಡೆ
ಕನಸಲಿ ಹೆಜ್ಜೆ ಬಿದ್ದಾಗಿತ್ತು
ಕನಸಲಿ ಹರಿಯಲು ಬಿಡು
ದಾಹದಲ್ಲಿರುವೆ ನಾನು, ದಾಹದಲ್ಲಿರಲು ಬಿಡು
ಇರಲಿ ಬಿಡು, ಇರಲಿ ಬಿಡು
ಸ್ವಲ್ಪ ಸ್ವಲ್ಪವೇ...

ನೀನಂತೂ ಗಗನ ಹರಡಿದೆ
ನನ್ನ ಕಾಲ ಅಡಿಯಲಿ ನೆಲ ಇದೆ
ನಿನ್ನ ಬಯಕೆಯೂ ಬಾಕಿ ಇರಲಿ
ಬಹುಶಃ ಹೀಗೆಯೇ ಜೀವನ ಸುಂದರವಾಗಿದೆ
ಬಯಕೆಗಳಲ್ಲಿ ಹರಿಯಲು ಬಿಡು
ದಾಹದಲ್ಲಿರುವೆ ನಾನು, ದಾಹದಲ್ಲಿರಲು ಬಿಡು
ಇರಲಿ ಬಿಡು, ಇರಲಿ ಬಿಡು
ಸ್ವಲ್ಪ ಸ್ವಲ್ಪವೇ...

ಮಸುಕು ಮಬ್ಬಿನ ಹೊಗೆಯಲಿ
ಬಹುಶಃ ಅಂಬರ ತನಕ ಬಂದಿದ್ದೇನೆ
ನಿನ್ನ ಎರಡು ಬಾಹುಗಳ ಸಹಾಯದಿಂದ
ನೋಡು ಎಲ್ಲಿಯ ತನಕ ಬಂದೆ ನಾನು
ಮಬ್ಬಲ್ಲಿ ಹರಿಯಲು ಬಿಡು
ದಾಹದಲ್ಲಿರುವೆ ನಾನು, ದಾಹದಲ್ಲಿರಲು ಬಿಡು
ಇರಲಿ ಬಿಡು, ಇರಲಿ ಬಿಡು
ಸ್ವಲ್ಪ ಸ್ವಲ್ಪವೇ.

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಅಶಾ ಭೋಂಸ್ಲೆ
ಸಂಗೀತ : ಆರ್. ಡೀ. ಬರ್ಮನ್
ಚಿತ್ರ : ಇಜಾಜತ್

कतरा कतरा मिलती है
कतरा कतरा जीने दो
ज़िंदगी है, बहने दो
प्यासी हूँ मैं, प्यासी रहने दो

कल भी तो कुछ ऐसा ही हुआ था
नींद में थी तुमने जब छुआ था
गिरते गिरते बाहों में बची मैं
सपने पे पाँव पड़ गया था
सपनों में बहने दो
प्यासी हूँ मैं, प्यासी रहने दो
कतरा कतरा मिलती है...

तुमने तो आकाश बिछाया
मेरे नंगे पैरों में ज़मीं है
बाकी भी तुम्हारी आरज़ू हो
शायद ऐसे ज़िन्दगी हंसीं है
आरज़ू में बहने दो
प्यासी हूँ मैं, प्यासी रहने दो
कतरा कतरा मिलती है...

हलके हलके कोहरे के धुंए में
शायद आसमां तक आ गयी हूँ
तेरी दोनों बाहों के सहारे
देखो कहाँ तक आ गयी हूँ
कोहरे में बहने दो
प्यासी हूँ मैं, प्यासी रहने दो
कतरा कतरा मिलती है..
 http://www.youtube.com/watch?v=47CmHipykZE

Thursday, 3 July, 2014

ಅಂಬರದ ಒಂದು ಪವಿತ್ರ ಕುಡಿಕೆಯಲಿ

!!ಅಂಬರದ ಒಂದು ಪವಿತ್ರ ಕುಡಿಕೆಯಲಿ
ಮೋಡದ ಒಂದು ಪಾನೀಯ ತುಂಬಿಸಿ
ಬೆಳದಿಂಗಳ ಸವಿ ಆಸ್ವಾದಿಸಿದೆ ನಾನು
ಮಾತು ಅವಿಶ್ವಾಸದ ನುಡಿದೆ ನಾನು!!
ಅಂಬರದ...

!!ಹೇಗೆ ಇದರ ಋಣ ತೀರಿಸಲಿ
ಕೇಳಿ ಮೃತ್ಯುವಿನ ಕೈಯಿಂದ
ವಯಸ್ಸಿನ ರವಿಕೆ ಹೊಲಿದೆ ನಾನು
ಮಾತು ಅವಿಶ್ವಾಸದ ನುಡಿದೆ ನಾನು!!
ಅಂಬರದ...

!!ನನ್ನ ಇದರಲಿ ಏನೂ ಇಲ್ಲ
ಉಪವಾಸ ಹಬ್ಬ ಅವನ ಠೇವಣಿ
ಅವನಿಗೆ ಅದೇ ನೀಡಿದೆ ನಾನು
ಮಾತು ಅವಿಶ್ವಾಸದ ನುಡಿದೆ ನಾನು!!
ಅಂಬರದ...

ಮೂಲ : ಅಮೃತ ಪ್ರೀತಂ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಅಶಾ ಭೋಸ್ಲೆ
ಸಂಗೀತ : ಉಸ್ತಾದ್ ವಿಲಾಯತ್ ಖಾನ್
ಚಿತ್ರ : ಕಾದಂಬರಿ

अम्बर की एक पाक सुराही
बादल का एक जाम उठाकर
घूंट चांदनी पी हैं हमने
बात कुफ्र की की हैं हमने

कैसे इसका क़र्ज़ चुकाये
मांग के अपनी मौत के हाथों
उम्र की चोली सी हैं हमने
बात कुफ्र की की हैं हमने

अपना इस में कुछ भी नहीं हैं
रोज़े या जलसे उसकी अमानत
उसको वही तो दी हैं हमने
बात कुफ्र की की हैं हमने
http://www.youtube.com/watch?v=3sJeppHDQ2M

Wednesday, 2 July, 2014

ಈ ದಿನ ಹೇಗೆ ಬಂತೋ

ಈ ದಿನ 
ಹೇಗೆ ಬಂತೋ 
ಹೂವು ನಗಲಾರಂಭಿಸಿತು
ನೋಡಿ 
ವಸಂತ ವಸಂತ 
ಆಗಲಾರಂಭಿಸಿತು 
ನನ್ನ ಕನಸು 
ಈ ದಿನ.....

ನನ್ನ ಹಗಲೆಲ್ಲ
ಸ್ವರ್ಣಮಯ ಆಗುತ್ತಿದೆ
ಎಲ್ಲ ಸಂಜೆ
ಗುಲಾಬಿ ಗುಲಾಬಿ
ತೋರುತ್ತಿದೆ
ಸುಗಂಧಿತ ತಂಗಾಳಿ
ಮಗ್ನವಾಗಿ
ನಿನ್ನ ಸೆರಗನ್ನು
ಚುಂಬಿಸಿ
ಬೀಸುತ್ತಿದೆ
ಈ ದಿನ.....

ಅಲ್ಲಿ
ಇಂದು ಹಾರಲಾರಂಭಿಸಿತು
ಮುಗ್ಧ ಮನಸ್ಸು ಕೋಮಲ
ಎಲ್ಲಿದೆಯೋ
ಗಗನ
ಸುಂದರ ಶ್ಯಾಮಲ
ಅಲ್ಲಿಯೇ ಎಲ್ಲೊ
ಇಟ್ಟು ಬಾ
ಈ ಮನಸ್ಸು
ಆ ರಂಗಿನಲ್ಲಿ
ಮುಳುಗಿಸಿ
ಈ ಕನಸೆಂಬ
ಬಹುಮೂಲ್ಯ ನಿಧಿ
ಈ ದಿನ.....

ಮೂಲ : ಯೋಗೇಶ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು: ಮುಕೇಶ್
ಸಂಗೀತ : ಸಲೀಲ್ ಚೌಧರಿ
ಚಿತ್ರ : ಚೋಟಿ ಸಿ ಬಾತ್

Yeh din kya aaye lage phool hasne
Dekho basanti basanti, hone lage mere sapne

Yeh din kya aaye lage phool hasne

Sone jaisi ho rahi hain har subah meri
Lage har saanjh ab gulaal se bhari
Chalne lagi mehki huyi pawan magan jhoom ke
Aanchal tera choom ke

Yeh din kya aaye lage phool hasne

Wahaan man baawara, aaj ud chala
Jahaan par hain gagan salona saawala
Jaake wahi rakh de kahin man rangon mein khol ke
Sapne ye anmol se

Yeh din kya aaye lage phool hasne
Dekho basanti basanti, hone lage mere sapne
Yeh din kya aaye lage phool hasne

http://www.youtube.com/watch?v=LAbBrRYjwBY

Tuesday, 1 July, 2014

ಪ್ರೀತಿಯ ಹಿರಿಮೆ ಕೇವಲ ಇದರಲಿ

ಪ್ರೀತಿಯ ಹಿರಿಮೆ ಕೇವಲ ಇದರಲಿ
ಅವರು ಕಷ್ಟ ನೀಡುತ್ತಿರಲಿ
ನಾನಿರುವೆ ನಿಷ್ಠೆಯಲಿ
ನಿಷ್ಠೆಯೂ ವಿಫಲವಾದರೆ
ನಾನೇನು ಮಾಡಲೆಂದು ಅವರೇ ಹೇಳಲಿ
ಪ್ರೀತಿಯ ಹಿರಿಮೆ....

ನನಗೆ ಅವರ ದುಃಖ ಸಹ ಪ್ರಿಯವಾದುದ್ದು
ಅಂದರೆ ಅವರೇ ನೀಡಿದ ವಸ್ತು ಅದು
ಇದೇ ದುಃಖ ಈಗ ನನ್ನ ಜೀವನ
ಇದನ್ನು ಹೃದಯದಿಂದ ನಾನೇಗೆ ಪ್ರತ್ಯೇಕ ಮಾಡಲಿ
ಪ್ರೀತಿಯ ಹಿರಿಮೆ....

ನುಡಿಯಲು ಬಾರದ ಮಾತು ನಾನು
ಎಂದೂ ಮುಗಿಯದ ರಾತ್ರಿ ನಾನು
ಇದು ಬರೆದಿದೆ ನನ್ನ ಭಾಗ್ಯದಲಿ
ಹೀಗೆಯೇ ದೀಪ ಆಗಿ ಉರಿಯುತ್ತಿರುವೆ ನಾನಿಲ್ಲಿ
ಪ್ರೀತಿಯ ಹಿರಿಮೆ....

ಯಾರದ್ದು ಹೃದಯದ ಬಯಕೆಯಲ್ಲ
ಯಾರದ್ದು ಹೃದಯದ ಅನುರಾಗ ಅಲ್ಲ
ನಾನು ಬೇಸರದಲ್ಲಿರುವ ಆ ಹೂವು
ವಸಂತ ಬರದಿದ್ದರೆ ಏನು ಮಾಡಲಿ
ಪ್ರೀತಿಯ ಹಿರಿಮೆ....

ಮೂಲ : ರಾಜ ಮೆಹಂದಿ ಅಲಿ ಖಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ಅನ್ ಪಡ್

Hai Isi Mein Pyar Ki Aabroo
woh Jafa Kare Main Wafa Karoon
jo Wafa Bhi Kaam Na Aa Sake
to Wohi Kahen Ke Main Kya Karoon

mujhe Gham Bhi Unka Azeez Hai
ke Unhi Ki Di Hui Cheez
yehi Gham Hai Ab Meri Zindagi
ise Kaise Dil Se Juda Karoon
hai Isi Mein Pyar Ki Aabroo

jo Na Ban Sake Main Woh Baat Hoon
jo Na Khatm Ho Main Woh Raat Hoon
jo Na Khatm Ho Main Woh Raat Hoon
yeh Likha Hai Mere Naseeb Mein
yoon Hi Shamma Banke Jala Karoon
hai Isi Mein Pyar Ki Aabroo

na Kisiki Dil Ki Hoon Aarzoo
na Kisi Nazar Ki Hoon Justujoo
na Kisi Nazar Ki Hoon Justujoo
main Woh Phool Hoon Jo Udaas Ho
na Bahaar Aaye To Kya Karoon
hai Isi Mein Pyar Ki Aabroo
woh Jafa Kare Main Wafa Karoon
jo Wafa Bhi Kaam Na Aa Sake
to Wohi Kahen Ke Main Kya Karoon
hai Isi Mein Pyar Ki Aabroo
 http://www.youtube.com/watch?v=idzQzJu3V4Q

ಅನುಬಂಧ

ಗೆಳತಿ,
ಅದೇಕೆ ನೀನು 
ದೂರ ದೂರ ನನ್ನಿಂದ 
ಮನಸ್ಸಲ್ಲಿ ನಿನ್ನ 
ಯಾವ ರೀತಿಯ ನಡೆಯುತ್ತಿದೆ ದ್ವಂದ 
ಅಂತರ ಬೆಳೆಸಿ 
ಮುರಿಯದಿರು ನಮ್ಮ ಈ ಅನುಬಂಧ 
---

ಗೆಳತಿ,
ಸಂಕೋಚ ನಿನ್ನಲ್ಲೂ 
ಸಂಕೋಚ ನನ್ನಲ್ಲೂ 
ಸ್ವಲ್ಪ ಅಹಂ ನಿನ್ನಲ್ಲೂ
ಸ್ವಲ್ಪ ಅಹಂ ನನ್ನಲ್ಲೂ
ಬಹುಶಃ ನಮಗೆ ಇನ್ನೂ ಸಮಯ ಬೇಕು 
ಒಬ್ಬರನೊಬ್ಬರನ್ನು ಅರಿಯಲು 
---

ಗೆಳತಿ,
ಈ ಮೌನ ಮಾತುಗಳೇ 
ಎಷ್ಟು ಚೆನ್ನ 
ನಿನಗೂ ಇಷ್ಟ 
ನನಗೂ ಇಷ್ಟ 
ಆದರೆ ಕೆಲವೊಮ್ಮೆ ಭಾವನೆಗಳನ್ನು
ನಿಯಂತ್ರಿಸುವುದು ಕಷ್ಟ 
---

ಗೆಳತಿ,
ನಿನ್ನ ಕಟು ಮಾತಿನಿಂದ
ನನ್ನ ಹೃದಯಕ್ಕೆ ವೇದನೆ 
ಆದದ್ದು ನಿಜ 
ಆದರೆ ನಿನ್ನ ಮೇಲೆ ಇದ್ದ 
ಪ್ರೀತಿ 
ಕಿಂಚಿತ್ತು ಕಡಿಮೆಯಾಗಲಿಲ್ಲ 
ಅದೂ ನಿಜ 

by ಹರೀಶ್ ಶೆಟ್ಟಿ, ಶಿರ್ವ