Monday, June 9, 2014

ನನ್ನ ಉಸಿರನ್ನು

!!ನನ್ನ ಉಸಿರನ್ನು
ಯಾವುದು ಸುವಾಸಿಸುತ್ತಿದೆ
ಈ ಪ್ರಥಮ ಪ್ರೀತಿಯ ಸುಗಂಧ
ನಿನ್ನ ಉಸಿರಿಂದ ಬಹುಶಃ ಬರುತ್ತಿದೆ!!

!!ಪ್ರಾರಂಭ ಇದರ ಆಗಿತ್ತು ಆ ದಿನದಿಂದಲಿ
ಇದ್ದಕಿದ್ದಂತೆ ಆ ದಿನ ನೀನು
ನನ್ನನ್ನು ಹೀಗೆಯೇ ಸ್ಪರ್ಶಿಸಿದಲಿ
ತರಂಗ ಹೀಗೆ ಹುಟ್ಟಿತು ಆ ಕ್ಷಣ ಮೈಯಲಿ
ಅದು ಮನಸ್ಸನ್ನು ಈಗಲೂ ಸೆಳೆಯುತ್ತಿದೆ!!
ಈ ಪ್ರಥಮ ಪ್ರೀತಿಯ....

!!ತುಂಬಾ ಹಂಬಲಿಸಿದೆ ಈ ಹೃದಯ
ನಿನ್ನ ಮೋಹಕ ಕನಸಲಿ
ಈ ಹೃದಯದ ಮಾತು ಕೇಳು
ಬಂದು ನನ್ನ ಬಾಹುಗಳಲಿ
ಹುಟ್ಟಿಸಿ ವಿಶೇಷ ತೃಷೆ ಮನಸ್ಸಲ್ಲಿ
ಈ ಸಿಹಿ ಅಗ್ನಿ ಉರಿಸುತ್ತಿದೆ!!
ಈ ಪ್ರಥಮ ಪ್ರೀತಿಯ....

!!ನಾನು ನುಡಿಯದಿದ್ದನ್ನು
ಈ ಕಂಗಳು ನುಡಿಯುತ್ತಿದೆ
ಅಡಗಿದ ದಾಹ ಮನಸ್ಸಿನ
ದೃಷ್ಟಿಯಲಿ ಮಿನುಗುತ್ತಿದೆ
ಕಿರು ನಗು ಕಾಣುತ್ತಿದೆ ನಿನ್ನ ತುಟಿಯಲಿ
ನನ್ನ ಹೃದಯ ಮಿಡಿತ ಮರುಳಾಗುತ್ತಿದೆ!!
ಈ ಪ್ರಥಮ ಪ್ರೀತಿಯ....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್ / ಮಹೇಂದ್ರ ಕಪೂರ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೆ ಲಾಲ್
ಚಿತ್ರ : ಬದಲತೆ ರಿಶ್ತೆ

मेरी साँसों को जो महका रही हैं
ये पहले प्यार की खुशबू
तेरी सासों से शायद आ रही हैं

शुरू ये सिलसिला तो उसी दिन से हुआ था
अचानक तूने जिस दिन मुझे यूँ ही छुआ था
लहर जागी जो उस पल तनबदन में
वो मन को आज भी बहका रही हैं

बहोत तरसा हैं ये दिल तेरे सपने सज़ा के
ये दिल की बात सुन ले, मेरी बाहों में आके
जगाकर अनोखी प्यास मन में
ये मीठी आग जो दहका रही हैं

ये आँखे बोलती हैं, जो हम ना बोल पाये
दबी वो प्यास मन की, नज़र में झिलमिलाये
होठों पे तेरे हल्की सी हसी हैं
मेरी धड़कन बहकती जा रही हैं
http://www.youtube.com/watch?v=21ZazFAzynE

2 comments:

  1. ಆನಂದ್ ಬಕ್ಷಿ ಅವರ ಸಾಹಿತ್ಯವೆಂದ ಮೇಲೆ ಕೇಳಬೇಕೇ? ಅವರು ಲಯ ರಾಜ...
    ತಮ್ಮ ಭಾವಾನುವಾದಕ್ಕೂ ಫುಲ್ ಮಾರ್ಕ್ಸ್.
    ಅಂದಹಾಗೆ ಛಾಯಾಗ್ರಾಹಣ: ಪ್ರವೀಣ್ ಭಟ್

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...