Thursday, June 12, 2014

ನಿಮ್ಮ ಕೋರಿಕೆಯಲ್ಲಿ

ನಿಮ್ಮ ಕೋರಿಕೆಯಲ್ಲಿ 
ನಾನು ಈ ಹಾಡನ್ನು ಹಾಡುತ್ತಿದ್ದೇನೆ
ನನ್ನ ಹೃದಯದ ಮಾತುಗಳಿಂದ
ನಿಮ್ಮ ಮನಸ್ಸು ಉಲ್ಲಾಸಗೊಳಿಸುತ್ತಿದ್ದೇನೆ 
ನಿಮ್ಮ ಕೋರಿಕೆಯಲ್ಲಿ....

ಕೇಳಬೇಡಿ ಇತರರ ಕಷ್ಟಕ್ಕೆ 
ಈ ಪ್ರೇಮ ಕವಿ ಯಾಕೆ ಅಳುತ್ತಾನೆಯೆಂದು 
ಗಾಯ ಯಾರಿಗೋ ಆಗುತ್ತದೆ
ನೋವು ಇನ್ಯಾರಿಗೋ ಆಗುತ್ತದೆ
ದೂರ ಎಲ್ಲಿಯೋ ಕನ್ನಡಿ ಮುರಿದರೆ
ನಾನು ಚಡಪಡಿಸುತ್ತೇನೆ
ನಿಮ್ಮ ಕೋರಿಕೆಯಲ್ಲಿ....

ನಾನ್ಯಾರನ್ನು ಹೊಗಳಿದರೆ
ಎಂತಹ ರೂಪ ಅದು 

ಎಂತಹ ಸುಗಂಧ
ಅಂತಹದೇನು ಮಾತಿಲ್ಲ
ಇದು ಒಂದು ರಾಗದ ಮಾಯೆ
ಕೋಗಿಲೆಯ ಒಂದು ಕೂಗಿಗೆ ಎಲ್ಲರ
ಹೃದಯವನ್ನು ಮರುಳುಗೊಳಿಸುತ್ತೇನೆ
ನಿಮ್ಮ ಕೋರಿಕೆಯಲ್ಲಿ....

ನಾನು ಧರಿಸಿಕೊಂಡಿರುವ
ಆ ಬಂಧನ ಹೇಗೆ ನಿರ್ಮಾಣವಾಗುತ್ತದೆ
ಈ ರಹಸ್ಯ ಹೇಳುವೆ ಹಾಡಿನಲ್ಲಿ
ಚಿತ್ರ ಹೇಗೆ ನಿರ್ಮಾಣವಾಗುತ್ತದೆ
ಸುಂದರ ಅಧರದ ಬಣ್ಣದಿಂದ
ನಾನು ವರ್ಣಗಳನ್ನು ಕದಿಯುತ್ತೇನೆ
ನಿಮ್ಮ ಕೋರಿಕೆಯಲ್ಲಿ....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೆ ಲಾಲ್
ಚಿತ್ರ : ಅನುರೋದ್

aap ke anurodh pe (mai yeh git sunata hu - 2
apne dil kee bato se, aap kaa dil behlata hu
aap ke anurodh pe.......

mat puchho auro ke dukh me, yeh prem kavi kyo rota hai
bas chot kisi ko lagti hai, aur dard kisi ko hota hai
dur kahee koyi darpan tute, tadap ke mai reh jata hu
aap ke anurodh pe.......

tarif mai jiski karta hu, kya rup hai woh, kya khushbu hai
kuchh bat nahee aisi koyi, yeh ek suro kaa jadu hai
koyal kee ek kuk se sabke, dil me huk uthata hu
aap ke anurodh pe.......

mai pehne phirta hu jo, woh janjire kaise banti hain
yeh bhed bata du gito me, tasvire kaise banti hain
sundar hotho kee lali se, mai rang rup churata hu
aap ke anurodh pe.......

http://www.youtube.com/watch?v=hsfcCJ034Fk&feature=kp

2 comments:

  1. ಕಿಶೋರ್ ದಾ ತುಂಬಾ ಚೆನ್ನಾಗಿ ಹಾಡಿದ್ದಾರೆ.

    ಸುಂದರ ಅಧರದ ಬಣ್ಣದಿಂದ
    ನಾನು ವರ್ಣಗಳನ್ನು ಕದಿಯುತ್ತೇನೆ
    ನಿಮ್ಮ ಕೋರಿಕೆಯಲ್ಲಿ....
    - ಭಾವಾನುವಾದವೆಂದರೆ ಇದೇ ಇದೇ...

    ಅನುರೋಧ್ ಚಿತ್ರಕ್ಕೆ ಅಲೋಕ್ ದಾಸ್ ಗುಪ್ತರ ಛಾಯಾಗ್ರಹಣವಿತ್ತು.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...