Wednesday 4 June 2014

ಪ್ರತಿಕ್ರಮ

ಸಂತೆಯಲಿ ಗದ್ದಲ
ಅವನ
ಖಾಲಿ ಕಿಸೆ ಮೌನ

---
ದಾರಿಯ ಅಂಗಡಿಯಲ್ಲಿ
ದರೋಡೆ ಆಗುತಿತ್ತು
ಶಾಲೆಗೆ  ಹೋಗುತ್ತಿದ್ದ
ಪುಟ್ಟ ಹುಡುಗ
ಅಪ್ಪ ಕೊಟ್ಟ ನಾಲ್ಕಾಣೆ
ಅಂಗೈಯಲ್ಲಿ ಗಟ್ಟಿ ಹಿಡಿದ

----
ಅಂಗಡಿಯಲ್ಲಿ
ತುಂಬಾ ಮಿಠಾಯಿ
ಗಿರಾಕಿಯಿಂದ
ವಾದ ಮಾಡುವ
ಅಂಗಡಿಯವನ
ಮನಸ್ಸು ಕಹಿ ಕಹಿ

---

ಶಾಲೆಯ ಕ್ಯಾಂಟೀನ್'ಲ್ಲಿ
ಮಕ್ಕಳ ಗುಂಪು
ಪ್ರಥಮ ಸಲ
ಅಮ್ಮ ಕೊಟ್ಟ
ಒಂದು ರೂಪಾಯಿ ತಂದ
ಹುಡುಗನ ಮನಸ್ಸಲ್ಲಿ
ಸಂತಸ ಮತ್ತು ಗೊಂದಲ
ಏನು ಕೊಂಡು ತಿನ್ನಲಿ ಎಂದು

by ಹರೀಶ್ ಶೆಟ್ಟಿ, ಶಿರ್ವ 

2 comments:

  1. ಪ್ರತಿ ಹನಿಯು ಪ್ರತ್ಯೇಕವಾಗಿ ಒಂದೊಂದು ಕಥೆ ಹೇಳಬಲ್ಲದು ಇಲ್ಲಿ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete