Saturday 28 June 2014

ಜೀವನ ಪಂದ್ಯ

ಹಾರಿತು ಮರಿ ಪಕ್ಷಿ
ಪ್ರಥಮ ಸಲ,
ಹಿಂದೆ ಹಿಂದೆ
ವ್ಯಾಕುಲ ಹಾಗು ಸಂತಸದಿಂದ
ಹಾರುತ್ತಿದೆ
ತಾಯಿ ಪಕ್ಷಿ

-----

ಬಯಲಾದ
ಅವನ ಗುಟ್ಟಿನ
ಒಟ್ಟಿಗೆ
ಅವನ ಪ್ರೀತಿಯ ಗೆಳೆಯನ
ಗೆಳೆತನ
ಬಯಲಾಯಿತು

----

ಹುತಾತ್ಮನಾದ
ಸೈನಿಕನ ಕೈಯಲ್ಲಿ
ಅವಳು ಕೊಟ್ಟ
ತಾಳಿ

----

ಹುಲಿಯಿಂದ
ಹೆದರಿ
ಜಿಂಕೆ ಮರಿ
ಓಡೋಡಿ
ಬಂದು ತನ್ನ
ತಾಯಿಯ ಮಡಿಲಿಗೆ ಸೇರಿತು,
ಅದನ್ನು ನೋಡಿದ
ಹುಲಿಯ ಹಸಿವೆ ಏರಿತು

----

ಅವನು
ಪದೇ ಪದೇ
ಶತ್ರುವಿನ ಶಿಬಿರಕ್ಕೆ
ಹೋಗಿ
ಅವನ ಚಟುವಟಿಕೆ
ಗಮನಿಸುತ್ತ
ಇದ್ದ

by ಹರೀಶ್ ಶೆಟ್ಟಿ,ಶಿರ್ವ 

2 comments:

  1. ಹುತಾತ್ಮನ ಹನಿಗವನ ಯಾಕೋ ಕಣ್ಣಿರು ತರಿಸಿತು.

    ReplyDelete
  2. ಅನೇಕ ಧನ್ಯವಾದಗಳು ಬದರಿ ಸರ್.

    ReplyDelete