Thursday 26 June 2014

ಜೀವನ ಅಲೆಮಾರಿ

ಅಲ್ಲಿಂದ ಇಲ್ಲಿ
ಇಲ್ಲಿಂದ ಅಲ್ಲಿ
ಜೀವನ ಅಲೆಮಾರಿ
ನಿತ್ಯ ಹೊಸ ಹುಡುಕಾಟ
ಎಲ್ಲಿಯೋ ಭವಿಷ್ಯದ ದಾರಿ

ಬದುಕ ಬಂಡಿ
ಮೆಲ್ಲನೆ ನಡೆಯುತ್ತಿದೆ
ಸಮಯದ ಚಕ್ರ ತಿರುಗುತ್ತಿದೆ
ಇಂದಿನ ಆಟ ಮುಗಿಯಿತು
ನಾಳೆ ಪುನಃ ಹೊಸ ಅಧ್ಯಾಯದ ಬಾರಿ

ಹಳೆಯ ಶೋಕ
ಇನ್ನು ಹೊಸ ಲೋಕ
ನವೀನ ಜಾಗ
ಬಡತನದಲಿ ದಿನನಿತ್ಯ ಯಾಗ
ಬದುಕು ಆಗಿದೆ ದುಬಾರಿ

ಜೀವನದಲ್ಲಿಲ್ಲ  ಸ್ಥಿರತೆ
ಪ್ರತಿದಿನ ಏನಾದರೊಂದು ಕೊರತೆ
ಶಾಶ್ವತ ನೆಲೆ ಇಲ್ಲ
ದೇಹದಲಿ ಕೇವಲ ಚರ್ಮ ಉಳಿದಿದೆ
ರಕ್ತ ಹೋಗಿದೆ ಸೋರಿ

by ಹರೀಶ್ ಶೆಟ್ಟಿ ,ಶಿರ್ವ

2 comments:

  1. ನಾಳೆ ನಮ್ಮದೇ ಎಂದುಕೊಂಡಾಗಲೇ ತಾನೇ ಈವತ್ತಿನ ಸೋಲೂ, ಕಮ್ಮಿ ಕಹಿ!

    ReplyDelete
  2. ಅನೇಕ ಧನ್ಯವಾದಗಳು ಬದರಿ ಸರ್.

    ReplyDelete