Saturday, 14 June, 2014

ಸಂವೇದನೆ

ಯಾಕೋ ಈಗ 
ಮನಸ್ಸಿಲ್ಲ 
ಆ ಮನೆಗೆ ಹೋಗಿ 
ಅಕ್ಕಿ ಹೆಕ್ಕಿ ತಿನ್ನಲು 
ಅವಳ ದುಃಖದಿಂದ
ಮನಸ್ಸಿಗೆ ಬೇಸರ 

ಆ ಮನೆ ಒಡತಿ 
ತನ್ನ ಮನಸ್ಸ ವೇದನೆ 
ಅಡಗಿಸಿ 
ನಮಗಾಗಿ ತಪ್ಪದೆ
ಅಕ್ಕಿ ನೀರನ್ನು
ತಂದು ಇಡುತ್ತಾಳೆ

ದೇವರೇ
ನಮ್ಮನ್ನು ತೃಪ್ತ ಗೊಳಿಸುವ
ಈ ಮುಗ್ಧ ಹೆಂಗಸಿಗೆ
ಯಾಕೆ ಸುಖದಿಂದ ವಂಚಿತ
ಇಟ್ಟಿರುವೆ ನೀನು

ಅವಳು
ತನ್ನ ಏಕಾಂತದ
ಕಷ್ಟ ಮರೆಯಲು
ಎಷ್ಟೊಂದು
ಕಷ್ಟ ಪಡುತ್ತಿದ್ದಾಳೆ

ಬಹುಶಃ
ನಮ್ಮ ಕಲರವ ಕೇಳಿ
ಸ್ವಲ್ಪ ಸಮಾಧಾನ
ಪಡುತ್ತಾಳೆ ಏನೋ

ಬೇಡ
ಅಲ್ಲಿ ನಾವು
ಹೋಗದೆ ಇರದಿದ್ದರೆ
ಅವಳಿಗೆ ಇನ್ನು
ಕಷ್ಟವಾಗಬಹುದು

ಹೋಗುವ ಅಲ್ಲಿಗೆ
ಅವಳ ಮನಸ್ಸು
ಹೃದಯಕ್ಕೆ
ಸ್ವಲ್ಪ
ನೆಮ್ಮದಿ ನೀಡುವ

by ಹರೀಶ್ ಶೆಟ್ಟಿ, ಶಿರ್ವ

2 comments:

  1. ಹೇಳ ಹೆಸರಿರದ ಹಕ್ಕಿಯ ಪುಟ್ಟ ಹೃದಯದಲ್ಲಿರುವ ಈ ಸಂವೇದನೆ, ಆಕೆಯ ಒಡನಾಡಿಗಳಲಿ ಏಕಿಲ್ಲ ಪ್ರಭುವೇ!!! :(

    ReplyDelete
  2. ನಿಜ ಸರ್, ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete