Wednesday, May 14, 2014

ಗೌತಮ್ ಬುದ್ಧ (೨)

ಗೌತಮ್ ಬುದ್ಧ (೨)

ಶಾಕ್ಯ ಕುಲದಲ್ಲಿ ಜನ್ಮ ಪಡೆದ ಸಿದ್ಧಾರ್ಥನ ಮದುವೆ ಹದಿನಾರನೇ ವಯಸ್ಸಲ್ಲಿ ದಂಡಪಾನಿ ಶಾಕ್ಯನ ಮಗಳು ಯಶೋಧರೆಯ ಒಟ್ಟಿಗೆ ಆಯಿತು, ರಾಜ ಶುದ್ಧೋದನ ಸಿದ್ಧಾರ್ಥನಿಗಾಗಿ ಐಷಾರಾಮಿಯ ಎಲ್ಲ ವ್ಯವಸ್ಥೆ ಮಾಡಿದರು, ಮೂರು ಋತು ಪ್ರಕಾರ ಮೂರು ಅರಮನೆ ನಿರ್ಮಿಸಿದರು, ಅಲ್ಲಿ ನೃತ್ಯ ಮನೋರಂಜನೆಯ ಎಲ್ಲ ಸಾಮಗ್ರಿ ಒಟ್ಟುಗೂಡಿಸಿದರು, ದಾಸ ದಾಸಿಯರನ್ನು ಸೇವೆಗಾಗಿ ನೇಮಿಸಿದರು, ಆದರೆ ಈ ಎಲ್ಲ ಸುಖಗಳು ಸಿದ್ಧಾರ್ಥನನ್ನು ಸಂಸಾರದ ಮೋಹದಲ್ಲಿ  ಬಂಧಿಸಲು ಸಾಧ್ಯವಾಗಲಿಲ್ಲ.

ವಸಂತ ಋತುವಿನಲ್ಲಿ ಒಂದು ದಿನ ಸಿದ್ಧಾರ್ಥ ಉಧ್ಯಾನದಲ್ಲಿ ವಿಹರಿಸಲು ಹೋಗಿದ್ದಾಗ ಅವನಿಗೆ ರಸ್ತೆಯಲ್ಲಿ ಒಬ್ಬ ಮುದುಕ ಕಂಡು ಬಂದ, ಅವನ ಹಲ್ಲುಗಳೆಲ್ಲ ಉದುರಿ ಹೋಗಿತ್ತು, ಕೂದಲೆಲ್ಲ ಬಿಳಿಯಾಗಿತ್ತು ಹಾಗು ಶರೀರ ಜರ್ಜರಿತವಾಗಿತ್ತು, ಕೈಯಲ್ಲಿ ಕೋಲು ಹಿಡಿದು ಅವನು ಮೆಲ್ಲ ಮೆಲ್ಲನೆ ನಡುಗುತ ನಡೆಯುತ್ತಿದ್ದ.

ಸಿದ್ಧಾರ್ಥ ತನ್ನ ಸಾರಥಿ ಸೌಮ್ಯನಿಂದ "ಇವನು ಯಾರು ಪುರುಷ, ಇವರ ಕೂದಲು ಸಹ ವಿಚಿತ್ರವಾಗಿದೆ?".

ಸೌಮ್ಯ "ಕುಮಾರ, ಇವನು ಒಂದು ದಿನ ತುಂಬಾ ಸುಂದರ ಯುವಕನಾಗಿದ್ದ ಹಾಗು ಇವನ ಕೂದಲು ಸಹ ಕಪ್ಪಾಗಿತ್ತು, ಇವನ ಶರೀರ ಸಹ ಆರೋಗ್ಯಕರವಾಗಿತ್ತು, ಆದರೆ ಈಗ ವೃದ್ಧಾಪ್ಯ, ಮುಪ್ಪು ಇವನಿಗೆ ಹಿಡಿದಿದೆ".

ಸಿದ್ಧಾರ್ಥ "ಸೌಮ್ಯ, ವೃದ್ಧಾಪ್ಯ ಕೇವಲ ಇವನಿಗೆ ಹಿಡಿದಿದೆಯಾ ಅಥವಾ ಎಲ್ಲರಿಗೂ ಬರುತ್ತದೆಯಾ?

ಸೌಮ್ಯ "ಕುಮಾರ, ವೃದ್ಧಾಪ್ಯ ಎಲ್ಲರಿಗೂ ಬರುತ್ತದೆ, ಒಂದು ದಿನ ಎಲ್ಲರ ಯೌವನ ಹೋಗುತ್ತದೆ?

ಸಿದ್ಧಾರ್ಥ "ಸೌಮ್ಯ, ನನ್ನ ಸಹ ಈ ಅವಸ್ಥೆ ಆಗುತ್ತದೆಯಾ?"

ಸೌಮ್ಯ "ಖಂಡಿತ ಕುಮಾರ".

ಸಿದ್ಧಾರ್ಥ ವಿಚಲಿತನಾಗಿ " ಮನುಷ್ಯನ ಈ ಅವಸ್ಥೆ ಆಗುತ್ತದೆ ಅಂದರೆ ಯಾಕೆ ಬೇಕು ಈ ಜನ್ಮ, ಛೆ, ಹಾಳು ಈ ಜನ್ಮ".

ಸಿದ್ಧಾರ್ಥ ಮನಸ್ಸು ನಿರಾಸೆಯಿಂದ ತುಂಬಿತು, ಅವನು ಬೇಗನೆ ಅಲ್ಲಿಂದ ತೆರಳಿದ, ರಾಜನಿಗೆ ಈ ವಿಷಯ ತಿಳಿದ ನಂತರ ಅವರು ಅವನಿಗಾಗಿ ಇನ್ನು ಹೆಚ್ಚು ಮನೋರಂಜನೆಯ ಸಾಧನೆಗಳನ್ನು ಒಟ್ಟುಗೂಡಿಸಿದರು, ಯಾವುದೇ ಹಾಳು ದೃಶ್ಯ ಅವನು ಕಾಣದಿರಲಿ ಎಂದು ಅರಮನೆಯ ಸುತ್ತ ಮುತ್ತ ಕಾವಲು ಏರಿಸಿದರು, ಎರಡನೇ ಸಲ ಸಿದ್ಧಾರ್ಥ ಉಧ್ಯಾನದಲ್ಲಿ ವಿಹರಿಸಲು ಹೋದಾಗ ಅವನು ಒಂದು ರೋಗಿಯನ್ನು ಕಂಡ, ಅವನು ತುಂಬಾ ಜೋರು ಜೋರಿನಿಂದ ಉಸಿರಾಡುತ್ತಿದ್ದ, ಅವನ ಶರೀರ ದುರ್ಬಲವಾಗಿತ್ತು, ಹೊಟ್ಟೆ ಬಾತು ಹೋಗಿತ್ತು, ಮುಖವೆಲ್ಲ ಹಳದಿ ಬಣ್ಣ ಏರಿ ಬೆವರುತ್ತಿತ್ತು, ಬೇರೊಬ್ಬನ ಸಹಾಯದಿಂದ ಅವನು ತುಂಬಾ ಕಷ್ಟದಿಂದ ನಡೆಯುತ್ತಿದ್ದ.

ಮತ್ತೊಮ್ಮೆ ಸಿದ್ಧಾರ್ಥ ಸೌಮ್ಯನಿಗೆ ಕೇಳಿದ "ಇವನು ಯಾರು ಸೌಮ್ಯ?".

ಸೌಮ್ಯ "ಇವನಿಗೆ ಹುಷಾರಿಲ್ಲ ಕುಮಾರ, ಇವನಿಗೆ ಜ್ವರ ಬರುತ್ತಿದೆ".

ಸಿದ್ಧಾರ್ಥ "ಈ ಜ್ವರ ಹೇಗಿರುತ್ತದೆ ಸೌಮ್ಯ?".

ಸೌಮ್ಯ "ಜ್ವರ, ರೋಗ ಶರೀರಕ್ಕೆ ಯಾವುದೇ ಸೋಂಕು ಬಂದಾಗ ಬರುತ್ತದೆ ಕುಮಾರ, ಇದರ ಪರಿಣಾಮವಾಗಿ ದೇಹದ ಉಷ್ಣತೆಯ ಮಟ್ಟ ಏರುತ್ತದೆ ಹಾಗು ಶರೀರ ಕ್ಷೀಣವಾಗುತ್ತದೆ".

ಸಿದ್ಧಾರ್ಥ "ಜ್ವರ, ರೋಗ  ಬಂದರೆ ನನ್ನ ಶರೀರವೂ ಹೀಗೆ ಆಗಬಹುದೇ?"

ಸೌಮ್ಯ " ಹೌದು ಕುಮಾರ, ಶರೀರ ವ್ಯಾಧಿ ಮಂದಿರ".

ಸಿದ್ಧಾರ್ಥನಿಗೆ ಇನ್ನೊಂದು ಆಘಾತವಾಯಿತು "ಒಂದು ವೇಳೆ ಆರೋಗ್ಯ ಕನಸು ಎಂದಾದರೆ, ಯಾರು ಹೇಗೆ  ಈ ದೇಹದ ಸುಖ ಆನಂದ ಪಡೆಯಬಹುದು, ಸೌಮ್ಯ ರಥವನ್ನು ಅರಮನೆಯತ್ತ ತಿರುಗಿಸು" ಎಂದು ಹೇಳಿ ದುಃಖಿ ಮನಸ್ಸಿನಿಂದ ಸಿದ್ಧಾರ್ಥ ಅರಮನೆ ಹಿಂತಿರುಗಿದ.

ಇದರ ನಂತರ ತಂದೆ ರಾಜ ಶುದ್ಧೋದನ ಇನ್ನು ಹೆಚ್ಚು ಕಾವಲು ಏರಿಸಿದ.

(ಮುಂದುವರಿಯುವುದು)

ಆಧಾರ : ಕೇಳಿದ್ದು/ಓದಿದ್ದು


by ಹರೀಶ್ ಶೆಟ್ಟಿ ,ಶಿರ್ವ

2 comments:

  1. ಮುಂದುವರೆದ ಭಾಗದಲ್ಲಿ,
    ಆತನ ತಂದೆ ಮಾಡಿಟ್ಟ ಅರಮನೆ ಪಖಡ್ಭಂದಿ ಮತ್ತು ಅವನ ಮನೋ ಪರಿವರ್ತನೆಯ ಮೊದಲ ಹೆಜ್ಜೆಗಳ ಪರಿಚಯವಾದವು.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...