Thursday, May 15, 2014

ತಂಗಾಳಿ ಇಂದು


ತಂಗಾಳಿ ಇಂದು
ಪರಿಸರದೊಂದಿಗೆ ಬೇಸರಿಸಿದೆ
ಸುಮಗಳ ಮಕರಂದ
ಭ್ರಮರಗಳು ಬಂದು ಕದ್ದೋಗಿದೆ
ಬದಲಾಗುತ್ತಿದೆ ಇಂದು ಜೀವನದ ನಡೆ ಸ್ವಲ್ಪವೇ
ಇದೇ ನೆಪದಲಿ ನಾನೂ ಹೃದಯದ ಸ್ಥಿತಿಯನ್ನು ಸ್ವಲ್ಪವೇ
ಅಂದಗೊಳಿಸುವೆ, ಅಂದಗೊಳಿಸುವೆ
ಅಂದಗೊಳಿಸುವೆ, ಅಂದಗೊಳಿಸುವೆ

ಅಂಗಳ ಹಳೆದಾಗಿದೆ
ಹೊಸ ಬಿಸಿಲಿದೆ
ಕಣ್ರೆಪ್ಪೆ ತನ್ನ ಕದ ಬಡಿಯುತ್ತಿದೆ
ಯಾರ ರೂಪವಾಗಿದೆ
ಕೀಟಲೆ ಹೀಗೆ ಮಾಡುವರು
ಮರೆತು ಲಜ್ಜೆ
ಹೇಗೆ ಹೆಸರಿಂದ
ನಾನು ಕರೆಯಲಿ ಅವನಿಗೆ
ಅಂದಗೊಳಿಸುವೆ, ಅಂದಗೊಳಿಸುವೆ
ಅಂದಗೊಳಿಸುವೆ, ಅಂದಗೊಳಿಸುವೆ

ಈ ಎಲ್ಲ ಕೋಗಿಲೆ
ಇಂದು ಕಾರ್ಯ ನಿರ್ವಹಿಸುತ್ತಿದೆ ಪತ್ರವಾಹಕನ
ಕುಹೂ ಕುಹೂ ಎಂದು ಓದುತ್ತಿದೆ ಪತ್ರ ಮೋಜಿನ
ಇವುಗಳಿಗೆ ಹೇಳಿ ಅಡಗಿಸದಿರಿ ಎಂದು
ಹೇಳಲಿ ಇದನ್ನು ಯಾರು ಬರೆದರೆಂದು
ಅವನದ್ದೇ ನಾನು ಇಂದು ದೃಷ್ಟಿ ತೆಗೆಯುವೆ
ಅಂದಗೊಳಿಸುವೆ, ಅಂದಗೊಳಿಸುವೆ
ಅಂದಗೊಳಿಸುವೆ, ಅಂದಗೊಳಿಸುವೆ  

ಮೂಲ : ಅಮಿತಾಭ್ ಭಟ್ಟಾಚಾರ್ಯ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಮೊನಾಲಿ ಠಾಕುರ್
ಸಂಗೀತ : ಅಮಿತ್ ತ್ರಿವೇದಿ
ಚಿತ್ರ :ಲೂಟೆರ

hawaa ke jhonke aaj mausamon se rooth gaye
gulon ki shokhiyaan jo bhanwre aa ke loot gaye
badal rahi hai aaj Zindagi ki chaal Zaraa
isee bahaane main bhi kyoon naa dil ka haal Zaraa
sanwaar loon haye sanwaar loon

baraamade puraane hain, nayi si dhoop hai
Jo palkein khatkhata raha hai kis kaa roop hai
sharaaratein kare jo aise
bhool ke hizaab
kaise us ko naam se main pukaar loon

Ye saaree koyalein baneeN hain aaj daakiyaa
Kuhu-kuhu mein chitthiyaan padhein mazaakiyaa
Inhe kaho ki naa chhupaayen
Kis ne hai likhaa bataayein,
Us ki aaj main nazar utaar loon
Sanwaar loon haye sanwaar loon
Sanwaar loon, sanwaar loon..
http://www.youtube.com/watch?v=8OP0vODVkMc

2 comments:

  1. ಲಕ್ನೋ ಮೂಲದ ಅಮಿತಾಬ್ ಅವರ ಮೂಲ ಸಾಹಿತ್ಯಕ್ಕೆ ಒಪ್ಪುವ ಭಾವಾನುವಾದ.
    'ಕಣ್ರೆಪ್ಪೆ ತನ್ನ ಕದ ಬಡಿಯುತ್ತಿದೆ' ವಾವ್ ಮೆಚ್ಚಿದೆ.

    ಛಾಯಾಗ್ರಹಣ : ಮಹೇಂದ್ರ. ಜೆ. ಶೆಟ್ಟಿ

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...