Sunday, May 4, 2014

ಯಾವ ಗಲ್ಲಿಯಲಿ

ಯಾವ ಗಲ್ಲಿಯಲಿ
ನಿನ್ನ ಮನೆ ಇರುವುದಿಲ್ಲವೋ
ಆ ಗಲ್ಲಿಯಿಂದ
ನನಗೆ ಹಾದು ಹೋಗಲಿಕ್ಕಿಲ್ಲ
ಯಾವ ಹಾದಿ
ನಿನ್ನ ದ್ವಾರ ತನಕ ಹೋಗುವುದಿಲ್ಲವೋ
ಆ ಹಾದಿಯಲಿ ನನಗೆ ಕಾಲಿಡಲ್ಲಿಕ್ಕಿಲ್ಲ
ಯಾವ ಗಲ್ಲಿಯಲಿ.....

ಜೀವನದಲಿ ಎಷ್ಟೋ ಚೆಲ್ಲಾಟ
ಸುಖಗಳನ್ನು ಅನುಭವಿಸಿದೆ
ಪ್ರತಿ ಕಡೆಯಿಂದ ನಗುವ
ಸುಮಗಳನ್ನು ಅನುಭವಿಸಿದೆ
ಸುಂದರ ಮೃದು ವಸಂತದ
ಗಳಿಗೆಯನ್ನು ಅನುಭವಿಸಿದೆ
ಯಾವ ಉದ್ಯಾನದಲಿ
ನಿನ್ನ ಪಾದಕ್ಕೆ ಮುಳ್ಳು ಚುಚ್ಚುವುದೋ
ಆ ಉದ್ಯಾನದಲಿ ನನಗೆ ಹೂಗಳನ್ನು ಹೆಕ್ಕಲಿಕ್ಕಿಲ್ಲ
ಯಾವ ಗಲ್ಲಿಯಲಿ.....

ಹೌದು
ಈ ಆಚರಣೆಗಳು
ವಚನಗಳನ್ನೆಲ್ಲ ಉಲ್ಲಂಘಿಸಿ
ನೀನು ಬಂದೆ ಬಿಡು
ಪ್ರೀತಿಯ ಸೆರಗನ್ನು ಧರಿಸಿ
ಇಲ್ಲಾದರೆ ನಾನು ಹೋಗುವೆ
ಈ ಜಗತ್ತನ್ನು ತ್ಯಜಿಸಿ
ಯಾವ ಸ್ಥಳದಲಿ
ನಿನ್ನ ನೆನಪು ಕಾಡುತ್ತದೋ
ಆ ಸ್ಥಳದಲಿ ಒಂದು ಕ್ಷಣವೂ ನಿಲ್ಲಲಿಕ್ಕಿಲ್ಲ
ಯಾವ ಗಲ್ಲಿಯಲಿ.....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಆರ್. ಡೀ. ಬರ್ಮನ್
ಚಿತ್ರ : ಕಟಿ ಪತಂಗ್

जिस गली में तेरा घर ना हो बालमा
उस गली से हमें तो गुज़ारना नहीं
जो डगर तेरे द्वारे पे जाती ना हो
उस डगर पे हमें पाँव रखना नहीं

ज़िन्दगी में कई रंगरलियाँ सही
हर तरफ मुस्कुराती ये कलियाँ सही
खूबसूरत बहारों की गलियाँ सही
जिस चमन में तेरे पग में कांटे चुभे
उस चमन से हमें फूल चुनना नहीं
जिस गली में...

हाँ ये रस्में ये कसमें सभी तोड़ के
तू चली आ चुनर प्यार की ओढ़ के
या चला जाऊंगा मैं ये जग छोड़ के
जिस जगह याद तेरी सताने लगे
उस जगह एक पल भी ठहरना नहीं
जिस गली में...
http://www.youtube.com/watch?v=YALeni8qVEw

4 comments:

  1. ಆನಂದ್ ಬಕ್ಷಿ / ಮುಕೇಶ್ / ಪಂಚಮ್ ಅವರ ಮತ್ತೊಂದು ತ್ರಿವೇಣಿ ಸಂಗಮ.
    ವಾವ್ ತಮ್ಮ ಭಾಷಾಂತರ ಪ್ರತಿಭೆಗೆ.
    ಕಟಿ ಪತಂಗ್ ಚಿತ್ರಕ್ಕೆ ವಿ. ಗೋಪಾಲ್ ಅವರ ಛಾಯಾಗ್ರಹಣವಿತ್ತು.
    http://en.wikipedia.org/wiki/V._Gopi_Krishna

    ReplyDelete
  2. Very nice Shiva. Keep it up!

    ReplyDelete
  3. ತುಂಬಾ ಧನ್ಯವಾದಗಳು ಬದರಿ ಸರ್,

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...