Tuesday, May 13, 2014

ಗೌತಮ್ ಬುದ್ಧ (೧)

ಗೌತಮ್ ಬುದ್ಧ (೧)

ನೇಪಾಳದ ಕೆಳನಾಡಿನ ಕ್ಷೇತ್ರದಲ್ಲಿ ಕಪಿಲವಸ್ತು ಮತ್ತು ದೇವದಾಃ ಇದರ ನಡುವಿನಲ್ಲಿ ನೌತನ್ವ ಸ್ಟೇಷನ್'ನಿಂದ ೮ ಮೈಲ್ ದೂರ ಪಶ್ಚಿಮದಲ್ಲಿ ರುಖ್ಮಂದೇಯಿ ಎಂಬ ಸ್ಥಾನ ಇದೆ. ಅಲ್ಲಿ ಒಂದು ಲುಂಬಿನಿ ಎಂಬ ಕಾಡು ಇತ್ತು, ಗೌತಮ್ ಬುದ್ಧನ ಜನ್ಮ ಕ್ರಿಸ್ತ ಪೂರ್ವ ೫೬೩ ವರ್ಷ ಮೊದಲು ಕಪಿಲವಸ್ತುವಿನ ಮಹಾರಾಣಿ ಮಹಾಮಾಯ ದೇವಿ ತನ್ನ  ತಾಯ್ನಾಡು ದೇವದಾಃ ಹೋಗುವಾಗ ಮಧ್ಯೆ ರಸ್ತೆಯಲ್ಲಿ ಲುಂಬಿನಿ ಕಾಡಲ್ಲಿ ಆಯಿತು, ಆವಾಗ ಅವರ ಹೆಸರು ಸಿದ್ಧಾರ್ಥ್ ಎಂದು ಇಡಲಾಯಿತು, ಇವರ ತಂದೆಯ ಹೆಸರು ಶುದ್ಧೋದನ್ ಎಂದಿತ್ತು, ಜನ್ಮದ ಏಳು ದಿನದ ನಂತರವೇ ಇವರ ತಾಯಿಯ ಮೃತ್ಯು ಆಯಿತು, ಇದರ ನಂತರ ಸಿದ್ಧಾರ್ಥನ ಚಿಕ್ಕಮ ಗೌತಮಿ ಅವರನ್ನು ಸಾಕಿದ್ದರು.

ಸಿದ್ಧಾರ್ಥ್ ಗುರು ವಿಶ್ವಮಿತ್ರರಿಂದ ವೇದ ಹಾಗು ಉಪನಿಷದ್ ಕಲಿತ, ಜೊತೆಗೆ ರಾಜ್ಯ ಆಡಳಿತ ಮತ್ತು ಯುದ್ಧ ಸಿದ್ಧಾಂತವನ್ನು ಕಲಿತ, ಕುಸ್ತಿ,ಕುದುರೆ ಓಟ, ಬಿಲ್ಲು ಬಾಣ ಹಾಗು ರಥ ಓಟದಲ್ಲಿ ಅವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ, ಸಣ್ಣ ವಯಸ್ಸಿನಿಂದಲೂ ಸಿದ್ಧಾರ್ಥನ ಮನಸ್ಸಲ್ಲಿ ಕರುಣೆ ತುಂಬಿತ್ತು, ಅವನಿಂದ ಯಾವ ಪ್ರಾಣಿಯ ಕಷ್ಟ ದುಃಖ ನೋಡಲಾಗುತ್ತಿರಲಿಲ್ಲ, ಈ ಮಾತು ಈ ಎಲ್ಲಾ ಉದಾಹರಣೆಯಿಂದ ಗೊತ್ತಾಗುತ್ತದೆ, ಓಟದ ಮಧ್ಯೆದಲ್ಲಿ ಕುದುರೆಯ ಬಾಯಿಂದ ನೊರೆ ಬಂದರೆ ಕುದುರೆ ಆಯಾಸಗೊಂಡಿದೆ ಎಂದು ತಿಳಿದು ಅವನು ಅಲ್ಲೇ ಕುದುರೆ ನಿಲ್ಲಿಸುತ್ತಿದ್ದ, ಆಟದಲ್ಲೂ ಅವನಿಗೆ ಸ್ವತಃ ಸೋಲುವುದು ಇಷ್ಟವಿತ್ತು ಯಾಕೆಂದರೆ ಯಾರನ್ನೂ ಸೋಲಿಸುವುದು ಹಾಗು ಅವರ ದುಃಖ ಅವನಿಂದ ನೋಡಲಾಗುತ್ತಿರಲಿಲ್ಲ. 

ಒಂದು ದಿನ ಸಿದ್ಧಾರ್ಥನಿಗೆ ಕಾಡಲ್ಲಿ ಯಾವುದೇ ಬೇಟೆಗಾರನ ಬಾಣದಿಂದ ಗಾಯಗೊಂಡ ಹೆಬ್ಬಾತು ಸಿಕ್ಕಿತು,  ಸಿದ್ಧಾರ್ಥ್ ಅದರ ಶರೀರದಿಂದ ಬಾಣ ತೆಗೆದು, ನೀರು ಕುಡಿಸಿ ಅದರ ಉಪಚಾರ ಮಾಡಿದ ಹಾಗು ಅದರ ಜೀವ ಉಳಿಸಿದ, ಆವಾಗ ಅಲ್ಲಿಗೆ ಸಿದ್ಧಾರ್ಥನ  ಸೋದರ ದೇವದತ್ (ಸಿದ್ಧಾರ್ಥನ ಚಿಕ್ಕಪ್ಪನ ಮಗ) ಬಂದ ಹಾಗು "ಇದು ನನ್ನ ಬೇಟೆ, ನನಗೆ ಕೊಡು" ಎಂದ, ಸಿದ್ಧಾರ್ಥ್ ಹೆಬ್ಬಾತು ಕೊಡಲು ನಿರಾಕರಿಸಿದ ಹಾಗು ಹೇಳಿದ "ನೀನು ಇದನ್ನು ಕೊಲ್ಲಲು ಯತ್ನಿಸಿದೆ ಆದರೆ ನಾನು ಇದರ ಜೀವ ಉಳಿಸಿದೆ, ಈಗ ನೀನೆ ಹೇಳು ಇದರ ಮೇಲೆ ಜೀವ ತೆಗೆಯುವವರ ಹಕ್ಕು ಇದೆಯಾ ಅಥವಾ ಜೀವ ಉಳಿಸುವವರ?".

ದೇವದತ್ ಸಿದ್ಧಾರ್ಥನ ತಂದೆ ರಾಜ ಶುದ್ಧೋದನನವರಿಗೆ ಇದರ ದೂರು ನೀಡಿದ. ರಾಜ   ಶುದ್ಧೋದನನವರು ಸಿದ್ಧಾರ್ಥನಿಗೆ "ನೀನೇಕೆ ಇವನ ಹೆಬ್ಬಾತು ಕೊಡುವುದಿಲ್ಲ?" ಎಂದು ಕೇಳಿದರು, ಇದಕ್ಕೆ ಉತ್ತರವಾಗಿ ಸಿದ್ಧಾರ್ಥ್ "ಅಪ್ಪ, ನನಗೆ ಹೇಳಿ ಇವನಿಗೆ ಆಕಾಶದಲ್ಲಿ ಸ್ವಚ್ಚಂದ ಹಾರುವ ಈ ಮುಗ್ಧ ಪಕ್ಷಿಗೆ ಬಾಣ ಬಿಡುವ ಏನು ಅಧಿಕಾರ ಇತ್ತು? ಈ  ಹೆಬ್ಬಾತು ದೇವದತ್'ನ ಏನು ಹಾನಿ ಮಾಡಿದೆ? ಯಾಕೆ ಇದನ್ನು ಗಾಯಗೊಳಿಸಿದ? ನನ್ನಿಂದ ಈ ಪಕ್ಷಿಯ ಕಷ್ಟ ನೋಡಲಾಗಲಿಲ್ಲ, ಅದಕ್ಕೆ ನಾನು ಇದರ ಶರೀರದಿಂದ ಬಾಣ ತೆಗೆದು, ನೀರು ಕುಡಿಸಿ ಇದರ ಉಪಚಾರ ಮಾಡಿದೆ ಹಾಗು ಇದರ ಜೀವ ಉಳಿಸಿದೆ. ಇದರ ಮೇಲೆ ಅಧಿಕಾರ ನನ್ನದೇ ಇರಬೇಕು".

ರಾಜ ಶುದ್ಧೋದನ್'ನವರಿಗೆ ಸಿದ್ಧಾರ್ಥನ ಮಾತು ಸರಿ ತೋರಿತು, ಅವರು ಹೇಳಿದರು "ನೀನು ಹೇಳುವುದು ಸರಿ, ಜೀವ ತೆಗೆಯುವವರಿಂದ ಜೀವ ಉಳಿಸುವವರೆ ದೊಡ್ಡವರು, ಇದರ ಮೇಲೆ ನಿನ್ನದೇ ಅಧಿಕಾರ". 

(ಮುಂದುವರಿಯುವುದು)

ಆಧಾರ : ಕೇಳಿದ್ದು/ಓದಿದ್ದು
by ಹರೀಶ್ ಶೆಟ್ಟಿ ,ಶಿರ್ವ

2 comments:

  1. ಸಿದ್ಧಾರ್ಥನ ಜನ್ನ ಸ್ಥಳದ ಇಂದಿನ ಭೌಗೋಳಿಕ ಸ್ಥಳ ಪರಿಚಯ ಮಾಡಿಕೊಟ್ಟಿದ್ದು ಖುಷಿಯಾಯಿತು.

    ಹೆಬ್ಬಾತುವಿನ ಕಥನವು ನಾಳಿನ ಆತನ ಮನೋಗುಣದ ಲಘು ಪರಿಚಯ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...