Sunday, May 11, 2014

ಅವನನ್ನು ನೋಡಲಿಲ್ಲ ನಾವೆಂದು

ಅವನನ್ನು ನೋಡಲಿಲ್ಲ ನಾವೆಂದು
ಆದರೆ ಅದರ ಅಗತ್ಯವೇ ನಮಗಿಲ್ಲ
ಹೇ ಅಮ್ಮ ಹೇ ಅಮ್ಮ
ನಿನ್ನ ಮುಖ ದೇವರ ಮುಖಕ್ಕಿಂತ ಭಿನ್ನವೇನಿಲ್ಲ

ಮಾನವರೇ ಅಲ್ಲ ದೇವರು ಸಹ
ಸೆರಗಲ್ಲಿ ಬೆಳೆಯುವರು ನಿನ್ನ
ಸ್ವರ್ಗವಿದೆ ಈ ಜಗತ್ತಲ್ಲಿಯೇ
ಚರಣದ ಅಡಿಯಲ್ಲಿ ನಿನ್ನ
ಕೇವಲ ಮಮತೆ ಸುರಿಸುತ್ತಿರುವ ಆ ನಯನ
ಅಂತಹ ಯಾವುದೇ ಮೂರ್ತಿ ಜಗತ್ತಲ್ಲಿಲ್ಲ
ಹೇ ಅಮ್ಮ ಹೇ ಅಮ್ಮ
ನಿನ್ನ ಮುಖ ದೇವರ ಮುಖಕ್ಕಿಂತ ಭಿನ್ನವೇನಿಲ್ಲ

ಯಾಕೆ ಬಿಸಿಲು ದುಃಖದ ಉರಿಸುವುದು
ಯಾಕೆ ಕಷ್ಟದ ಮುಗಿಲು ಸುರಿಯುವುದು
ಈ ಹರಸುವ ಕೈಗಳು
ಶಿರದ ಮೇಲೆ ಸದಾ ಇರುವುದು
ನೀನಿದ್ದರೆ ಕತ್ತಲ ಪಥದಲಿ ನಮಗೆ
ಸೂರ್ಯನ ಅಗತ್ಯವೇನಿಲ್ಲ
ಹೇ ಅಮ್ಮ ಹೇ ಅಮ್ಮ
ನಿನ್ನ ಮುಖ ದೇವರ ಮುಖಕ್ಕಿಂತ ಭಿನ್ನವೇನಿಲ್ಲ

ಹೇಳುತ್ತಾರೆ ನಿನ್ನ ಪ್ರತಿಷ್ಠೆಗೆ
ಯಾವುದೇ ದೊಡ್ಡ ಮಾತುಗಳಿಲ್ಲ
ದೇವರ ಬಳಿಯೂ ಮಾತೆ
ನಿನ್ನ ಪ್ರೀತಿಯ ಮೂಲ್ಯವಿಲ್ಲ
ನಮಗಂತೂ ಇಷ್ಟೇ ತಿಳಿದಿದೆ
ಈ ಜಗತ್ತಲ್ಲಿ ನಿನ್ನಿಂದ ದೊಡ್ಡ ಸಂಪತ್ತೆ ಇಲ್ಲ
ಹೇ ಅಮ್ಮ ಹೇ ಅಮ್ಮ
ನಿನ್ನ ಮುಖ ದೇವರ ಮುಖಕ್ಕಿಂತ ಭಿನ್ನವೇನಿಲ್ಲ

ಮೂಲ : ಮಜ್ರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮನ್ನಾ ಡೇ , ಮಹಿಂದ್ರ ಕಪೂರ್
ಸಂಗೀತ : ರೋಶನ್
ಚಿತ್ರ: ದಾದಿ ಮಾ
us ko nahi dekha humne kabhi
par iski zarurat kya hogi ai maan
ai ma teri surat se alag
bhagavan ki surat kya hogi, kya hogi
us ko nahi dekha humne kabhi

insan to kya devata bhi aanchal me pale tere
hai swarg isi duniya me kadamo ke tale tere
mamata hi lutaye jiske nayan, ho
mamata hi lutaye jiske nayan
aisi koi murat kya hogi
ai ma, ai ma teri surat se alag
bhagavan ki surat kya hogi, kya hogi
us ko nahi dekha humne kabhi

kyo dhup jalaye dukho ki kyo gam ki ghata barase
ye hath duao vale rahte hai sada sar pe
tu hai to andhere path me hume, ho
tu hai to andhere path me hume
suraj ki zarurat kya hogi
ai maan, ai maan teri surat se alag
bhagavan ki surat kya hogi, kya hogi
us ko nahi dekha humne kabhi

kahate hai teri shan me jo koi unche bol nahi
bhagavan ke pas bhi mata tere pyar ka mol nahi
hum to yahi jane tujhse badi, ho
hum to yahi jane tujhse badi
sansar ki dolat kya hogi
ai maan, ai maan teri surat se alag
bhagavan ki surat kya hogi, kya hogi
us ko nahi dekha humne kabhi
par iski zarurat kya hogi ai maan
ai ma teri surat se alag
bhagavan ki surat kya hogi, kya hogi
us ko nahi dekha humne kabhi
http://www.youtube.com/watch?v=-YRa6t7lb0I

1 comment:

  1. "ನೀನಿದ್ದರೆ ಕತ್ತಲ ಪಥದಲಿ ನಮಗೆ
    ಸೂರ್ಯನ ಅಗತ್ಯವೇನಿಲ್ಲ"
    ಮನಸ್ಸಿಗೆ ಹತ್ತಿರವಾದ ಭಾವಾನುವಾದ.

    ರೋಶನ್ - ಸುಲ್ತಾನ್ಪುರಿ ಜೋಡಿಯ ಉತ್ತಮ ಗೀತೆ.
    ದ್ವಾರಕೀ ದಿವೇಚಾ ಅವರ ಛಾಯಾಗ್ರಹಣವಿದ್ದ ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ಮಾಪಕ - ನಿರ್ದೇಶಕ ಎಲ್.ವಿ.ಪ್ರಸಾದ್ ಅವರ ನಿರ್ದೇಶನವಿತ್ತು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...