Thursday, May 1, 2014

ತುಟಿಗಳಲ್ಲಿ ನೋವಿನ ಕಥೆ ಬಂತು

ತುಟಿಗಳಲ್ಲಿ ನೋವಿನ ಕಥೆ ಬಂತು-೨
ವಸಂತ ಬರುವ ಮೊದಲೇ ಶಿಶಿರ ಬಂತು
ತುಟಿಗಳಲ್ಲಿ ನೋವಿನ ಕಥೆ ಬಂತು

ಆನಂದದ ಆಸೆಯಲಿ
ನಾನು ವಹಿಸಿಕೊಂಡೆ ವೈರತ್ವ ತುಂಬಾ
ನನ್ನ ಭಾಗ್ಯ ಹೀಗೆ
ಅಂದರೆ ನನ್ನ ಹೆಜ್ಜೆ ಬಿದ್ದಲ್ಲಿ
ಈ ನನ್ನ ದುರ್ಭಾಗ್ಯ ಅಲ್ಲಿಯೂ ಬಂತು
ತುಟಿಗಳಲ್ಲಿ ನೋವಿನ ಕಥೆ ಬಂತು

ಬೇಸರದ ರಾತ್ರಿಯಾಗಿದೆ
ಹೃದಯದ ಸಭೆ ನಿರ್ಜನವಾಗಿದೆ
ಯಾರೂ ಸಹ ಪಯಣಿಗರಿಲ್ಲ
ಯಾವುದೇ ಗಮ್ಯವೂ ಇಲ್ಲ
ಈ ಜೀವನ ನನ್ನನ್ನು ಎಲ್ಲಿಗೆ ಕರೆದುಕೊಂಡು ಬಂತು
ತುಟಿಗಳಲ್ಲಿ ನೋವಿನ ಕಥೆ ಬಂತು
ವಸಂತ ಬರುವ ಮೊದಲೇ ಶಿಶಿರ ಬಂತು

ಮೂಲ : ಆನಂದ್ ಬಕ್ಷಿ
ಅನುವಾದ :ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮುಕೇಶ್
ಸಂಗೀತ: ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಮರ್ಯಾದ

ज़ुबां पे दर्दभरी दासतां चली आई
बहार आने से पहले खिज़ा चली आई

खुशी की चाह में मैने उठाये रंज बड़े
मेरा नसीब के मेरे कदम जहाँ भी पड़े
ये बदनसीबी मेरी भी वहाँ चली आई

उदास रात हैं, वीरान दिल की महफ़िल हैं
ना हमसफ़र हैं कोई और, ना कोई मंज़िल हैं
ये जिंदगी मुझे लेकर कहा चली आई
http://www.youtube.com/watch?v=qOS487D55xQ

2 comments:

  1. ಭಕ್ಷೀ ಸಾಬ್ ಅವರ ಸಾಹಿತ್ಯಕ್ಕೆ ಒಳ್ಳೆಯ ಭಾವಾನುವಾದ ನಿಮ್ಮದು.
    ಮರ್ಯಾದ ಚಿತ್ರಕ್ಕೆ ಎನ್.ವಿ.ಶ್ರೀನಿವಾಸ್ ಅವರ ಛಾಯಾಗ್ರಹಣವಿತ್ತು.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...