Monday, April 14, 2014

ಸುಳ್ಳು ಸುಳ್ಳು

ಸುಳ್ಳು ಸುಳ್ಳು
ನಲ್ಲ ಬರುತ್ತೇನೆಂದ,
ಭಾದ್ರದಲ್ಲೆಂದ,
ಕೆಲವೊಮ್ಮೆ ವರ್ಷಋತುವಿನಲ್ಲೆಂದ,
ಸುಳ್ಳು ಸುಳ್ಳು
ನಲ್ಲ ಬರುತ್ತೇನೆಂದ,
ಭಾದ್ರದಲ್ಲೆಂದ,
ಕೆಲವೊಮ್ಮೆ ವರ್ಷಋತುವಿನಲ್ಲೆಂದ..

ಮೇಘಗಳ ಮೇಲೆ ನಡೆಯಲು
ಬಯಸುವೆ ಇನಿಯ,
ಮೇಘಗಳ ಮೇಲೆ ನಡೆಯಲು
ಬಯಸುವೆ ಇನಿಯ,
ಬಾ ನನ್ನ ಉಯ್ಯಾಲೆಯನ್ನು
ತೂಗು ಇನಿಯ,
ವನ ವನದಲಿ ಕೋಗಿಲೆ
ಕೂಹು ಕೂಹು ಹಾಡುತ್ತಿದೆ ಚಂದ,
ಸುಳ್ಳು ಸುಳ್ಳು
ನಲ್ಲ ಬರುತ್ತೇನೆಂದ,
ಭಾದ್ರದಲ್ಲೆಂದ,
ಕೆಲವೊಮ್ಮೆ ವರ್ಷಋತುವಿನಲ್ಲೆಂದ..

ರೋಗ ಇದೆಂತಹ
ಸೋಕಿತು ಎನಗೆ,
ದರ್ಪಣದಲಿ ನೋಡಿದರೆ
ನೋಡುವೆ ನಿನಗೆ,
ಮನಸ್ಸು ಚಂಚಲ
ನನ್ನಿಂದ ಮಾಡದಿರಲಿ ಛಲ,
ಮುಗ್ಧೆ ಎನ್ನುವರು
ಕೆಲವೊಮ್ಮೆ ಮರುಳೆಂದು ಎನಗೆ,
ಶ್ಯಾಮಲಾ ನಿನ್ನ ಕಂಗಳನ್ನು ನೆನಪಿಸುವೆ
ದರ್ಪಣ ನೋಡಿ ಪದೇ ಪದೇ ಕಾಡಿಗೆ ಹಚ್ಚುವೆ,
ಮನಸ್ಸು ಪ್ರೇಮಲ
ಯಾಕೆ ಕೂಹು ಕೂಹು ಎನ್ನುತ್ತಿದೆ ಸದಾ,
ಸುಳ್ಳು ಸುಳ್ಳು
ನಲ್ಲ ಬರುತ್ತೇನೆಂದ,
ಭಾದ್ರದಲ್ಲೆಂದ,
ಕೆಲವೊಮ್ಮೆ ವರ್ಷಋತುವಿನಲ್ಲೆಂದ....

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಭೂಪೇನ್ ಹಜಾರಿಕ
ಚಿತ್ರ :ರುದಾಲಿ

jhuthee muthee mitava aavan bole
bhaado bole kabhee saavan bole
jhuthee muthee mitava aavan bole
bhaado bole kabhee saavan bole

baadalo pe chalane ko chaahu piya
baadalo pe chalane ko chaahu piya
aao meraa jhulana jhulaao piya
ban ban papiha pihu bole
jhuthee muthee mitava aavan bole
bhaado bole kabhee saavan bole

rog yeh kaisa laaga mohe,
aarasee uthaau dekhu tohe
mann chanchal mose chhal naa kare
baanvaree bole kabhee pagalee bole
kaaree toree akhiya yaad karu
aarasee me baar baar kajar bharu
mann mitava kahe pihu bole
jhuthee muthee mitava aavan bole
bhaado bole kabhee saavan bole
http://www.youtube.com/watch?v=NbeCiUh7vdg#aid=P9ipOl1FJio

2 comments:

  1. ಭೂಪೇನ್ ಹಜಾರಿಕ ವಾವ್
    ರುಡಾಲಿಯ ಛಾಯಾಗ್ರಹಣ: ದರಮ್ ಗುಲೇಟಿ ಮತ್ತು ಸಂತೋಶ ಶಿವನ್

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...