Wednesday, April 9, 2014

ಉಡುಗೊರೆ


ರಾಮ ವನವಾಸದಿಂದ ಅಯೋಧ್ಯ ಬಂದು ಪ್ರಥಮವಾಗಿ ಕೈಕೇಯಿಯನ್ನು ಭೇಟಿಯಾಗಲು ಅವಳ ಭವನಕ್ಕೆ ಹೊಗುತ್ತಾನೆ. ಕೈಕೇಯಿ ತುಂಬಾ ಪಶ್ಚಾತಾಪ ಪಡುತ್ತಿದ್ದಳು ಹಾಗು ಬೇಸರದಲ್ಲಿದ್ದಳು "ಇದು ನನ್ನಿಂದ ಏನಾಯಿತೆಂದು?" ೧೪ ವರ್ಷದ ನಂತರ ರಾಮನಿಗೆ ತನ್ನ ಮುಖ ತೋರಿಸಲು ಅವಳಿಗೆ ಕಷ್ಟವಾಗುತ್ತಿತ್ತು ಆದರೆ ರಾಮ ಸ್ವಯಂ ಆಗಿ ಅವಳನ್ನು ಭೇಟಿಯಾಗಲು ಬಂದಿದ ಕೈಕೇಯಿಯ ಭವನಕ್ಕೆ, ತಾಯಿ ಕೌಶಲ್ಯೆಯ ಭವನಕ್ಕೆ ಹೋಗದೆ ಅವನು ಕೈಕೇಯಿಯನ್ನು ಭೇಟಿಯಾಗಲು ಹೋದದ್ದು ಏಕೆ ಅಂದರೆ ಅವನಿಗೆ ಕೈಕೇಯಿ ಅಮ್ಮ ಈಗ ಎಷ್ಟು ವೇದನೆಯಲ್ಲಿ ಇರಬಹುದೆಂಬ ಅರಿವಿತ್ತು.


ಕೈಕೇಯಿಯ ಭವನದಲ್ಲಿ ಒಂದು ಆಶ್ಚರ್ಯ ಅವನನ್ನು ಕಾಯುತ್ತಿತ್ತು, ಅಲ್ಲಿ ಲಕ್ಷ್ಮಣನ ಪತ್ನಿ ಉರ್ಮಿಳ, ಭರತನ ಪತ್ನಿ ಮಾಂಡವಿ ಹಾಗು ಶತ್ರುಘ್ನನ ಪತ್ನಿ ಶ್ರುತುಕಿರ್ತಿ ಅವನ ಭೇಟಿಗೋಸ್ಕರ ಮೊದಲೇ ಅಲ್ಲಿ ಕುಳಿತ್ತಿದ್ದರು. ಅವರೆಲ್ಲರು ಸೀತೆಯ ಸಹೋದರಿಯರು. ಅವರನ್ನು ಅಲ್ಲಿ ಕಂಡು ರಾಮನಿಗೆ ಅತ್ಯಂತ ಸಂತೋಷವಾಯಿತು ಹಾಗು ಅವನು "ಇಂದು ನಾನು ತುಂಬಾ ಆನಂದದಲ್ಲಿದ್ದೇನೆ, ೧೪ ವರ್ಷದ ನಂತರ ನಿಮ್ಮನ್ನು ಭೇಟಿಯಾಗುತ್ತಿದ್ದೇನೆ, ನೀವು ಮೂವರೂ ನನ್ನಿಂದ ಏನಾದರು ಉಡುಗೊರೆ ಕೇಳಿ, ನಾನು ತುಂಬಾ ಸಂತೋಷ ಪಡುವೆ."

"ಪ್ರಥಮವಾಗಿ ಉರ್ಮಿಳ ನಿನ್ನ ಸರದಿ, ಕೇಳು, ಎಷ್ಟು ಮೌಲ್ಯಯುತ ಇದ್ದರು ನೀನು ಕೇಳಬಹುದು."

ಲಕ್ಷ್ಮಣನ ಪತ್ನಿ ಊರ್ಮಿಳೆ "ನೀವು ೧೪ ವರ್ಷ ನನ್ನ ಪತಿಯನ್ನು ತಮ್ಮೊಂದಿಗೆ ಇಟ್ಟು ಅವರಿಗೆ ಅದೆಷ್ಟೋ ಪ್ರೀತಿ ನೀಡಿದ್ದಿರಿ, ಅದೇ ನನ್ನ ಉಡುಗೊರೆ , ನನಗೆ ಬೇರೇನೂ ಬೇಡ."

ರಾಮ ಸ್ವಲ್ಪ ನಿರಾಶೆಗೊಂಡ, ಉರ್ಮಿಳ ಏನನ್ನು ಕೇಳುವುದಿಲ್ಲ ಹಾಗು ಅವರು ಮಾಂಡವಿಗೆ "ಮಾಂಡವಿ, ನೀನು ನನ್ನನ್ನು ನಿರಾಶೆಗೊಳಿಸ ಬೇಡ, ನೀನಾದರು ಏನು ಕೇಳು."

ಭರತನ ಪತ್ನಿ ಮಾಂಡವಿ " ಇಂದು ಅಯೋಧ್ಯೆಯ ಸೀಮೆಯಲ್ಲಿ ನಾನು ನಿಮ್ಮ ಹಾಗು ಇವರ (ಭರತ) ಮಿಲನ ನೋಡಿದೆ, ನೀವು ೧೪ ವರ್ಷದ ನಂತರ ಭರತನನ್ನು ಅಪ್ಪಿಕೊಂಡು ಅದೆಷ್ಟೋ ಕಣ್ಣೀರು ಸುರಿಸಿದ್ದಿರಿ, ಆ ಕಣ್ಣೀರೆ ನನ್ನ ಬಹುಮೂಲ್ಯ ಉಡುಗೊರೆ."

ರಾಮ ಪುನಃ ನಿರಾಶೆಗೊಂಡ, ಏನಿದು ನನ್ನ ಮಾತು ಕೇಳುವುದೇ ಇಲ್ಲ "ಶ್ರುತುಕಿರ್ತಿ ನೀನಾದರೂ ಕೇಳು, ಇವರಿಬ್ಬರಂತು ನನ್ನ ಮಾತು ಕೇಳುವುದಿಲ್ಲ, ನೀನು ನನ್ನಿಂದ ಖಂಡಿತ ಏನಾದರು ಕೇಳು."

ಶತ್ರುಘ್ನನ ಪತ್ನಿ ಶ್ರುತುಕಿರ್ತಿ "ಇವರಿಬ್ಬರು ಏನು ಕೇಳದಿದ್ದರೂ ತೊಂದರೆ ಇಲ್ಲ , ಆದರೆ ನಾನಂತೂ ಖಂಡಿತ ನಿಮ್ಮಿಂದ ಕೇಳುವೆ."

ರಾಮನಿಗೆ ಸಂತೋಷವಾಯಿತು "ಕೇಳು, ಸ್ವಲ್ಪ ಸಹ ಸಂಕೋಚ ಪಡಬೇಡ, ಏನು ಬೇಕು ಅದು ಕೇಳು."

ಶ್ರುತುಕಿರ್ತಿ "ನೀವು ತಪಸ್ವಿ ವೇಷ ಧರಿಸಿ ವನಕ್ಕೆ ಹೋಗಿದ್ದಿರಿ ಹಾಗು ೧೪ ವರ್ಷ, ೧೪ ವರ್ಷ ಮರದ ಸಿಪ್ಪೆಯಿಂದ ನಿರ್ಮಿತ ವಸ್ತ್ರವನ್ನು (ಪ್ರಾಚಿನ ಕಾಲದಲ್ಲಿ ತಪಸ್ವಿಗಳು ಮರದ ಸಿಪ್ಪೆಯಿಂದ ನಿರ್ಮಿಸಿದ ಸಾಧಾರಣ ಉಡುಪನ್ನು ಧರಿಸುತ್ತಿದ್ದರು ) ನೀವು ಧರಿಸಿದ್ದಿರಿ, ನನಗೆ ನಿಮ್ಮ ಅ ವಸ್ತ್ರ ಬೇಕು."

"ಶ್ರುತುಕಿರ್ತಿ, ಏನಿದು, ಕೇಳಿ ಕೇಳಿ ನೀನು ಇದನ್ನೇ ಕೇಳುವುದೇ, ನಾನು ನಿನಗೆ ಮೌಲ್ಯಯುತ ಕೇಳಲು ಹೇಳಿದೆ ಅಲ್ಲವೇ."

"ಹೇ ರಾಮ, ನಾನು ಆ ವಸ್ತ್ರಗಳನ್ನು ಅಯೋಧ್ಯೆಯ ರಾಜ ಸಭಾಂಗಣದಲ್ಲಿ ಹೀಗೆ ಇಡಲು ಬಯಸುವೆ ಅಂದರೆ ಅದನ್ನು ಎಲ್ಲರು ನೋಡಲಿ, ಭಾರತವರ್ಷದ ಮುಂದಿನ ಪೀಳಿಗೆ ಇಷ್ಟಾದರೂ ತಿಳಿಯಲಿ, ರಘುವಂಶದಲ್ಲಿ ಒಂದು ರಾಜ ಹೀಗೆ ಇದ್ದ, ಅವನು ತನ್ನ ತಂದೆಯ ವಚನ ಪಾಲಿಸಲು ೧೪ ವರ್ಷ ಈ ವಸ್ತ್ರಗಳನ್ನು ಧರಿಸಿ ಎಷ್ಟೋ ಕಷ್ಟ ಎದುರಿಸಿದ, ಮುಂದಿನ ಪೀಳಿಗೆಗೆ ತಿಳಿಯಲಿ ನಮ್ಮ ಜನ್ಮ ಅಂತಹ ಪಾವನ ಭಾರತ ದೇಶದಲ್ಲಿ ಆಗಿದೆ ಎಂದು,ಅದಕ್ಕೆ ನನಗೆ ಈ ವಸ್ತ್ರ ಬೇಕು."

(ರಾಮಾಯಣದಿಂದ)

ವ್ಯಾಖ್ಯಾನ : ಹರೀಶ್ ಶೀಟಿ, ಶಿರ್ವ

2 comments:

  1. ನಾರುಡಿಗೆಯ ಅಂತರಂಗ ಬಿಡಿಸಿಟ್ಟ ಬರಹ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...