Monday, April 7, 2014

ಇದ್ಯಾರು ಚಿತ್ರಕಾರ

ಇದ್ಯಾರು ಚಿತ್ರಕಾರ
ಇದ್ಯಾರು ಚಿತ್ರಕಾರ

!!ಹಸಿರು ಹಸಿರು ವಸುಂಧರೆಯಲಿ
ನೀಲ ನೀಲ ಈ ಗಗನ
ಅದರಲಿ ಮೇಘದ ಪಾಲಕಿ
ಹಾರಿಸುತ್ತಿದೆ ಪವನ
ಪರಿಸರ ನೋಡಿ ವರ್ಣಮಯ
ಪರಿಸರ ನೋಡಿ ವರ್ಣಮಯ
ಹೊಳೆಯುತ್ತಿದೆ ಉತ್ಸಾಹದೊಂದಿಗೆ
ಇದ್ಯಾರು ಹೂವು ಹೂವಿನಲ್ಲಿ
ಮಾಡಿರುವರು ಶೃಂಗಾರ!!
ಇದ್ಯಾರು ಚಿತ್ರಕಾರ
ಇದ್ಯಾರು ಚಿತ್ರಕಾರ.....ಇದ್ಯಾರು ಚಿತ್ರಕಾರ

!!ತಪಸ್ವಿಗಳಂತೆ ಸ್ಥಿರ ಪರ್ವತದ
ಈ ಶಿಖರಗಳು
ನೀರ್ಗಲ್ಲುಗಳ ತಿರುವು
ನುಣುಚು ಕಣಿವೆಗಳು
ಧ್ವಜದ ಹಾಗೆ ಇದು ನಿಂತಿದೆ
ಧ್ವಜದ ಹಾಗೆ ಇದು ನಿಂತಿದೆ
ಈ ಪೈನ್ ವೃಕ್ಷಗಳು
ರತ್ನಗಂಬಳಿ ಗುಲಾಬಿಯ
ಉದ್ಯಾನ ಈ ವಸಂತದ
ಇದು ಯಾವ ಕವಿಯ ಕಲ್ಪನೆ
ಇದು ಯಾವ ಕವಿಯ ಕಲ್ಪನೆಯ ಚಮತ್ಕಾರ!!
ಇದ್ಯಾರು ಚಿತ್ರಕಾರ
ಇದ್ಯಾರು ಚಿತ್ರಕಾರ.....ಇದ್ಯಾರು ಚಿತ್ರಕಾರ

!!ನಿಸರ್ಗದ ಈ ಪವಿತ್ರತೆಯನ್ನು
ನೀನು ಗಮನಿಸು
ಇವುಗಳ ಗುಣವನ್ನು
ಮನಸ್ಸಲ್ಲಿ ಸ್ಥಾಪಿಸು
ಪ್ರಕಾಶಿಸು ಇಂದು ತೇಜಸ್ಸನ್ನು
ಪ್ರಕಾಶಿಸು ಇಂದು ತೇಜಸ್ಸನ್ನು ತನ್ನ ಲಲಾಟದ
ಕಣ ಕಣದಲಿ ಕಾಣುತ್ತಿದೆ
ಸೌಂದರ್ಯ ಭವ್ಯವಾದ
ನಮಗೆ ಒಂದೇ ಕಣ್ಣು, ಅದರ ಎಷ್ಟೋ ಸಾವಿರ!!
ಇದ್ಯಾರು ಚಿತ್ರಕಾರ
ಇದ್ಯಾರು ಚಿತ್ರಕಾರ.....ಇದ್ಯಾರು ಚಿತ್ರಕಾರ

ಮೂಲ : ಭರತ್ ವ್ಯಾಸ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಸತೀಶ್ ಭಾಟಿಯಾ
ಚಿತ್ರ : ಬೂಂದ್ ಜೋ ಬನ್ ಗಯಾ ಮೋತಿ

 Haree haree wasundhara pe nila nila yeh gagan
 Ke jis pe badalo kee palakee uda raha pawan
 Dishaye dekho rangbharee, chamak rahee umang bharee
 Yeh kis ne phul phul pe kiya singar hai
 Yeh kaun chitrakar hai - (3)

 Tapaswiyo see hain atal yeh parawato kee chotiya
 Yeh sarpa see ghoomeradar, gheradar ghatiya
 Dhwaja se yeh khade huye hain wariaksh dewadar ke
 Galiche yeh gulab ke, bagiche yeh bahar ke
 Yeh kis kavee kee kalpana kaa chamatkar hai
 Yeh kaun chitrakar hai..........

 Kudrat kee iss pavitrata ko tum nihar lo
 Iss ke guno ko apne mann me tum utar lo
 Chamakalo aaj lalima, apne lalat kee
 Kan kan se jhankatee tumhe chhabee virat kee
 Apnee toh aankh yek hai uss kee hajar hai
 Yeh kaun chitrakar hai.........

2 comments:

  1. ಅಪರೂಪದ ಗೀತೆ.
    ಮಮ್ತಾಜ್ ನನ್ನ ಮೆಚ್ಚಿನ ನಟಿ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...