Sunday, April 27, 2014

ಮಲ್ಲಿಗೆಯ ಬಳ್ಳಿ

ಈಗಲೂ ಅಲ್ಲಿ ಮಲ್ಲಿಗೆಯ ಬಳ್ಳಿ 
ಘಮ ಘಮ ಪರಿಮಳ 
ಮರುಳಾದೆ ಪುನಃ ಒಮ್ಮೆ 

ಆದರೆ ಏನೋ ಕಾಣೆಯಾಗಿದೆ 
ಹೌದು, ಅವಳ ಉಪಸ್ಥಿತಿ 
ಕಂಗಳ ಮುಂದೆ ಅವಳ ಮೊಗ 

ಅವಳಿಲ್ಲವೆಂದು ಗೊತ್ತು 
ತಪ್ಪಿನ ಅರಿವು 
ಹೃದಯದಲಿ ಪಶ್ಚಾತ್ತಾಪದ ಅರ್ಭಟ 

ಅಲ್ಲೇ ಕೂತುಕೊಂಡೆ 
ಕಣ್ಣೀರ ಧಾರಾಳ ವರ್ಷಧಾರೆ 
ನೆನಪಿನ ಬಿರುಗಾಳಿ 

ಮೌನ ಏಕಾಂತ  
ಮನಸ್ಸು ಅವಳ ಧ್ಯಾನದಲಿ 
ಮಲ್ಲಿಗೆಯ ಪರಿಮಳ ಘಮ ಘಮ... ನಿರಂತರ 

by ಹರೀಶ್ ಶೆಟ್ಟಿ,ಶಿರ್ವ

2 comments:

  1. ಪಶ್ಚಾತ್ತಾಪದ ತಾಪ ಅವಳನೂ ತಟ್ಟುತ್ತದೆ, ಕರಗುತ್ತಾಳೆ ಬಲು ಬೇಗನೇ...

    ReplyDelete
  2. ಆದರೆ ಅವಳು ಈಗ ಪರಕೀಯ, ನೆನಪೇ ಶೇಷ ...

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...