Sunday, April 6, 2014

ಸಾವಿರಾರು ಹಾದಿ ತಿರುಗಿ ನೋಡಿದೆ

ಕಿಶೋರ್:
ಸಾವಿರಾರು ಹಾದಿ ತಿರುಗಿ ನೋಡಿದೆ
ಎಲ್ಲಿಂದಲೂ ಯಾವುದೇ ಕರೆ ಬರಲಿಲ್ಲ

ಲತಾ :
ತುಂಬಾ ನಿಷ್ಠೆಯಿಂದ ನಿಭಾಯಿಸಿದೆ ನೀನು
ನನ್ನ ಕಿಂಚಿತ ವಿಶ್ವಾಸ ದ್ರೋಹವನ್ನೆಲ್ಲ

ಕಿಶೋರ್:
ಎಲ್ಲಿಂದ ನೀನು ತಿರುವು ತಿರುಗಿದೆ
ಆ ತಿರುವು ಈಗಲೂ ಬಿದ್ದಿವೆ ಅಲ್ಲೇ

ಲತಾ :
ನಾನು ನನ್ನ ಕಾಲುಗಳಲ್ಲಿ ಅದೆಷ್ಟೋ
ಸುಳಿಗಳನ್ನು ಕಟ್ಟಿಕೊಂಡು ನಿಂತಿದ್ದೇನೆ ಇಲ್ಲೇ
ತುಂಬಾ ನಿಷ್ಠೆಯಿಂದ....

ಕಿಶೋರ್:
ಎಂದೋ ಒಂದು ದಿನ ಹೀಗೆಯೂ ಆಗಬೇಕಿತ್ತು
ನನ್ನ ಅವಸ್ಥೆ ನಿನ್ನದಾಗಬೇಕಿತ್ತು

ಲತಾ :
ಸತ್ತು ನಾ ಕಳೆದ ರಾತ್ರಿಗಳೆಲ್ಲ
ಆ ರಾತ್ರಿಗಳೆಲ್ಲ ನೀನು ಕಳೆಯಬೇಕಿತ್ತು
ತುಂಬಾ ನಿಷ್ಠೆಯಿಂದ....

ಕಿಶೋರ್:
ನಿನಗೆ ಹಠ ನಾನು ಕರೆಯಬೇಕೆಂದು
ನನಗೆ ಈ ನಿರೀಕ್ಷೆ ನೀನು ಕರೆಯಲೆಂದು

ಲತಾ :
ಹೆಸರಿದೆ ತುಟಿಯಲಿ ಈಗಲೂ
ಸ್ವರದಲಿ ಬಿರುಕುಂಟಾಗಿದೆ ಇಂದು
ತುಂಬಾ ನಿಷ್ಠೆಯಿಂದ.....

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಕಿಶೋರೆ ಕುಮಾರ್, ಲತಾ ಮಂಗೇಶ್ಕರ್
ಸಂಗೀತ : ಖಯ್ಯಾಮ್
ಚಿತ್ರ : ತೋಡಿ ಸಿ ಬೆವಫಾಯಿ
Kishore: hazaar rahen, mudke dekhin
kahin se koi sadaa na ai

Lata: badi wafa se, nibahi tumane
hamaari thodi si bewafai

Kishore: jaha se tum mod mud gaye the – 2
vo mod ab bhi vahi khade hain

Lata: ham apane pairon men jaane kitane – 2
bhanwar lapete hue khade hain
badi wafa se, nibhai tumne
hamari thodi si bewafai

Kishore: kahin kisi roz yun bhi hota
hamari halat tumhari hoti

Lata: jo raten hamane guzari marake
vo raat tumane guzari hotin
badi wafa se, nibahi tumane
hamaari thodi si bewafai

Kishore: unhen ye zid thi ke ham bulate
hamen ye ummid vo pukaren

Lata: hai naam honton men ab bhi lekin
aawaaz men pad gai daraaren

Kishore: hazaar rahen, mudake
kahin se koi sadaa na ai

Lata: badi wafa se, nibahi tumane
hamaari thodi si bewafai
http://www.youtube.com/watch?v=nynE7cFORmE

2 comments:

  1. ಗುಲ್ಜಾರ್ ಮತ್ತು ಖಯ್ಯಂ ಸರಿಯಾದ ಪಾಕ!
    ಭಾವಾನುವಾದಕ್ಕೂ ಫುಲ್ ಮಾರ್ಕ್ಸ್.
    ಛಾಯಾಗ್ರಹಣ : ರುಸ್ಸಿ ಬಿಲ್ಲಿಮೋರಿಯ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...