Monday, April 21, 2014

ಯಾರೋ ಮೆಲ್ಲನೆ ಬಂದು

ಯಾರೋ ಮೆಲ್ಲನೆ ಬಂದು
ಮಲಗಿಸಿ ಕನಸನು
ನನ್ನನ್ನೆಬ್ಬಿಸಿ ಹೇಳುವನು
ನಾನು ಬರುವೆಯೆಂದು
ಯಾರು ಬರುವರು
ಇದು ನನಗೇಗೆ ತಿಳಿಯುವುದು
ಯಾರೋ ಮೆಲ್ಲನೆ....

ದೂರ ಎಲ್ಲಿಯೋ
ಕೋಗಿಲೆ ನುಡಿಯುವುದು
ನಲ್ಲ ಬಾ
ಪರಿಸರವಾಗಿದೆ ಚಿತ್ತಾಕರ್ಷಕ
ಹಂಬಲದಲ್ಲಿದ್ದಾರೆ ಯಾರೋ ಇಲ್ಲಿ
ಬಂದೆ ಬಿಡು
ಏನಾದರೂ ನೆಪ ಹೂಡಿ ತಕ್ಕ
ಯಾವುದು ನೆಪ
ಎಂತಹ ನೆಪ
ಎಷ್ಟು ಕಠಿಣ ಇದನ್ನು ಹೇಳುವುದು
ನೋಡು ಪುನಃ ಯಾರೋ ಇಷ್ಟವಾಗುತ್ತಿದ್ದಾರೆ
ಯಾರು ಇಷ್ಟವಾಗುತ್ತಿದ್ದಾರೆ
ಇದು ನನಗೇಗೆ ತಿಳಿಯುವುದು
ಯಾರೋ ಮೆಲ್ಲನೆ....ಇನಿಯ
ಯಾರೋ ಮೆಲ್ಲನೆ....

ತೃಷೆಯಲಿ ಹೃದಯದ ಆಗಸ
ಪ್ರೀತಿಯ ಜ್ವಾಲೆ ಜ್ವಲಿಸುವುದು
ಕಣ್ರೆಪ್ಪೆಯಲಿ ಬಂಧಿಯಾಗಿದೆ ವರ್ಷ
ತುಟಿ ತನಕ ಮಾತೇಗೆ ಬರುವುದು
ಮಾತು ಬರುತ ಬರುತ
ರಾತ್ರಿಯಾಯಿತು
ಒಲವ ಮೆರವಣಿಗೆ
ಜೊತೆಗೆ ಬಿಟ್ಟೋಯಿತು
ಮಾತು ಬರುತ ಬರುತ
ರಾತ್ರಿಯಾಯಿತು
ಇಷ್ಟೊಂದು ರಾತ್ರಿಯಲಿ ನಾನೇಗೆ ಹಾಡಲಿ
ನೋಡಿ ಆದರೂ ಯಾರೋ ಹಾಡುತ್ತಿದ್ದಾರೆ
ಯಾರು ಹಾಡುತ್ತಿದ್ದಾರೆ 
ಇದು ನನಗೇಗೆ ತಿಳಿಯುವುದು
ಯಾರೋ ಮೆಲ್ಲನೆ....ಇನಿಯ
ಯಾರೋ ಮೆಲ್ಲನೆ....

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಗೀತ ದತ್ತ್
ಸಂಗೀತ : ಕಾನು ರಾಯ್
ಚಿತ್ರ : ಅನುಭವ್
(koyi chupke se aake, sapne sulake mujhko jagake
bole kee mai aa raha hu, kaun aaye yeh mai kaise janu) - (2)
koyi chupke se aake...........

dur kahee bole papiha, piya aa mausam suhana
tarse hai koyi yaha, aa bhi ja karke bahana
kaun sa bahana, kaisa bahana, kitna mushkil hai yeh batana
dekho phir bhi koyi bha raha hai, kaun bhaye yeh mai kaise janu
koyi chupke se aake, sapne sulake mujhko jagake
bole kee mai aa raha hu, kaun aaye yeh mai kaise janu
koyi chupke se aake...........

pyasa hai dil kaa gagan, pyar kee agni jalaye
palko me qaid hai sawan, hontho tak bat naa aaye
bat aate aate rat ho gayi
chaho kee barat chhod gayi sath, bat aate aate ho gayi rat
itani rat gaye kaise gau he he he he..........
dekho phir bhi koyi ga raha hai, kaun gaye yeh mai kaise janu
koyi chupke se aake, sapne sulake mujhko jagake
bole kee mai aa raha hu, kaun aaye yeh mai kaise janu
he heh he he........
 http://www.youtube.com/watch?v=tR-2xq6q5KA

5 comments:

  1. ಬಸು ಬಟ್ಟಾಚಾರ್ಯ ನಿರ್ಧೇಶನದ, ನಂದೋ ಭಟ್ಟಾಚಾರ್ಯ ಛಾಯಾಗ್ರಹಣವಿದ್ದ ಚಿತ್ರ ಅನುಭವ್.
    ಇದೇ ಹೆಸರಿನ ಇನ್ನೊಂದು ಅನುಭವ್ ಸಹ ನಂತರ ತೆರೆಕಂಡಿತು, ಇದು ಕನ್ನಡದ ಅನುಭವದ ಹಿಂದಿ ಅವತರಣಿಕೆ. ಅದರ ನಿರ್ದೇಶಕರು ಕಾಶೀನಾಥ್.

    ಗುಲ್ಜಾರರ ಇನ್ನೊಂದು ಉತ್ತಮ ಗೀತೆಯ ಭಾವಾನುವಾದಕ್ಕಾಗಿ ಧ್ನಯವಾದಗಳು.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete
  3. ಕಾಶಿನಾಥ್ ಅವರ ಅನುಭವದ ರಿಮೇಕ್ ಇದಲ್ಲ ಸರ್, ಅದು ಶೇಖರ್ ಸುಮನ್ ನಟಿಸಿದ ಹಿಂದಿ ಚಿತ್ರ ಅನುಭವ್ .

    ReplyDelete
    Replies
    1. ಗೊತ್ತಿದೆ ಸಾರ್, ಮೊದಲ ಪ್ಯಾರಾ ನೋಡಿರಿ. :)

      Delete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...