Saturday, April 26, 2014

ನನ್ನ ಜೀವನ

ನನ್ನ ಜೀವನ
ನನ್ನನ್ನು ಜೀವನವೆಂದು ಕರೆಯದಿರು ನನ್ನ ಜೀವನ
ನನ್ನ ಜೀವನ, ನನ್ನ ಜೀವನ
ನನ್ನನ್ನು ಜೀವನವೆಂದು ಕರೆಯದಿರು ನನ್ನ ಜೀವನ
ನನ್ನ ಜೀವನ, ನನ್ನ ಜೀವನ

ಜೀವನವೆಂದು ಕರೆಯದಿರು ಅಜ್ಞಾನಿ ನನ್ನನ್ನು
ಶಾಶ್ವತವಾಗಿರುತ್ತದೆ ಜೀವನ ಎಲ್ಲಿ
ಅಜ್ಞಾನಿಗಳಿಗೆ ಏನು ತಿಳಿದಿದೆ
ಅರಿತು ಯಾರೇಕೆ ಹೋಗುವರು ಆ ಹಾದಿಯಲಿ
ನನ್ನ ಜೀವನ, ನನ್ನ ಜೀವನ

ಒಣ ವರ್ಷಧಾರೆ ಸುರಿಸಿದೆ
ಅದೆಷ್ಟೋ ಸಲ ಈ  ಕಂಗಳು
ಆದರೆ ಎರಡು ಕಣ್ಣೀರ ಹನಿಯನ್ನೂ
ಸುರಿಯ ಬಿಡಲಿಲ್ಲ ಈ ತೇವಗೊಂಡ ಕಣ್ರೆಪ್ಪೆಗಳು
ನನ್ನ ಜೀವನ, ನನ್ನ ಜೀವನ

ಸೇರಿದಾಗ ತುಟಿ ತುಟಿಯಿಂದ
ಸಿಕ್ಕಿಕೊಂಡಾಗ ಉಸಿರು ಉಸಿರಿಂದ
ಎರಡು ಅವಳಿ ತುಟಿಗಳ
ಮಾತುಗಳನ್ನು
ನುಡಿ ಈ ಕಂಗಳಿಂದ
ನನ್ನ ಜೀವನ, ನನ್ನ ಜೀವನ
ನನ್ನನ್ನು ಜೀವನವೆಂದು ಕರೆಯದಿರು ನನ್ನ ಜೀವನ
ನನ್ನ ಜೀವನ, ನನ್ನ ಜೀವನ

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಗೀತಾ ದತ್
ಸಂಗೀತ : ಕಾನು ರಾಯ್
ಚಿತ್ರ : ಅನುಭವ್

Meri Jaan, Mujhe Jaan Na Kaho Meri Jaan
Meri Jaan, Meri Jaan
Mujhe Jaan Na Kaho Meri Jaan
Meri Jaan, Meri Jaan

[Jaan Na Kaho Anjaan Mujhe
Jaan Kahaan Rahati Hai Sadaa] 2
Anjaane, Kyaa Jaane
Jaan Ke Jaae Kaun Bhalaa
Meri Jaan
Mujhe Jaan Na Kaho Meri Jaan

Suukhe Saavan Baras Gae
Kitani Baar In Aankhon Se
Do Boondien Naa Barase
In Bhigi Palakon Se
Meri Jaan
Mujhe Jaan Na Kaho Meri Jaan

[Honth Jhuke Jab Honthon Par
Saans Ulajhi Ho Saanson Men ] 2
Do JuDavaan Honthon Ki
Baat Kaho Aankhon Se
Meri Jaan
Mujhe Jaan Na Kaho Meri Jaan
http://www.youtube.com/watch?v=F6FkVPOMtvM

2 comments:

  1. ಅನುಭವ್ ಚಿತ್ರದ ಒನ್ನೊಂದು ಒಳ್ಳೆಯ ಹಾಡು.

    ReplyDelete
  2. ತುಂಬಾ ಧನ್ಯವಾಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...