Tuesday, April 29, 2014

ವಸಂತಾಗಮನ

ಬೆತ್ತಲೆ ಮರದಲಿ
ಹಕ್ಕಿಯೊಂದು
ಬೇಸರದಿ ಹಾಡುತ್ತಿದೆ
ಶಿಶಿರದ
ದುಃಖ ತಾಪದ
ಕಷ್ಟ ನೋವಿನ
ಅನುಭವ ಗಾನ

ಜೀವನ
ಅಂದರೆ ಕೇವಲ
ಖುಷಿ ಸಂತೋಷವೇ ಅಲ್ಲ
ಋತು ಬದಲಾದಂತೆ
ನಿಸರ್ಗದ ಜೊತೆಯಲಿ
ಎಲ್ಲವೂ
ಬದಲಾಗುತ್ತದೆ

ಇನ್ನೇನು
ಸ್ವಲ್ಪವೇ ದಿನದ ನಂತರ
ವಸಂತಾಗಮನ
ಆಗುವುದು
ಪುನಃ
ಸುಖ ಸೌಂದರ್ಯ
ಸುಮನ ಅರಳುವುದು

ಈ ಎಲ್ಲಾ
ಮರಗಳಲ್ಲಿ
ಹೊಸ ಚಿಗುರು ಮೂಡಿ
ಹೂಗಳು ಅರಳುವುದು
ಮರವೆಲ್ಲ ಹಣ್ಣೆಲೆಯಿಂದ
ತುಂಬುವುದು
ಉಲ್ಲಾಸ ನೆಲೆಸುವುದು

by ಹರೀಶ್ ಶೆಟ್ಟಿ,ಶಿರ್ವ 

ಮನಸ್ಸೇ ನೀನೇಕೆ

ಮನಸ್ಸೇ ನೀನೇಕೆ
ಸಂಯಮ ವಹಿಸುವುದಿಲ್ಲ
ಮೋಹವಿಲ್ಲದ ಅದಕ್ಕೆ
ಪ್ರೀತಿ ಮೋಹ ಏನೆಂದು ತಿಳಿದಿಲ್ಲ
ಮನಸ್ಸೇ ನೀನೇಕೆ.....

ಈ ಜೀವನದ ಏರುವ ತಗ್ಗುವ ಬಿಸಿಲನ್ನು
ಯಾರು ಹೇಗೆ ತಾನೇ ಬಂಧಿಸಬಲ್ಲ
ವರ್ಣಕ್ಕೆ ಯಾರು ತಾನೇ ಕಾವಲು ಇಡಬಲ್ಲ
ರೂಪವನ್ನು ಯಾರು ತಾನೇ ಬಂಧಿಸಬಲ್ಲ
ಏಕೆ ಈ ಪ್ರಯತ್ನವೆಲ್ಲ
ಮನಸ್ಸೇ ನೀನೇಕೆ.....

ಅಷ್ಟೇ ಉಪಕಾರವೆಂದು ತಿಳಿದುಕೊಳ್ಳು ನೀನು
ನಿನ್ನ ಜೊತೆ ಯಾರೆಷ್ಟು ನೀಡಿದರೋ
ಜನ್ಮ ಮರಣದ ಬಂಧನವೆಲ್ಲ ಕನಸು
ಈ ಕನಸನ್ನು ಮರೆತು ಹೋಗು ನೀನು
ಯಾರೂ ಒಟ್ಟಿಗೆ ಸಾಯುವುದಿಲ್ಲ
ಮನಸ್ಸೇ ನೀನೇಕೆ.....

ಮೂಲ : ಸಾಹೀರ್ ಲುಧ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ರೋಶನ್
ಚಿತ್ರ :ಚಿತ್ರಲೇಖ

man re tu kaahe na dheer dhare
o nirmohi moh na jaane jinka moh kare
man re tu kaahe na dheer dhare

iss jeevan ki chadhti dhalti
dhoop ko kiss ne baandha
rang pe kiss ne pehre daale
roop ko kiss ne baandha
kaahe yeh jatan kare
man re tu kaahe na dheer dhare

utna hi upkaar samajh koi
jitna saath nibhaa de
janam maran ka mel hai sapna
yeh sapna bisraa de
koi na sang mare
man re tu kaahe na dheer dhare
o nirmohi moh na jaane jinka moh kare
ho man re tu kaahe na dheer dhare
http://www.youtube.com/watch?v=uA2FhgF6VY4

Sunday, April 27, 2014

ಅರ್ಪಣೆ

ಹೃದಯದ ನೋವು
ಸಹಿಸಲಾರೆ
ಮಲ್ಲಿಗೆ ಹೂ ಕೊಂಡು
ಬಂದೆ ಅವಳ
ಹೊಸ ಮನೆ ದ್ವಾರಕ್ಕೆ,
ದೂರದಿಂದ
ಅವಳನ್ನು ನಗು ಮೊಗದಿಂದ
ದ್ವಾರದ ಬಳಿ
ರಂಗೋಲಿ ಬಿಡಿಸುವುದನ್ನು ನೋಡಿದೆ,
ಅಲ್ಲಿಂದಲೇ ಹಿಂತಿರುಗಿ
ಬಂದೆ ಸಾಗರ ತೀರ,
ಮಲ್ಲಿಗೆ ಹಾಗು
ಅವಳ ಇತರ ವಸ್ತುಗಳನ್ನು
ಸಮುದ್ರಕ್ಕೆ ಅರ್ಪಿಸಿದೆ

by ಹರೀಶ್ ಶೆಟ್ಟಿ,ಶಿರ್ವ  

ತೆರೆದಿಡು ಮನಸ್ಸಿನ ದ್ವಾರವನ್ನು

ತೆರೆದಿಡು ಮನಸ್ಸಿನ ದ್ವಾರವನ್ನು
ಬಂದೆ ಬಿಡುತ್ತೇನೆ
ಮೆಲ್ಲನೆ
ಕದವೂ ತಟ್ಟುವುದಿಲ್ಲ
ಶಬ್ದವೂ ಮಾಡುವುದಿಲ್ಲ
ಸಾವಕಾಶವಾಗಿ ಹೆಜ್ಜೆಯನ್ನಿಟ್ಟು
ದ್ವಾರದ ಬಳಿ ಬಂದು
ಪಿಸು ಧ್ವನಿಯಲಿ
ನಿನ್ನನ್ನು ಹೊರ ಕರೆದು
ಹೇಳುವೆ
ನಿನ್ನಿಂದ
ನಾನೂ
ನಿನ್ನನ್ನು
ಪ್ರೀತಿಸುವೆಯೆಂದು

by ಹರೀಶ್ ಶೆಟ್ಟಿ,ಶಿರ್ವ 

ಮಲ್ಲಿಗೆ

ಮಲ್ಲಿಗೆಯ ತೋಟ
ಈಗಲೂ ಅಲ್ಲಿಯೇ ಇದೆ 
ಮಲ್ಲಿಗೆಯೂ ಅರಳುತ್ತಿದೆ 
ಪರಿಮಳವೂ ಬೀರುತ್ತಿದೆ 
ಆದರೆ ಈಗ ಅಲ್ಲಿ 
ನೀನೂ ಇಲ್ಲ 
ನಾನೂ ಇಲ್ಲ 

by ಹರೀಶ್ ಶೆಟ್ಟಿ,ಶಿರ್ವ

---

ಆ ಹಾದಿಯಲಿ 
ಈಗಲೂ ಮಂಗಗಳ ಕಾಟ 
ಆದರೆ ನನ್ನನ್ನು 
"ಹೇ ಮಂಗ" ಎಂದು 
ಕರೆಯುವವಳು ಅಲ್ಲಿಲ್ಲ 

by ಹರೀಶ್ ಶೆಟ್ಟಿ,ಶಿರ್ವ

---

"ಮಲ್ಲಿಗೆ ಕಟ್ಟೆಗೆ ಕೊಟ್ಟು ಬಾ "
ಎಂದರು. 
ಕೊಂಡು ಹೋದೆ, 
ಅವಳು ಮುಡಿಯುತ್ತಿದ್ದ 
ಮಲ್ಲಿಗೆ ಮಾರಟಕ್ಕೆ 
ಕೊಡುವಾಗ ಮನಸ್ಸು ಭಾರ ಭಾರ 

by ಹರೀಶ್ ಶೆಟ್ಟಿ,ಶಿರ್ವ

---

ಅವಳ ಕೋಣೆಗೆ ಹೋದೆ 
ಅವಳ ಕಪಾಟು ತೆರೆದೆ
ಅದೆಷ್ಟೋ 
ಒಣಗಿದ ಮಲ್ಲಿಗೆ ಹೂಗಳು
ಉದುರಿ ಬಿದ್ದವು 

by ಹರೀಶ್ ಶೆಟ್ಟಿ,ಶಿರ್ವ

ಮಲ್ಲಿಗೆಯ ಬಳ್ಳಿ

ಈಗಲೂ ಅಲ್ಲಿ ಮಲ್ಲಿಗೆಯ ಬಳ್ಳಿ 
ಘಮ ಘಮ ಪರಿಮಳ 
ಮರುಳಾದೆ ಪುನಃ ಒಮ್ಮೆ 

ಆದರೆ ಏನೋ ಕಾಣೆಯಾಗಿದೆ 
ಹೌದು, ಅವಳ ಉಪಸ್ಥಿತಿ 
ಕಂಗಳ ಮುಂದೆ ಅವಳ ಮೊಗ 

ಅವಳಿಲ್ಲವೆಂದು ಗೊತ್ತು 
ತಪ್ಪಿನ ಅರಿವು 
ಹೃದಯದಲಿ ಪಶ್ಚಾತ್ತಾಪದ ಅರ್ಭಟ 

ಅಲ್ಲೇ ಕೂತುಕೊಂಡೆ 
ಕಣ್ಣೀರ ಧಾರಾಳ ವರ್ಷಧಾರೆ 
ನೆನಪಿನ ಬಿರುಗಾಳಿ 

ಮೌನ ಏಕಾಂತ  
ಮನಸ್ಸು ಅವಳ ಧ್ಯಾನದಲಿ 
ಮಲ್ಲಿಗೆಯ ಪರಿಮಳ ಘಮ ಘಮ... ನಿರಂತರ 

by ಹರೀಶ್ ಶೆಟ್ಟಿ,ಶಿರ್ವ

ಓ ನಾವಿಕನೆ

ಓ ನಾವಿಕನೆ-೩
ನನ್ನ ಇನಿಯ ಆ ತೀರದಲಿ
ದುರ್ದೈವಿ ನಾನಿದ್ದೇನೆ ಈ ತೀರದಲಿ
ಓ ನನ್ನ ನಾವಿಕನೆ
ಈ ಬಾರಿ
ಕೊಂಡೋಗು ಆ ತೀರದಲಿ
ಕೊಂಡೋಗು ಆ ತೀರದಲಿ
ನನ್ನವರಿದ್ದಾರೆ ಆ ತೀರದಲಿ

ಮನಸ್ಸಿನ ಪುಸ್ತಕದಿಂದ
ನನ್ನೆಸರನ್ನು ಅಳಿಸು ನೀನು
ಗುಣವೇನೂ ಇರಲಿಲ್ಲ ಯಾವುದೇ
ಅವಗುಣ ಮರೆತು ಹೋಗು ನೀನು
ಇಂದಿನ ತೆರಳುವಿಕೆಯ
ಎಷ್ಟೋ ಸಮಯದಿಂದ
ನಾನಿದ್ದೆ ನಿರೀಕ್ಷೆಯಲಿ
ನನ್ನ ಇನಿಯ ಆ ತೀರದಲಿ....

ಆಡಬೇಡ
ಸುಟ್ಟು ಹೋಗುವೆ ನೀನು
ಹೇಳುತ್ತಿದೆ ಅಗ್ನಿ ನನ್ನ ಮನಸ್ಸಿನ
ನಾನು ಬಂಧಿತೆ ನಲ್ಲನ
ನಾನು ಸಂಗಾತಿ ಇನಿಯನ
ನನ್ನ ಎಳೆಯುತ್ತಿದೆ ಸೆರಗು
ಪ್ರಿಯತಮ ನಿನ್ನ ಪ್ರತಿ ಕರೆಯಲಿ
ನನ್ನ ಇನಿಯ ಆ ತೀರದಲಿ....

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು/ಸಂಗೀತ : ಎಸ್ . ಡೀ .ಬರ್ಮನ್
ಚಿತ್ರ : ಬಂಧಿನಿ

o re majhi o re majhi o o mere majhi
mere saajan hai us paar, mai man maar, hun is paar
o mere majhi, abaki baar, le chal paar, le chal paar
mere saajan hai us paar, mai man maar, hun is paar
o mere majhi, abaki baar, le chal paar, le chal paar
mere saajan hai us paar

ho man ki kitab se tu, mera naam hi mita dena
gun to na tha koi bhi, avagun mere bhula dena
ho man ki kitab se tu, mera naam hi mita dena
gun to na tha koi bhi, avagun mere bhula dena
mujhako teri bida ka
mujhako teri bida ka mar ke bhi rahata itazar
mere saajan hai us paar, mai man maar, hun is paar
o mere majhi, abaki baar, le chal paar, le chal paar
mere saajan hai us paar

mat khel jal jaaegi, kahati hai aag mere man ki
mat khel mat khel jal jaaegi, kahati hai aag mere man ki
mai badini piyaa ki chir sagini hun saajan ki
mera khichati hai aanchal
mera khichati hai aanchal man mit teri har pukar
mere sajan hai us paar
o re majhi o re majhi o o mere majhi
mere sajan hai us paar
http://www.youtube.com/watch?v=95X_aRs8SWI

Saturday, April 26, 2014

ನನ್ನ ಜೀವನ

ನನ್ನ ಜೀವನ
ನನ್ನನ್ನು ಜೀವನವೆಂದು ಕರೆಯದಿರು ನನ್ನ ಜೀವನ
ನನ್ನ ಜೀವನ, ನನ್ನ ಜೀವನ
ನನ್ನನ್ನು ಜೀವನವೆಂದು ಕರೆಯದಿರು ನನ್ನ ಜೀವನ
ನನ್ನ ಜೀವನ, ನನ್ನ ಜೀವನ

ಜೀವನವೆಂದು ಕರೆಯದಿರು ಅಜ್ಞಾನಿ ನನ್ನನ್ನು
ಶಾಶ್ವತವಾಗಿರುತ್ತದೆ ಜೀವನ ಎಲ್ಲಿ
ಅಜ್ಞಾನಿಗಳಿಗೆ ಏನು ತಿಳಿದಿದೆ
ಅರಿತು ಯಾರೇಕೆ ಹೋಗುವರು ಆ ಹಾದಿಯಲಿ
ನನ್ನ ಜೀವನ, ನನ್ನ ಜೀವನ

ಒಣ ವರ್ಷಧಾರೆ ಸುರಿಸಿದೆ
ಅದೆಷ್ಟೋ ಸಲ ಈ  ಕಂಗಳು
ಆದರೆ ಎರಡು ಕಣ್ಣೀರ ಹನಿಯನ್ನೂ
ಸುರಿಯ ಬಿಡಲಿಲ್ಲ ಈ ತೇವಗೊಂಡ ಕಣ್ರೆಪ್ಪೆಗಳು
ನನ್ನ ಜೀವನ, ನನ್ನ ಜೀವನ

ಸೇರಿದಾಗ ತುಟಿ ತುಟಿಯಿಂದ
ಸಿಕ್ಕಿಕೊಂಡಾಗ ಉಸಿರು ಉಸಿರಿಂದ
ಎರಡು ಅವಳಿ ತುಟಿಗಳ
ಮಾತುಗಳನ್ನು
ನುಡಿ ಈ ಕಂಗಳಿಂದ
ನನ್ನ ಜೀವನ, ನನ್ನ ಜೀವನ
ನನ್ನನ್ನು ಜೀವನವೆಂದು ಕರೆಯದಿರು ನನ್ನ ಜೀವನ
ನನ್ನ ಜೀವನ, ನನ್ನ ಜೀವನ

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಗೀತಾ ದತ್
ಸಂಗೀತ : ಕಾನು ರಾಯ್
ಚಿತ್ರ : ಅನುಭವ್

Meri Jaan, Mujhe Jaan Na Kaho Meri Jaan
Meri Jaan, Meri Jaan
Mujhe Jaan Na Kaho Meri Jaan
Meri Jaan, Meri Jaan

[Jaan Na Kaho Anjaan Mujhe
Jaan Kahaan Rahati Hai Sadaa] 2
Anjaane, Kyaa Jaane
Jaan Ke Jaae Kaun Bhalaa
Meri Jaan
Mujhe Jaan Na Kaho Meri Jaan

Suukhe Saavan Baras Gae
Kitani Baar In Aankhon Se
Do Boondien Naa Barase
In Bhigi Palakon Se
Meri Jaan
Mujhe Jaan Na Kaho Meri Jaan

[Honth Jhuke Jab Honthon Par
Saans Ulajhi Ho Saanson Men ] 2
Do JuDavaan Honthon Ki
Baat Kaho Aankhon Se
Meri Jaan
Mujhe Jaan Na Kaho Meri Jaan
http://www.youtube.com/watch?v=F6FkVPOMtvM

Tuesday, April 22, 2014

ಅಪ್ಪನ ಶುಭಹಾರೈಕೆ


ಅಪ್ಪನ ಶುಭಹಾರೈಕೆ ಕೊಂಡೋಗು ಮಗಳೇ
ಹೋಗು, ನಿನಗೆ ಸುಖ ಸಂಸಾರ ಸಿಗಲಿ
ತವರಿನ ನೆನಪು ಎಂದೂ ಕಾಡದಿರಲಿ
ಆ ಮನೆಯಲಿ ಅಷ್ಟೊಂದು ಪ್ರೀತಿ ಸಿಗಲಿ
ಅಪ್ಪನ ಶುಭಹಾರೈಕೆ.....

ಮುದ್ದಿನಿಂದ
ಸಾಕಿದೆ ನಿನ್ನನ್ನು ನಾನು
ನಾಜೂಕು ಮೊಗ್ಗಿನಂತೆ ಹೂವಿನಂತೆ
ಬಾಲ್ಯದಲಿ ತೂಗಿದೆ
ನಿನಗೆ ಎಷ್ಟೋ ಸಲ
ನನ್ನ ಬಾಹುಗಳಲ್ಲಿ ಉಯ್ಯಾಲೆಯಂತೆ
ಓ ನನ್ನ ಉದ್ಯಾನದ ಮೃದು ಶಾಖೆಯೆ
ನಿನಗೆ ಪ್ರತಿಕ್ಷಣ ಹೊಸ ವಸಂತ ಸಿಗಲಿ
ತವರಿನ ನೆನಪು ಎಂದೂ ಕಾಡದಿರಲಿ
ಆ ಮನೆಯಲಿ ಅಷ್ಟೊಂದು ಪ್ರೀತಿ ಸಿಗಲಿ
ಅಪ್ಪನ ಶುಭಹಾರೈಕೆ.....

ಯಾವ ಮನೆಯಿಂದ
ನಿನ್ನ ಭಾಗ್ಯ ಸೇರಿದೆಯೋ
ಆ ಮನೆಯಲಿ ಸದಾ ನಿನ್ನ ಗೌರವ ಇರಲಿ
ತುಟಿಯಲಿ ನಗೆಯ
ಪ್ರಕಾಶ ಬೆಳಕಲಿ
ಲಲಾಟದಲಿ ಖುಷಿಯ ಕಲೆ ಇರಲಿ
ಎಂದೂ ತೇಜಸ್ಸು ಕಡಿಮೆಯಾಗದಂತಹ
ನಿನಗಂತಹ ರೂಪ ಸಿಂಗಾರ ಸಿಗಲಿ  
ತವರಿನ ನೆನಪು ಎಂದೂ ಕಾಡದಿರಲಿ
ಆ ಮನೆಯಲಿ ಅಷ್ಟೊಂದು ಪ್ರೀತಿ ಸಿಗಲಿ
ಅಪ್ಪನ ಶುಭಹಾರೈಕೆ.....

ಕಳೆಯಲಿ
ನಿನ್ನ ಜೀವನದ ಕ್ಷಣಗಳು
ಆರಾಮದ ತಂಪು ನೆರಳಲಿ
ನನ್ನ ಮುದ್ದು ಮಗಳೇ
ನಿನ್ನ ಕಾಲುಗಳಿಗೆ
ಎಂದೂ ಮುಳ್ಳೂ ಸಹ ಚುಚ್ಚದಿರಲಿ
ನಿನ್ನ ಭಾಗ್ಯ ಸೇರುವ
ದ್ವಾರದಿಂದಲೂ
ದುಃಖ ಕಷ್ಟ ದೂರವಿರಲಿ
ತವರಿನ ನೆನಪು ಎಂದೂ ಕಾಡದಿರಲಿ
ಆ ಮನೆಯಲಿ ಅಷ್ಟೊಂದು ಪ್ರೀತಿ ಸಿಗಲಿ
ಅಪ್ಪನ ಶುಭಹಾರೈಕೆ.....

ಮೂಲ :ಸಾಹಿರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ರವಿ
ಚಿತ್ರ : ನೀಲ್ ಕಮಲ್


Baabul kee duwaaye letee ja,
ja tujhako sukhee sansaar mile
Mayake kee kabhee naa yaad aaye,
sasuraal me itana pyaar mile
Baabul kee duwaaye letee ja,
ja tujhako sukhee sansaar mile

Naajo se tujhe paala maine,
kaliyo kee tarah phulo kee tarah
Bachapan me julaaya hain tujhako,
baaho ne meree julo kee tarah
Mere baag kee ai naajuk daalee,
tuje harpal nayee bahaar mile
Mayake kee kabhee naa yaad aaye,
sasuraal me itana pyaar mile

Jis ghar se bandhe hain bhaag tere,
uss ghar me sada teraa raaj rahe
Haothon pe hansee kee dhup khile,
maathe pe khushee kaa taaj rahe
Kabhee jisakee jyot naa ho fikee,
tuje aisa rup singaar mile
Mayake kee kabhee naa yaad aaye,
sasuraal me itana pyaar mile

Bite tere jivan kee ghadiya,
aaram kee thhandee chhanv me
Kaanta bhee naa chubhane paaye kabhee,
meree ladalee tere paanv me
Uss dwaar se bhee dukh dur rahe,
jis dwaar se teraa dwaar mile
Mayake kee kabhee naa yaad aaye,
sasuraal me itana pyaar mile

Baabul kee duwaaye letee ja,
ja tujhako sukhee sansaar mile
Baabul kee duwaaye letee ja.

Monday, April 21, 2014

ಯಾರೋ ಮೆಲ್ಲನೆ ಬಂದು

ಯಾರೋ ಮೆಲ್ಲನೆ ಬಂದು
ಮಲಗಿಸಿ ಕನಸನು
ನನ್ನನ್ನೆಬ್ಬಿಸಿ ಹೇಳುವನು
ನಾನು ಬರುವೆಯೆಂದು
ಯಾರು ಬರುವರು
ಇದು ನನಗೇಗೆ ತಿಳಿಯುವುದು
ಯಾರೋ ಮೆಲ್ಲನೆ....

ದೂರ ಎಲ್ಲಿಯೋ
ಕೋಗಿಲೆ ನುಡಿಯುವುದು
ನಲ್ಲ ಬಾ
ಪರಿಸರವಾಗಿದೆ ಚಿತ್ತಾಕರ್ಷಕ
ಹಂಬಲದಲ್ಲಿದ್ದಾರೆ ಯಾರೋ ಇಲ್ಲಿ
ಬಂದೆ ಬಿಡು
ಏನಾದರೂ ನೆಪ ಹೂಡಿ ತಕ್ಕ
ಯಾವುದು ನೆಪ
ಎಂತಹ ನೆಪ
ಎಷ್ಟು ಕಠಿಣ ಇದನ್ನು ಹೇಳುವುದು
ನೋಡು ಪುನಃ ಯಾರೋ ಇಷ್ಟವಾಗುತ್ತಿದ್ದಾರೆ
ಯಾರು ಇಷ್ಟವಾಗುತ್ತಿದ್ದಾರೆ
ಇದು ನನಗೇಗೆ ತಿಳಿಯುವುದು
ಯಾರೋ ಮೆಲ್ಲನೆ....ಇನಿಯ
ಯಾರೋ ಮೆಲ್ಲನೆ....

ತೃಷೆಯಲಿ ಹೃದಯದ ಆಗಸ
ಪ್ರೀತಿಯ ಜ್ವಾಲೆ ಜ್ವಲಿಸುವುದು
ಕಣ್ರೆಪ್ಪೆಯಲಿ ಬಂಧಿಯಾಗಿದೆ ವರ್ಷ
ತುಟಿ ತನಕ ಮಾತೇಗೆ ಬರುವುದು
ಮಾತು ಬರುತ ಬರುತ
ರಾತ್ರಿಯಾಯಿತು
ಒಲವ ಮೆರವಣಿಗೆ
ಜೊತೆಗೆ ಬಿಟ್ಟೋಯಿತು
ಮಾತು ಬರುತ ಬರುತ
ರಾತ್ರಿಯಾಯಿತು
ಇಷ್ಟೊಂದು ರಾತ್ರಿಯಲಿ ನಾನೇಗೆ ಹಾಡಲಿ
ನೋಡಿ ಆದರೂ ಯಾರೋ ಹಾಡುತ್ತಿದ್ದಾರೆ
ಯಾರು ಹಾಡುತ್ತಿದ್ದಾರೆ 
ಇದು ನನಗೇಗೆ ತಿಳಿಯುವುದು
ಯಾರೋ ಮೆಲ್ಲನೆ....ಇನಿಯ
ಯಾರೋ ಮೆಲ್ಲನೆ....

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಗೀತ ದತ್ತ್
ಸಂಗೀತ : ಕಾನು ರಾಯ್
ಚಿತ್ರ : ಅನುಭವ್
(koyi chupke se aake, sapne sulake mujhko jagake
bole kee mai aa raha hu, kaun aaye yeh mai kaise janu) - (2)
koyi chupke se aake...........

dur kahee bole papiha, piya aa mausam suhana
tarse hai koyi yaha, aa bhi ja karke bahana
kaun sa bahana, kaisa bahana, kitna mushkil hai yeh batana
dekho phir bhi koyi bha raha hai, kaun bhaye yeh mai kaise janu
koyi chupke se aake, sapne sulake mujhko jagake
bole kee mai aa raha hu, kaun aaye yeh mai kaise janu
koyi chupke se aake...........

pyasa hai dil kaa gagan, pyar kee agni jalaye
palko me qaid hai sawan, hontho tak bat naa aaye
bat aate aate rat ho gayi
chaho kee barat chhod gayi sath, bat aate aate ho gayi rat
itani rat gaye kaise gau he he he he..........
dekho phir bhi koyi ga raha hai, kaun gaye yeh mai kaise janu
koyi chupke se aake, sapne sulake mujhko jagake
bole kee mai aa raha hu, kaun aaye yeh mai kaise janu
he heh he he........
 http://www.youtube.com/watch?v=tR-2xq6q5KA

ಮರಣ ಬಂದಾಗಲೇ

ಹೇಳುವುದಿಲ್ಲ ಯಾರಿಗೂ ಏನನ್ನೂ
ಏಕಾಂತದಲಿ ಅಳುವೆ ನಾನು 

ನನ್ನಂತ ತಾಣ ಅರಿಯದ ಪಯಣಿಗರ ಏನು 
ಯಾರ ಜೊತೆಯಾದರೂ ಸಾಗುವೆ ನಾನು 

ನಾನಂತೂ ಕಳೆದುಕೊಂಡೆ ಮಾನವನ್ನು 
ಆದರೆ ನಿನ್ನ ಗೋಪ್ಯ ಕಾಪಾಡುವೆ ನಾನು

ಜೀವನ ಸಾಗರ ವಿಷ ತುಂಬಿದ
ಯಾವಾಗ ತನಕ ಬೆರೆಸಲಿ ಅಮೃತವನ್ನು

ನಿದ್ರೆ ಬರುವುದು ಹೇಗೆ ಇನ್ನು
ಮರಣ ಬಂದಾಗಲೇ ಮಲಗುವೆ ನಾನಿನ್ನು

"ಫರಜ್"
ಅನುವಾದ : ಹರೀಶ್ ಶೆಟ್ಟಿ,ಶಿರ್ವ
Kuch na kisi se bolenge
tanhaai mein ro lenge

Hum berahbaron ka kya
saath kisi ke ho lenge

Khud to huey rusvaa
lekin terey bhed na kholenge

Jevan zahar bhara saagar
kab tak amrit gholenge

Nind to kya Aayegi 'Faraz'
maut aaey to so lenge ...!

Sunday, April 20, 2014

ನೀನು ಇನ್ನೊಬ್ಬನನ್ನು ಏಕೆ ವರಿಸಿದೆ

ನಿನಗಿಂದು ಹೇಳಬೇಕಾಗುತ್ತದೆ
ನಿನ್ನ ಅಸಹಾಯಕತೆಯ ಕಾರಣ
ಜೀವನ ಪೂರ್ತಿ ಜೊತೆ ನೀಡಬೇಕಾಗಿತ್ತು
ಮಾಡಿದೆ ದೂರ ಇಡಿ ಜೀವಮಾನ

ಎಷ್ಟು ದೃಡವಾಗಿತ್ತು ನಿನ್ನ ತೀರ್ಮಾನ
ಸ್ವಲ್ಪ ಸ್ಮರಿಸು ನಿನ್ನ ನಿಷ್ಠೆಯ ವಚನ
ನೀನು ಹೇಳಿದ್ದೆ ಇಟ್ಟು ಆಣೆ
ಸದಾ ನಿಭಾಯಿಸುವೆ ಪ್ರೀತಿಯ ಆಚರಣೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ
ನೀನು ನನ್ನದಾಗಿದೆ ಜೀವದ ಗಂಟಾಗಿದೆ
ನಿನಗಾಗಿ ನಾನು ಜಗತ್ತು ಶೃಂಗಾರಿಸಿದೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ

ಪ್ರೀತಿಯ ಮೋಜು ನೀನು ಬಯಸಲಿಲ್ಲ
ನೀನು ಬಯಸಿದೆ ಬೆಳ್ಳಿ ಬಂಗಾರವೆಲ್ಲ
ನೀನು ಕಣ್ಣೀರು ಯಾರದ್ದು ಏಕೆ ವಹಿಸುವೆ
ನಿನಗೆ ಧರಿಸಲ್ಲಿಕ್ಕಿತ್ತು ಮುತ್ತಿನ ಮಾಲೆ
ಹೋ....ನಿನಗೆ  ಧರಿಸಲ್ಲಿಕ್ಕಿತ್ತು ಮುತ್ತಿನ ಮಾಲೆ
ಹೆಜ್ಜೆ ಹೆಜ್ಜೆಯಲಿ ವಿಶ್ವಾಸದ ಬದಲು
ವಂಚಿಸುವುದು ನಿನಗೆ ಶಂಕೆ
ಬೆಂಕಿಯ ಜ್ವಾಲೆಯಲಿ ಆವರಿಸಿದೆ
ನಿನ್ನ ಈ ಸ್ವರ್ಣದ ಲಂಕೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ
ನೀನು ನನ್ನದಾಗಿದೆ ಜೀವದ ಗಂಟಾಗಿದೆ
ನಿನಗಾಗಿ ನಾನು ಜಗತ್ತು ಶೃಂಗಾರಿಸಿದೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ

ನಿನ್ನ ಈ ಸುಖದ ವಸ್ತುಗಳೆಲ್ಲ
ನನ್ನ ನೆನಪನ್ನು ಅಳಿಸಬಹುದ
ನನ್ನ ನೆನಪು ನಿನ್ನ ನಿದ್ರೆ ಅಪಹರಿಸಿದಾಗ
ಅದೇನು ನಿನಗೆ ನಿದ್ರಿಸಲು ಬಿಡಬಹುದ
ಹೋ....ನಿನಗೆ ನಿದ್ರಿಸಲು ಬಿಡಬಹುದ
ವಸ್ತುಗಳಲ್ಲಿ ಸುಖ ಇರುವುದಿಲ್ಲ
ಸುಖ ಜೀವದ ಒಂದು ಕೌಶಲ
ನನ್ನಿಂದಲೇ ನೀನು ಛಲ ಮಾಡಿದೆ
ನಿನ್ನನ್ನೇ ನೀನು ವಂಚಿಸಿದೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ
ನೀನು ನನ್ನದಾಗಿದೆ ಜೀವದ ಗಂಟಾಗಿದೆ
ನಿನಗಾಗಿ ನಾನು ಜಗತ್ತು ಶೃಂಗಾರಿಸಿದೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ

ನಿನಗಾಗಿ ಸದಾ ಬಯಸಿದೆ ವಸಂತ ನಾನು
ನಿನಗಾಗಿ ತೊರೆದೆ ಪ್ರಾಣದ ಹಂಗು ನಾನು
ಎರಡು ದಿನವೂ ನೀನು ಕಾಯಲಿಲ್ಲ ನನ್ನನ್ನು
ಬಿಟ್ಟು ಹೋದೆ ಏಕಾಂತದಲಿ ನನ್ನನ್ನು  
ಹೋ....ಬಿಟ್ಟು ಹೋದೆ ಏಕಾಂತದಲಿ ನನ್ನನ್ನು  
ನಿನ್ನ ಅಗಲಿಕೆ ನನ್ನ ಚಿತೆಯಾಗಿದೆ
ದುಃಖದ ಚಿತೆಯಲಿ ನಾನು ಜ್ವಲಿಸುತ್ತಿರುವೇನು
ಮನಸ್ಸು ನನ್ನ ಉರಿಯುತ್ತಿದೆ ದಹನಭೂಮಿಯಂತೆ
ಬೆಂಬೂದಿಯ ಮೇಲೆ ನಾನು ನಡೆಯುತ್ತಿದ್ದೇನೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ
ನೀನು ನನ್ನದಾಗಿದೆ ಜೀವದ ಗಂಟಾಗಿದೆ
ನಿನಗಾಗಿ ನಾನು ಜಗತ್ತು ಶೃಂಗಾರಿಸಿದೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ

ಮೂಲ : ಶೇವನ್ ರಿಜ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಓ ಪಿ ನೈಯ್ಯರ್
ಚಿತ್ರ : ಏಕ ಬಾರ್ ಮುಸ್ಕುರಾ ದೋ

Tujhko Aaj Batana Hoga
Kya Thi Woh Majboori
Saath Umra-Bhar Ka Dena Tha
Dedi Umra-Bhar Ki Doori

Kitne Atal The Tere Iraade
Yaad To Kar Tu Wafa Ke Vaade
Toone Kaha Tha Khaakar Kasmein
Sada Nibhaenge Pyar Ki Rasmein
Tu Auron Ki Kyon Ho Gayi
Tu Hamaari Thi Jaan Se Pyaari Thi
Tere Liye Meine Duniya Savaari Thi
Tu Auron Ki Kyon Ho Gayi

Pyar Ki Masti Toone Na Chahi
Toone To Chaha Chandi Ka Pyaala
Aasoon Kisike Kya Tu Pehenti
Tujhko Pehen Thi Moti Ki Mala
Ho Tujhko Pehen Thi Moti Ki Mala
Pag Pag Par Vishwaas Ke Badle
Chhala Karegi Tujhko Shanka
Aag Ki Lapton Mein Lipti Hai
Yeh Teri Sone Ki Lanka
Tu Auron Ki Kyon Ho Gayi
Tu Hamaari Thi Jaan Se Pyaari Thi
Tere Liye Meine Duniya Savaari Thi
Tu Auron Ki Kyon Ho Gayi

Kya Ye Tere Sukh Ke Saadan
Meri Yaad Ko Bhula Sakenge
Meri Yaad Jab Neend Udha Degi
Kya Ye Tujhko Sula Sakenge
Ho Kya Ye Tujhko Sula Sakenge
Saadan Mein Sukh Hota Nahin Hai
Sukh Jeevan Ki Ek Kala Hai
Mujhse Hi Chhal Kiya Na Toone
Apne Ko Toone Aap Chhala Hai
Tu Auron Ki Kyon Ho Gayi
Tu Hamari Thi Jaan Se Pyaari Thi
Tere Liye Meine Duniya Savaari Thi
Tu Auron Ki Kyon Ho Gayi

Tere Liye Mein Laya Baharein
Tere Liye Mein Jaan Pe Khela
Do Din Toone Bhi Raah Na Dekhi
Chhod Ke Chal Di Mujhe Akela
Ho Chhod Ke Chal Di Mujhe Akela
Teri Judaai Meri Chitaah Hai
Gham Ki Chitaah Mein Mein Jal Raha Hoon
Man Mera Deh-Ke Marghat Jaisa
Angaaron Pe Mein Chal Rahan Hoon
Tu Auron Ki Kyon Ho Gayi
Tu Hamaari Thi Jaan Se Pyaari Thi
Tere Liye Meine Duniya Savaari Thi
Tu Auron Ki Kyon Ho Gayi
http://www.youtube.com/watch?v=BOWJs00FHR0

ಅಂತರ

ಗೆಳತಿ 
ಸಂಬಂಧದಲ್ಲಿ
ಒಂದು ಸೀಮಿತ ಅಂತರವಿದ್ದರೆ 
ಒಳ್ಳೆಯದು ಅನಿಸುತ್ತದೆ 
ಆದರೆ ಅಂತರ ವ್ಯಾಪಕವಾದಂತೆ
ಏನೋ ತಪ್ಪಾಗಿರಬಹುದೆಂದು ಅನಿಸುತ್ತದೆ 
ಆ ತಪ್ಪನ್ನು ಹುಡುಕುವುದಕ್ಕಿಂತ
ನೇರ ಕೇಳುವುದೇ ಸರಿ ಅನಿಸುತ್ತದೆ 

by ಹರೀಶ್ ಶೆಟ್ಟಿ, ಶಿರ್ವ

ಸ್ನೇಹ ನಿಷ್ಠೆ

ಗೆಳತಿ 
ಅದೇಕೋ ಸಂಶಯ ಮೂಡುತ್ತಿದೆ 
ನಿನ್ನ ಸ್ನೇಹ ನಿಷ್ಠೆಯ ಮೇಲೆ 
ಸುಖದಲ್ಲೂ ನೀನಿಲ್ಲ 
ದುಃಖದಲ್ಲೂ ನೀನಿಲ್ಲ 
ಮನಸ್ಸಲ್ಲಿ ಅನೇಕ ಪ್ರಶ್ನೆಗಳೆಲ್ಲ

by ಹರೀಶ್ ಶೆಟ್ಟಿ, ಶಿರ್ವ

Wednesday, April 16, 2014

ಎರಡು ಕಂಗಳು ಮತ್ತು ಕತೆವೊಂದು

ಎರಡು ಕಂಗಳು ಮತ್ತು ಕತೆವೊಂದು
ಸ್ವಲ್ಪವೇ ಮುಗಿಲು
ಸ್ವಲ್ಪವೇ ನೀರು
ಮತ್ತು ಕತೆವೊಂದು

ಸಣ್ಣದು ಎರಡು ಝರಿಯಲಿ
ಅದು ಹರಿಯುತ್ತಿರುತ್ತದೆ-೨
ಯಾರು ಕೇಳಲಿ ಕೇಳದಿರಲಿ
ಹೇಳುತ್ತಿರುತ್ತದೆ
ಕೆಲವೊಂದನ್ನು ಬರೆದು
ಕೆಲವೊಂದನ್ನು ನುಡಿದು
ಸ್ವಲ್ಪವೇ ಮುಗಿಲು
ಸ್ವಲ್ಪವೇ ನೀರು
ಮತ್ತು ಕತೆವೊಂದು
ಎರಡು ಕಂಗಳು ಮತ್ತು ಕತೆವೊಂದು

ಹಲವೊಂದು ತಿಳಿದದ್ದು
ಹಲವೊಂದು ಹೊಸತು-೨
ಎಲ್ಲಿ ಕಣ್ಣೀರು ನಿಲ್ಲುತ್ತದೋ
ಅಲ್ಲೇ ಪೂರ್ಣವಾಗುವುದು
ಹೊಸತಾಗಿದೆ ಆದರೂ ಹಳೆದು
ಸ್ವಲ್ಪವೇ ಮುಗಿಲು
ಸ್ವಲ್ಪವೇ ನೀರು
ಮತ್ತು ಕತೆವೊಂದು
ಎರಡು ಕಂಗಳು ಮತ್ತು ಕತೆವೊಂದು

ಒಂದು ಮುಗಿದರೆ
ಇನ್ನೊಂದು ನೆನಪಾಗುತ್ತದೆ
ತುಟಿಯಲಿ ಮತ್ತೆ ಮರೆತ
ಮಾತು ಬರುತ್ತದೆ
ಎರಡು ಕಂಗಳ ಕತೆ ಇದು
ಸ್ವಲ್ಪವೇ ಮುಗಿಲು
ಸ್ವಲ್ಪವೇ ನೀರು
ಮತ್ತು ಕತೆವೊಂದು
ಎರಡು ಕಂಗಳು ಮತ್ತು ಕತೆವೊಂದು

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಆರತಿ ಮುಖರ್ಜೀ
ಸಂಗೀತ : ಆರ್ . ಡೀ . ಬರ್ಮನ್
ಚಿತ್ರ : ಮಾಸೂಮ್

do naina aur ek kahanee
thoda sa badal, thoda sa panee aur yek kahanee

chhotee see do jilon me, woh bahatee rahatee hai
koi sune ya na sune kahatee rahatee hai
kuchh likh ke aur kuchh jubanee

thodee sai hain janee hui, thodee see nayee
jaha ruke aansu, wahee puree ho gayee
hai toh nayee fir bhee hain puranee

yek khatm ho toh, dusaree yad aa jatee hai
hothhon pe fir bhulee hui, bat aa jatee hai
do naino kee hain yeh kahanee
http://www.youtube.com/watch?v=glWOVwU3uss#aid=P9QQ7E3B0MQ

ಕೆಲವೊಮ್ಮೆ ಏನೂ ಬೇಡವೆನಿಸುತ್ತದೆ

ಹೌದು
ಕೆಲವೊಮ್ಮೆ ಏನೂ ಬೇಡವೆನಿಸುತ್ತದೆ
ಅದೆಷ್ಟೋ ಅಡಚಣೆ 
ಅದೆಷ್ಟೋ ಕಿರಿಕಿರಿ 
ಪಯಣಿಗರ ಓಟ 
ವಾಹನಗಳ ಅರ್ಭಟ 
ಪಯಣ ದೀರ್ಘ
ಕಲ್ಲು ಮುಳ್ಳಿನ ಮಾರ್ಗ 
ಸಾಕೆನಿಸುತ್ತದೆ

ಆದರೆ ಬದುಕು
ಆಶ್ಚರ್ಯ ಭರಿತ
ಇಂದಿನ ಕಣ್ಣೀರೆ
ನಾಳೆಯ ಸುಖದ ಸಂಕೇತ
ಪ್ರಸ್ತುತ ಕಷ್ಟದ ಬೆವರು
ಮುಂದಿನ ಸುದಿನದ
ಸುಗಂಧಿತ ಪನ್ನೀರು
ಸತತ ಪ್ರಯತ್ನವೇ ಜೀವನ
ನಿಲ್ಲುವುದು ಸೋಲಿನ ಲಕ್ಷಣ

ಆದರೆ, ಹೌದು
ಕೆಲವೊಮ್ಮೆ ಏನೂ ಬೇಡವೆನಿಸುತ್ತದೆ

by ಹರೀಶ್ ಶೆಟ್ಟಿ,ಶಿರ್ವ

Monday, April 14, 2014

ನಾಜೂಕು ದಾರ

ಎಷ್ಟೊಂದು
ನಾಜೂಕು ದಾರದಲಿ
ಪೋಣಿಸಿದೆ ನೀನು
ಈ ಮಲ್ಲಿಗೆ ಹೂಗಳನ್ನು
ನನ್ನಂತೆ ಗಟ್ಟಿಗನಲ್ಲ ಇದು
ಬಿದ್ದರೆ
ಚೂರು ಚೂರಾಗಬಹುದು

by ಹರೀಶ್ ಶೆಟ್ಟಿ,ಶಿರ್ವ 

ಸ್ಪರ್ಧೆ

ಉತ್ತುಂಗದಲ್ಲಿ ಸಿಗದ ಮಾನ
ಧರೆಯಲಿ ಪಡೆದೆ

ಶಿಖರದ ಅನುಭವ  ಪಡೆಯಲೆಂದು  
ಒಮ್ಮೆ ಹತ್ತಿದೆ ಪರ್ವತವನ್ನು
ದೂಡಿ ಬೀಳಿಸಿದರು
ಮಿಥ್ಯ ಸ್ಪರ್ಧೆ

ಬೇಡವಾಗಿತ್ತು ಆ ಅನುಭವ
ಆದರೆ ಮನಸ್ಸು ಚಂಚಲ
ಕಹಿಯಾದರೇನು
ಹೊಸ ಪಾಠ

ಮಣ್ಣು ಬಿಡದು ಜೊತೆ
ಪುನಃ ಸ್ವ ಸ್ಥಾನಕ್ಕೆ
ಮನಸ್ಸು ಪ್ರಸನ್ನ
ಇಲ್ಲೇ ಜೀವನ

by ಹರೀಶ್ ಶೆಟ್ಟಿ,ಶಿರ್ವ

ಸುಳ್ಳು ಸುಳ್ಳು

ಸುಳ್ಳು ಸುಳ್ಳು
ನಲ್ಲ ಬರುತ್ತೇನೆಂದ,
ಭಾದ್ರದಲ್ಲೆಂದ,
ಕೆಲವೊಮ್ಮೆ ವರ್ಷಋತುವಿನಲ್ಲೆಂದ,
ಸುಳ್ಳು ಸುಳ್ಳು
ನಲ್ಲ ಬರುತ್ತೇನೆಂದ,
ಭಾದ್ರದಲ್ಲೆಂದ,
ಕೆಲವೊಮ್ಮೆ ವರ್ಷಋತುವಿನಲ್ಲೆಂದ..

ಮೇಘಗಳ ಮೇಲೆ ನಡೆಯಲು
ಬಯಸುವೆ ಇನಿಯ,
ಮೇಘಗಳ ಮೇಲೆ ನಡೆಯಲು
ಬಯಸುವೆ ಇನಿಯ,
ಬಾ ನನ್ನ ಉಯ್ಯಾಲೆಯನ್ನು
ತೂಗು ಇನಿಯ,
ವನ ವನದಲಿ ಕೋಗಿಲೆ
ಕೂಹು ಕೂಹು ಹಾಡುತ್ತಿದೆ ಚಂದ,
ಸುಳ್ಳು ಸುಳ್ಳು
ನಲ್ಲ ಬರುತ್ತೇನೆಂದ,
ಭಾದ್ರದಲ್ಲೆಂದ,
ಕೆಲವೊಮ್ಮೆ ವರ್ಷಋತುವಿನಲ್ಲೆಂದ..

ರೋಗ ಇದೆಂತಹ
ಸೋಕಿತು ಎನಗೆ,
ದರ್ಪಣದಲಿ ನೋಡಿದರೆ
ನೋಡುವೆ ನಿನಗೆ,
ಮನಸ್ಸು ಚಂಚಲ
ನನ್ನಿಂದ ಮಾಡದಿರಲಿ ಛಲ,
ಮುಗ್ಧೆ ಎನ್ನುವರು
ಕೆಲವೊಮ್ಮೆ ಮರುಳೆಂದು ಎನಗೆ,
ಶ್ಯಾಮಲಾ ನಿನ್ನ ಕಂಗಳನ್ನು ನೆನಪಿಸುವೆ
ದರ್ಪಣ ನೋಡಿ ಪದೇ ಪದೇ ಕಾಡಿಗೆ ಹಚ್ಚುವೆ,
ಮನಸ್ಸು ಪ್ರೇಮಲ
ಯಾಕೆ ಕೂಹು ಕೂಹು ಎನ್ನುತ್ತಿದೆ ಸದಾ,
ಸುಳ್ಳು ಸುಳ್ಳು
ನಲ್ಲ ಬರುತ್ತೇನೆಂದ,
ಭಾದ್ರದಲ್ಲೆಂದ,
ಕೆಲವೊಮ್ಮೆ ವರ್ಷಋತುವಿನಲ್ಲೆಂದ....

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಭೂಪೇನ್ ಹಜಾರಿಕ
ಚಿತ್ರ :ರುದಾಲಿ

jhuthee muthee mitava aavan bole
bhaado bole kabhee saavan bole
jhuthee muthee mitava aavan bole
bhaado bole kabhee saavan bole

baadalo pe chalane ko chaahu piya
baadalo pe chalane ko chaahu piya
aao meraa jhulana jhulaao piya
ban ban papiha pihu bole
jhuthee muthee mitava aavan bole
bhaado bole kabhee saavan bole

rog yeh kaisa laaga mohe,
aarasee uthaau dekhu tohe
mann chanchal mose chhal naa kare
baanvaree bole kabhee pagalee bole
kaaree toree akhiya yaad karu
aarasee me baar baar kajar bharu
mann mitava kahe pihu bole
jhuthee muthee mitava aavan bole
bhaado bole kabhee saavan bole
http://www.youtube.com/watch?v=NbeCiUh7vdg#aid=P9ipOl1FJio

Sunday, April 13, 2014

ನಲ್ಲ ಮೆಲ್ಲ ಮೆಲ್ಲ

ನಲ್ಲ ಮೆಲ್ಲ ಮೆಲ್ಲ
ವಿರಹದ ರಾತ್ರಿಯ ಜ್ವಾಲನ
ನಲ್ಲ ಮೆಲ್ಲ ಮೆಲ್ಲ
ನಲ್ಲ ಮೆಲ್ಲ ಮೆಲ್ಲ
ವಿರಹದ ರಾತ್ರಿಯ ಜ್ವಾಲನ
ನಲ್ಲ ಮೆಲ್ಲ ಮೆಲ್ಲ
ಇನಿಯ ಮೆಲ್ಲ ಮೆಲ್ಲ

ಇದೊಂದು ಬದುಕೇ
ಇದೊಂದು ಬದುಕೇ
ಇದೊಂದು ಮರಣವೇ
ನಲ್ಲ ಮೆಲ್ಲ ಮೆಲ್ಲ
ವಿರಹದ ರಾತ್ರಿಯ ಜ್ವಾಲನ
ನಲ್ಲ ಮೆಲ್ಲ ಮೆಲ್ಲ
ಇನಿಯ ಮೆಲ್ಲ ಮೆಲ್ಲ

ಮುರಿದ ಬಳೆಗಳಿಂದ
ಜೋಡಿಸುವೆ ಈ ಕೈಗಳನ್ನು ನಾನು
ಹಿಂದೆ ಆ ಗಲ್ಲಿಯಲಿ ಅದೇನನ್ನು
ಬಿಟ್ಟು ಬಂದೆ ನಾನು
ಕಳೆದೋದ ಗಲ್ಲಿಯಲಿ
ಕಳೆದೋದ ಗಲ್ಲಿಯಲಿ
ಹಾದಿಹೋಗು ಪುನಃ

ನಲ್ಲ ಮೆಲ್ಲ ಮೆಲ್ಲ
ಇನಿಯ ಮೆಲ್ಲ ಮೆಲ್ಲ
ನಲ್ಲ ಮೆಲ್ಲ ಮೆಲ್ಲ
ವಿರಹದ ರಾತ್ರಿಯ ಜ್ವಾಲನ
ನಲ್ಲ ಮೆಲ್ಲ ಮೆಲ್ಲ
ಇನಿಯ ಮೆಲ್ಲ ಮೆಲ್ಲ

ಕಾಲಲಿಲ್ಲ ನೆರಳು ಯಾವುದೇ
ತಲೆಯಲ್ಲಿಲ್ಲ ಛಾಯೆ
ನನ್ನೊಂದಿಗೆ ಹೋಗುವುದಿಲ್ಲ
ನನ್ನ ಪ್ರತಿಬಿಂಬವೆ
ಹೊರಗೆ ಬೆಳಕಿದೆ
ಹೊರಗೆ ಬೆಳಕಿದೆ
ಒಳಗೆ ನಿರ್ಜನ

ನಲ್ಲ ಮೆಲ್ಲ ಮೆಲ್ಲ
ಇನಿಯ ಮೆಲ್ಲ ಮೆಲ್ಲ
ನಲ್ಲ ಮೆಲ್ಲ ಮೆಲ್ಲ
ವಿರಹದ ರಾತ್ರಿಯ ಜ್ವಾಲನ
ನಲ್ಲ ಮೆಲ್ಲ ಮೆಲ್ಲ
ಇನಿಯ ಮೆಲ್ಲ ಮೆಲ್ಲ

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಹೃದಯನಾಥ್ ಮಂಗೇಶ್ಕರ್
ಚಿತ್ರ : ಲೇಕಿನ್

यारा सिली सिली, बिरहा के रात का जलना
ये भी कोइ जीना हैं, ये भी कोइ मरना

टूटी हुयी चुडीयों से, जोडू ये कलाई मैं
पिछली गली में जाने, क्या छोड़ आयी मैं
बीती हुयी गलियों से, फिर से गुजरना

पैरों में ना साया कोइ, सर पे ना साई रे
मेरे साथ जाए ना, मेरी परछाई रे
बाहर उजाला हैं, अन्दर विराना
http://www.youtube.com/watch?v=Jz7nJErmsbE&feature=kp

ಅಸ್ಪೃಶ್ಯತೆ

ಕೆಲಸವೆಲ್ಲ ಹೊರಗೆ
ನನ್ನಿಂದ ದೂರ ದೂರ ಇರುತ್ತಾಳೆ
ಆ ಮನೆ ಒಡತಿ
ದೂರದಿಂದಲೇ ನಮಸ್ಕಾರ
ಅಸ್ಪೃಶ್ಯ ಅಲ್ಲವೇ ನಾನು
ನನಗೆ ಒಳ ಪ್ರವೇಶವಿಲ್ಲ

ಅವರ ಹೊಲಸುಗಳನ್ನೆಲ್ಲ ತೆಗೆದು
ಅವರ ಬಟ್ಟೆಗಳನ್ನೆಲ್ಲ ಒಗೆದು
ಅವರ ಪಾತ್ರೆಗಳನ್ನೆಲ್ಲ ತೊಳೆದು
ಶುಚಿಗೊಳಿಸಬೇಕು ನಾನು
ಆದರೆ ಅವರ ಬಾವಿಯ
ನೀರು ಕುಡಿಯುವ ಹಕ್ಕು ನನಗಿಲ್ಲ

ಕೂಲಿ ಕೊಡುವಾಗ
ನನ್ನ ಕೈ ಅವಳ ಕೈಗೆ
ಎಲ್ಲೊ ಸ್ಪರ್ಶಿಸುವುದೋ
ಎಂಬ ಹೆದರಿಕೆ ಅವಳಿಗೆ
ದೂರದಿಂದಲೇ ಹಣ ಪಾವತಿ
ನನ್ನ ಶ್ರಮಕ್ಕೆ ಯಾವುದೇ ಮರ್ಯಾದೆ ಇಲ್ಲ

ಚಹಾ ತೆಂಗಿನ ಚಿಪ್ಪಿನಲ್ಲಿ
ತಿಂಡಿ ಬಾಳೆ ಎಲೆಯಲಿ
ಅದೂ ತುಂಬಾ ಅಂತರದಿಂದ ಕೊಡುವ ಕ್ರಮ
ಅದನ್ನು ಕೈಯಿಂದ
ಸ್ವೀಕರಿಸುವ ಹಾಗಿಲ್ಲ
ಬಿಡಿ ನನ್ನ ಹೊಟ್ಟೆಗೆ ಎಂತೋ ಇದೆಲ್ಲ ತಿಳಿದಿಲ್ಲ

ಆದರೆ ಆಶ್ಚರ್ಯ
ಮನೆ ಒಡೆಯನ ಕಣ್ಣು
ಯಾವಾಗಲೂ ನನ್ನ ಮೇಲೆಯೇ
ನನ್ನನ್ನು ವಿನಃ ಕಾರಣ ಸ್ಪರ್ಶಿಸುವುದೆಂದರೆ
ಮೋಜು ಅವನಿಗೆ
ಕಾಮುಕನಿಗೆ ಅಸ್ಪೃಶ್ಯತೆಯ ಗೋಚರವಿಲ್ಲ

ನನ್ನ ದೇಹವನ್ನು
ನುಸುಳಿ ನೆಕ್ಕುವಾಗ
ಈ ಕಾಮುಕ ತನ್ನ ಧರ್ಮ ಜಾತಿ
ಎಲ್ಲ ಮರೆತು ಹೋಗುವನು
ಕಾಮ ತೀರಿದ ನಂತರ
ನನ್ನ ಗುರುತು ಅವನಿಗಿಲ್ಲ

by ಹರೀಶ್ ಶೆಟ್ಟಿ,ಶಿರ್ವ

Saturday, April 12, 2014

ಓ ನಾವಿಕನೆ

ಓ ನಾವಿಕನೆ
ಓ ನಾವಿಕನೆ
ನಮ್ಮ ಕಿನಾರೆ
ನದಿಗಳ ಧಾರೆಯಲಿ
ಓ ನಾವಿಕನೆ
ನಮ್ಮ ಕಿನಾರೆ
ನದಿಗಳ ಧಾರೆಯಲಿ
ಓ ನಾವಿಕನೆ

ಕಿನಾರೆಯಲ್ಲಿ ಹರಿಯುತ್ತಿದ್ದದನ್ನು
ಎಂದೋ ಕೇಳಿರಬಹುದು ಎಲ್ಲಿಯೋ
ಓ ಓ
ಕಾಗದದ ದೋಣಿಗಳ
ಎಲ್ಲಿಯೂ ಕಿನಾರೆ ಇರುವುದಿಲ್ಲ
ಓ ನಾವಿಕನೆ
ನಾವಿಕನೆ
ಯಾವುದೇ ಕಿನಾರೆ
ಯಾವ ಕಿನಾರೆಯಿಂದ ಸೇರುತ್ತದೋ ಅದೇ
ನಮ್ಮ ಕಿನಾರೆಯಾಗಿದೆ
ಓ ನಾವಿಕನೆ
ನಮ್ಮ ಕಿನಾರೆ
ನದಿಗಳ ಧಾರೆಯಲಿ
ಓ ನಾವಿಕನೆ

ನೀರಿನಲ್ಲಿ ಹರಿಯುತ್ತಿದೆ
ಹಲವು ಕಿನಾರೆಗಳು ಮುರಿದದ್ದು
ಓ ಓ
ಹಾದಿಯಲಿ ಸೇರಿದೆ ಎಲ್ಲಾ
ಆಸರೆ ಕಳೆದು ಹೋದದ್ದು
ಓ ನಾವಿಕನೆ
ನಾವಿಕನೆ
ವಿಪ್ಪತ್ತಲ್ಲಿ ಸಿಕ್ಕಿದ ಆಸರೆ ಅದೇ
ನಮ್ಮ ಆಸರೆಯಾಗಿದೆ
ಓ ನಾವಿಕನೆ
ನಮ್ಮ ಕಿನಾರೆ
ನದಿಗಳ ಧಾರೆಯಲಿ
ನದಿಗಳ ಧಾರೆಯಲಿ
ನದಿಗಳ ಧಾರೆಯಲಿ

ಮೂಲ :ಗುಲ್ಜಾರ್
ಅನುವಾದ :  ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಕಿಶೋರ್ ಕುಮಾರ್
ಸಂಗೀತ : ಆರ್ . ಡೀ .ಬರ್ಮನ್
ಚಿತ್ರ : ಖುಷ್ಬೂ
o maajhi re,
o maajhi re,
apnaa kinaara,
nadiyaa ki dhaara hai
o maajhi re
apnaa kinaaraa,
nadiyaa ki dhaaraa hai
o maajhi re

saahilon pe bahne waale
kabhi sunaa to hogaa kahin,
o o
ho, kaaghazon ki kashtiyon ka
kahin kinaara hotaa nahin
ho maajhi re
maajhi re
koi kinaaraa
jo kinaare se miley wo,
apnaa kinaaraa hai
o maajhi re
apnaa kinaaraa
nadiyaa ki dhaaraa hai
o maajhi re

paaniyon mein bah rahe hain
kai kinaare toote huye
o o
ho, raaston mein mil gaye hain
sabhi sahaare chhoote huye
ho maajhi re
maajhi re
koi sahaaraa
majhdhaare mein mile jo,
apnaa sahaaraa hai
ho maajhi re
apnaa kinaaraa
nadiyaa ki dhaaraa hai
nadiyaa ki dhaaraa hai
nadiyaa ki dhaaraa hai
http://www.dailymotion.com/video/xv1wax_o-majhi-re-apna-kinara-nadiya-ki-dhaara-hai-the-great-kishore-kumar-rd-burman-gulzar_music

ದಾನವೀರ ಕರ್ಣ


ಕುರುಕ್ಷೇತ್ರದಲ್ಲಿ ಯುದ್ಧ ನಡೆಯುತ್ತಿತ್ತು. ಸೂರ್ಯಾಸ್ತದ ನಂತರ ಎಲ್ಲರು ತಮ್ಮ ತಮ್ಮ ಶಿಬಿರದಲ್ಲಿ ಇದ್ದರು. ಆ ದಿವಸ ಅರ್ಜುನ ಕರ್ಣನನ್ನು ಸೋಲಿಸಿ ತುಂಬಾ ಅಹಂಕಾರದಲ್ಲಿದ್ದ. ಅವನು ತನ್ನ ಶೌರ್ಯದ ಪ್ರಶಂಸೆ ಮಾಡುತ ಕರ್ಣನನ್ನು ತೆಗಳತೊಡಗಿದ. ಇದನ್ನು ನೋಡಿ ಕೃಷ್ಣ "ಪಾರ್ಥ, ಕರ್ಣ ಸೂರ್ಯ ಪುತ್ರ, ಅವನ ಕವಚ ಹಾಗು ಕುಂಡಲ ಪಡೆದ ನಂತರವೇ ನಿನಗೆ ವಿಜಯ ಪಡೆಯಲು ಸಾಧ್ಯವಾಯಿತು ಇಲ್ಲಾದರೆ ಅವನನ್ನು ಪರಾಜಿತ ಮಾಡಲು ಯಾರಿಂದಲೂ ಸಾಧ್ಯವಿರಲಿಲ್ಲ, ವೀರೋಚಿತ ಜೊತೆಗೆ ಅವನು ದೊಡ್ಡ ದಾನವೀರ ಸಹ." ಕರ್ಣನ ದಾನವೀರತದ ಮಾತು ಕೇಳಿ ಅರ್ಜುನ ಕೆಲವು ಉದಾಹರಣೆ ನೀಡಿ ಕರ್ಣನ ಉಪೇಕ್ಷೆ ಮಾಡಲಾರಂಭಿಸಿದ. ಶ್ರೀಕೃಷನಿಗೆ ಅರ್ಜುನನ ಮನಸ್ಥಿತಿ ಅರ್ಥವಾಯಿತು. ಅವರು ಶಾಂತ ಸ್ವರದಲ್ಲಿ ಹೇಳಿದರು "ಪಾರ್ಥ, ಕರ್ಣ ರಣಕ್ಷೇತ್ರದಲ್ಲಿ ಗಾಯಗೊಂಡು ಬಿದ್ದಿದ್ದಾನೆ. ನೀನು ಬೇಕಾದರೆ ಕರ್ಣನ ದಾನವೀರತೆಯ ಪರೀಕ್ಷೆ ತೆಗೆದುಕೊಳ್ಳಬಹುದು." ಅರ್ಜುನ ಶ್ರೀಕೃಷ್ಣನ ಮಾತು ಒಪ್ಪಿದ. 


ಇಬ್ಬರು ಬ್ರಾಹ್ಮಣರ ವೇಷ ಧರಿಸಿ ಕರ್ಣನಲ್ಲಿಗೆ ಬಂದರು. ಗಾಯಗೊಂಡಿದರೂ ಕರ್ಣ ಅವರಿಗೆ ಪ್ರಣಾಮ ಮಾಡಿ ಅವರು ಬರುವ ಉದ್ದೇಶ ಕೇಳಿದ. ಬ್ರಾಹ್ಮಣ ವೇಷದಲ್ಲಿದ ಶ್ರೀಕೃಷ್ಣ " ರಾಜನೇ, ನಿಮ್ಮ ಜಯವಾಗಲಿ,ನಾವು ಇಲ್ಲಿ ದಾನ ಪಡೆಯಲು ಬಂದಿದ್ದೇವೆ. ಕೃಪೆ ಮಾಡಿ ನಮ್ಮ ಇಚ್ಛೆ ಪೂರ್ಣಗೊಳಿಸಿ." ಕರ್ಣ ಸ್ವಲ್ಪ ಲಜ್ಜಿತನಾಗಿ "ಬ್ರಾಹ್ಮಣ ದೇವ, ನಾನು ರಣಕ್ಷೇತ್ರದಲ್ಲಿ ಗಾಯಗೊಂಡು ಬಿದ್ದಿದ್ದೇನೆ, ನನ್ನೆಲ್ಲ ಸೈನಿಕರು ಸಾವನ್ನಪ್ಪಿದ್ದಾರೆ, ಮೃತ್ಯು ನನ್ನನ್ನು ಕಾಯುತ್ತಿದೆ, ಈ ಅವಸ್ಥೆಯಲ್ಲಿ ನಾನು ಏನನ್ನು ನಿಮಗೆ ನೀಡಲಿ."

"ರಾಜನೇ, ಇದರ ಅರ್ಥ ನಾವು ಹೀಗೆಯೇ ಖಾಲಿ ಕೈ ಹೋಗಬೇಕೆಂದೇ? ಆದರೆ ಇದರಿಂದ ನಿಮ್ಮ ಕೀರ್ತಿಗೆ ಹಾನಿಯಾಗುತ್ತದೆ, ವಿಶ್ವ ನಿಮ್ಮನ್ನು ಧರ್ಮವಿಹೀನ ರಾಜನ ರೂಪದಲ್ಲಿ ನೆನಪಿಡುವರು." ಇದನ್ನು ಹೇಳಿ ಅವರು ಹಿಂತಿರುಗಿ ಹೋಗಲಾರಂಭಿಸಿದರು. ಆಗ ಕರ್ಣ ಹೇಳಿದ "ನಿಲ್ಲಿ ಬ್ರಾಹ್ಮಣ ದೇವ, ನನಗೆ ಯಶಸ್ಸು,ಕೀರ್ತಿಯ ಆಸೆ ಇಲ್ಲ, ಆದರೆ ನಾನು ಧರ್ಮದಿಂದ ವಿಮುಖವಾಗಿ ಸಾಯಲು ಬಯಸುವುದಿಲ್ಲ, ನಾನು ನಿಮ್ಮ ಇಚ್ಛೆ ಖಂಡಿತ ಪೂರ್ಣಗೊಳಿಸುವೆ." ಕರ್ಣನ ಎರಡು ಹಲ್ಲು ಚಿನ್ನದ ಇತ್ತು, ಅವನು ಬಳಿ ಬಿದ್ದ ಕಲ್ಲಿನಿಂದ ಆ ಚಿನ್ನದ ಹಲ್ಲನ್ನು ತುಂಡು ಮಾಡಿದ ಹಾಗು ಹೇಳಿದ "ಬ್ರಾಹ್ಮಣ ದೇವ, ನಾನು ಸದಾ ಚಿನ್ನದ ದಾನವೇ ಮಾಡಿದ್ದೇನೆ, ನೀವು ಈ ಚಿನ್ನದ ಹಲ್ಲನ್ನು ಸ್ವೀಕರಿಸಿ." ಶ್ರೀಕೃಷ್ಣ ದಾನ ಅಸ್ವೀಕರಿಸಿ "ರಾಜನೇ, ಈ ಹಲ್ಲುಗಳಲ್ಲಿ ರಕ್ತ ತಾಗಿದೆ ಹಾಗು ಇದನ್ನು ನೀವು ತನ್ನ ಮುಖದಿಂದ ತೆಗೆದಿದರಿಂದ ಇದು ಅಶುದ್ಧವಾಗಿದೆ, ನಾವು ಅಶುದ್ಧ ಸ್ವರ್ಣ ಸ್ವೀಕರಿಸಲಾರೆವು." ಆಗ ಕರ್ಣ ತನ್ನ ದೇಹವನ್ನು ಎಳೆದುಕೊಂಡು ಹೋಗಿ ತನ್ನ ಧನುಸ್ಸು ಇದ್ದಲ್ಲಿ ಹೋದ ಹಾಗು ಬಾಣ ಏರಿಸಿ ಗಂಗೆಯ ಸ್ಮರಣೆ ಮಾಡಿದ ನಂತರ ಬಾಣವನ್ನು ಭೂಮಿಗೆ ಬಿಟ್ಟ. ಭೂಮಿಗೆ ಬಾಣ ತಾಗಿದಂತೆ ಭೂಮಿಯಿಂದ ಗಂಗೆಯ ಜಲಧಾರೆ ಹರಿಯಲಾರಂಭಿಸಿತು, ಕರ್ಣ ಅದರಲ್ಲಿ ಆ ಹಲ್ಲುಗಳನ್ನು ತೊಳೆದು ಅವರಿಗೆ ಕೊಟ್ಟು "ಬ್ರಾಹ್ಮಣ ದೇವ, ಈಗ ಇದು ಶುದ್ಧವಾಗಿದೆ, ದಯಮಾಡಿ ಇದನ್ನು ಸ್ವೀಕರಿಸಿ." 

ಆಗ ಕರ್ಣನ ಮೇಲೆ ಪುಷ್ಪದ ವರ್ಷ ಬೀಳಲಾರಂಭಿಸಿತು ಹಾಗು ದೇವ ಶ್ರೀಕೃಷ್ಣ ಮತ್ತು ಅರ್ಜುನ ತನ್ನ ವಾಸ್ತವಿಕ ರೂಪದಲ್ಲಿ ಪ್ರಕಟವಾದರು. ವಿಸ್ಮಿತಗೊಂಡ ಕರ್ಣ ದೇವ ಶ್ರೀಕೃಷ್ಣನ ಮುಂದೆ ಶ್ರದ್ಧೆಯಿಂದ ಕೈ ಮುಗಿದು "ದೇವ, ನಿಮ್ಮ ದರ್ಶನ ಪಡೆದು ನಾನು ಧನ್ಯನಾದೆ, ನನ್ನ ಎಲ್ಲ ಪಾಪ ನಷ್ಟವಾಯಿತು ಪ್ರಭು, ನೀವು ಭಕ್ತರ ಕ್ಷೇಮ ಬಯಸುವವರು, ನನ್ನ ಮೇಲೆಯೂ ಕೃಪೆ ಮಾಡಿ." ಶ್ರೀಕೃಷ್ಣ ಕರ್ಣನಿಗೆ ಆಶಿರ್ವಾದ ನೀಡಿ ಹೇಳಿದರು "ಕರ್ಣ, ಸೂರ್ಯ, ಚಂದ್ರ, ತಾರೆ, ಪೃಥ್ವಿ ಇದ್ದ ತನಕ ನಿನ್ನ ದಾನವೀರತೆಯ ಗುಣಗಾನ ಮೂರು ಲೋಕದಲ್ಲಿಯೂ ನಡೆಯಲಿದೆ, ವಿಶ್ವದಲ್ಲಿ ನಿನ್ನಂತಹ ಮಹಾನ ದಾನವೀರ ಹುಟ್ಟಲಿಲ್ಲ , ಹುಟ್ಟಲಿಕ್ಕಿಲ್ಲ. ನಿನ್ನ ಈ ಬಾಣ ಗಂಗೆ ಯುಗ ಯುಗ ತನಕ ನಿನ್ನ ಗುಣಗಾನ ಮಾಡುತ್ತಿರುತ್ತದೆ. ಈಗ ನಿನಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಕರ್ಣ ದಾನವೀರತೆ ಹಾಗು ಧರ್ಮನಿಷ್ಠೆ ನೋಡಿ ಅರ್ಜುನ ಸಹ ಅವನ ಮುಂದೆ ಶರಣಾಗತನಾದ.

(ಮಹಾಭಾರತದಿಂದ)
ವ್ಯಾಖ್ಯಾನ : ಹರೀಶ್ ಶೆಟ್ಟಿ, ಶಿರ್ವ

Thursday, April 10, 2014

ಕರ್ಣ

ಮಹಾಭಾರತದ ಯುದ್ಧ ನಿಶ್ಚಿತವಾಗಿತ್ತು, ಇದನ್ನು ಕೇಳಿ ಕುಂತಿ ಚಿಂತಿತಳಾದಳು. ಅವಳಿಗೆ ಕರ್ಣ ಪಾಂಡವರ ಜೊತೆ ಯುದ್ಧ ಮಾಡುವುದು ಇಷ್ಟವಾಗಿರಲಿಲ್ಲ. ಅವಳು ಕರ್ಣನನ್ನು ಭೇಟಿಯಾಗಲು ಅವನಲ್ಲಿ ಹೋದಳು. ಕುಂತಿಯನ್ನು ನೋಡಿ ಕರ್ಣ ಗೌರವದಿಂದ ಎದ್ದು ಅವಳನ್ನು ಸ್ವಾಗತಿಸಿ ಹೇಳಿದ "ನೀವು ಪ್ರಥಮವಾಗಿ ಇಲ್ಲಿ ಬರುತ್ತಿದ್ದಿರಿ, ಈ ರಾಧೇಯನ ಪ್ರಣಾಮ ಸ್ವೀಕರಿಸಿ." ಕರ್ಣನ ಮಾತು ಕೇಳಿ ಕುಂತಿಯ ಮನಸ್ಸಿಗೆ ನೋವಾಯಿತು ಹಾಗು ಅವಳು "ಪುತ್ರ, ನೀನು "ರಾಧೇಯ" ಅಲ್ಲ ನೀನು "ಕೌಂತೇಯ", ನಾನು ನಿನ್ನ ತಾಯಿ ಆದರೆ ಲೋಕಾಚಾರದ ಭಯದಿಂದ ನಾನು ನಿನ್ನ ತ್ಯಾಗ ಮಾಡಿದೆ. ನೀನು ಪಾಂಡವರ ಹಿರಿಯಣ್ಣ, ಅದಕ್ಕೆ ಈ ಯುದ್ಧದಲ್ಲಿ ನೀನು ಕೌರವರ ಜೊತೆ ಅಲ್ಲ ತನ್ನ ಸಹೋದರರ ಜೊತೆ ಇರಬೇಕು. ಅಣ್ಣ ತಮ್ಮಂದಿರ ಮಧ್ಯೆ ಪರಸ್ಪರ ಯುದ್ಧವಾಗುವುದು ನಾನು ಬಯಸುವುದಿಲ್ಲ. ನೀನು ಪಾಂಡವರ ಪಕ್ಷದಲ್ಲಿರಬೇಕೆಂದು ನಾನು ಬಯಸುವೆ. ಹಿರಿಯನಾದ ಕಾರಣ ಪಾಂಡವರ ರಾಜ್ಯದ ಮೇಲೆ ನಿನ್ನ ಅಧಿಕಾರವಿದೆ. ನೀನು ಯುದ್ಧದಲ್ಲಿ ವಿಜಯಿಯಾಗಿ ರಾಜನಾಗಬೇಕೆಂದು ನನ್ನ ಇಚ್ಛೆ."
ಕುಂತಿಯ ಮಾತು ಕೇಳಿ ಕರ್ಣ ಉತ್ತರಿಸಿದ "ಮಾತೆ, ನೀನು ನನ್ನನ್ನು ತ್ಯಜಿಸಿದೆ, ಕ್ಷತ್ರಿಯರ ಉತ್ತಮ ಕುಲದಲ್ಲಿ ನಾನು ಹುಟ್ಟಿ ಸಹ ಎಲ್ಲರಿಂದಲೂ ಸೂತಪುತ್ರ ಎಂದು ಕರೆಸಿಕೊಂಡ ನತದೃಷ್ಟ ನಾನು. ಕ್ಷತ್ರಿಯನಾಗಿಯೂ ಸೂತಪುತ್ರ ಎಂದು ಕರೆಸಿಕೊಂಡಿದಕ್ಕೆ ನನ್ನನ್ನು ದ್ರೋಣಚಾರ್ಯ ಸಹ ತನ್ನ ಶಿಷ್ಯನಾಗಿ ಸ್ವೀಕರಿಸಲಿಲ್ಲ. ಯುವರಾಜ ದುರ್ಯೋಧನ ನನ್ನ ನಿಜವಾದ ಗೆಳೆಯ, ನಾನು ಅವನ ಉಪಕಾರ ಮರೆತು ಕೃತಘ್ನ ಆಗಲಾರೆ. ಆದರೆ ನನ್ನ ಬಳಿ ಬಂದದ್ದು ವ್ಯರ್ಥವಾಗದು ಯಾಕೆಂದರೆ ಇಂದಿನ ತನಕ ಕರ್ಣನಲ್ಲಿಗೆ ಬಂದು ಎಂದೂ ಖಾಲಿ ಕೈ ಯಾರೂ ಹೋಗಲಿಲ್ಲ. ನಾನು ನಿಮಗೆ ವಚನ ನೀಡುತ್ತೇನೆ ನಾನು ಅರ್ಜುನನ ಹೊರತು ನಿಮ್ಮ ಯಾವುದೇ ಪುತ್ರರ ಮೇಲೆ ಶಸ್ತ್ರಾಸ್ತ್ರ ಪ್ರಯೋಗ ಮಾಡಲಾರೆ. ನನ್ನ ಮತ್ತು ಅರ್ಜುನನ ಯುದ್ಧ ಅನಿವಾರ್ಯವಾಗಿದೆ ಹಾಗು ಆ ಯುದ್ಧದಲ್ಲಿ ನಮ್ಮಿಬ್ಬರಲ್ಲಿ ಒಬ್ಬನ ಮೃತ್ಯು ನಿಶ್ಚಿತವಾಗಿದೆ. ನೀವು ಐದು ಪುತ್ರರ ತಾಯಿಯಾಗಿ ಉಳಿಯುವಿರಿ ಎಂಬ ಪ್ರತಿಜ್ಞೆಯನ್ನು ನಾನು ಮಾಡುತ್ತೇನೆ."
ಕರ್ಣನ ಮಾತು ಕೇಳಿ ಕುಂತಿ ಅವನಿಗೆ ಆಶಿರ್ವಾದ ಕೊಟ್ಟು ದುಃಖಿತ ಮನಸ್ಸಿಂದ ಹಿಂತಿರುಗಿದಳು.
(ಮಹಾಭಾರತದಿಂದ)


ವ್ಯಾಖ್ಯಾನ : ಹರೀಶ್ ಶೀಟಿ, ಶಿರ್ವ

Wednesday, April 9, 2014

ಹೊಸ ಬದುಕು

ಅವನು 
ಹೊಸ ಬದುಕಿನ ಕನಸಲಿ 
ಅವಳಿಗಾಗಿ 
ಮಲ್ಲಿಗೆ ಹೂವು
ಕೈಯಲ್ಲಿ ಹಿಡಿದು ಕಾಯುತ್ತಿದ್ದ 
ಅವಳು 
ತನ್ನ ಬಯಕೆಗಳನ್ನೆಲ್ಲ 
ಕಣ್ಣೀರಲ್ಲಿ ಹರಿಸಿ 
ಸಪ್ತಪದಿ ತುಳಿದು 
ಹೊಸ ಬದುಕಿಗೆ ಹೆಜ್ಜೆಯನ್ನಿಡುತ್ತಿದ್ದಳು

by ಹರೀಶ್ ಶೆಟ್ಟಿ,ಶಿರ್ವ

ಕೊನೆಯ ಉಡುಗೊರೆ

ಅವಳು 
ಜಡೆಯಿಂದ 
ಒಣಗಿದ ಮಲ್ಲಿಗೆ ಹೂವನ್ನು
ಕೈಯಿಂದ ತೆಗೆದು 
ಬಿಸಾಡಲು ಹೋದಳು 
ಆದರೆ ಕ್ಷಣಕ್ಕಾಗಿ ನಿಂತಳು 
ಹಿಂತಿರುಗಿ ಬಂದು 
ಅದನ್ನು ಪುಸ್ತಕದ ಮಧ್ಯದಲ್ಲಿಟ್ಟಳು 
ಆ ಹೂವು 
ಅವನ 
ಕೊನೆಯ ಉಡುಗೊರೆಯಾಗಿತ್ತು

by ಹರೀಶ್ ಶೆಟ್ಟಿ,ಶಿರ್ವ

ವಿವಿಧ

ಕಲ್ಲೂ ಕರಗಬಹುದು 
ಆದರೆ ದ್ವೇಷ ಭರಿತ ಹೃದಯ ಕರಗಲಾರದು

-----

ಮುಂದೆ ಹೋದರೆ 
ಹಿಂದೆ ತಿರುಗಿ ನೋಡ ಬೇಡ ಎಂದು ಹೇಳುತ್ತಾರೆ 
ಆದರೆ ಹಿಂದೆ ತಿರುಗಿ ನೋಡ ಬೇಕು 
ತನ್ನ ತಪ್ಪಿಂದ ಕಲಿತುಕೊಳ್ಳಬೇಕು

-----

ರಾಮ ರಾಜ್ಯ ಅಲ್ಲ 
ಹೌದು 
ಆದರೆ ರಾಮ ಇಂದು ಇದ್ದಾನೆ 
ಪ್ರತಿಯೊಂದು ಮುಗ್ದ ಹೃದಯದಲ್ಲಿ

-----

ಪ್ರತಿಯೊಂದು 
ಪತಿವ್ರತೆ ಸ್ಟ್ರಿಯಲ್ಲಿ 
ಸೀತೆಯ ಅಸ್ತಿತ್ವ 
ದ್ರೌಪದಿಯ ನಿಷ್ಠೆ

by ಹರೀಶ್ ಶೆಟ್ಟಿ, ಶಿರ್ವ 

ಉಡುಗೊರೆ


ರಾಮ ವನವಾಸದಿಂದ ಅಯೋಧ್ಯ ಬಂದು ಪ್ರಥಮವಾಗಿ ಕೈಕೇಯಿಯನ್ನು ಭೇಟಿಯಾಗಲು ಅವಳ ಭವನಕ್ಕೆ ಹೊಗುತ್ತಾನೆ. ಕೈಕೇಯಿ ತುಂಬಾ ಪಶ್ಚಾತಾಪ ಪಡುತ್ತಿದ್ದಳು ಹಾಗು ಬೇಸರದಲ್ಲಿದ್ದಳು "ಇದು ನನ್ನಿಂದ ಏನಾಯಿತೆಂದು?" ೧೪ ವರ್ಷದ ನಂತರ ರಾಮನಿಗೆ ತನ್ನ ಮುಖ ತೋರಿಸಲು ಅವಳಿಗೆ ಕಷ್ಟವಾಗುತ್ತಿತ್ತು ಆದರೆ ರಾಮ ಸ್ವಯಂ ಆಗಿ ಅವಳನ್ನು ಭೇಟಿಯಾಗಲು ಬಂದಿದ ಕೈಕೇಯಿಯ ಭವನಕ್ಕೆ, ತಾಯಿ ಕೌಶಲ್ಯೆಯ ಭವನಕ್ಕೆ ಹೋಗದೆ ಅವನು ಕೈಕೇಯಿಯನ್ನು ಭೇಟಿಯಾಗಲು ಹೋದದ್ದು ಏಕೆ ಅಂದರೆ ಅವನಿಗೆ ಕೈಕೇಯಿ ಅಮ್ಮ ಈಗ ಎಷ್ಟು ವೇದನೆಯಲ್ಲಿ ಇರಬಹುದೆಂಬ ಅರಿವಿತ್ತು.


ಕೈಕೇಯಿಯ ಭವನದಲ್ಲಿ ಒಂದು ಆಶ್ಚರ್ಯ ಅವನನ್ನು ಕಾಯುತ್ತಿತ್ತು, ಅಲ್ಲಿ ಲಕ್ಷ್ಮಣನ ಪತ್ನಿ ಉರ್ಮಿಳ, ಭರತನ ಪತ್ನಿ ಮಾಂಡವಿ ಹಾಗು ಶತ್ರುಘ್ನನ ಪತ್ನಿ ಶ್ರುತುಕಿರ್ತಿ ಅವನ ಭೇಟಿಗೋಸ್ಕರ ಮೊದಲೇ ಅಲ್ಲಿ ಕುಳಿತ್ತಿದ್ದರು. ಅವರೆಲ್ಲರು ಸೀತೆಯ ಸಹೋದರಿಯರು. ಅವರನ್ನು ಅಲ್ಲಿ ಕಂಡು ರಾಮನಿಗೆ ಅತ್ಯಂತ ಸಂತೋಷವಾಯಿತು ಹಾಗು ಅವನು "ಇಂದು ನಾನು ತುಂಬಾ ಆನಂದದಲ್ಲಿದ್ದೇನೆ, ೧೪ ವರ್ಷದ ನಂತರ ನಿಮ್ಮನ್ನು ಭೇಟಿಯಾಗುತ್ತಿದ್ದೇನೆ, ನೀವು ಮೂವರೂ ನನ್ನಿಂದ ಏನಾದರು ಉಡುಗೊರೆ ಕೇಳಿ, ನಾನು ತುಂಬಾ ಸಂತೋಷ ಪಡುವೆ."

"ಪ್ರಥಮವಾಗಿ ಉರ್ಮಿಳ ನಿನ್ನ ಸರದಿ, ಕೇಳು, ಎಷ್ಟು ಮೌಲ್ಯಯುತ ಇದ್ದರು ನೀನು ಕೇಳಬಹುದು."

ಲಕ್ಷ್ಮಣನ ಪತ್ನಿ ಊರ್ಮಿಳೆ "ನೀವು ೧೪ ವರ್ಷ ನನ್ನ ಪತಿಯನ್ನು ತಮ್ಮೊಂದಿಗೆ ಇಟ್ಟು ಅವರಿಗೆ ಅದೆಷ್ಟೋ ಪ್ರೀತಿ ನೀಡಿದ್ದಿರಿ, ಅದೇ ನನ್ನ ಉಡುಗೊರೆ , ನನಗೆ ಬೇರೇನೂ ಬೇಡ."

ರಾಮ ಸ್ವಲ್ಪ ನಿರಾಶೆಗೊಂಡ, ಉರ್ಮಿಳ ಏನನ್ನು ಕೇಳುವುದಿಲ್ಲ ಹಾಗು ಅವರು ಮಾಂಡವಿಗೆ "ಮಾಂಡವಿ, ನೀನು ನನ್ನನ್ನು ನಿರಾಶೆಗೊಳಿಸ ಬೇಡ, ನೀನಾದರು ಏನು ಕೇಳು."

ಭರತನ ಪತ್ನಿ ಮಾಂಡವಿ " ಇಂದು ಅಯೋಧ್ಯೆಯ ಸೀಮೆಯಲ್ಲಿ ನಾನು ನಿಮ್ಮ ಹಾಗು ಇವರ (ಭರತ) ಮಿಲನ ನೋಡಿದೆ, ನೀವು ೧೪ ವರ್ಷದ ನಂತರ ಭರತನನ್ನು ಅಪ್ಪಿಕೊಂಡು ಅದೆಷ್ಟೋ ಕಣ್ಣೀರು ಸುರಿಸಿದ್ದಿರಿ, ಆ ಕಣ್ಣೀರೆ ನನ್ನ ಬಹುಮೂಲ್ಯ ಉಡುಗೊರೆ."

ರಾಮ ಪುನಃ ನಿರಾಶೆಗೊಂಡ, ಏನಿದು ನನ್ನ ಮಾತು ಕೇಳುವುದೇ ಇಲ್ಲ "ಶ್ರುತುಕಿರ್ತಿ ನೀನಾದರೂ ಕೇಳು, ಇವರಿಬ್ಬರಂತು ನನ್ನ ಮಾತು ಕೇಳುವುದಿಲ್ಲ, ನೀನು ನನ್ನಿಂದ ಖಂಡಿತ ಏನಾದರು ಕೇಳು."

ಶತ್ರುಘ್ನನ ಪತ್ನಿ ಶ್ರುತುಕಿರ್ತಿ "ಇವರಿಬ್ಬರು ಏನು ಕೇಳದಿದ್ದರೂ ತೊಂದರೆ ಇಲ್ಲ , ಆದರೆ ನಾನಂತೂ ಖಂಡಿತ ನಿಮ್ಮಿಂದ ಕೇಳುವೆ."

ರಾಮನಿಗೆ ಸಂತೋಷವಾಯಿತು "ಕೇಳು, ಸ್ವಲ್ಪ ಸಹ ಸಂಕೋಚ ಪಡಬೇಡ, ಏನು ಬೇಕು ಅದು ಕೇಳು."

ಶ್ರುತುಕಿರ್ತಿ "ನೀವು ತಪಸ್ವಿ ವೇಷ ಧರಿಸಿ ವನಕ್ಕೆ ಹೋಗಿದ್ದಿರಿ ಹಾಗು ೧೪ ವರ್ಷ, ೧೪ ವರ್ಷ ಮರದ ಸಿಪ್ಪೆಯಿಂದ ನಿರ್ಮಿತ ವಸ್ತ್ರವನ್ನು (ಪ್ರಾಚಿನ ಕಾಲದಲ್ಲಿ ತಪಸ್ವಿಗಳು ಮರದ ಸಿಪ್ಪೆಯಿಂದ ನಿರ್ಮಿಸಿದ ಸಾಧಾರಣ ಉಡುಪನ್ನು ಧರಿಸುತ್ತಿದ್ದರು ) ನೀವು ಧರಿಸಿದ್ದಿರಿ, ನನಗೆ ನಿಮ್ಮ ಅ ವಸ್ತ್ರ ಬೇಕು."

"ಶ್ರುತುಕಿರ್ತಿ, ಏನಿದು, ಕೇಳಿ ಕೇಳಿ ನೀನು ಇದನ್ನೇ ಕೇಳುವುದೇ, ನಾನು ನಿನಗೆ ಮೌಲ್ಯಯುತ ಕೇಳಲು ಹೇಳಿದೆ ಅಲ್ಲವೇ."

"ಹೇ ರಾಮ, ನಾನು ಆ ವಸ್ತ್ರಗಳನ್ನು ಅಯೋಧ್ಯೆಯ ರಾಜ ಸಭಾಂಗಣದಲ್ಲಿ ಹೀಗೆ ಇಡಲು ಬಯಸುವೆ ಅಂದರೆ ಅದನ್ನು ಎಲ್ಲರು ನೋಡಲಿ, ಭಾರತವರ್ಷದ ಮುಂದಿನ ಪೀಳಿಗೆ ಇಷ್ಟಾದರೂ ತಿಳಿಯಲಿ, ರಘುವಂಶದಲ್ಲಿ ಒಂದು ರಾಜ ಹೀಗೆ ಇದ್ದ, ಅವನು ತನ್ನ ತಂದೆಯ ವಚನ ಪಾಲಿಸಲು ೧೪ ವರ್ಷ ಈ ವಸ್ತ್ರಗಳನ್ನು ಧರಿಸಿ ಎಷ್ಟೋ ಕಷ್ಟ ಎದುರಿಸಿದ, ಮುಂದಿನ ಪೀಳಿಗೆಗೆ ತಿಳಿಯಲಿ ನಮ್ಮ ಜನ್ಮ ಅಂತಹ ಪಾವನ ಭಾರತ ದೇಶದಲ್ಲಿ ಆಗಿದೆ ಎಂದು,ಅದಕ್ಕೆ ನನಗೆ ಈ ವಸ್ತ್ರ ಬೇಕು."

(ರಾಮಾಯಣದಿಂದ)

ವ್ಯಾಖ್ಯಾನ : ಹರೀಶ್ ಶೀಟಿ, ಶಿರ್ವ

Monday, April 7, 2014

ಇದ್ಯಾರು ಚಿತ್ರಕಾರ

ಇದ್ಯಾರು ಚಿತ್ರಕಾರ
ಇದ್ಯಾರು ಚಿತ್ರಕಾರ

!!ಹಸಿರು ಹಸಿರು ವಸುಂಧರೆಯಲಿ
ನೀಲ ನೀಲ ಈ ಗಗನ
ಅದರಲಿ ಮೇಘದ ಪಾಲಕಿ
ಹಾರಿಸುತ್ತಿದೆ ಪವನ
ಪರಿಸರ ನೋಡಿ ವರ್ಣಮಯ
ಪರಿಸರ ನೋಡಿ ವರ್ಣಮಯ
ಹೊಳೆಯುತ್ತಿದೆ ಉತ್ಸಾಹದೊಂದಿಗೆ
ಇದ್ಯಾರು ಹೂವು ಹೂವಿನಲ್ಲಿ
ಮಾಡಿರುವರು ಶೃಂಗಾರ!!
ಇದ್ಯಾರು ಚಿತ್ರಕಾರ
ಇದ್ಯಾರು ಚಿತ್ರಕಾರ.....ಇದ್ಯಾರು ಚಿತ್ರಕಾರ

!!ತಪಸ್ವಿಗಳಂತೆ ಸ್ಥಿರ ಪರ್ವತದ
ಈ ಶಿಖರಗಳು
ನೀರ್ಗಲ್ಲುಗಳ ತಿರುವು
ನುಣುಚು ಕಣಿವೆಗಳು
ಧ್ವಜದ ಹಾಗೆ ಇದು ನಿಂತಿದೆ
ಧ್ವಜದ ಹಾಗೆ ಇದು ನಿಂತಿದೆ
ಈ ಪೈನ್ ವೃಕ್ಷಗಳು
ರತ್ನಗಂಬಳಿ ಗುಲಾಬಿಯ
ಉದ್ಯಾನ ಈ ವಸಂತದ
ಇದು ಯಾವ ಕವಿಯ ಕಲ್ಪನೆ
ಇದು ಯಾವ ಕವಿಯ ಕಲ್ಪನೆಯ ಚಮತ್ಕಾರ!!
ಇದ್ಯಾರು ಚಿತ್ರಕಾರ
ಇದ್ಯಾರು ಚಿತ್ರಕಾರ.....ಇದ್ಯಾರು ಚಿತ್ರಕಾರ

!!ನಿಸರ್ಗದ ಈ ಪವಿತ್ರತೆಯನ್ನು
ನೀನು ಗಮನಿಸು
ಇವುಗಳ ಗುಣವನ್ನು
ಮನಸ್ಸಲ್ಲಿ ಸ್ಥಾಪಿಸು
ಪ್ರಕಾಶಿಸು ಇಂದು ತೇಜಸ್ಸನ್ನು
ಪ್ರಕಾಶಿಸು ಇಂದು ತೇಜಸ್ಸನ್ನು ತನ್ನ ಲಲಾಟದ
ಕಣ ಕಣದಲಿ ಕಾಣುತ್ತಿದೆ
ಸೌಂದರ್ಯ ಭವ್ಯವಾದ
ನಮಗೆ ಒಂದೇ ಕಣ್ಣು, ಅದರ ಎಷ್ಟೋ ಸಾವಿರ!!
ಇದ್ಯಾರು ಚಿತ್ರಕಾರ
ಇದ್ಯಾರು ಚಿತ್ರಕಾರ.....ಇದ್ಯಾರು ಚಿತ್ರಕಾರ

ಮೂಲ : ಭರತ್ ವ್ಯಾಸ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಸತೀಶ್ ಭಾಟಿಯಾ
ಚಿತ್ರ : ಬೂಂದ್ ಜೋ ಬನ್ ಗಯಾ ಮೋತಿ

 Haree haree wasundhara pe nila nila yeh gagan
 Ke jis pe badalo kee palakee uda raha pawan
 Dishaye dekho rangbharee, chamak rahee umang bharee
 Yeh kis ne phul phul pe kiya singar hai
 Yeh kaun chitrakar hai - (3)

 Tapaswiyo see hain atal yeh parawato kee chotiya
 Yeh sarpa see ghoomeradar, gheradar ghatiya
 Dhwaja se yeh khade huye hain wariaksh dewadar ke
 Galiche yeh gulab ke, bagiche yeh bahar ke
 Yeh kis kavee kee kalpana kaa chamatkar hai
 Yeh kaun chitrakar hai..........

 Kudrat kee iss pavitrata ko tum nihar lo
 Iss ke guno ko apne mann me tum utar lo
 Chamakalo aaj lalima, apne lalat kee
 Kan kan se jhankatee tumhe chhabee virat kee
 Apnee toh aankh yek hai uss kee hajar hai
 Yeh kaun chitrakar hai.........

Sunday, April 6, 2014

ಸಾವಿರಾರು ಹಾದಿ ತಿರುಗಿ ನೋಡಿದೆ

ಕಿಶೋರ್:
ಸಾವಿರಾರು ಹಾದಿ ತಿರುಗಿ ನೋಡಿದೆ
ಎಲ್ಲಿಂದಲೂ ಯಾವುದೇ ಕರೆ ಬರಲಿಲ್ಲ

ಲತಾ :
ತುಂಬಾ ನಿಷ್ಠೆಯಿಂದ ನಿಭಾಯಿಸಿದೆ ನೀನು
ನನ್ನ ಕಿಂಚಿತ ವಿಶ್ವಾಸ ದ್ರೋಹವನ್ನೆಲ್ಲ

ಕಿಶೋರ್:
ಎಲ್ಲಿಂದ ನೀನು ತಿರುವು ತಿರುಗಿದೆ
ಆ ತಿರುವು ಈಗಲೂ ಬಿದ್ದಿವೆ ಅಲ್ಲೇ

ಲತಾ :
ನಾನು ನನ್ನ ಕಾಲುಗಳಲ್ಲಿ ಅದೆಷ್ಟೋ
ಸುಳಿಗಳನ್ನು ಕಟ್ಟಿಕೊಂಡು ನಿಂತಿದ್ದೇನೆ ಇಲ್ಲೇ
ತುಂಬಾ ನಿಷ್ಠೆಯಿಂದ....

ಕಿಶೋರ್:
ಎಂದೋ ಒಂದು ದಿನ ಹೀಗೆಯೂ ಆಗಬೇಕಿತ್ತು
ನನ್ನ ಅವಸ್ಥೆ ನಿನ್ನದಾಗಬೇಕಿತ್ತು

ಲತಾ :
ಸತ್ತು ನಾ ಕಳೆದ ರಾತ್ರಿಗಳೆಲ್ಲ
ಆ ರಾತ್ರಿಗಳೆಲ್ಲ ನೀನು ಕಳೆಯಬೇಕಿತ್ತು
ತುಂಬಾ ನಿಷ್ಠೆಯಿಂದ....

ಕಿಶೋರ್:
ನಿನಗೆ ಹಠ ನಾನು ಕರೆಯಬೇಕೆಂದು
ನನಗೆ ಈ ನಿರೀಕ್ಷೆ ನೀನು ಕರೆಯಲೆಂದು

ಲತಾ :
ಹೆಸರಿದೆ ತುಟಿಯಲಿ ಈಗಲೂ
ಸ್ವರದಲಿ ಬಿರುಕುಂಟಾಗಿದೆ ಇಂದು
ತುಂಬಾ ನಿಷ್ಠೆಯಿಂದ.....

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಕಿಶೋರೆ ಕುಮಾರ್, ಲತಾ ಮಂಗೇಶ್ಕರ್
ಸಂಗೀತ : ಖಯ್ಯಾಮ್
ಚಿತ್ರ : ತೋಡಿ ಸಿ ಬೆವಫಾಯಿ
Kishore: hazaar rahen, mudke dekhin
kahin se koi sadaa na ai

Lata: badi wafa se, nibahi tumane
hamaari thodi si bewafai

Kishore: jaha se tum mod mud gaye the – 2
vo mod ab bhi vahi khade hain

Lata: ham apane pairon men jaane kitane – 2
bhanwar lapete hue khade hain
badi wafa se, nibhai tumne
hamari thodi si bewafai

Kishore: kahin kisi roz yun bhi hota
hamari halat tumhari hoti

Lata: jo raten hamane guzari marake
vo raat tumane guzari hotin
badi wafa se, nibahi tumane
hamaari thodi si bewafai

Kishore: unhen ye zid thi ke ham bulate
hamen ye ummid vo pukaren

Lata: hai naam honton men ab bhi lekin
aawaaz men pad gai daraaren

Kishore: hazaar rahen, mudake
kahin se koi sadaa na ai

Lata: badi wafa se, nibahi tumane
hamaari thodi si bewafai
http://www.youtube.com/watch?v=nynE7cFORmE

ಜೀವನದ ಪಾಠ

ಜೀವನದ ಪಾಠ ಮುಗಿಯಲಿಕ್ಕಿಲ್ಲ
ದಿನನಿತ್ಯ ಹೊಸ ಗುರು 
ಹೊಸ ಮಾರ್ಗದರ್ಶನ 

ಮನುಷ್ಯನಿಂದ ತಪ್ಪಾಗುವುದು ಸಹಜ 
ಕಲಿತುಕೊಂಡರೆ ಹೊಸ ಅನುಭವ 
ಮುನಿಸಿ ಕುಳಿತರೆ ನಿತ್ಯ ಅಸಮಾಧಾನ
by ಹರೀಶ್ ಶೆಟ್ಟಿ,ಶಿರ್ವ

ಅಂತರ

ಅಂತರ ಹೆಚ್ಚಾದಂತೆ 
ಸಂಬಂಧ ಸಹ ಕ್ಷೀಣವಾಗುತ್ತದೆ
ಮನಸ್ಸೂ ಕಹಿಯಾಗುತ್ತದೆ 

ಅಂತರ ಬೆಳೆಸುವುದಕ್ಕಿಂತ 
ಸಂಬಂಧವನ್ನು ನೇರ ತೊರೆಯುವುದು ಒಳ್ಳೆಯದು
ಮನಸ್ಸಾದರೂ ನಿರ್ಮಲವಾಗಿರುತ್ತದೆ

by ಹರೀಶ್ ಶೆಟ್ಟಿ,ಶಿರ್ವ

Saturday, April 5, 2014

ಅಶ್ವಥಾಮ


ದುರ್ಯೋಧನನ ತೊಡೆ ಭೀಮ ಮುರಿದಿದ್ದ. ಅಸಹನೀಯ ಶಾರೀರಿಕ ಹಾಗು ಮಾನಸಿಕ ಪೀಡೆಯಿಂದ ಬಳಲುತ್ತಿದ್ದ ದುರ್ಯೋಧನನಿಗೆ ಒಂದು ಯಕ್ಷಿಣಿ ಸಹಾನುಭೂತಿ ತೋರಿಸಿದ್ದರೂ, ಆ ಸಮಯ ಮೃತ್ಯು ಮುಖದಲ್ಲಿದ್ದ ದುರ್ಯೋಧನ ಅವಳ ಪ್ರೇಮ ನಿವೇದನೆ ತಿರಸ್ಕರಿಸಿದ್ದ. ಇದು ಆ ಯಕ್ಷಿಣಿಯ ತಪ್ಪಾಗಿತ್ತು, ಮೃತ್ಯು ಮುಖದಲ್ಲಿದ್ದವ ಹೇಗೆ ತಾನೇ ಪ್ರೀತಿ ಪ್ರೇಮ ಮಾಡುವನು.

ದುರ್ಯೋಧನನ ಪರಾಜಯದ ನಂತರ ಪಾಂಡವರ ವಿಜಯ ನಿಶ್ಚಿತವಾಗಿತ್ತು. ಎಲ್ಲ ಪಾಂಡವರು ವಿಜಯದ ಹರ್ಷದಲ್ಲಿದ್ದರು. ಯಾಕೆ ಇರಬಾರದು, ಕೊನೆಗೆ ಗೆಲುವು ಅಂದರೆ ಗೆಲುವೆ.

ಆಗ ದುರ್ಯೋಧನನ ಬಳಿ ಅಶ್ವಥಾಮ ಬರುತ್ತಾನೆ ಹಾಗು ಹೇಳುತ್ತಾನೆ "ಕುರು ಶ್ರೇಷ್ಠ , ನೀವು ಯುದ್ಧ ನಾವು ಸೋತೆವೆಂದು ತಿಳಿಯಬೇಡಿ, ನಾನು ಜೀವಂತ ಇರುವ ತನಕ ಇದು ಅಸಂಭವ, ನೀವು ನನ್ನನ್ನು ಸೇನಾಪತಿ ನಿಯುಕ್ತ ಮಾಡಿ, ನನಗೆ ಅಮರತ್ವದ ವರದಾನ ಪ್ರಾಪ್ತಿ ಇದೆ, ಈಗ ಯುದ್ಧದ ಸಂಚಲನೆ ನಾನು ಮಾಡುವೆ ಹಾಗು ನಿಮಗೆ ಜಯ ಗಳಿಸಿ ಕೊಡುವೆ."

ದುರ್ಯೋಧನನ ಕಣ್ಣಲ್ಲಿ ಕಾಂತಿ ಕಂಡು ಬಂತು ಹಾಗು ಅವನು ತನ್ನ ರಕ್ತದಿಂದ ಅಶ್ವಥಾಮನ ಲಲಾಟಕ್ಕೆ ತಿಲಕ ಮಾಡಿ ಅವನನ್ನು ಸೇನಾಪತಿ ನಿಯುಕ್ತ ಮಾಡುತ್ತಾನೆ. 

ಈಗ ಕೌರವರ ಸೇನಾಪತಿ ಅಶ್ವಥಾಮನಾಗಿದ್ದ, ಅವನು ಹೇಳಿದ " ಕುರು ರಾಜ, ಇಂದೇ ಐದು ಪಾಂಡವರ ಶಿರ ಕತ್ತರಿಸಿ ನಿಮ್ಮ ಕಾಲಿಗೆ ಅರ್ಪಿಸುವೆ." ದುರ್ಯೋಧನನ ಕಣ್ಣಲ್ಲಿ ಪುನಃ ಹೊಳಪು ಕಂಡು ಬಂತು.

ಅಶ್ವಥಾಮ ದ್ರೌಪದಿಯ ಶಿಬಿರಕ್ಕೆ ಬರುತ್ತಾನೆ, ರಾತ್ರಿಯಾಗಿತ್ತು ,ಶಿಬಿರದಲ್ಲಿ ವಿಜಯೋಲ್ಲಾಸ ನಡೆಯುತ್ತಿತ್ತು, ಅವನನ್ನು ಯಾರೂ ತಡೆಯಲಿಲ್ಲ, ಯಾಕೆಂದರೆ ಪಾಂಡವರ ಪ್ರಕಾರ ಯುದ್ಧ ಮುಗಿದಿತ್ತು ಹಾಗು ಕಾವಲು ನೀಡುವವರು ಸಹ ಅನಂದೊತ್ಸವದಲ್ಲಿ ಮಗ್ನರಾಗಿದ್ದರು. ಶಿಬಿರದ ಒಳಗೆ ದ್ರೌಪದಿಯ ಐದು ಕುಮಾರರು ಮಲಗಿದ್ದರು.

ದ್ರೌಪದಿಗೆ ಪ್ರತ್ಯೇಕ ಪಾಂಡವರಿಂದ ಒಂದೊಂದು ಪುತ್ರ ಸಂತಾನ ಪ್ರಾಪ್ತಿಯಾಗಿತ್ತು, ಅವರ ಹೆಸರು ಪ್ರತಿವಿಂಧ್ಯಾ(ಯುಧಿಷ್ಟರ ),ಶ್ರುತುಸೋಮ್ (ಭೀಮ ), ಶ್ರುತುಕರ್ಮ (ಅರ್ಜುನ ), ಶತಾನಿಕ್(ನಕುಲ್ ) ಹಾಗು ಶ್ರುತುಸೇನ್ (ಸಹದೇವ್) ಎಂದಿತ್ತು. ಪ್ರತಿಯೊಂದು ಪುತ್ರ ತನ್ನ ತಂದೆಯ ಹಾಗೆಯೇ ಕಾಣುತ್ತಿದ್ದರು. ಐದು ಪುತ್ರರು ಸಹ ಐದು ಪಾಂಡವರೇ ಎಂದು ಭ್ರಮೆ ಮೂಡುತ್ತಿತ್ತು, ಅಷ್ಟೊಂದು ಹೋಲಿಕೆ ಇತ್ತು. ತಂದೆ, ಪುತ್ರರನ್ನು ಗುರುತಿಸಲು ಕಷ್ಟವಾಗುತ್ತಿತ್ತು.

ಪ್ರತಿಕಾರದ ಅಗ್ನಿಯಲ್ಲಿ ಬೇಯ್ಯುತ್ತಿದ್ದ ಅಶ್ವಥಾಮ ಆ ಮಲಗಿದ್ದ ಕುಮಾರರ ಶಿರ ಕತ್ತರಿಸಿದ ಹಾಗು ಅಲ್ಲಿಂದ ಪಲಾಯನ ಮಾಡಿದ. ದ್ರೌಪದಿಯ ಶಿಬಿರದಲ್ಲಿ ಯಾರಿಗೂ ಇದರ ವಿಷಯ ತಿಳಿಯಲಿಲ್ಲ. ಅಶ್ವಥಾಮ ಆ ಐದು ಶಿರಗಳ ಸಮೇತ ತಳದಲ್ಲಿ ಅಡಗಿದ ದುರ್ಯೋಧನನ ಬಳಿಗೆ ಬಂದ.

ಅಶ್ವಥಾಮ ದುರ್ಯೋಧನನಿಗೆ "ಮಿತ್ರ, ಇಂದು ನನ್ನ ಹೃದಯಕ್ಕೆ ಶಾಂತಿ ಸಿಕ್ಕಿದೆ, ನಾನು ನನ್ನ ತಂದೆಯ ಹತ್ಯೆಯ ಸೇಡು ತಿರಿಸಿದೆ ಹಾಗು ನಿನ್ನ ಋಣ ಸಹ ತಿರಿಸಿದೆ" ಎಂದು ಹೇಳಿ ಆ ಐದು ಶಿರಗಳನ್ನು ದುರ್ಯೋಧನನ ಕಾಲಿಗೆ ಎಸೆದ.

ಅತ್ಯಂತ ಹರ್ಷದಿಂದ ದುರ್ಯೋಧನ ಭೀಮನ ಮಗನ ಶಿರವನ್ನು ಭೀಮನೆಂದು ಭಾವಿಸಿ ಎತ್ತಿ ಅಟ್ಟಹಾಸ ಮಾಡಲಾರಂಭಿಸಿದ. ಆವೇಶದಿಂದ ಅವನು ಆ ಶಿರವನ್ನು ತನ್ನ ಎರಡು ಕೈಯಿಂದ ಒತ್ತಿದ. ಆದರೆ ಇದೇನಾಯಿತು? ಆ ಶಿರ ಸ್ವಲ್ಪ ಒತ್ತಿದಾಗಲೇ ಹೊಡೆದೋಯಿತು, ಒಂದೇ ಕ್ಷಣದಲ್ಲಿ ಅವನಿಗೆ ಎಲ್ಲ ವಿಷಯ ತಿಳಿದು ಬಂತು.

ಶಿರ ಹೊಡೆದು ಹೋದಂತೆಯೇ ದುರ್ಯೋಧನ ಕೋಪದಿಂದ ಕಿರುಚಿದ "ದುಷ್ಟ ಅಶ್ವಥಾಮ , ಇದೇನು ನೀನು ಮಾಡಿದೆ, ಇದು ಭೀಮನ ಶಿರ ಅಲ್ಲ , ಭೀಮನಾದರೆ ಹೀಗೆ ನನ್ನ ಕೈಯಿಂದ ಅವನ ಶಿರ ಇಷ್ಟು ಸುಲಭದಲ್ಲಿ ಹೊಡೆಯುತ್ತದೆಯೇ? ಇವನು ಭೀಮನಲ್ಲ , ಸತ್ಯ ಹೇಳು, ಇವನು ಭೀಮ ಹಾಗು ದ್ರೌಪದಿಯ ಕುಮಾರನಾಗಿರಬೇಕು."

ಈಗ ಅಶ್ವಥಾಮ ಹೇಳಿದ "ನಾನು ದ್ರೌಪದಿಯ ಶಿಬಿರಕ್ಕೆ ಹೋದೆ ಹಾಗು ಇವರನ್ನು ಪಾಂಡವರೆಂದು ತಿಳಿದು ಇವರ ಶಿರ ಕತ್ತರಿಸಿ ತಂದೆ."

ಈಗ ದುರ್ಯೋಧನ ಅಸಹನೀಯ ಪೀಡೆಯಿಂದ "ಅಯ್ಯೋ ,ದುಷ್ಟ ಅಶ್ವಥಾಮನೆ, ಇದೇನು ಮಾಡಿದೆ ನೀನು, ನಮ್ಮ ವಂಶವನ್ನೇ ನೀನು ಮುಗಿಸಿ ಬಿಟ್ಟೆಯಲ್ಲ, ಇವರು ನಮ್ಮ ವಂಶದ ಕೊನೆ ಚಿಹ್ನೆಯಾಗಿದ್ದರು ಹಾಗು ನಮ್ಮ ವಂಶವನ್ನು ಮುಂದೆ ಕೊಂಡೋಗಿ ಬೆಳೆಸಿಳಕ್ಕಿದ್ದರು, ನೀನು ಎಲ್ಲವನ್ನೂ ನಾಶಗೊಳಿಸಿ ಬಿಟ್ಟೆ."

"ಅಯ್ಯೋ ದುಷ್ಟ, ದೂರವಾಗು ನನ್ನ ಕಣ್ಣ ಮುಂದೆಯಿಂದ" ಎಂದು ಹೇಳಿದ ನಂತರ ತುಂಬಾ ಪೀಡೆಯಿಂದ ಮಹಾಶಕ್ತಿಶಾಲಿ ದುರ್ಯೋಧನ ತನ್ನ ಪ್ರಾಣ ಬಿಟ್ಟ.

ಅಲ್ಲಿ ದ್ರೌಪದಿಯ ಶಿಬಿರದಲ್ಲಿ ಶಿರವಿಲ್ಲದ ಐದು ಕುಮಾರರ ಶವವನ್ನು ಕಂಡು ಕೂಗಾಟ ನಡೆದಿತ್ತು, ದ್ರೌಪದಿ ವಿಲಾಪಿಸುತ್ತಿದ್ದಳು, ಕೃಷ್ಣ ಹಾಗು ಪಾಂಡವರು ಸ್ತಬ್ದರಾಗಿ ನಿಂತಿದ್ದರು.

ಎಲ್ಲರ ಮನಸ್ಸಲ್ಲಿ ಒಂದೇ ಪ್ರಶ್ನೆ "ಇದನ್ನು ಮಾಡಿದವರು ಯಾರಿರಬಹುದೆಂದು?" 

(ಮಹಾಭಾರತದಿಂದ)

ವ್ಯಾಖ್ಯಾನ : ಹರೀಶ್ ಶೀಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...