Sunday, March 9, 2014

ನೆನಪಾಗುತ್ತಾಳೆ ಅವಳು

ನೆನಪಾಗುತ್ತಾಳೆ ಅವಳು
ಮಕ್ಕಳು ಕಾಗದದ ದೋಣಿ ಮಳೆ ನೀರಲ್ಲಿ ಬಿಡುವಾಗ,
ಬಾಲ್ಯ ಸಖಿಯಾದ ಅವಳೊಟ್ಟಿಗೆ ಈ ಆಟ ಆಡಿದ್ದು ಎಷ್ಟಾಗಿರಬಹುದು
ಆ ಮಳೆಗಾಲದ ದಿವಸದಲಿ

ನೆನಪಾಗುತ್ತಾಳೆ ಅವಳು
ಕಲ್ಲೆಸೆದು ಮಾವಿನ ಹಣ್ಣು ಕಿತ್ತುವ ಮಕ್ಕಳನ್ನು ನೋಡಿ,
ಮಾವಿನ ಹಣ್ಣು ಒಟ್ಟು ಮಾಡಿ
ತನ್ನ ಪಾಲನ್ನೂ ನನಗೆ ತಿನ್ನಲು ಕೊಡುತ್ತಿದ್ದವಳು ಅವಳೇ ತಾನೇ

ನೆನಪಾಗುತ್ತಾಳೆ ಅವಳು
ಶಿಶಿರದಲಿ ಮರದೆಲೆಗಳು ಉದುರುವಾಗವೆಲ್ಲ,
ಮರದಡಿಯಲಿ ಬೇಸರದಿ ಶಾಂತತೆಯಿಂದ ಕುಳಿತಾಗ
ಸಾಂತ್ವನೆ ನೀಡುತ್ತಿದ್ದವಳು ಅವಳೇ ತಾನೇ

ನೆನಪಾಗುತ್ತಲೇ ಅವಳು
ವಸಂತಾಗಮನಕೆ ಹಸಿರೆಲೆ ಚಿಗುರಿದಾಗವೆಲ್ಲ,
ವಸಂತದಲಿ ಆಗಷ್ಟೇ ಬಿಟ್ಟ ಹಣ್ಣು ತಿನ್ನಲು ಬಂದ ಹಕ್ಕಿಗಳ ಮಧುರ ಕಲರವ
ಕೇಳಿ ಆನಂದ ಪಟ್ಟು ನನ್ನನ್ನು ಬಿಗಿದಪ್ಪಿಕೊಳ್ಳುತ್ತಿದ್ದವಳು ಅವಳೇ ತಾನೇ

ನೆನಪಾಗುತ್ತಾಳೆ ಅವಳು
ಬೇಸಿಗೆಯ ಬಿಸಿಲು ತನ್ನ ಪರಕಾಷ್ಟಕ್ಕೆ ಏರಿದಾಗವೆಲ್ಲ,
ಉರಿ ಬಿಸಿಲಲಿ ನಡೆದುಕೊಂಡು ಅವಳ ಮನೆಗೆ ಬಂದಾಗ
ಅಮೃತಮಯಿ ತಂಪು ಪಾನಕ ನೀಡುತ್ತಿದ್ದವಳು ಅವಳೇ ತಾನೇ

ನೆನಪಾಗುತ್ತಾಳೆ ಅವಳು
ಆಗಾಗ ಬರೆಯಲು ಪೆನ್ನು ತೆರೆಯುವಾಗವೆಲ್ಲ,
ಹೀಗೆಯೇ ಏನೇನೊ ಕಾಗದದಲಿ ಗೀಚುತ್ತಿದ್ದವನಿಗೆ
ಪ್ರಥಮ ಕವಿತೆ ಬರೆಯಲು ಪ್ರೋತ್ಸಾಹ ನೀಡಿದ್ದು  ಅವಳೇ ತಾನೇ

ನೆನಪಾಗುತ್ತಾಳೆ ಅವಳು
ಯಾವುದೇ ಅಗಲಿಕೆಯ ಕಥೆ ಕೇಳಿದಾಗವೆಲ್ಲ,
ಉನ್ನತ ಶಿಕ್ಷಣಕ್ಕಾಗಿ ವಿದೇಶ ಹೋಗುವಾಗ ಅವಳು
ಹಿಂದೆ ಹಿಂದೆ ಓಡೋಡಿ ಬಂದು ಅತ್ತವಳು ಅವಳೇ ತಾನೇ

ನೆನಪಾಗುತ್ತಾಳೆ ಅವಳು
ತುಂಬಾ ನೆನಪಾಗುತ್ತಾಳೆ
ಅವಳ ಪ್ರೀತಿ
ಅವಳ ಮುನಿಸು
ಅವಳ ತುಂಟ ಚೇಷ್ಟೆಗಳು
ನೆನಪಾಗುತ್ತದೆ
ತುಂಬಾ ನೆನಪಾಗುತ್ತದೆ

by ಹರೀಶ್ ಶೆಟ್ಟಿ,ಶಿರ್ವ 

2 comments:

  1. ಆಕೆಯ ಬಗ್ಗೆ ಇನ್ನೂ ವಿವರವಾಗಿ ಬರೆಯಿರಿ.

    ReplyDelete
  2. ತುಂಬಾ ಧನ್ಯವಾದಗಳು ಬದರಿ Sir, ಖಂಡಿತ

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...