Thursday, 6 March, 2014

"ಬಾಲ್ಯ" ಹಾಯ್ಕು

ಬಾಲ್ಯ ಜೀವನ 
ಮಾವಿನ ಮರ ಅಡಿ 
ಅದೆಷ್ಟು ಚಂದ 
---

ಎಷ್ಟೊಂದು ರುಚಿ 
ಸಂತೆಯಿಂದ ಅಪ್ಪಯ್ಯ 
ತರುವ ಬಿಸ್ಕು 

---

ಆಡಿ ಬಂದಾಗ
ಅಮ್ಮನ ಗಂಜಿ ಊಟ
ಜೀವ ಅಮೃತ

---

ಮಾವ ತರುವ
ಚಂದಮಾಮ ಪುಸ್ತಕ
ಕನಸ ಲೋಕ

----

ಶಾಲಾ ರಜೆಗೆ
ನದಿಯಲ್ಲಿ ಈಜುವ
ಆನಂದ ಕ್ಷಣ

----

ಶಿಕ್ಷಕರಿಂದ
ಶಾಲೆಯಲಿ ಸಿಗುವ
ಪೆಟ್ಟು ಪ್ರಸಾದ

----

ಜಗಳಗಳು
ಮುದ್ದು ಆಟಗಳೆಲ್ಲ
ಮುದ್ದು ಮಾತೆಲ್ಲ

by ಹರೀಶ್ ಶೆಟ್ಟಿ, ಶಿರ್ವ

No comments:

Post a Comment