Sunday, March 9, 2014

ಮುದ್ದು ಮನಸ್ಸು


ಮುದ್ದು ಮನಸ್ಸು
ನೋಡಲು ಹೊರಟಿತು ಒಂದು ಕನಸು

ಮುದ್ದು ಮನಸ್ಸಿನ ನೋಡಿ
ಮುದ್ದು ಮಾತುಗಳ ಆಟ
ಮುದ್ದು ಮಿಡಿತವಿದೆ
ಮುದ್ದು ಉಸಿರಾಟ
ಮುದ್ದು ಹೊರಲಾಟದಿಂದ
ನಿದ್ದೆಯ ಯಾಕೆ ಓಟ
ಮುದ್ದು ಕಣ್ಣ ಮುದ್ದು ಕುಡಿಯಿಂದ
ನೋಡಲಿದೆ ಮುದ್ದು ದೃಷ್ಟಿಯ ಬಿರುನೋಟ

ಮುದ್ದು ಮನಸ್ಸು
ನೋಡಲು ಹೊರಟಿತು ಒಂದು ಕನಸು

ಮುದ್ದು ಜಗತ್ತಲ್ಲಿ ಮುದ್ದಾದ
ಒಂದು ಜೋತೆಗಾರನಿರಬೇಕು
ಈ ಜಾಣ ಜನಜಂಗುಳಿಯಲಿ
ಕೇವಲ ಕೈಯಲ್ಲಿ ನಿನ್ನ ಕೈಯಿರಬೇಕು
ಮುದ್ದು ಯಾವುದೇ ರಾಗದೊಂದಿಗೆ
ಮುದ್ದು ಸಂಗೀತವಿರಬೇಕು
ಮುದ್ದು ಕಾಲುಗಳಿಗೆ
ಮುದ್ದು ಗೀತೆಯಲಿ
ನಲಿಯುವ ಹುಮ್ಮಸ್ಸು

ಮುದ್ದು ಮನಸ್ಸು
ನೋಡಲು ಹೊರಟಿತು ಒಂದು ಕನಸು

ಮುದ್ದು ಕತ್ತಲಿರಲಿ
ಮುದ್ದು ಮೌನತೆವಿರಲಿ
ಕಂಪಿಸುವ ಅಧರವಿರಲಿ
ಮುದ್ದು ಅಮಲಿರಲಿ
ಮುದ್ದು ಸೆರಗು
ಮೆಲ್ಲ ಮೆಲ್ಲನೆ ದಿನ ಕಳೆದಂತೆ
ಮುಖದಿಂದ ಸರಿಯಲೆಂಬ ಮನಸ್ಸು

ಮುದ್ದು ಮನಸ್ಸು
ನೋಡಲು ಹೊರಟಿತು ಒಂದು ಕನಸು

ಮೂಲ/ಹಾಡಿದವರು  : ಸ್ವಾನಂದ್ ಕಿರ್ಕಿರೆ
ಅನುವಾದ :by ಹರೀಶ್ ಶೆಟ್ಟಿ, ಶಿರ್ವ
ಸಂಗೀತ :ಶಾಂತಾನು ಮೊಯ್ತ್ರ
ಚಿತ್ರ : ಹಜಾರೋ ಖ್ವಾಹಿಷೆ ಐಸಿ
bavra mann dekhne chala ek sapna ..

bavrese mann ki dekho bavri hain baatein
bavrese mann ki dekho bavri hain baatein
bavrisi dhadkane hain bavri hain saanse
bavrisi karwanto se nindiya kyon bhaage
bavrese nain chahe bawre zarokhon se bavre naazaroon ko takna

bavra mann dekhne chala ek sapna

bavrese is jahan mein bawra ek saath ho
is saayani bheed mein bass haathon mein tera haath ho
bavrisi dhun ho koi bavra ek raag ho
bavrisi dhun ho koi bavra ek raag ho
bavrese pair chahe bawre tarano ke bavrese bol pe thirkana
bavra mann dekhne chala ek sapna

bavrasa ho andhera bavri khamoshiyaan
thartharati lav ho matthamm bavri madhoshiyaan
bavra ek gunghata chaye hole hole dinn batayein
bavra ek gunghata chaye hole hole dinn batayein
bavrese mukhadese saraktaa
bavra mann dekhne chala ek sapna
www.youtube.com/watch?v=QNB4ah9r79M

2 comments:

  1. ಶಾಂತಾನು ಮೊಯ್ತ್ರ ಅವರ ಬಗ್ಗೆ ಇನ್ನೂ ನಾನು ತಿಳಿದುಕೊಳ್ಳಬೇಕಿದೆ.
    ಭಾವಾನುವಾದ ಚೆನ್ನಾಗಿದೆ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...