Wednesday, March 5, 2014

ಮುಪ್ಪು

ಎಷ್ಟು ಬೇಗ ಕಾಲ ಉರುಳಿತು
ಈ ಬಂಧ ಕಟ್ಟಿಕೊಂಡು
ಮನೆ ಮಕ್ಕಳು ಬೇಕಾದುದ್ದೆಲ್ಲ ಮಾಡಿ ಆಯಿತು
"ಅಲ್ಲವೇ ಪ್ರಿಯೆ"
ಎಷ್ಟು ಸುಂದರವಾಗಿತ್ತಲ್ಲ ನಮ್ಮ ಈ ಸಂಸಾರ
ಇಷ್ಟು ಬೇಗನೆ ಮುಪ್ಪು ಆವರಿಸಬಹುದೆಂದು ಯೋಚಿಸಿರಲಿಲ್ಲ

ಇದ್ದ ಮೂರು ಮಕ್ಕಳು ಬೇಗನೆ
ಒಬ್ಬರೊಬ್ಬರನ್ನು ದೂರಿ ನಮ್ಮನ್ನು ಬಿಟ್ಟು
ತನ್ನ ಜವಾಬ್ದಾರಿಯಿಂದ ಮುಕ್ತರಾದರು
"ಪ್ರಿಯೆ"
ಈಗ ನನಗೆ ನೀನೆ ಹಾಗು
ನಿನಗೆ ನಾನೇ ಆಸರೆ

ವಯಸ್ಸಾದಂತೆ
ಕಾಯಿಲೆಗಳು ಮಿತ್ರರಾಗುತ್ತಾರೆ
ನಮ್ಮಿಬ್ಬರಿಗೂ ಅದೆಷ್ಟು ಮಿತ್ರರು
"ಆಯ್ಯೋ"
ಇದೇನು ನೀನು ಇಷ್ಟು ಬೇಗನೆ ಹಾಸಿಗೆ ಸೇರಿದೆ ಅಲ್ಲವೇ
ನನ್ನ ಮನಸ್ಸಲ್ಲಿ ಭಯ ಏಕೆ ಮೂಡುತ್ತಿದೆ

ಏನನ್ನು ಕಾಯುತ್ತಿರುವೆ ನೀನು ಪ್ರಿಯೆ
ಎಂಥ ಚಿಂತೆ ಕಾಡುತ್ತಿದೆ ನಿನಗೆ
ಮಕ್ಕಳು ಬರಲಿಲ್ಲವೇ
"ಒಹ್ "
ತಿಳಿಸಿದ್ದೇನೆ ಪ್ರಿಯೆ ಪತ್ರ ಹಾಕಿದ್ದೇನೆ, ಅವರು ಬರುತ್ತಾರಂತೆ
ನಿನ್ನ ಕಣ್ಣು ಯಾಕೆ ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ನುಡಿಯುತ್ತಿದೆ

ಬೇಡ ಪ್ರಿಯೆ ಬೇಡ
ನನ್ನನ್ನು ಬಿಟ್ಟು ಹೋಗಬೇಡ
ನನಗ್ಯಾರು ಗತಿ ಇನ್ನು
"ನನ್ನೊಲವೆ"
ಮಾತಾಡುವುದಿಲ್ಲ ಯಾಕೆ ನೀನು
ಹೊರಟೆಯ ಬಿಟ್ಟು... ಹೊರಟೆ ಬಿಟ್ಟೆಯ....

by ಹರೀಶ್ ಶೆಟ್ಟಿ,ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...