Sunday, March 30, 2014

ನೀನು ಅಡಗಿರುವೆ ಎಲ್ಲಿ


ನೀನು ಅಡಗಿರುವೆ ಎಲ್ಲಿ
ನಾನು ಹಂಬಲಿಸುವೆ ಇಲ್ಲಿ
ನೀನಿಲ್ಲದೆ ತಳಮಳ
ನನ್ನ ಮನಸ್ಸ ಪ್ರಪಂಚದಲಿ
ನೀನು ಅಡಗಿರುವೆ ಎಲ್ಲಿ
ನಾನು ಹಂಬಲಿಸುವೆ ಇಲ್ಲಿ
ನೀನು ಹೋದಂತೆ ಮರೆಯಾಯಿತು
ಬಣ್ಣ ಅದೆಲ್ಲಿ
ನೀನು ಅಡಗಿರುವೆ ಎಲ್ಲಿ
ನಾನು ಹಂಬಲಿಸುವೆ ಇಲ್ಲಿ

ಹೃದಯದ ಸಭೆಯಲಿ
ನೀನು ನನಗೆ ಸಿಗದಿದ್ದಾಗ
ಉಸಿರಾಡುವೆ ಬಂದು
ಈ ಏಕಾಂತದಲಿ
ಈ ವಸಂತದಲಿ
ನಿನ್ನನ್ನು ಪಡೆಯದಿದ್ದಾಗ-೨
ಚಡಪಡಿಸುವೆ ಬಂದು ಈ ನಿರ್ಜನದಲಿ
ನೀನಿಲ್ಲದೆ ತಳಮಳ
ನನ್ನ ಮನಸ್ಸ ಪ್ರಪಂಚದಲಿ
ನೀನು ಅಡಗಿರುವೆ ಎಲ್ಲಿ
ನಾನು ಹಂಬಲಿಸುವೆ ಇಲ್ಲಿ

ಈ ಮರುಳು ಕಂಗಳು
ಮರೆಯಾಗಿದೆ
ನಿನ್ನ ವರ್ಣಮಯ
ಸ್ವಪ್ನದ ವರ್ಣದಲಿ
ಉತ್ಸಾಹದಲಿ
ನಿನ್ನನ್ನು ಕಾಣದಿದ್ದಾಗ-೨
ಹುಡುಕುವೆ ನಿನ್ನನ್ನು
ದುಃಖದ ತರಂಗದಲಿ
ನೀನಿಲ್ಲದೆ ತಳಮಳ
ನನ್ನ ಮನಸ್ಸ ಪ್ರಪಂಚದಲಿ
ನೀನು ಅಡಗಿರುವೆ ಎಲ್ಲಿ
ನಾನು ಹಂಬಲಿಸುವೆ ಇಲ್ಲಿ
ನೀನು ಅಡಗಿರುವೆ ಎಲ್ಲಿ
ಅಡಗಿರುವೆ ಎಲ್ಲಿ
ಅಡಗಿರುವೆ ಎಲ್ಲಿ

ನಾನು ಅಡಗಿರುವೆ ನಲ್ಲ
ನಿನ್ನ ಕಣ್ರೆಪ್ಪೆಯಲಿ
ನಿನ್ನ ಹೃದಯ ಮಿಡಿತದಲಿ
ನಿನ್ನ ಪ್ರತಿ ಉಸಿರಲಿ
ನಾನು ಅಡಗಿರುವೆ ಎಲ್ಲಿ
ನನ್ನ ಈ ರಹಸ್ಯ ಕೇಳು
ನೋವಿನ ರಾಗದ
ಈ ಸಂಗೀತ ಕೇಳು
ನನ್ನ ಅಳುತ್ತಿದ್ದ ಹೃದಯದ ಕರೆ ಕೇಳು

ನಿನ್ನ ನನ್ನ ಮಿಲನ ಆಗುವ ತನಕ
ನಾನು ಆಕಾಶ ಭೂಮಿಯನ್ನು
ಅಲುಗಾಡಿಸುತ್ತಿರುವೆ
ಕೊನೆ ಆಶಯ ತನಕ
ಕೊನೆ ಉಸಿರು ತನಕ
ಸ್ವತಃ ಚಡಪಡಿಸುವೆ
ನಿನ್ನನ್ನೂ ಚಡಪಡಿಸುತ್ತಿರುವೆ

ಇದು ಯಾವ ಕಾಲ್ಗೆಜ್ಜೆ ಕೇಳಿತು
ಇದು ಯಾವ ಚಂದ್ರ ಬೆಳಗಿತು
ಈ ಧರತಿಯಲಿ ಹುಣ್ಣಿಮೆಯ ಆಕಾಶ ಬಂತು
ಇದು ಯಾವ ಹೂವು ಅರಳಿತು
ಇದು ಯಾವ ಹಕ್ಕಿಯ ಚಿಲಿಪಿಲಿ ಕೇಳಿತು
ಸಭೆಯಲಿ ಇದೆಂಥ ಸುಗಂಧ ಹರಡಿತು
ಅಂದರೆ ಮನಸ್ಸಿಗೆ ಅಮಲೇರಿತು
ನೋಡಿ ದೇಹದಲಿ ಪ್ರಾಣ ಬಂತು
ಅಧರದಲಿ ಗೀತೆ ಬಂತು
ನನ್ನ ಚಕೋರಿ ಬೆಳದಿಂಗಳಲಿ ಸ್ನಾನ ಮಾಡಿ ಬಂದಲಿಂದು
ಅಗಲಿದ ಒಲವು ಬಂತು
ಜೀವನದ ಗೀತೆ ಬಂತು
ಎರಡು ಆತ್ಮಗಳ ಮಿಲನದ ಪಾವನ ಸಮಯ ಬಂತು
ನನ್ನ ಸ್ವಪ್ನದ ನೀನೆ ರೂಪ ನನ್ನ ಜೀವನಿ
ಜಮುನ ನೀನೆ ನೀನೆ ನನ್ನ ಮೋಹಿನಿ

ನೀನಿಲ್ಲದೆ ತಳಮಳ
ನನ್ನ ಮನಸ್ಸ ಪ್ರಪಂಚದಲಿ
ನೀನು ಅಡಗಿರುವೆ ಎಲ್ಲಿ
ನಾನು ಹಂಬಲಿಸುವೆ ಇಲ್ಲಿ
ನೀನು ಅಡಗಿರುವೆ ಎಲ್ಲಿ
ಅಡಗಿರುವೆ ಎಲ್ಲಿ


ಮೂಲ: ಭರತ್ ವ್ಯಾಸ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಆಶಾ ಭೋಂಸ್ಲೆ, ಮನ್ನಾ ಡೇ
ಸಂಗೀತ : ಸಿ. ರಾಮಚಂದ್ರ
ಚಿತ್ರ : ನವರಂಗ್

aa
tu chhupi hai kahaan main tadaptaa yahaan
tere bin pheekaa pheekaa hai dil kaa jahaan
chhupi hai kahaan main tadaptaa yahaan
tu gayi ud gayaa rang jaane kahaan
tere bin pheekaa pheekaa hai dil kaa jahaan
chhupi hai kahaan main tadaptaa yahaan
dil ki mahfil mein jab naa mujhe tum mile
saans leti hoon aa ke is sunsaan mein
in bahaaron mein jab naa tujhe paa saki
in bahaaron mein jab naa tujhe paa saki
to tadapti hoon aa ke is veeraan mein
tere bin pheekaa pheekaa hai dil kaa jahaan
chhupi hai kahaan main tadaptaa yahaan
ye nazren deewaani tu khoyi huyi
tere rangeen sapnon ke rangon mein
umangon mein jab naa tujhe paa saki
umangon mein jab naa tujhe paa saki
dhoondhti hoon main gham ki tarangon mein
tere bin pheekaa pheekaa hai dil kaa jahaan
chhupi hai kahaan main tadaptaa yahaan
tu chhupi hai kahaan
chhupi hai kahaan
chhupi hai kahaan
main chhupi hoon piyaa teri palakan mein
teri dhadkan mein, teri har saans mein,
teri har aas mein
main chhupi hoon kahaan meraa ye raaz sun
dard ke haathon gham se bharaa saaz sun
mere rote huye dil ki aawaaz sun
jab talak teraa meraa na hogaa milan
main zameen aasmaan ko hilaati rahoongi
aakhri aas tak aakhri saans tak
khud tadpoongi aur tadpaati rahoongi
ye kaun ghunghroo jhamkaa
ye kaun chaand chamkaa
ye dharti pe aasmaan aa gayaa poonam kaa
ye kaun phool mahkaa
ye kaun panchhi chahkaa
mahfil mein kaisi khushboo udi dil jo meraa bahkaa
lo tan mein jaan aayi, honthon pe taan aayi
meri chakori chaandni mein kar ke snaan aayi
bichhdaa wo meet aayaa, jeewan kaa geet aayaa
do aatmaaon ke milan kaa din puneet aayaa
soorat hai mere sapnon ki tu sohini
jamunaa tu hi hai tu hi meri mohini
tere bin pheekaa pheekaa hai dil kaa jahaan
chhupi hai kahaan main tadaptaa yahaan
tu chhupi hai kahaan
chhupi hai kahaan
chhupi hai kahaan

2 comments:

  1. ತ್ಯಾಗರಾಜ್ ಪೆಂಡಾರ್ಕರ್ ಅವರ ಛಾಯಾಗ್ರಹಣವಿದ್ದ ನವರಂಗ್ ಚಿತ್ರದ ಒಳ್ಳೆಯ ಗೀತೆಗೆ ಒಳ್ಳೆಯ ಭಾವಾನುವಾದ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...