Thursday, March 13, 2014

ಹಿಜಡಾ

ನಾನೇಕೆ ಹೀಗೆ?
ನಾನು ಗಂಡು
ಆದರೆ ನನ್ನೊಳಗೆ ಯಾಕೆ ಹೆಣ್ಣಿನ ಭಾವನೆ
ಅಡುಗೆ ಮಾಡುವುದು
ಮನೆಗೆಳಸದಲಿ ರುಚಿ
ರಂಗೋಲಿ ಹಾಕುವುದು
ಹುಡುಗಿಯರ ಜೊತೆ ಓಡಾಡುವುದು
ನನಗ್ಯಾಕೆ ಇದರಲೆಲ್ಲ ಖುಷಿ, ಆನಂದ
ನನ್ನಲ್ಲಿ ಯಾಕೆ ಈ ಹೆಣ್ಣ ಭಾವಗಳು ಸಹಜವಾಗಿ ಮೂಡುತ್ತಿವೆ
ಆದರೆ ಇವರೆಲ್ಲ ಯಾಕೆ
ನಾನು ಅಸಹಜವಾಗಿ ವರ್ತಿಸುತ್ತಿದ್ದೇನೆ ಎನ್ನುತ್ತಿದ್ದಾರೆ

ಅಯ್ಯೋ ನನ್ನ ಮನೆಯಲ್ಲಿಯೇ
ನನ್ನಿಂದ ಈ ತರಹದ ವರ್ತನೆಯೇ
ಇನ್ನು ಬೇಡ, ಬೇಡ ಈ ಮನೆ
ಓಡಿ ಹೋಗುವೆ ಇಲ್ಲಿಂದ,
ಮನೆಯಿಂದ ದೂರವಾದೆ
ಅವನು ಓಡಿ ಹೋದದ್ದು ಒಳ್ಳೆಯದಾಯಿತು
ಸುಮ್ಮನೆ ನಮಗೆ ಉಪದ್ರ
ಎಂದು ಅವರು ಎನಿಸಿರಬಹುದು  

ಬಂದೆ, ಈ ಹೊಸ ಜಗತಲ್ಲಿ
ಇಲ್ಲಿ ಎಲ್ಲರೂ ನನ್ನ ಹಾಗೆಯೇ
ಕಡೆಗೆ ಸಿಕ್ಕಿದರು ನನ್ನನ್ನು
ಅರ್ಥ ಮಾಡುವವರು
ಆದರೆ ಬೇಸರ, ಮನೆಯವರಂತೆ
ಈ ಸಮಾಜದ ಗಣ್ಯರು ಸಹ
ನಮ್ಮನ್ನು ಅಸಹ್ಯ ತಾತ್ಸಾರದ
ದೃಷ್ಟಿಯಿಂದ ನೋಡುತ್ತಾರೆ
ನಮ್ಮನ್ನು ಜೋಗಪ್ಪ, ಹಿಜಡಾ, ಖೋಜಾ
ಎಂಬ ಹಲವು ಹೆಸರಿಂದ ಕರೆಯುತ್ತಾರೆ

by ಹರೀಶ್ ಶೆಟ್ಟಿ,ಶಿರ್ವ 

2 comments:

  1. ಈ ಮೂರನೇ ಲಿಂಗದವರನ್ನೂ ಸಹೃದಯದಿಂದ ಗಮನಿಸಿದ ಈವೇ ಮಾನ್ಯರು.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...