Sunday, March 30, 2014

ನೀನು ಅಡಗಿರುವೆ ಎಲ್ಲಿ


ನೀನು ಅಡಗಿರುವೆ ಎಲ್ಲಿ
ನಾನು ಹಂಬಲಿಸುವೆ ಇಲ್ಲಿ
ನೀನಿಲ್ಲದೆ ತಳಮಳ
ನನ್ನ ಮನಸ್ಸ ಪ್ರಪಂಚದಲಿ
ನೀನು ಅಡಗಿರುವೆ ಎಲ್ಲಿ
ನಾನು ಹಂಬಲಿಸುವೆ ಇಲ್ಲಿ
ನೀನು ಹೋದಂತೆ ಮರೆಯಾಯಿತು
ಬಣ್ಣ ಅದೆಲ್ಲಿ
ನೀನು ಅಡಗಿರುವೆ ಎಲ್ಲಿ
ನಾನು ಹಂಬಲಿಸುವೆ ಇಲ್ಲಿ

ಹೃದಯದ ಸಭೆಯಲಿ
ನೀನು ನನಗೆ ಸಿಗದಿದ್ದಾಗ
ಉಸಿರಾಡುವೆ ಬಂದು
ಈ ಏಕಾಂತದಲಿ
ಈ ವಸಂತದಲಿ
ನಿನ್ನನ್ನು ಪಡೆಯದಿದ್ದಾಗ-೨
ಚಡಪಡಿಸುವೆ ಬಂದು ಈ ನಿರ್ಜನದಲಿ
ನೀನಿಲ್ಲದೆ ತಳಮಳ
ನನ್ನ ಮನಸ್ಸ ಪ್ರಪಂಚದಲಿ
ನೀನು ಅಡಗಿರುವೆ ಎಲ್ಲಿ
ನಾನು ಹಂಬಲಿಸುವೆ ಇಲ್ಲಿ

ಈ ಮರುಳು ಕಂಗಳು
ಮರೆಯಾಗಿದೆ
ನಿನ್ನ ವರ್ಣಮಯ
ಸ್ವಪ್ನದ ವರ್ಣದಲಿ
ಉತ್ಸಾಹದಲಿ
ನಿನ್ನನ್ನು ಕಾಣದಿದ್ದಾಗ-೨
ಹುಡುಕುವೆ ನಿನ್ನನ್ನು
ದುಃಖದ ತರಂಗದಲಿ
ನೀನಿಲ್ಲದೆ ತಳಮಳ
ನನ್ನ ಮನಸ್ಸ ಪ್ರಪಂಚದಲಿ
ನೀನು ಅಡಗಿರುವೆ ಎಲ್ಲಿ
ನಾನು ಹಂಬಲಿಸುವೆ ಇಲ್ಲಿ
ನೀನು ಅಡಗಿರುವೆ ಎಲ್ಲಿ
ಅಡಗಿರುವೆ ಎಲ್ಲಿ
ಅಡಗಿರುವೆ ಎಲ್ಲಿ

ನಾನು ಅಡಗಿರುವೆ ನಲ್ಲ
ನಿನ್ನ ಕಣ್ರೆಪ್ಪೆಯಲಿ
ನಿನ್ನ ಹೃದಯ ಮಿಡಿತದಲಿ
ನಿನ್ನ ಪ್ರತಿ ಉಸಿರಲಿ
ನಾನು ಅಡಗಿರುವೆ ಎಲ್ಲಿ
ನನ್ನ ಈ ರಹಸ್ಯ ಕೇಳು
ನೋವಿನ ರಾಗದ
ಈ ಸಂಗೀತ ಕೇಳು
ನನ್ನ ಅಳುತ್ತಿದ್ದ ಹೃದಯದ ಕರೆ ಕೇಳು

ನಿನ್ನ ನನ್ನ ಮಿಲನ ಆಗುವ ತನಕ
ನಾನು ಆಕಾಶ ಭೂಮಿಯನ್ನು
ಅಲುಗಾಡಿಸುತ್ತಿರುವೆ
ಕೊನೆ ಆಶಯ ತನಕ
ಕೊನೆ ಉಸಿರು ತನಕ
ಸ್ವತಃ ಚಡಪಡಿಸುವೆ
ನಿನ್ನನ್ನೂ ಚಡಪಡಿಸುತ್ತಿರುವೆ

ಇದು ಯಾವ ಕಾಲ್ಗೆಜ್ಜೆ ಕೇಳಿತು
ಇದು ಯಾವ ಚಂದ್ರ ಬೆಳಗಿತು
ಈ ಧರತಿಯಲಿ ಹುಣ್ಣಿಮೆಯ ಆಕಾಶ ಬಂತು
ಇದು ಯಾವ ಹೂವು ಅರಳಿತು
ಇದು ಯಾವ ಹಕ್ಕಿಯ ಚಿಲಿಪಿಲಿ ಕೇಳಿತು
ಸಭೆಯಲಿ ಇದೆಂಥ ಸುಗಂಧ ಹರಡಿತು
ಅಂದರೆ ಮನಸ್ಸಿಗೆ ಅಮಲೇರಿತು
ನೋಡಿ ದೇಹದಲಿ ಪ್ರಾಣ ಬಂತು
ಅಧರದಲಿ ಗೀತೆ ಬಂತು
ನನ್ನ ಚಕೋರಿ ಬೆಳದಿಂಗಳಲಿ ಸ್ನಾನ ಮಾಡಿ ಬಂದಲಿಂದು
ಅಗಲಿದ ಒಲವು ಬಂತು
ಜೀವನದ ಗೀತೆ ಬಂತು
ಎರಡು ಆತ್ಮಗಳ ಮಿಲನದ ಪಾವನ ಸಮಯ ಬಂತು
ನನ್ನ ಸ್ವಪ್ನದ ನೀನೆ ರೂಪ ನನ್ನ ಜೀವನಿ
ಜಮುನ ನೀನೆ ನೀನೆ ನನ್ನ ಮೋಹಿನಿ

ನೀನಿಲ್ಲದೆ ತಳಮಳ
ನನ್ನ ಮನಸ್ಸ ಪ್ರಪಂಚದಲಿ
ನೀನು ಅಡಗಿರುವೆ ಎಲ್ಲಿ
ನಾನು ಹಂಬಲಿಸುವೆ ಇಲ್ಲಿ
ನೀನು ಅಡಗಿರುವೆ ಎಲ್ಲಿ
ಅಡಗಿರುವೆ ಎಲ್ಲಿ


ಮೂಲ: ಭರತ್ ವ್ಯಾಸ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಆಶಾ ಭೋಂಸ್ಲೆ, ಮನ್ನಾ ಡೇ
ಸಂಗೀತ : ಸಿ. ರಾಮಚಂದ್ರ
ಚಿತ್ರ : ನವರಂಗ್

aa
tu chhupi hai kahaan main tadaptaa yahaan
tere bin pheekaa pheekaa hai dil kaa jahaan
chhupi hai kahaan main tadaptaa yahaan
tu gayi ud gayaa rang jaane kahaan
tere bin pheekaa pheekaa hai dil kaa jahaan
chhupi hai kahaan main tadaptaa yahaan
dil ki mahfil mein jab naa mujhe tum mile
saans leti hoon aa ke is sunsaan mein
in bahaaron mein jab naa tujhe paa saki
in bahaaron mein jab naa tujhe paa saki
to tadapti hoon aa ke is veeraan mein
tere bin pheekaa pheekaa hai dil kaa jahaan
chhupi hai kahaan main tadaptaa yahaan
ye nazren deewaani tu khoyi huyi
tere rangeen sapnon ke rangon mein
umangon mein jab naa tujhe paa saki
umangon mein jab naa tujhe paa saki
dhoondhti hoon main gham ki tarangon mein
tere bin pheekaa pheekaa hai dil kaa jahaan
chhupi hai kahaan main tadaptaa yahaan
tu chhupi hai kahaan
chhupi hai kahaan
chhupi hai kahaan
main chhupi hoon piyaa teri palakan mein
teri dhadkan mein, teri har saans mein,
teri har aas mein
main chhupi hoon kahaan meraa ye raaz sun
dard ke haathon gham se bharaa saaz sun
mere rote huye dil ki aawaaz sun
jab talak teraa meraa na hogaa milan
main zameen aasmaan ko hilaati rahoongi
aakhri aas tak aakhri saans tak
khud tadpoongi aur tadpaati rahoongi
ye kaun ghunghroo jhamkaa
ye kaun chaand chamkaa
ye dharti pe aasmaan aa gayaa poonam kaa
ye kaun phool mahkaa
ye kaun panchhi chahkaa
mahfil mein kaisi khushboo udi dil jo meraa bahkaa
lo tan mein jaan aayi, honthon pe taan aayi
meri chakori chaandni mein kar ke snaan aayi
bichhdaa wo meet aayaa, jeewan kaa geet aayaa
do aatmaaon ke milan kaa din puneet aayaa
soorat hai mere sapnon ki tu sohini
jamunaa tu hi hai tu hi meri mohini
tere bin pheekaa pheekaa hai dil kaa jahaan
chhupi hai kahaan main tadaptaa yahaan
tu chhupi hai kahaan
chhupi hai kahaan
chhupi hai kahaan

ಮೌನ ರಾತ್ರಿ

ಕತ್ತಲು ರಾತ್ರಿ
ಎಲ್ಲೆಡೆ ನೀರವತೆ
ತಾಳಲಾರದ ಚಳಿ
ತಂಪು ನೆಲ
ಕಂಪಿಸುವ ದೀಪ
ಸುಸ್ತು ಉಸಿರು
ಬತ್ತಿದ ಕಂಗಳು
ವ್ಯಾಕುಲ ಮನಸ್ಸು
ಆತುರ ಹೃದಯ
ಬರುವನೆಂದು ಆಸೆ!
ಸುಳ್ಳು ನಿರೀಕ್ಷೆ
ಯಾಕೆ ಬರುತ್ತಾನೆ
ಈ ಹೃದಯದ ಗಾಯ ನೋಡಲು!
ಈ ವೇದನೆಯನ್ನು ಅರಿತುಕೊಳ್ಳುವವರು ಯಾರು?
ಭಯಭೀತ ಜೀವನ
ದಿನನಿತ್ಯ ಮರಣ
ಕ್ಷಣ ಎರಡು ಕ್ಷಣದ ತೃಪ್ತಿಯ ಆಸೆಯಲಿ
ಉಸಿರು ಉಳಿದಿದೆ ಈ ದೇಹದಲಿ

ಮೌನ ರಾತ್ರಿ
ಎಲ್ಲೆಡೆ ನೀರವತೆ...

by ಹರೀಶ್ ಶೆಟ್ಟಿ,ಶಿರ್ವ  

Saturday, March 29, 2014

ಕತ್ತಲ ಅಮಾವಾಸ್ಯೆ

ಅದೇಕೋ ಹೂ ಅರಳುವುದಿಲ್ಲ 
ಈಗ ನನ್ನ ಮನೆಯಂಗಳದಲಿ

ಅದೇಕೋ ನಿದ್ದೆ ಬರುವುದಿಲ್ಲ 
ಈಗ ರಾತ್ರಿಯ ನಿಶೆಯಲಿ 

ಕನಸು ಮುನಿಸಿಕೊಂಡಿದೆ 
ಸನಿಹ ಸುಳಿಯುವುದೇ ಇಲ್ಲ 

ಹೃದಯ ಬಂಜರ ಭೂಮಿಯಾಗಿದೆ 
ಎಷ್ಟೇ ಪ್ರಯತ್ನಿಸಿದರೂ ಮಿಡಿಯುವುದಿಲ್ಲ

ಪ್ರೇಮ ಚಂದ್ರ ಕರಗಿ ಕರಗಿ ಮರೆಯಾಗಿದೆ
ಜೀವನದಲಿ ಕತ್ತಲ ಅಮಾವಾಸ್ಯೆ

by ಹರೀಶ್ ಶೆಟ್ಟಿ, ಶಿರ್ವ

ಅಸ್ತಾದ್ರಿ ರವಿ

ಅಸ್ತಾದ್ರಿ ರವಿ 
ತುಂಬಿ ಬಂತು ವರುಷ 
ನೆನಪು ನಿತ್ಯ 

by ಹರೀಶ್ ಶೆಟ್ಟಿ,ಶಿರ್ವ

Thursday, March 27, 2014

ಯಾರಿಗೂ ಎಂದೂ

ಯಾರಿಗೂ ಎಂದೂ
ಸಂಪೂರ್ಣ ಜಗತ್ತು ಸಿಗುವುದಿಲ್ಲ
ಎಲ್ಲೋ ಭೂಮಿಯಾದರೆ
ಎಲ್ಲೊ ಆಕಾಶ ಸಿಗುವುದಿಲ್ಲ

ಯಾರಿಗೂ ನೋಡಿದರೂ
ತನ್ನಲ್ಲಿಯೇ ಮಗ್ನನಾಗಿದ್ದಾನೆ
ಮಾತು ಸಿಕ್ಕಿದೆ
ಆದರೆ ಮಾತನಾಡುವವರು ಸಿಗುವುದಿಲ್ಲ
ಯಾರಿಗೂ ಎಂದೂ ......

ಅದ್ಯಾರಿಗೆ ಸಾಧ್ಯವಾಗುವುದು
ನಂದಿಸಲು ಸಮಯದ ಜ್ವಾಲೆಯನ್ನು
ಇದು ಈ ರೀತಿಯ ಬೆಂಕಿ ಅಂದರೆ
ಇದರಲಿ ಹೊಗೆ ಸಿಗುವುದಿಲ್ಲ
ಯಾರಿಗೂ ಎಂದೂ......

ನಿನ್ನ ಜಗತ್ತಲ್ಲಿ
ಪ್ರೀತಿ ಇಲ್ಲವೆಂದಿಲ್ಲ
ಆದರೆ ಎಲ್ಲಿ ಇದರ ನಿರೀಕ್ಷೆ ಇದೆಯೋ
ಅಲ್ಲಿ ಸಿಗುವುದಿಲ್ಲ
ಯಾರಿಗೂ ಎಂದೂ......

ಮೂಲ : ನಿದಾ ಫಾಜ್ಲಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಆಶಾ ಭೋಂಸ್ಲೆ, ಬುಪಿಂದರ್ ಸಿಂಗ್
ಸಂಗೀತ : ಖಯ್ಯಾಮ್
ಚಿತ್ರ : ಆಹಿಸ್ತಾ ಆಹಿಸ್ತಾ

कभी किसी को मुकम्मल जहाँ नहीं मिलता
कहीं ज़मीन तो कहीं आसमान नहीं मिलता

जिसे भी देखिये वो अपने आप में गुम है
ज़ुबाँ मिली है मगर हमज़ुबाँ नहीं मिलता
कभी किसी को मुकम्मल......

बुझा सका है भला कौन वक़्त के शोले
ये ऐसी आग है जिसमे धुआँ नहीं मिलता
कभी किसी को मुकम्मल......

तेरे जहाँ में ऐसा नहीं कि प्यार न हो
जहाँ उम्मीद हो इसकी, वहाँ नहीं मिलता
कभी किसी को मुकम्मल......
http://www.youtube.com/watch?v=Uc30N-_rUoA

Wednesday, March 26, 2014

ಬಷೀರ್ ಬದ್ರ್

ವೈರತ್ವ ಬೇಕಾದಷ್ಟು ಮಾಡಿ ಆದರೆ ಇಷ್ಟೊಂದು ಅವಕಾಶವಿರಲಿ
ಯಾವಾಗಲೊಮ್ಮೆ ನಾವು ಮಿತ್ರರಾದರೆ ತಲೆ ತಗ್ಗದಿರಲಿ
ಸಿರಿವಂತರಿಂದ ಸಿಗುವಾಗ ಯಾವಗಲು ಅಂತರವಿರಲಿ
ನದಿ ಸಮುದ್ರ ಸೇರಿದಾಗ, ನದಿಯ ಅಸ್ತಿತ್ವ ಮುಗಿಯುತ್ತದೆ
ನಿನ್ನ ಶಹರ ಒಂದು ಹೊಸ ಶೈಲಿಯದ್ದು
ನಮ್ಮ ಶಹರದಲ್ಲಿ ಕೂಡ ಈಗ ಯಾರು ನಮ್ಮಂತೆ ಇರುವುದಿಲ್ಲ
ಎಲ್ಲ ಸಂಬಂಧಗಳನ್ನು ಮನೆಯಲ್ಲಿ ಬಿಟ್ಟು ಬಂದಿದೆ
ಮತ್ತೆ ಅದರ ನಂತರ ನನಗ್ಯಾರು ಅಪರಿಚಿತರೇ ಸಿಗಲಿಲ್ಲ
ಜೀವನ ನೀನು ನನಗೆ ಗೋರಿಗಿಂತಲೂ ಕಡಿಮೆ ಭೂಮಿ ನೀಡಿದೆ
ಕಾಲು ಚಾಚಿದರೆ ಗೋಡೆಗೆ ತಲೆ ತಾಗುತ್ತದೆ
ಮೂಲ : ಬಷೀರ್ ಬದ್ರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
दुश्मनी जम कर करो लेकिन ये गुँजाइश रहे
जब कभी हम दोस्त हो जायें तो शर्मिन्दा न हों
बडे लोगों से मिलने में हमेशा फ़ासला रखना
जहाँ दरिया समन्दर में मिले, दरिया नहीं रहता
तुम्हारा शहर तो बिल्कुल नये अन्दाज वाला है
हमारे शहर में भी अब कोई हमसा नहीं रहता
तमाम रिश्तों को मैं घर पे छोड़ आया था।
फिर उस के बाद मुझे कोई अजनबी नहीं मिला
ज़िन्दगी तूने मुझे कब्र से कम दी है ज़मीं
पाँव फैलाऊँ तो दीवार में सर लगता है
Bashir badr

ನಾ ನೀನಿಲ್ಲದೆ ಇನ್ನು ಬದುಕಲಾರೆ

ನಾ ನೀನಿಲ್ಲದೆ ಇನ್ನು ಬದುಕಲಾರೆ
ನಿನ್ನ ವಿನಾಃ ಏನು ಅಸ್ತಿತ್ವ ನನ್ನ

ನಿನ್ನಿಂದ ಒಂದು ವೇಳೆ ಅಗಲಿದರೆ
ನನ್ನಿಂದಲೇ ನಾನು ಅಗಲಿ ಹೋಗುವೆನು

ಏಕೆಂದರೆ ನೀನೆ
ಈಗ ನೀನೆ
ಜೀವನ ಈಗ ನೀನೆ
ನೆಮ್ಮದಿ ಸಹ, ನನ್ನ ನೋವು ಸಹ
ನನ್ನೊಲವು ಈಗ ನೀನೆ

ನಿನ್ನ ನನ್ನ ನಂಟು ಹೇಗೆಂದು ಹೇಳಲಿ
ಒಂದು ಕ್ಷಣ ಸಹ ದೂರ ಇರಲಾರೆ
ನಿನಗೋಸ್ಕರ ದಿನನಿತ್ಯ ಬದುಕುವೆ
ನಿನಗೆ ನೀಡಿದೆ ನನ್ನೆಲ್ಲ ಸಮಯ
ಯಾವುದೇ ಕ್ಷಣ ನನ್ನ ಇರಬಾರದು ನಿನ್ನ ವಿನಾಃ
ಪ್ರತಿ ಉಸಿರಲಿ ನಿನ್ನೆಸರು

ಏಕೆಂದರೆ ನೀನೆ
ಈಗ ನೀನೆ
ಜೀವನ ಈಗ ನೀನೆ
ನೆಮ್ಮದಿ ಸಹ, ನನ್ನ ನೋವು ಸಹ
ನನ್ನೊಲವು ಈಗ ನೀನೆ

ನೀನೆ.... ನೀನೆ....
ನಿನಗಾಗಿ ಬದುಕಿದೆ ನಾನು
ತನ್ನನ್ನು ನಿನಗೆ ಹೀಗೆ ನೀಡಿದ್ದೇನೆ
ನಿನ್ನ ನಿಷ್ಠೆ ನನ್ನನ್ನು ನಿರ್ವಹಿಸಿದೆ
ಎಲ್ಲ ದುಃಖವನ್ನು ಮನಸ್ಸಿನಿಂದ ತೆಗೆದಿದ್ದೇನೆ
ನಿನ್ನಿಂದ ನನ್ನ ಭಾಗ್ಯ ಸೇರಿದೆ
ನಿನ್ನನ್ನು ಪಡೆದು ಅಪೂರ್ಣ ಉಳಿಯಲಿಲ್ಲ

ಏಕೆಂದರೆ ನೀನೆ
ಈಗ ನೀನೆ
ಜೀವನ ಈಗ ನೀನೆ
ನೆಮ್ಮದಿ ಸಹ, ನನ್ನ ನೋವು ಸಹ
ನನ್ನೊಲವು ಈಗ ನೀನೆ

ಮೂಲ/ಸಂಗೀತ : ಮಿಥೂನ್
ಅನುವಾದ: ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಅರಿಜಿತ್ ಸಿಂಗ್
ಚಿತ್ರ : ಆಶಿಕಿ

Hum tere bin ab reh nahi sakte
Tere bina kya wajood mera (x2)

Tujhse juda gar ho jaayenge
Toh khud se hi ho jaayenge judaa

Kyunki tum hi ho
Ab tum hi ho
Zindagi ab tum hi ho
Chain bhi, mera dard bhi
Meri aashiqui ab tum hi ho

Tera mera rishta hai kaisa
Ik pal door gawara nahi
Tere liye har roz hai jeete
Tujh ko diya mera waqt sabhi
Koi lamha mera na ho tere bina
Har saans pe naam tera

Kyunki tum hi ho
Ab tum hi ho
Zindagi ab tum hi ho
Chain bhi, mera dard bhi
Meri aashiqui ab tum hi ho

Tumhi ho... Tumhi ho...
Tere liye hi jiya main
Khud ko jo yun de diya hai
Teri wafa ne mujhko sambhala
Saare ghamon ko dil se nikala
Tere saath mera hai naseeb juda
Tujhe paake adhoora naa raha hmm..

Kyunki tum hi ho
Ab tum hi ho
Zindagi ab tum hi ho..
Chain bhi, mera dard bhi
Meri aashiqui ab tum hi ho (x2)
http://www.youtube.com/watch?v=Umqb9KENgmk&feature=kp

Tuesday, March 25, 2014

ಈ ಪವನದಲಿ ಈ ಪರಿಸರದಲಿ

ಈ ಪವನದಲಿ
ಈ ಪರಿಸರದಲಿ
ನಿನಗೆ ನನ್ನ ಪ್ರೀತಿ ಕರೆಯುತ್ತಿದೆ
ಬಾ  ಬಾರೆ
ನಿನ್ನನ್ನು ನನ್ನ ಪ್ರೀತಿ ಕರೆಯುತ್ತಿದೆ

ನಿಲ್ಲಲಾರೆ ನಾನು
ಸೆಳೆಯುತ ಬರುವೆ ನಾನು
ಹೃದಯವನ್ನು ಹೃದಯವಂತನ ಬಯಕೆ ಕರೆಯುತ್ತಿದೆ
ಬಾ ಬಾರೆ
ನಿನ್ನನ್ನು ನನ್ನ ಪ್ರೀತಿ ಕರೆಯುತ್ತಿದೆ

ನಿನ್ನಿಂದ ಅಂದ
ನಿನ್ನಿಂದ ಮೋಜು
ಈ ಜಲಪಾತದಲಿ ಈ ಹೂಗಳಲ್ಲಿ
ನಿನ್ನಿಂದಲೆ ನನ್ನ ಅಸ್ತಿತ್ವ
ತೂಗುತ್ತಿದೆ ಪ್ರೀತಿಯ ಉಯ್ಯಾಲೆಯಲಿ
ಏರುತ್ತಿದೆ ಉತ್ಸಾಹ ಆಸಕ್ತಿ
ಎರಡು ಭುಜಗಳ ಹಾರ ಕರೆಯುತ್ತಿದೆ
ಬಾ  ಬಾರೆ
ನಿನ್ನನ್ನು ನನ್ನ ಪ್ರೀತಿ ಕರೆಯುತ್ತಿದೆ

ಹೃದಯದಲಿ ನಿನ್ನ ಹೃದಯದ ಬಡಿತ
ಕಣ್ಣಲ್ಲಿ ನಿನ್ನ ಕಂಗಳ ಮಾಯೆ
ಅಧರದಲಿ ನಿನ್ನ ಅಧರದ ಛಾಯೆ
ಉಸಿರಲಿ ನಿನ್ನ ಉಸಿರಿನ ಸುವಾಸನೆ
ಕೇಶದ ಪ್ರತಿ ಗುಚ್ಛ ಆಹ್ವಾನಿಸುತ್ತಿದೆ
ಸೆರಗಿನ ಪ್ರತಿ ಅಂಚು ಕರೆಯುತ್ತಿದೆ
ಬಾ  ಬಾರೆ
ನಿನ್ನನ್ನು ನನ್ನ ಪ್ರೀತಿ ಕರೆಯುತ್ತಿದೆ

ಲಕ್ಷಗಟ್ಟಲೆ ಕಷ್ಟ ಬಂದು ಒದಗಿದರು
ಈ ಬಂಧನ ಎಂದೂ ಮುರಿಯದು
ದೇಹದಿಂದ ಒಂದು ವೇಳೆ ಜೀವ ಅಗಲಿದರು
ಕೈಯಿಂದ ನಿನ್ನ ಕೈ ಬಿಟ್ಟು ಹೋಗದು
ತಿರುಗಿ ನೋಡುವುದು ಸರಿಯಲ್ಲ
ಈಗಂತೂ ಎಲ್ಲ ಜಗತ್ತು ಕರೆದರೂ
ಬಾ ಬಾರೆ
ನಿನ್ನನ್ನು ನನ್ನ ಪ್ರೀತಿ ಕರೆಯುತ್ತಿದೆ

ಮೂಲ : ಸಾಹೀರ್ ಲುದ್ಯಾನ್ವಿ
ಅನುವಾದ: ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮಹೇಂದ್ರ ಕಪೂರ್, ಆಶಾ ಭೋಂಸ್ಲೆ
ಸಂಗೀತ : ರವಿ
ಚಿತ್ರ : ಗುಮ್ರಾಹ

इन हवाओं में, इन फिजाओं में,
तुझ को मेरा प्यार पूकारे
आजा, आजा रे, तुझ को मेरा प्यार पूकारे

रुक ना पाऊँ मैं, खिंचती आऊँ मैं
दिल को जब दिलदार पूकारे

तुझ से रंगत, तुझ से मस्ती, इन झरनों में, इन फूलों में
तेरे दम से मेरी हस्ती, झूले चाहत की झूलों में
मचली जाए शौख उमंगे, दो बाहों का हार पूकारे
आजा, आजा रे, तुझ को मेरा प्यार पूकारे

दिल में तेरे दिल की धडकन, आँख में तेरी आँख का जादू
लब पर तेरे लब के साए, सांस में तेरी सांस की खुशबू
जुल्फों का हर पेच बुलाए, आँचल का हर तार पूकारे
आजा, आजा रे, तुझ को मेरा प्यार पूकारे

लाख बलाए सर पर टूटें, अब ये सुहाना साथ ना छूटे
तन से चाहे जां छूट जाए, हाथ से तेरा हाथ ना छूटे
मूड के तकना ठिक नही हैं, अब चाहे संसार पूकारे
आजा, आजा रे, तुझ को मेरा प्यार पूकारे
http://www.youtube.com/watch?v=Y4kSDPTBzHQ

Monday, March 24, 2014

ಅನ್ಯರಿಂದ ಅಕ್ಕರ

ಅನ್ಯರಿಂದ ಅಕ್ಕರ
ನನ್ನಿಂದ ತಾತ್ಸಾರ
ಓ ನನ್ನೊಲವೆ
ಈ ಯಾತನೆ ನೀಡದಿರು
ಇರಲಿ ಈಗ ಸ್ವಲ್ಪಾದರೂ ಆದರ
ಓ ನನ್ನೊಲವೆ
ಈ ಯಾತನೆ ನೀಡದಿರು

ನಾನು ಪ್ರೀತಿಸುವವಳು ನಿನ್ನನ್ನು
ಹೀಗೆ ನನಗೆ ಚಿತ್ರಹಿಂಸೆ ನೀಡುವುದು ಸರಿಯಲ್ಲ
ಸಭೆಯಲ್ಲಿ ಪ್ರದರ್ಶನವಾಗುವಂತೆ
ಈ ಮಟ್ಟಿಗೆ
ಸತಾಯಿಸುವುದು ಸರಿಯಲ್ಲ
ಸಾಯುವೆ ನಾನು
ಮಣ್ಣಾಗುವೆ ನಾನು
ಓ ನನ್ನೊಲವೆ....

ಅನ್ಯರ ನಲಿಯುವ ಭುಜಗಳಲ್ಲಿ
ಈ ಕೈಗಳನ್ನು ಹೇಗೆ ಸಹಿಸಲಿ
ಪ್ರತಿ ಮಾತನ್ನು ಸಹಿಸುವೆ ಆದರೆ
ಈ ಮಾತನ್ನು
ಹೇಗೆ ಸಹಿಸಲಿ
ನಿನಗೆ ನಿನ್ನ
ನಿಷ್ತಾರುಣ್ಯದ ಆಣೆ
ಓ ನನ್ನೊಲವೆ....

ನಾನೂ ಇದ್ದೆ ನಿನ್ನ ಸಮ್ಮತಿ ದೃಷ್ಟಿಯಲಿ
ಮನಸ್ಸಾದರೆ ಈಗ ಒಪ್ಪಿಕೊಳ್ಳದಿರು
ನೂರು ಬಾಣ ಬಿಡು ಎದೆಗೆ ಆದರೆ
ಇತರರ ಜೊತೆ ಕೂಡಿ
ಹಲ್ಲೆ ಮಾಡದಿರು
ಸಾವು ಬರದೆ ಎಲ್ಲೊ
ಸಾವನ್ನಪ್ಪುವೆ ನಾನು
ಓ ನನ್ನೊಲವೆ....

ಮೂಲ :ಸಹೀರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು: ಲತಾ ಮಂಗೇಶ್ಕರ್
ಸಂಗೀತ : ರವಿ
ಚಿತ್ರ : ಆಂಖೇ

गैरों पे करम, अपनों पे सितम
ऐ जान-ए-वफ़ा, ये ज़ुल्म न कर
रहने दे अभी थोड़ा सा भरम
ऐ जान-ए-वफ़ा, ये ज़ुल्म न कर

हम चाहने वाले हैं तेरे, यूं हमको जलाना ठीक नहीं
महफ़िल में तमाशा बन जाएँ, इस दर्जा सताना ठीक नहीं
मर जायेंगे हम, मिट जायेंगे हम
ऐ जान-ए-वफ़ा...

गैरों के थिरकते शानें पर, ये हाथ गंवारा कैसे करें
हर बात गंवारा है लेकिन, ये बात गंवारा कैसे करें
तुझको तेरी बेदर्दी की कसम
ऐ जान-ए-वफ़ा...

हम भी थे तेरे मंज़ूर-ए-नज़र, जी चाहे तो अब इकरार ना कर
सौ तीर चला सीने पे मगर, बेगानों से मिलकर वार न कर
बेमौत कहीं मर जाएं न हम
ऐ जान-ए-वफ़ा...
http://www.youtube.com/watch?v=4i469ztISIo

Saturday, March 22, 2014

ಮತ್ತೆ ಕೈಯಲ್ಲಿ ಶರಾಬಿದೆ

ಮತ್ತೆ ಕೈಯಲ್ಲಿ ಶರಾಬಿದೆ
ಸತ್ಯ ಹೇಳುವೆ ನಾನು-೨
ಈ ವಸ್ತು ಅತ್ಯುತ್ತಮವಾಗಿದೆ
ಈ ವಸ್ತು ಅತ್ಯುತ್ತಮವಾಗಿದೆ
ಸತ್ಯ ಹೇಳುವೆ ನಾನು
ಮತ್ತೆ ಕೈಯಲ್ಲಿ ಶರಾಬಿದೆ
ಸತ್ಯ ಹೇಳುವೆ ನಾನು

ಲೆಕ್ಕ ಮಾಡಿ ಕುಡಿದರೆ ಮದ್ಯವನ್ನು
ಅಮಲೇರುವುದಿಲ್ಲ -೨
ನನ್ನ ಬೇರೆಯೇ ಲೆಕ್ಕಾಚಾರವಿದೆ
ನನ್ನ ಬೇರೆಯೇ ಲೆಕ್ಕಾಚಾರವಿದೆ
ಸತ್ಯ ಹೇಳುವೆ ನಾನು
ಮತ್ತೆ ಕೈಯಲ್ಲಿ ಶರಾಬಿದೆ
ಸತ್ಯ ಹೇಳುವೆ ನಾನು

ಸಾಕಿ ನಂಬಿಕೆವಿಲ್ಲದಿದ್ದರೆ
ಸ್ವಲ್ಪ ತಲೆ ತಗ್ಗಿಸಿ ನೋಡು-೨
ಗಾಜಿನ ಲೋಟೆಯಲಿ ಬೆಳದಿಂಗಳಿದೆ
ಗಾಜಿನ ಲೋಟೆಯಲಿ ಬೆಳದಿಂಗಳಿದೆ
ಸತ್ಯ ಹೇಳುವೆ ನಾನು
ಮತ್ತೆ ಕೈಯಲ್ಲಿ ಶರಾಬಿದೆ
ಸತ್ಯ ಹೇಳುವೆ ನಾನು

ಕೈಯಲ್ಲಿ ಒಂದು ಮದ್ಯ ಬಟ್ಟಲು
ತುಟಿಯಲಿ ಒಂದು ಗಜಲ್-೨
ಮತ್ತೆಲ್ಲ ಕಲ್ಪನೆ ಸ್ವಪ್ನಗಳು
ಮತ್ತೆಲ್ಲ ಕಲ್ಪನೆ ಸ್ವಪ್ನಗಳು
ಸತ್ಯ ಹೇಳುವೆ ನಾನು
ಮತ್ತೆ ಕೈಯಲ್ಲಿ ಶರಾಬಿದೆ
ಸತ್ಯ ಹೇಳುವೆ ನಾನು-೨

ಮೂಲ : ?
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಪಂಕಜ್ ಉದಾಸ್
ಸಂಗೀತ : ?
ಆಲ್ಬಮ್ :  ಹಮ್ ನಶೀನ್

Phir haath mein sharaab hai, sach bolta hoon main - 2
Ye cheez lajwaab hai, Ye cheez lajwaab hai, sach bolta hoon main
Phir haath mein sharaab hai, sach bolta hoon main

Gin kar piyoon main jaam to hota nahin nasha - 2
Mera alag hisaab, hai Mera alag hisaab hai, sach bolta hoon main
Phir haath mein sharaab hai, sach bolta hoon main

Saqi yakeen na aaye to, gardan jhuka ke dekh - 2
Sheeshe mein maahtaab hai, Sheeshe mein maahtaab hai, sach bolta hoon main
Phir haath mein sharaab hai, sach bolta hoon main

Haathon mein ek jaam hai, honthon pe ek ghazal - 2
Baaki khayal-o-khwab hai, Baaki khayal-o-khwab hai, sach bolta hoon main
Phir haath mein sharaab hai, sach bolta hoon main - 2

Thursday, March 20, 2014

ನೋವು

“Ye dard kitane ajeeb hai,
Sabhi mausamo main hare rahte hai.”
Bashir Badr
"ಈ ನೋವು ಸಹ ಎಷ್ಟು ವಿಚಿತ್ರ
ಎಲ್ಲ ಋತುಗಳಲ್ಲಿ ಹಸಿರಾಗಿರುತ್ತದೆ"  

ಈ ಅಂತರ

ಈ ಅಂತರ
ಈ ಅಂತರ
ಈ ಅಂತರ

ಈ ಪಥಗಳ ಅಂತರ
ಕಂಗಳ ಅಂತರ
ಸಂಗಡಿಗರ ಅಂತರ
ಕಣ್ಮರೆಯಾಗಲಿ ಈ ಎಲ್ಲ ಅಂತರ

ಇಷ್ಟು ಸನಿಹ ಯಾರೇಕೆ
ಯಾರು ದೂರ ಯಾಕೆ
ಯಾರಿಗೂ ತಿಳಿದಿಲ್ಲ

ಬರುತ್ತಿದ್ದೇನೋ ಸನಿಹಕ್ಕೆ
ಅಥವಾ ಹೋಗುತ್ತಿದ್ದೇನೋ ದೂರಕ್ಕೆ ನಾನು
ಗೊತ್ತಿಲ್ಲ ಎಲ್ಲಿದ್ದೇನೆ ನಾನು

ಈ ಅಂತರ

ಈ ಪಥಗಳ ಅಂತರ
ಕಂಗಳ ಅಂತರ
ಸಂಗಡಿಗರ ಅಂತರ
ಕಣ್ಮರೆಯಾಗಲಿ ಈ ಎಲ್ಲ ಅಂತರ

ಈ ಅಂತರ
ಈ ಅಂತರ

ಹೀಗೆಯೂ ಆಗಿತ್ತು
ಒಂದು ಸಮಯದಲಿ
ಖಾಲಿ ಪಥದಲಿ
ನೀನಿದ್ದೆ ನನ್ನ ಜೊತೆಯಲಿ

ಕೆಲವೊಮ್ಮೆ ನಿನ್ನ ಭೇಟಿಯಾಗಿಯೂ
ನನ್ನ ಹೃದಯದಲಿ ಒಂದು ಕುರುಹು
ಕೆಲವೊಮ್ಮೆ ಹೀಗೂ ಆಯಿತು
ಈಗ ತಾನೇ ಆದಂತೆ
ನಿನ್ನನ್ನು ನಾ ಕಂಡೆ ಎಲ್ಲರಲ್ಲಿಯೂ

ನನ್ನನ್ನು ನಿನ್ನ ಮಾಡಿ
ಹೋಗುತ್ತದೆ ಅಂತರ
ಸತಾಯಿಸುತ್ತದೆ ಅಂತರ
ಹಂಬಲಿಸುತ್ತದೆ ಅಂತರ
ಕಣ್ಮರೆಯಾಗಲಿ ಈ ಎಲ್ಲ ಅಂತರ

ಹೇಳಿದ್ದೇನೆ ನಾನು ನಿನಗೆ
ಬದುಕಲ್ಲಿಕ್ಕಿಲ್ಲ ನನಗೆ
ನೀನು ಸಿಗಲಿಲ್ಲವೆಂದರೆ ನನಗೆ

ತಪ್ಪಿಯೂ ನನಗೆ ನಿನ್ನಿಂದ
ಬೇಡ ಯಾವುದೇ ಅಂತರ

ಕೇವಲ ಆ ಅಂತರವಿರಲಿ
ವೇದನೆ ಉಂಟಾಗಿ ನುಡಿಯಲಿ
ಈ ಪ್ರೀತಿಯೂ ಇನ್ನೂ ಅರಳಲಿ

ಕಣ್ಮರೆಯಾಗುವುದು ನಿನ್ನ ನನ್ನ ಅಂತರ
ಪರಕೀಯ ಈ ಅಂತರ

ತೆರಳುವುದು ಈ ಅಂತರ
ಕಣ್ಮರೆಯಾಗಲಿ ಈ ಎಲ್ಲ ಅಂತರ

ಯಾರೇಕೆ ಇಷ್ಟು ಸನಿಹ
ದೂರ ಯಾಕೆ ಯಾರು
ಯಾರಿಗೂ ತಿಳಿದಿಲ್ಲ

ಬರುತ್ತಿದ್ದೇನೋ ಸನಿಹಕ್ಕೆ
ಅಥವಾ ಹೋಗುತ್ತಿದ್ದೇನೋ ದೂರಕ್ಕೆ ನಾನು
ಗೊತ್ತಿಲ್ಲ ಎಲ್ಲಿದ್ದೇನೆ ನಾನು

ಈ ಅಂತರ

ಈ ಪಥಗಳ ಅಂತರ
ಕಂಗಳ ಅಂತರ
ಸಂಗಡಿಗರ ಅಂತರ
ಕಣ್ಮರೆಯಾಗಲಿ ಈ ಎಲ್ಲ ಅಂತರ

ಮೂಲ : ಇರ್ಶಾದ್ ಕಾಮಿಲ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು: ಮೋಹಿತ್ ಚೌಹಾನ್
ಸಂಗೀತ :ಪ್ರೀತಮ್ ಚಕ್ರಬೋರ್ತಿ
ಚಿತ್ರ : ಲವ್ ಆಜ್ ಕಲ್
Yeh Dooriyan
Yeh Dooriyan
Yeh Dooriyan

In Raahon Ki Dooriyan
Nigahon Ki Dooriyan
Hum Rahon Ki Dooriyan
Fanah Ho Sabhi Dooriyan

Kyun Koi Paas Hai
Door Hai Kyun Koi
Jaane Na Koi Yahan Pe

Aa Raha Paas Ya Door Mein Ja Raha
Janu Na Mein Hoon Kahan Pe

Yeh Dooriyan

In Raahon Ki Dooriyan
Nigahon Ki Dooriyan
Hum Rahon Ki Dooriyan
Fanah Ho Sabhi Dooriyan

Yeh Dooriyan
Yeh Dooriyan

Kabhi Hua Yeh Bhi
Khali Rahon Pe Bhi
Tu Tha Mere Saath

Kabhi Tujhe Milke Lauta
Mera Dil Yeh Khali Khali Haath
Yeh Bhi Hua Kabhi
Jaise Hua Aabhi
Tujhko Sabhi Mein Paa Li

Tera Mujhe Kar Jaati Hai Dooriyan
Satati Hain Dooriyan
Tarsati Hain Dooriyan
Fanah Ho Sabhi Dooriyan

Kaha Bhi Na Mene
Nahi Jeena Mene
Tu Jo Na Mila

Tujhe Bhule Se Bhi Na
Bola Na Mene Chahun Fasla

Bas Fasla Rahein
Ban Ke Kasak Jo Kahen
Ho Aur Chahat Yeh Aur Jawan

Teri Meri Mit Jaani Hai Dooriyan
Begani Hai Dooriyan

Hat Jani Dooriyan
Fanah Ho Sabhi Dooriyan

Kyun Koi Paas Hai
Door Hai Kyun Koi
Jaane Na Koi Yahan Pe

Aa Raha Paas Ya Door Mein Ja Raha
Janu Na Mein Hoon Kahan Pe

Yeh Dooriyan

In Raahon Ki Dooriyan
Nigahon Ki Dooriyan
Hum Rahon Ki Dooriyan
Fanah Ho Sabhi Dooriyan

http://www.youtube.com/watch?v=DKOLynNhWxo

ಗುಬ್ಬಚ್ಚಿ ನೀನೇಕೆ ಬರುವುದಿಲ್ಲ

ಗುಬ್ಬಚ್ಚಿ ನೀನೇಕೆ ಬರುವುದಿಲ್ಲ
ನನ್ನ ಪಟ್ಟಣದ ಹೊಸ ಮನೆಗೆ
ಏಕೆ ಮುಂಜಾನೆ ಕಿಟಕಿಯಲಿ
ನಿನ್ನ ಕಲರವ ಕೇಳುವುದಿಲ್ಲ

ಊರಲ್ಲಿ ದಿನನಿತ್ಯ ನೀನು
ನನ್ನ ಮನೆಗೆ ಬರುತ್ತಿದ್ದೆ
ನಿನ್ನ ಮಧುರ ಧ್ವನಿ
ಕೇಳಿಯೇ ನಾನು ಕಣ್ಣು ತೆರೆಯುತ್ತಿದ್ದೆ

ಊರ ಮರಗಳಲ್ಲಿ
ಅದೆಷ್ಟು ನಿನ್ನ ಗೂಡುಗಳು
ಗದ್ದೆಯಲ್ಲಿ ದುಡಿಯುವಾಗ
ಆಯಾಸ ಮರೆಸುತಿತ್ತು ನಿನ್ನ ಹಾಡುಗಳು

ಈಗ ಎಲ್ಲಿ ಹೋಗಿರುವೆ ನೀನು?
ನಿನಗೆ ಭಯವೇ ಈ ಪಟ್ಟಣದಿಂದ?
ಇಲ್ಲಿಯ ದೂಷಿತ ಗಾಳಿಯಿಂದ?
ಇಲ್ಲಿಯ ಕೊಳಕು ನೀರಿನಿಂದ?

ಹೌದು, ನೀನೇಕೆ ಬರುವೆ ಇಲ್ಲಿಗೆ
ಸ್ವಚ್ಚಂಧ ಗಾಳಿಯಲಿ ಉಸಿರಾಡುವ ನೀನು
ಝರಿ ನದಿಯ ಶುಭ್ರ ನೀರು ಕುಡಿಯುವ ನೀನು
ಏಕೆ ಬರುವೆ ಈ ಉಸಿರು ಕಟ್ಟುವ ವಾತಾವರಣದಲಿ

by ಹರೀಶ್ ಶೆಟ್ಟಿ, ಶಿರ್ವ

Wednesday, March 19, 2014

ದೇವರ ದಯೆಯಿಂದ

!!ದೇವರ ದಯೆಯಿಂದ ಹೀಗೆ ಆಗಲಿ
ನನ್ನ ನಿದಿರೆ ನಿನಗೆ ಸಿಗಲಿ
ನಾನು ಎಚ್ಚರವಿರುವೆ
ನೀನು ನಿದ್ರಿಸು ಸುಖದಲಿ!!

!!ಕಳೆಯಲಿ ಸುಖದಿಂದ ನಿನ್ನ
ದುಃಖ ತುಂಬಿದ ರಾತ್ರಿ
ಬದಲಾಯಿಸುವೆ ನಾ ನನ್ನ
ಕಂಗಳನ್ನು ನಿನ್ನಿಂದ
ಸಾಧ್ಯವಾಗಿದ್ದರೆ ಇದು ನನ್ನಿಂದ
ಕೈಯನ್ನು ಮುಗಿಯುವೆ ಬೇಡಿಕೆಯಲಿ!!
ನನ್ನ ನಿದಿರೆ ನಿನಗೆ ಸಿಗಲಿ....

!!ನೀನೆ ಅಲ್ಲ ನಾನೇ ಅಲ್ಲ
ಈ ಜಗತೆಲ್ಲ
ಕತೆವೊಂದು ಕಷ್ಟಗಳ
ಮರುಳನಾಗುವನು ಮನುಜ
ಮರೆಯಲಾರದೆ ಇಡುವನು ಸ್ಮರಣೆಯಲಿ!!
ನನ್ನ ನಿದಿರೆ ನಿನಗೆ ಸಿಗಲಿ....

!!ಯಾರೋ ಬರುವರು
ಮೆಲ್ಲ ಮೆಲ್ಲನೆ ಕನಸಲಿ
ಮನಸ್ಸು ಪವನ ಹಾಡುವುದು ಲಾಲಿ
ಚಂದ್ರ ಕಿರಣ ಹಗ್ಗವಾಗಿ
ನಿನ್ನ ಮನಸ್ಸನ್ನು
ತೂಗಲಿ ಉಯ್ಯಾಲೆಯಲಿ!!
ನನ್ನ ನಿದಿರೆ ನಿನಗೆ ಸಿಗಲಿ....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮುಕೇಶ್
ಸಂಗೀತ:ಲಕ್ಷ್ಮಿ ಕಾಂತ್ ಪ್ಯಾರೆ ಲಾಲ್
ಚಿತ್ರ : ಮಿಲನ್

Ram Kare Aisa Ho Jaye
Meri Nindiya Tohe Mil Jaye
Maein Jaagun Tu So Jaye

Guzar Jaayen Sukh Se Teri
Dukh Bhari Ratiyaan
Badal Doon Maein Tohse Ankhiyaan
Bas Maein Agar Ho Yeh Batiyaan
Maangu Duaaen Haath Uthaaye
Meri Nindiya

Tu Hi Nahin Maein Hi Nahin
Sara Zamana
Dard Ka Hai Ek Fasana
Aadmi Ho Jaaye Deewana
Yaad Kare Aur Bhool Na Paaye
Meri Nindiya

Sapnon Mein Aaye Koi
Chori Chori
Man Pavan Gaaye Lori
Chandra Kiran Ban Ke Dori
Tere Man Ko Jhula Jhulaaye
Meri Nindiya
http://www.youtube.com/watch?v=cfkz0hi7Ri4

ಒಬ್ಬಂಟಿ

ಅವನೂ ತುಂಬಾ ಒಬ್ಬಂಟಿ, ಬಹುಶಃ ನನ್ನ ಹಾಗೆ
ಅವನಿಗೂ ಯಾರೂ ಇಷ್ಟಪಡುವವರು ಸಿಗಲಿಲ್ಲ
woh bhi bahut akela hai, shayad meri tarah 
Usko bhi koi chahanewala nahin mila 
(Bashir Badr)

Sunday, March 16, 2014

ಹೂವು ಸಿಗಲಿಲ್ಲವೆಂದಾಗ


ಹೂವು ಸಿಗಲಿಲ್ಲವೆಂದಾಗ
ಮುಳ್ಳಿಂದ ಗೆಳೆತನ ಮಾಡಿಕೊಂಡೆ
ಈ ರೀತಿಯೇ ನಾನು
ನನ್ನ ಜೀವನ ಸಾಗಿಸಿಕೊಂಡೆ
ಹೂವು ಸಿಗಲಿಲ್ಲವೆಂದಾಗ.......

ಈಗ ಮುಂದೆ ಏನೇ ಗತಿ ಆಗಲಿ
ನೋಡಿಕೊಳ್ಲುವೆ
ಮನಮಂದಿರದಲ್ಲಿ ದೇವರನ್ನು
ಸ್ಥಾಪಿಸಿಯಾಗಿದೆ
ಮನಪೂರ್ವಕ ಪೂಜೆಸಿಕೊಂಡೆ 
ಹೂವು ಸಿಗಲಿಲ್ಲವೆಂದಾಗ.......

ಕಂಗಳು ಇನ್ನು ಸೇರಿರಲಿಲ್ಲ
ಹಾಗು ಅವಳನ್ನು ನೋಡಿಕೊಂಡೆ 
ಅಧರ ಇನ್ನು ತೆರೆದಿರಲಿಲ್ಲ
ಹಾಗು ಮಾತನ್ನೂ ಅರ್ಥಮಾಡಿಕೊಂಡೆ
ಹೂವು ಸಿಗಲಿಲ್ಲವೆಂದಾಗ.......

ಅದ್ಯಾರಿಗೆ ಪ್ರೀತಿ ಇದೆಯೋ
ಬೆಳ್ಳಿಯಿಂದ ಚಿನ್ನದಿಂದ
ಎಂದೋ ಒಂದು ದಿನ ಅವರೇ ಹೇಳುವರು
ನಾವು ಸಾವನ್ನು ಒಪ್ಪಿಕೊಂಡೆ
ಹೂವು ಸಿಗಲಿಲ್ಲವೆಂದಾಗ.......

ಮೂಲ : ಇಂದೀವರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ರೋಶನ್
ಚಿತ್ರ : ಅನೋಖಿ ರಾತ್

mile naa phool to kaanton se dosti kar li
mile naa phool to kaanton se dosti kar li
isi tarah se basar
isi tarah se basar
hum ne zindagi kar li
mile naa phool
ab aage jo bhi ho, anjaam dekhaa jaayega
ab aage jo bhi ho, anjaam dekhaa jaayega
khudaa taraash liyaa,
khudaa taraash liya
aur bandagi kar li
mile naa phool to kaanton se dosti kar li
nazar mili bhi naa thi aur unko dekh liya
nazar mili bhi naa thi aur unko dekh liya
zubaan khuli bhi naa thi
zubaan khuli bhi naa thi
aur baat bhi kar li
mile naa phool
wo jinko pyaar hai chaandi se,ishq sone se
wo jinko pyaar hai chaandi se,ishq sone se
wahi kahenge kabhi,
wahi kahenge kabhi
hum ne khudkhushi kar li
mile naa phool to kaanton se dosti kar li
isi tarah se basar humne zindagi kar li
mile naa phool
http://www.youtube.com/watch?v=iYZZrIYU9P8

ಚುನಾವಣೆ ಹೋಳಿ

ಅದೇಕೋ ಇತರ ರಂಗುಗಳ
ಬೇಡಿಕೆ ಇಳಿದಿದೆ
ಕಪ್ಪು ರಂಗು
ತುಂಬಾ ಬಳಕೆಯಲ್ಲಿದೆ

ಎಸೆದು ಕಪ್ಪು ರಂಗು
ಒಬ್ಬರನೊಬ್ಬರ ಮುಖಕ್ಕೆ
ತಾವೇ ನಿರ್ಮಲವೆಂಬ
ಡಂಗುರ ಸಾರುತ್ತಿದೆ
ರಾಜಕೀಯ ರೂಪ
ಕಲ್ಲಿದ್ದಲಿಗಿಂತಲೂ ಕಪ್ಪಾಗಿದೆ

ಹಳೆ ರಾಜಕಾರಣಿಗಳ
ಮುಖವಾಡ ಕಳಚಿ ಬಿದ್ದು
ಕಪ್ಪು ಮಸಿಯಿಂದ ಕಪ್ಪಾಗಿದೆ,
ಹೊಸ ರಾಜಕಾರಣಿಗಳ
ಮುಖ ವಿವಿಧ
ಮುಖವಾಡ ಪಡೆದಿದೆ

ಕೇಸರಿ ಪ್ರಯತ್ನದಲ್ಲಿದೆ
ಹಸಿರು ನಾರಂಗಿ ಉಸಿರೆಳುಯುತ್ತಿದೆ

by ಹರೀಶ್ ಶೆಟ್ಟಿ,ಶಿರ್ವ 

Saturday, March 15, 2014

ಹೋಳಿ


ಹೋಳಿಯ ಹಬ್ಬ
ರಂಗುಗಳ ತುಂತುರು
ಪ್ರೀತಿಯ ರಸ

----

ಗುಲಾಬಿ ನೀಲಿ
ಬಣ್ಣಗಳ ಪ್ರವಾಹ
ತೇಲುವ ಹರ್ಷ

-----

ಬಣ್ಣದ ಸ್ನಾನ
ಒದ್ದೆ ಒದ್ದೆ ವೈರತ್ವ
ಮಿತ್ರ ಶರಣ

----

ಸಿಹಿ ಮಿಠಾಯಿ
ಗಮ್ಮತ್ತು  ಶರಬತ್ತು
ಕಷ್ಟ ವಿನಾಶ

by ಹರೀಶ್ ಶೆಟ್ಟಿ,ಶಿರ್ವ

ನಿಷ್ಪಾಪಿ ಮಗು

ಅಂಧ ಒಲವು
ಅನೈತಿಕ ಸಂಬಂಧ
ಗೌಪ್ಯ ಬಸಿರು
---
ನಾಚಿದ ಗರ್ಭ
ಹೆರಿಗೆಯಲ್ಲಿ ಶಿಶು
ಬಾಣಂತಿ ಚಿಂತೆ
---
ಕಸದ ಬುಟ್ಟಿ
ಕಳಂಕಿತ ಜನನಿ
ನಿಷ್ಪಾಪಿ ಮಗು

by ಹರೀಶ್ ಶೆಟ್ಟಿ,ಶಿರ್ವ 

ಎಲ್ಲೊ ದೀಪ ಉರಿಯುತ್ತಿದೆ

ಎಲ್ಲೊ ದೀಪ ಉರಿಯುತ್ತಿದೆ
ಎಲ್ಲೊ ಹೃದಯ
ಸ್ವಲ್ಪ ನೋಡು ಬಂದು ಪತಂಗವೇ
ಯಾವುದು ಗಮ್ಯ ನಿನ್ನಯ
ಎಲ್ಲೊ ದೀಪ ಉರಿಯುತ್ತಿದೆ ಎಲ್ಲೊ ಹೃದಯ

ನನ್ನ ಗೀತೆ ನಿನ್ನ ಹೃದಯದ ಕರೆಯಾಗಿದೆ
ನಾನೆಲ್ಲೋ ಅಲ್ಲೇ ನಿನ್ನ ಪ್ರೀತಿ ಇದೆ
ನನ್ನ ಹೃದಯವೇ ನಿನ್ನ ವಲಯ
ಎಲ್ಲೊ ದೀಪ ಉರಿಯುತ್ತಿದೆ ಎಲ್ಲೊ ಹೃದಯ

ಕನಸಲ್ಲ ರಹಸ್ಯ ಅಲ್ಲ ನಾನು
ಒಂದು ನೋವ ಧ್ವನಿ ನಾನು
ನಲ್ಲ ತಡಮಾಡಬೇಡ ಸಿಗಲು ಬಾರಯ್ಯ
ಎಲ್ಲೊ ದೀಪ ಉರಿಯುತ್ತಿದೆ ಎಲ್ಲೊ ಹೃದಯ

ವೈರಿಗಳು ಸಾವಿರ ಪ್ರಾಣದ ಇಲ್ಲಿ
ಕಂಗಳನ್ನು ಗುರುತಿಸಿಯೇ ಸಿಗು ನೀನಿಲ್ಲಿ
ಕೆಲವು ರೂಪದಲ್ಲಿದ್ದಾರೆ ಕೊಲೆಗಾರರು ಇನಿಯ
ಎಲ್ಲೊ ದೀಪ ಉರಿಯುತ್ತಿದೆ ಎಲ್ಲೊ ಹೃದಯ

ಮೂಲ : ಶಕೀಲ್ ಬದಾಯುನ್ವಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಹೇಮಂತ್ ಕುಮಾರ್
ಚಿತ್ರ : ಬೀಸ್ ಸಾಲ್ ಬಾದ್

कहीं दीप जले कहीं दिल
ज़रा देख ले आ कर परवाने
तेरी कौन सी है मंज़िल
कहीं दीप जले कहीं दिल

मेरा गीत तेरे दिल की पुकार है
जहाँ मैं हूँ वहीं तेरा प्यार है
मेरा दिल है तेरी महफ़िल
ज़रा देख ले आ कर...

ना मैं सपना हूँ ना कोई राज़ हूँ
एक दर्द भरी आवाज़ हूँ
पिया देर न कर आ मिल
ज़रा देख ले आ कर...

दुश्मन हैं हज़ारों यहाँ जान के
ज़रा मिलना नज़र पहचान के
कई रूप में हैं क़ातिल
ज़रा देख ले आ कर...
http://www.youtube.com/watch?v=1kvT_nkPnGg

Thursday, March 13, 2014

ಹಿಜಡಾ

ನಾನೇಕೆ ಹೀಗೆ?
ನಾನು ಗಂಡು
ಆದರೆ ನನ್ನೊಳಗೆ ಯಾಕೆ ಹೆಣ್ಣಿನ ಭಾವನೆ
ಅಡುಗೆ ಮಾಡುವುದು
ಮನೆಗೆಳಸದಲಿ ರುಚಿ
ರಂಗೋಲಿ ಹಾಕುವುದು
ಹುಡುಗಿಯರ ಜೊತೆ ಓಡಾಡುವುದು
ನನಗ್ಯಾಕೆ ಇದರಲೆಲ್ಲ ಖುಷಿ, ಆನಂದ
ನನ್ನಲ್ಲಿ ಯಾಕೆ ಈ ಹೆಣ್ಣ ಭಾವಗಳು ಸಹಜವಾಗಿ ಮೂಡುತ್ತಿವೆ
ಆದರೆ ಇವರೆಲ್ಲ ಯಾಕೆ
ನಾನು ಅಸಹಜವಾಗಿ ವರ್ತಿಸುತ್ತಿದ್ದೇನೆ ಎನ್ನುತ್ತಿದ್ದಾರೆ

ಅಯ್ಯೋ ನನ್ನ ಮನೆಯಲ್ಲಿಯೇ
ನನ್ನಿಂದ ಈ ತರಹದ ವರ್ತನೆಯೇ
ಇನ್ನು ಬೇಡ, ಬೇಡ ಈ ಮನೆ
ಓಡಿ ಹೋಗುವೆ ಇಲ್ಲಿಂದ,
ಮನೆಯಿಂದ ದೂರವಾದೆ
ಅವನು ಓಡಿ ಹೋದದ್ದು ಒಳ್ಳೆಯದಾಯಿತು
ಸುಮ್ಮನೆ ನಮಗೆ ಉಪದ್ರ
ಎಂದು ಅವರು ಎನಿಸಿರಬಹುದು  

ಬಂದೆ, ಈ ಹೊಸ ಜಗತಲ್ಲಿ
ಇಲ್ಲಿ ಎಲ್ಲರೂ ನನ್ನ ಹಾಗೆಯೇ
ಕಡೆಗೆ ಸಿಕ್ಕಿದರು ನನ್ನನ್ನು
ಅರ್ಥ ಮಾಡುವವರು
ಆದರೆ ಬೇಸರ, ಮನೆಯವರಂತೆ
ಈ ಸಮಾಜದ ಗಣ್ಯರು ಸಹ
ನಮ್ಮನ್ನು ಅಸಹ್ಯ ತಾತ್ಸಾರದ
ದೃಷ್ಟಿಯಿಂದ ನೋಡುತ್ತಾರೆ
ನಮ್ಮನ್ನು ಜೋಗಪ್ಪ, ಹಿಜಡಾ, ಖೋಜಾ
ಎಂಬ ಹಲವು ಹೆಸರಿಂದ ಕರೆಯುತ್ತಾರೆ

by ಹರೀಶ್ ಶೆಟ್ಟಿ,ಶಿರ್ವ 

Wednesday, March 12, 2014

ಯಾವುದೇ ಕಲ್ಲ ಮೂರ್ತಿಯಿಂದ

ಯಾವುದೇ ಕಲ್ಲ ಮೂರ್ತಿಯಿಂದ
ಪ್ರೀತಿಯ ಇರಾದೆ ಇದೆ
ಪೂಜಿಸುವ ಬಯಕೆ ಇದೆ
ಆರಾಧಿಸುವ ಇರಾದೆ ಇದೆ-೨
ಯಾವುದೇ ಕಲ್ಲ ಮೂರ್ತಿಯಿಂದ.....
ಅವಳಿಗೆ ಹೃದಯದ ಮಿಡಿತ ಅರ್ಥವಾಗದು
ಕಣ್ಣ ಭಾಷೆಯೂ ಅರ್ಥವಾಗದು 
ದೃಷ್ಟಿಯ ಮಾತುಕತೆ ಅರ್ಥವಾಗದು 

ಭಾವನೆಯ ನುಡಿಯೂ ಅರ್ಥವಾಗದು
ಅವಳ ಮುಂದೆಯೇ ಅವಳನ್ನು 

ದೂರುವ ಇರಾದೆ ಇದೆ
ಯಾವುದೇ ಕಲ್ಲ ಮೂರ್ತಿಯಿಂದ.....
ಕೇಳಿದ್ದೆ ಪ್ರತಿಯೊಂದು
ಯುವ ಕಲ್ಲ ಹೃದಯದಲಿ ಅಗ್ನಿ ಇರುತ್ತದೆ
ಆದರೆ ಅದನ್ನು ಸ್ಪರ್ಶಿಸದಿದ್ದರೆ
ಲಜ್ಜೆಯ ಪರದೆಯಲಿ ಅಡಗಿರುತ್ತದೆ
ಯೋಚಿಸಿದ್ದೇನೆ ಮನಸ್ಸ ಮಾತನ್ನು
ಅವಳೆದುರು ಹೇಳುವೆಯೆಂದು
ಪರಿಣಾಮ ಏನೆಯಾಗಲಿ
ತನ್ನ ಇಚ್ಛೆ ಹೇಳುವೆಯೆಂದು
ಪ್ರತಿಯೊಂದು ರೂಢಿ ಪದ್ದತಿಗಳಿಂದ
ವಿದ್ರೋಹದ ಇರಾದೆ ಇದೆ
ಯಾವುದೇ ಕಲ್ಲ ಮೂರ್ತಿಯಿಂದ.....
ಪ್ರೀತಿ ಉಪೇಕ್ಷೆಯಿಂದ
ಇನ್ನೂ ಹೆಚ್ಚಾಗುವುದು ಅವಳಿಗೇನು ಗೊತ್ತು
ಯೌವನ ಈ ಭಂಗಿಯನ್ನೇ ಮೆಚ್ಚುವುದು
ಅವಳಿಗೇನು ಗೊತ್ತು
ಅವಳಿಗೇನು ಗೊತ್ತು
ನನ್ನ ಯಾವ ಪ್ರಳಯದ ಇರಾದೆ ಇದೆ
ಯಾವುದೇ ಕಲ್ಲ ಮೂರ್ತಿಯಿಂದ.....
ಮೂಲ :ಸಾಹಿರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮಹೇಂದ್ರ ಕಪೂರ್
ಸಂಗೀತ : ರವಿ
ಚಿತ್ರ : ಹಮ್ ರಾಜ್
kisi patthar ki muurat se muhabbat ka iraada hai
parastish ki tamanna hai, ibaadat ka iraada hai
kisi patthar ki muurat se ...
jo dil ki dhadakanein samajhe na aankho ki zubaan samajhe
nazar ki guftagu samajhe na jazabon ka bayaan samajhe
usi ke saamane uski shikaayat ka iraada hai
kisi patthar ki muurat se ...
suna hai har javaan patthar ke dil mein aag hoti hai
magar jab tak na chhedo, sharm ke parde mein soti hai
ye socha hai ki dil ki baat usake ruubaru kah de
natiija kuch bhi nikale aaj apani aarazu kah de
har ik bejaan taqalluf se bagaavat ka iraada hai
kisi patthar ki muurat se ...
muhabbat berukhi se aur bhadakegi vo kya jaane
tabiiyat is ada pe aur phadkegi vo kya jaane
vo kya jaane ki apna kis qayaamat ka iraada hai
kisi patthar ki muurat se ...
http://www.youtube.com/watch?v=UIkgeoj9S8c

ಹಾಯ್ಕು ೫-೭-೫

ಮೈತ್ರಿಯ ಇಚ್ಛೆ 
ಪಾರಿವಾಳ ಸಂದೇಶ 
ಶಾಂತಿ ಪ್ರಸ್ತಾವ 

---

ಕೋಪ ಇಳಿಕೆ 
ಮಲ್ಲಿಗೆ ಸುವಾಸನೆ 
ಗೃಹ ಪ್ರವೇಶ 

---

ಪ್ರೀತಿ ಸಂಕೋಲೆ
ಪೂರ್ವ ಜನ್ಮದ ಮೈತ್ರಿ 
ಋಣಾನುಬಂಧ 

---

ದಾನಿ ಸ್ವಭಾವ 
ಆನಂದ ಅನುಭವ 
ಆರದ ದೀಪ 


by ಹರೀಶ್ ಶೆಟ್ಟಿ,ಶಿರ್ವ

ಬೇಸರವಿಲ್ಲ ಈ ಸುಮಗಳಿಗೆ

ಬೇಸರವಿಲ್ಲ ಈ ಸುಮಗಳಿಗೆ, 
ಎನ್ನುತ್ತಿವೆ,
ಅವುಗಳನ್ನು 
ದೇವರ ಮಡಿಲಲ್ಲಿ ಇಟ್ಟರೆ ಅಹೋಭಾಗ್ಯ 
ಸುಂದರಿಯ ಮುಡಿಗೆ ಇಟ್ಟರೆ ಪ್ರಸನ್ನ 
ಪ್ರೇಮಿ ಪ್ರೇಮಿಕೆಗೆ ನೀಡಿದರೆ ಸಂತಸ
ಶವದ ಮೇಲೆ ಹಾಸಿದರೆ ಸದ್ಗತಿ 
ಎನ್ನುತ್ತಿವೆ,
ಅಲ್ಪ ಸಮಯದ ಜೀವನ ನಮ್ಮದು 
ಹರ್ಷ ಹಂಚುವುದೆ ಧ್ಯೇಯ ನಮ್ಮದು 

by ಹರೀಶ್ ಶೆಟ್ಟಿ, ಶಿರ್ವ

Tuesday, March 11, 2014

ಏನಾದರೂ ಅಸಹಾಯಕತೆ ಇರಬೇಕು

ಏನಾದರೂ ಅಸಹಾಯಕತೆ ಇರಬೇಕು
ಏನಾದರೂ ಅಸಹಾಯಕತೆ ಇರಬೇಕು
ಹೀಗೆಯೇ ಯಾರು ನಿಷ್ಠೆಯನ್ನು ಮುರಿಯುವುದಿಲ್ಲ

ತುಂಬಾ ಮನಸ್ಸಾಗುತ್ತದೆ ಸತ್ಯ ಹೇಳಲೆಂದು
ಆದರೆ ಏನು ಮಾಡಲಿ ಧೈರ್ಯ ಆಗುವುದಿಲ್ಲ

ತನ್ನ ಹೃದಯವನ್ನು ತಡಕಾಡು
ಅಂತರ ವಿನಃ ಕಾರಣ ನಿರ್ಮಾಣವಾಗುವುದಿಲ್ಲ

ಮಾತು ಅವಳಿಂದ ದಿನನಿತ್ಯ ಆಗುತ್ತದೆ
ಆದರೆ ವರ್ಷಗಟ್ಟಲೆ ಭೇಟಿಯಾಗುವುದಿಲ್ಲ

ರಾತ್ರಿಯನ್ನು ಕಾಯುವುದು ಯಾಕೆ
ಇಂದಿನ ದಿನಗಳಲ್ಲಿ ಹಗಲಲ್ಲಿ ಏನೇನು ಆಗುವುದಿಲ್ಲ

ಮೂಲ ಶಾಯರಿ : ಬಷೀರ್ ಬದ್ರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ

कुछ तो मजबूरियाँ रही होंगी
कुछ तो मजबूरियाँ रही होंगी
यूँ कोई बेवफ़ा नहीं होता

जी बहुत चाहता है सच बोलें
क्या करें हौसला नहीं होता

अपना दिल भी टटोल कर देखो
फासला बेवजह नही होता

कोई काँटा चुभा नहीं होता
दिल अगर फूल सा नहीं होता

गुफ़्तगू उनसे रोज़ होती है
मुद्दतों सामना नहीं होता

रात का इंतज़ार कौन करे
आज कल दिन में क्या नहीं होता
(Bashir Badr)

ಮೃತ್ಯು

ಇನ್ನು ಅವರೆಲ್ಲಿಯೋ?
ದೇಹ ಎಷ್ಟು ಸುಂದರ ಕಾಣುತ್ತಿದೆ ಈಗ
ಪ್ರಾಣ ಇದ್ದಾಗ ಸುಸ್ತು ಚಹರೆ
ಆದರೆ ಈಗ ಅದೆಷ್ಟು ತೇಜ ಮುಖದಲಿ  
ಘಾಡ ನಿದ್ರೆ

ಬೆಳಗುವ ದೀಪ ತಂದಿಟ್ಟಿದ್ದಾರೆ ಅವರು, ಸರಿಯೇ
ಮನೆಯ ಕಾಂತಿ ನಂದಿ ಹೋಯಿತ್ತಲ್ಲವೇ,
ಅಯ್ಯೋ, ಅಳುವುದು ಯಾಕೆ?
ಜೀವ ಇದ್ದಾಗ ಅವರ ಕಣ್ಣೀರು ಹರಿಸಿದ್ದು
ನೀವೇ ತಾನೇ

ಇನ್ನೇನು ಅವರ ಚಟ್ಟ ಹೋಯಿತೆಂದು ಅಳುವುದೇ
ಇದೇನು, ಹಿರಿಯರು ಬಂದು ಬೇಗ ಬೇಗ
ದೇಹ ಮಣ್ಣು ಮಾಡುವ ಎನ್ನುತ್ತಿದ್ದಾರೆ,
ಏನು ಅವರು ಪುನಃ ಜೀವಂತವಾಗುವರು
ಎಂಬ ಭಯವೇ ?

ಅವರೆಲ್ಲಿ ಇನ್ನು ಪುನಃ ಜೀವಂತವಾಗುತ್ತಾರೆ,
ನೋಡಿ ಅಲ್ಲಿ ಅವರ ಆತ್ಮ ನಗುತ್ತಿದೆ
ಅವರನ್ನೆಲ್ಲ ನೋಡಿ
ಅವರೆಲ್ಲರ ಹುಸಿತನ ನೋಡಿ ನಗುವುದೋ
ಏನೋ

ಚಲೋ, ದೇಹ ಬೂದಿಯಾಯಿತು
ಇನ್ನಿಲ್ಲ ಯಾವುದೇ ಕಿರಿಕಿರಿ,
ಕೆಮ್ಮಿನ ಶಬ್ದ ಇನ್ನಿಲ್ಲ,
ಸೇವಾ ಶುಶ್ರೂಷೆ ಮಾಡಬೇಕೆಂದೆನಿಲ್ಲ, ಆರಾಮ
ಶಾಂತತೆ
by ಹರೀಶ್ ಶೆಟ್ಟಿ,ಶಿರ್ವ 

ಆತ್ಮ

ನಿರ್ಜೀವ ದೇಹ 
ಪಯಣದಲಿ ಆತ್ಮ 
ಮೌನದ ನೆಲೆ 

by ಹರೀಶ್ ಶೆಟ್ಟಿ,ಶಿರ್ವ

ನ್ಯಾಯ

ಸಜೆ, ಆಶ್ಚರ್ಯ!
ನ್ಯಾಯಕ್ಕೆ ಪ್ರಶ್ನೆ ಚಿಹ್ನೆ?
ಪೂರ್ಣ ವಿರಾಮ.

ಅಲ್ಲಿ ಯಾರಿದ್ದಾರೆ ನಿನ್ನ

ಅಲ್ಲಿ ಯಾರಿದ್ದಾರೆ ನಿನ್ನ
ಪಯಣಿಗ
ಹೋಗುವೆ ನೀನೆಲ್ಲಿ
ಸ್ವಲ್ಪ ಸಾವರಿಸಿಕೋ ತನ್ನನ್ನು
ಈ ನೆರಳು
ಪಡೆಯುವೆ ನೀನೆಲ್ಲಿ
ಅಲ್ಲಿ ಯಾರಿದ್ದಾರೆ ನಿನ್ನ....

ಕಳೆದೋದ ದಿನಗಳು
ಪ್ರೀತಿಯ ಕ್ಷಣಗಳು
ಕನಸಾಯಿತು ಆ ರಾತ್ರಿಗಳು
ಮರೆತು ಹೋದಳವಳು
ನೀನೂ ಮರೆತೋಗು
ಪ್ರೀತಿಯ ಆ ಭೇಟಿಗಳನ್ನು
ಅಲ್ಲಿ ದೂರ ತನಕ ಕತ್ತಲು
ಪಯಣಿಗ
ಹೋಗುವೆ ನೀನೆಲ್ಲಿ
ಅಲ್ಲಿ ಯಾರಿದ್ದಾರೆ ನಿನ್ನ....

ಯಾರೂ ನಿನ್ನ
ಹಾದಿ ಕಾಯುವುದಿಲ್ಲ
ಯಾವುದೇ ಕಂಗಳು ನಿರೀಕ್ಷೆಯಲ್ಲಿಲ್ಲ
ನೋವಿನಿಂದ ನಿನ್ನ
ಯಾರು ನರಳುವುದಿಲ್ಲ
ಅಳುವುದಿಲ್ಲ ಯಾವುದೇ ಕಣ್ಣು
ಹೇಳುವೆ ಯಾರನ್ನು ನೀನು ನಿನ್ನ
ಪಯಣಿಗ
ಹೋಗುವೆ ನೀನೆಲ್ಲಿ
ಅಲ್ಲಿ ಯಾರಿದ್ದಾರೆ ನಿನ್ನ....

ನೀನು ಎಲ್ಲರಿಗೆ
ಹಾದಿ ತೋರಿಸಿದೆ
ನೀನು ನಿನ್ನ ಗಮ್ಯವನ್ನೇ ಏಕೆ ಮರೆತೆ
ಪರಿಹಾರಿಸಿ ನೀನು
ಇತರರ ಸಮಸ್ಯೆಗಳನ್ನು
ಕಚ್ಚಾ ದಾರದ ಉಯ್ಯಾಲೆಯಲಿ ಏಕೆ ತೂಗಿದೆ
ನಲಿಯುವನು ಹಾವಾಡಿಗ ಯಾಕೆ
ತನ್ನದೇ ರಾಗದಲಿ
ಪಯಣಿಗ
ಹೋಗುವೆ ನೀನೆಲ್ಲಿ
ಅಲ್ಲಿ ಯಾರಿದ್ದಾರೆ ನಿನ್ನ....

ಹೇಳುವರು ಜ್ಞಾನಿಗಳು
ಪ್ರಪಂಚ ನಶ್ವರವೆಂದು
ಬರಹ ಇದ್ದಂತೆ ನೀರಿನಲಿ 
ಇದನ್ನು ನೋಡಿದ್ದಾರೆ ಎಲ್ಲರೂ
ಇದನ್ನು ಅನುಭವಿಸಿದ್ದಾರೆ ಎಲ್ಲರೂ
ಬಾರದು ಯಾರದ್ದು ಕೈಯಲ್ಲಿ
ನಿನ್ನ ನನ್ನ ಏನಿಲ್ಲ
ಪಯಣಿಗ,
ಹೋಗುವೆ ನೀನೆಲ್ಲಿ
ಅಲ್ಲಿ ಯಾರಿದ್ದಾರೆ ನಿನ್ನ....

ಮೂಲ : ಶೈಲೇಂದ್ರ
ಅನುವಾದ: ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು/ಸಂಗೀತ : ಎಸ್ . ಡಿ. ಬರ್ಮನ್
ಚಿತ್ರ : ಗೈಡ್
वहां कौन है तेरा
मुसाफिर जाएगा कहाँ
दम ले ले घड़ी भर
ये छइयां पाएगा कहाँ

बीत गए दिन
प्यार के पल-छीन
सपना बनी ये रातें
भूल गए वो
तू भी भुला दे
प्यार की वो मुलाकातें
सब दूर आंधेरा
मुसाफिर...

कोई भी तेरी
राह ने देखे
नैन बिछाए न कोई
दर्द से तेरे
कोई ना तड़पा
आँख किसी की ना रोई
कहे किसको तू मेरा
मुसाफिर...

कहते हैं ज्ञानी
दुनिया है पानी
पानी पे लिखी लिखाई
है सबकी देखी
है सबकी जानी
हाथ किसी के ना आनी
कुछ तेरा ना मेरा
मुसाफिर...
http://www.youtube.com/watch?v=QCsdHLTf0cI

Sunday, March 9, 2014

ಮುದ್ದು ಮನಸ್ಸು


ಮುದ್ದು ಮನಸ್ಸು
ನೋಡಲು ಹೊರಟಿತು ಒಂದು ಕನಸು

ಮುದ್ದು ಮನಸ್ಸಿನ ನೋಡಿ
ಮುದ್ದು ಮಾತುಗಳ ಆಟ
ಮುದ್ದು ಮಿಡಿತವಿದೆ
ಮುದ್ದು ಉಸಿರಾಟ
ಮುದ್ದು ಹೊರಲಾಟದಿಂದ
ನಿದ್ದೆಯ ಯಾಕೆ ಓಟ
ಮುದ್ದು ಕಣ್ಣ ಮುದ್ದು ಕುಡಿಯಿಂದ
ನೋಡಲಿದೆ ಮುದ್ದು ದೃಷ್ಟಿಯ ಬಿರುನೋಟ

ಮುದ್ದು ಮನಸ್ಸು
ನೋಡಲು ಹೊರಟಿತು ಒಂದು ಕನಸು

ಮುದ್ದು ಜಗತ್ತಲ್ಲಿ ಮುದ್ದಾದ
ಒಂದು ಜೋತೆಗಾರನಿರಬೇಕು
ಈ ಜಾಣ ಜನಜಂಗುಳಿಯಲಿ
ಕೇವಲ ಕೈಯಲ್ಲಿ ನಿನ್ನ ಕೈಯಿರಬೇಕು
ಮುದ್ದು ಯಾವುದೇ ರಾಗದೊಂದಿಗೆ
ಮುದ್ದು ಸಂಗೀತವಿರಬೇಕು
ಮುದ್ದು ಕಾಲುಗಳಿಗೆ
ಮುದ್ದು ಗೀತೆಯಲಿ
ನಲಿಯುವ ಹುಮ್ಮಸ್ಸು

ಮುದ್ದು ಮನಸ್ಸು
ನೋಡಲು ಹೊರಟಿತು ಒಂದು ಕನಸು

ಮುದ್ದು ಕತ್ತಲಿರಲಿ
ಮುದ್ದು ಮೌನತೆವಿರಲಿ
ಕಂಪಿಸುವ ಅಧರವಿರಲಿ
ಮುದ್ದು ಅಮಲಿರಲಿ
ಮುದ್ದು ಸೆರಗು
ಮೆಲ್ಲ ಮೆಲ್ಲನೆ ದಿನ ಕಳೆದಂತೆ
ಮುಖದಿಂದ ಸರಿಯಲೆಂಬ ಮನಸ್ಸು

ಮುದ್ದು ಮನಸ್ಸು
ನೋಡಲು ಹೊರಟಿತು ಒಂದು ಕನಸು

ಮೂಲ/ಹಾಡಿದವರು  : ಸ್ವಾನಂದ್ ಕಿರ್ಕಿರೆ
ಅನುವಾದ :by ಹರೀಶ್ ಶೆಟ್ಟಿ, ಶಿರ್ವ
ಸಂಗೀತ :ಶಾಂತಾನು ಮೊಯ್ತ್ರ
ಚಿತ್ರ : ಹಜಾರೋ ಖ್ವಾಹಿಷೆ ಐಸಿ
bavra mann dekhne chala ek sapna ..

bavrese mann ki dekho bavri hain baatein
bavrese mann ki dekho bavri hain baatein
bavrisi dhadkane hain bavri hain saanse
bavrisi karwanto se nindiya kyon bhaage
bavrese nain chahe bawre zarokhon se bavre naazaroon ko takna

bavra mann dekhne chala ek sapna

bavrese is jahan mein bawra ek saath ho
is saayani bheed mein bass haathon mein tera haath ho
bavrisi dhun ho koi bavra ek raag ho
bavrisi dhun ho koi bavra ek raag ho
bavrese pair chahe bawre tarano ke bavrese bol pe thirkana
bavra mann dekhne chala ek sapna

bavrasa ho andhera bavri khamoshiyaan
thartharati lav ho matthamm bavri madhoshiyaan
bavra ek gunghata chaye hole hole dinn batayein
bavra ek gunghata chaye hole hole dinn batayein
bavrese mukhadese saraktaa
bavra mann dekhne chala ek sapna
www.youtube.com/watch?v=QNB4ah9r79M

ಹಾಯ್ಕು ಹಾಯ್ಕು

ದಾರುಣ ಸ್ಥಿತಿ 
ಆ ನವೀನ ಕವಿಯ 
ಠಕ್ಕು ಬಾರದು 
---

ಬೂಟಾಟಿಕೆಯ
ಪೂಜೆ ಭಕ್ತಿ ಆರತಿ 
ನೀರಿಗೆ ಹೋಮ 


---

ಗುಡಿಗೆ ಬೀಗ
ದೇವರಿಗೆ ವಿಶ್ರಾಂತಿ 
ಭಕ್ತ ಅಶಾಂತ 

by ಹರೀಶ್ ಶೆಟ್ಟಿ, ಶಿರ್ವ

ನೆನಪಾಗುತ್ತಾಳೆ ಅವಳು

ನೆನಪಾಗುತ್ತಾಳೆ ಅವಳು
ಮಕ್ಕಳು ಕಾಗದದ ದೋಣಿ ಮಳೆ ನೀರಲ್ಲಿ ಬಿಡುವಾಗ,
ಬಾಲ್ಯ ಸಖಿಯಾದ ಅವಳೊಟ್ಟಿಗೆ ಈ ಆಟ ಆಡಿದ್ದು ಎಷ್ಟಾಗಿರಬಹುದು
ಆ ಮಳೆಗಾಲದ ದಿವಸದಲಿ

ನೆನಪಾಗುತ್ತಾಳೆ ಅವಳು
ಕಲ್ಲೆಸೆದು ಮಾವಿನ ಹಣ್ಣು ಕಿತ್ತುವ ಮಕ್ಕಳನ್ನು ನೋಡಿ,
ಮಾವಿನ ಹಣ್ಣು ಒಟ್ಟು ಮಾಡಿ
ತನ್ನ ಪಾಲನ್ನೂ ನನಗೆ ತಿನ್ನಲು ಕೊಡುತ್ತಿದ್ದವಳು ಅವಳೇ ತಾನೇ

ನೆನಪಾಗುತ್ತಾಳೆ ಅವಳು
ಶಿಶಿರದಲಿ ಮರದೆಲೆಗಳು ಉದುರುವಾಗವೆಲ್ಲ,
ಮರದಡಿಯಲಿ ಬೇಸರದಿ ಶಾಂತತೆಯಿಂದ ಕುಳಿತಾಗ
ಸಾಂತ್ವನೆ ನೀಡುತ್ತಿದ್ದವಳು ಅವಳೇ ತಾನೇ

ನೆನಪಾಗುತ್ತಲೇ ಅವಳು
ವಸಂತಾಗಮನಕೆ ಹಸಿರೆಲೆ ಚಿಗುರಿದಾಗವೆಲ್ಲ,
ವಸಂತದಲಿ ಆಗಷ್ಟೇ ಬಿಟ್ಟ ಹಣ್ಣು ತಿನ್ನಲು ಬಂದ ಹಕ್ಕಿಗಳ ಮಧುರ ಕಲರವ
ಕೇಳಿ ಆನಂದ ಪಟ್ಟು ನನ್ನನ್ನು ಬಿಗಿದಪ್ಪಿಕೊಳ್ಳುತ್ತಿದ್ದವಳು ಅವಳೇ ತಾನೇ

ನೆನಪಾಗುತ್ತಾಳೆ ಅವಳು
ಬೇಸಿಗೆಯ ಬಿಸಿಲು ತನ್ನ ಪರಕಾಷ್ಟಕ್ಕೆ ಏರಿದಾಗವೆಲ್ಲ,
ಉರಿ ಬಿಸಿಲಲಿ ನಡೆದುಕೊಂಡು ಅವಳ ಮನೆಗೆ ಬಂದಾಗ
ಅಮೃತಮಯಿ ತಂಪು ಪಾನಕ ನೀಡುತ್ತಿದ್ದವಳು ಅವಳೇ ತಾನೇ

ನೆನಪಾಗುತ್ತಾಳೆ ಅವಳು
ಆಗಾಗ ಬರೆಯಲು ಪೆನ್ನು ತೆರೆಯುವಾಗವೆಲ್ಲ,
ಹೀಗೆಯೇ ಏನೇನೊ ಕಾಗದದಲಿ ಗೀಚುತ್ತಿದ್ದವನಿಗೆ
ಪ್ರಥಮ ಕವಿತೆ ಬರೆಯಲು ಪ್ರೋತ್ಸಾಹ ನೀಡಿದ್ದು  ಅವಳೇ ತಾನೇ

ನೆನಪಾಗುತ್ತಾಳೆ ಅವಳು
ಯಾವುದೇ ಅಗಲಿಕೆಯ ಕಥೆ ಕೇಳಿದಾಗವೆಲ್ಲ,
ಉನ್ನತ ಶಿಕ್ಷಣಕ್ಕಾಗಿ ವಿದೇಶ ಹೋಗುವಾಗ ಅವಳು
ಹಿಂದೆ ಹಿಂದೆ ಓಡೋಡಿ ಬಂದು ಅತ್ತವಳು ಅವಳೇ ತಾನೇ

ನೆನಪಾಗುತ್ತಾಳೆ ಅವಳು
ತುಂಬಾ ನೆನಪಾಗುತ್ತಾಳೆ
ಅವಳ ಪ್ರೀತಿ
ಅವಳ ಮುನಿಸು
ಅವಳ ತುಂಟ ಚೇಷ್ಟೆಗಳು
ನೆನಪಾಗುತ್ತದೆ
ತುಂಬಾ ನೆನಪಾಗುತ್ತದೆ

by ಹರೀಶ್ ಶೆಟ್ಟಿ,ಶಿರ್ವ 

ಕೃಷ್ಣ ವೇಣು

ರಾಧೆ ಕೋರಿಕೆ 
ಕೃಷ್ಣ ವೇಣು ವಾದನ 
ನಿಸರ್ಗ ಮಗ್ನ 

by ಹರೀಶ್ ಶೆಟ್ಟಿ,ಶಿರ್ವ

ವಸಂತ

ಹೊಸ ಚಿಗುರು 
ಮರಗಳ ಚೆಲುವು 
ವಸಂತ ಗಾನ 

by ಹರೀಶ್ ಶೆಟ್ಟಿ,ಶಿರ್ವ

ಶಿಶಿರ

ಶಿಶಿರ ಋತು 
ಬೆತ್ತಲೆ ವೃಕ್ಷಗಳ 
ದುಃಖ ಮ್ಲಾನತೆ

by ಹರೀಶ್ ಶೆಟ್ಟಿ,ಶಿರ್ವ

Saturday, March 8, 2014

ಹೆಣ್ಣು

ಕ್ಷಣ ಕ್ಷಣ ಮುರಿಯುತ್ತಿರುವ
ಕನಸಿನ ಹಾದಿಯಲಿ
ದೃಡತೆಯಿಂದ ಸಾಗುತ್ತದೆ
ಹೆಣ್ಣೊಬ್ಬಳ ಪಯಣ
ಏನಿಲ್ಲ ಅವಳ ಹತ್ತಿರ
ಕೇವಲ ಪಾವನ ಭಾವನೆಗಳ ಹೊರತು

ಪ್ರಯತ್ನಗಳೆಲ್ಲ ಅಸಫಲವಾದರೇನು
ನಾನು ಸೋಲಲಾರೆ
ಎಂಬ ಹಠ ಅವಳ
ಮುಳ್ಳು ನನ್ನ ಭಾಗ್ಯದಲಿ ಬಂದರೇನು
ಹೂವನ್ನು ಹಾಸುವೆ
ಎಂಬ ದೃಡ ನಿಶ್ಚಯ ಅವಳ  

ಈ ಹೆಣ್ಣು
ಪದೇ ಪದೇ ಕಷ್ಟಗಳನ್ನು
ಅನುಭವಿಸಿ ಕೂಡ
ಕಣ್ಣೀರ ಸಾಗರದಲಿ ತೇಲಿ ಸಹ
ನಗು ನಗುತ್ತಲೇ
ತನ್ನ ಸಂಸಾರದ ದೋಣಿ ಸಾಗಿಸುತ್ತಾಳೆ

ಜೀವನದಲಿ ಬರುವ ದುಖವೆಂಬ
ಬಿರುಗಾಳಿಯ ಆರ್ಭಟವನ್ನು
ಒಂದು ಸುಂದರ
ಕವಿತೆಯನ್ನಾಗಿ ಪರಿವರ್ತಿಸಿ
ಅದನ್ನು ಹಾಡುತ ಸಾಗುತ್ತಾಳೆ
ಈ ಹೆಣ್ಣು

ಹೆಣ್ಣೆ ಹೇಗೆ ಹೇಳಲಿ ನಿನ್ನ ಗೋಳು
ಸಂಸಾರದ ಭಾರ ಹೊಯ್ಯುವ
ನಿನ್ನ ಭಾಗ್ಯದಲಿ
ಸುಖದ ಬದಲು ಕಣ್ಣೀರೆ ಹೆಚ್ಚು
ಆದರೆ ಆ ಎಲ್ಲ ಕಣ್ಣೀರ ಹನಿಯನ್ನು ಅಡಗಿಸಿ
ಹರ್ಷವನ್ನು ಸುರಿಯುತ್ತಾಳೆ ಈ ಹೆಣ್ಣು

by ಹರೀಶ್ ಶೆಟ್ಟಿ, ಶಿರ್ವ 

ನನ್ನಾಕೆ

ಇನ್ನು ನಿನ್ನ ಚಿತ್ರಗಳನ್ನೇಕೆ ಇಡಲಿ
ಕಣ್ಣಲ್ಲಿ ಸದಾ ನಿನ್ನದೇ ಚಲಚಿತ್ರ ನಡೆಯುತ್ತಿರುವಾಗ

---

ಕೋಗಿಲೆಯ ಸ್ವರ ಮಧುರ 
ಹೌದು,
ಆದರೆ ನನ್ನಾಕೆಯ ರಾಗ ನುಡಿಯಲಾರದು
ನನ್ನನ್ನು ತಣ್ಣ ಮಾಡುವಂತಹ
by ಹರೀಶ್ ಶೆಟ್ಟಿ,ಶಿರ್ವ

Thursday, March 6, 2014

ಮರಿ ಹಕ್ಕಿ

ಸೂರ್ಯ ಎಲ್ಲಿ ಕಣ್ಮರೆಯಾಯಿತು?
ಆಶ್ಚರ್ಯ!!!
ಮರಿ ಹಕ್ಕಿಗೆ
ಚಂದ್ರನ ಮೇಲೆ ಆರೋಪ

by ಹರೀಶ್ ಶೆಟ್ಟಿ,ಶಿರ್ವ

"ಬಾಲ್ಯ" ಹಾಯ್ಕು

ಬಾಲ್ಯ ಜೀವನ 
ಮಾವಿನ ಮರ ಅಡಿ 
ಅದೆಷ್ಟು ಚಂದ 
---

ಎಷ್ಟೊಂದು ರುಚಿ 
ಸಂತೆಯಿಂದ ಅಪ್ಪಯ್ಯ 
ತರುವ ಬಿಸ್ಕು 

---

ಆಡಿ ಬಂದಾಗ
ಅಮ್ಮನ ಗಂಜಿ ಊಟ
ಜೀವ ಅಮೃತ

---

ಮಾವ ತರುವ
ಚಂದಮಾಮ ಪುಸ್ತಕ
ಕನಸ ಲೋಕ

----

ಶಾಲಾ ರಜೆಗೆ
ನದಿಯಲ್ಲಿ ಈಜುವ
ಆನಂದ ಕ್ಷಣ

----

ಶಿಕ್ಷಕರಿಂದ
ಶಾಲೆಯಲಿ ಸಿಗುವ
ಪೆಟ್ಟು ಪ್ರಸಾದ

----

ಜಗಳಗಳು
ಮುದ್ದು ಆಟಗಳೆಲ್ಲ
ಮುದ್ದು ಮಾತೆಲ್ಲ

by ಹರೀಶ್ ಶೆಟ್ಟಿ, ಶಿರ್ವ

ಭಾಗ್ಯೋದಯ

ಹಣೆಗೆ ಸಿಂಧೂರ 
ಮುಡಿಗೆ ಮಲ್ಲಿಗೆ 
ಕೈಗೆ ಹಸಿರು ಗಾಜಿನ ಬಳೆ
ಕುತ್ತಿಗೆಗೆ ಕರಿಮಣಿ 
ಕಾಲಿಗೆ ಗೆಜ್ಜೆ 
ಒಹ್ ಹೆಣ್ಣೆ,
ಗಂಡಿನ ಭಾಗ್ಯೋದಯ 
ನೀನು ಇದನ್ನೆಲ್ಲಾ ಧರಿಸಿದ ನಂತರವೇ
by ಹರೀಶ್ ಶೆಟ್ಟಿ, ಶಿರ್ವ

Wednesday, March 5, 2014

ಸುರಭಿ

ಮಿಂದಿದೆ ಮನ
ಕುಸುಮವು ಸುರಿದ
ಸುರಭಿಯಲಿ

by ಹರೀಶ್ ಶೆಟ್ಟಿ,ಶಿರ್ವ 

ಮುಪ್ಪು

ಎಷ್ಟು ಬೇಗ ಕಾಲ ಉರುಳಿತು
ಈ ಬಂಧ ಕಟ್ಟಿಕೊಂಡು
ಮನೆ ಮಕ್ಕಳು ಬೇಕಾದುದ್ದೆಲ್ಲ ಮಾಡಿ ಆಯಿತು
"ಅಲ್ಲವೇ ಪ್ರಿಯೆ"
ಎಷ್ಟು ಸುಂದರವಾಗಿತ್ತಲ್ಲ ನಮ್ಮ ಈ ಸಂಸಾರ
ಇಷ್ಟು ಬೇಗನೆ ಮುಪ್ಪು ಆವರಿಸಬಹುದೆಂದು ಯೋಚಿಸಿರಲಿಲ್ಲ

ಇದ್ದ ಮೂರು ಮಕ್ಕಳು ಬೇಗನೆ
ಒಬ್ಬರೊಬ್ಬರನ್ನು ದೂರಿ ನಮ್ಮನ್ನು ಬಿಟ್ಟು
ತನ್ನ ಜವಾಬ್ದಾರಿಯಿಂದ ಮುಕ್ತರಾದರು
"ಪ್ರಿಯೆ"
ಈಗ ನನಗೆ ನೀನೆ ಹಾಗು
ನಿನಗೆ ನಾನೇ ಆಸರೆ

ವಯಸ್ಸಾದಂತೆ
ಕಾಯಿಲೆಗಳು ಮಿತ್ರರಾಗುತ್ತಾರೆ
ನಮ್ಮಿಬ್ಬರಿಗೂ ಅದೆಷ್ಟು ಮಿತ್ರರು
"ಆಯ್ಯೋ"
ಇದೇನು ನೀನು ಇಷ್ಟು ಬೇಗನೆ ಹಾಸಿಗೆ ಸೇರಿದೆ ಅಲ್ಲವೇ
ನನ್ನ ಮನಸ್ಸಲ್ಲಿ ಭಯ ಏಕೆ ಮೂಡುತ್ತಿದೆ

ಏನನ್ನು ಕಾಯುತ್ತಿರುವೆ ನೀನು ಪ್ರಿಯೆ
ಎಂಥ ಚಿಂತೆ ಕಾಡುತ್ತಿದೆ ನಿನಗೆ
ಮಕ್ಕಳು ಬರಲಿಲ್ಲವೇ
"ಒಹ್ "
ತಿಳಿಸಿದ್ದೇನೆ ಪ್ರಿಯೆ ಪತ್ರ ಹಾಕಿದ್ದೇನೆ, ಅವರು ಬರುತ್ತಾರಂತೆ
ನಿನ್ನ ಕಣ್ಣು ಯಾಕೆ ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ನುಡಿಯುತ್ತಿದೆ

ಬೇಡ ಪ್ರಿಯೆ ಬೇಡ
ನನ್ನನ್ನು ಬಿಟ್ಟು ಹೋಗಬೇಡ
ನನಗ್ಯಾರು ಗತಿ ಇನ್ನು
"ನನ್ನೊಲವೆ"
ಮಾತಾಡುವುದಿಲ್ಲ ಯಾಕೆ ನೀನು
ಹೊರಟೆಯ ಬಿಟ್ಟು... ಹೊರಟೆ ಬಿಟ್ಟೆಯ....

by ಹರೀಶ್ ಶೆಟ್ಟಿ,ಶಿರ್ವ 

Tuesday, March 4, 2014

"ವೇಶ್ಯೆ" ಹಾಯ್ಕು

ಕರಿ ಕತ್ತಲೆ
ವ್ಯಾಪಾರದಲಿ ವೇಶ್ಯೆ
ಅಳುವ ಮಗು

ವೇಶ್ಯೆಯ ವೃತ್ತಿ
ಪೂಜೆಯಲಿ ಧನಿಕ
ದೇಹ ಪ್ರಸಾದ

ಕ್ಷಣಿಕ ಸುಖ
ಬಹಿರಂಗ ಮಾನವ
ಶವ ಶರೀರ

ಹೆಚ್ಚು ಸಂದಾಯ
ಸುಳ್ಳು ಮಾನವೀಯತೆ
ಮೂಕ ಮಮತೆ

ಅಧಿಕಾದಾಯ
ಮಗು ಹಾಲು ವ್ಯವಸ್ಥೆ
ಪೋಲಿಸ್ ಪಾಲು

by ಹರೀಶ್ ಶೆಟ್ಟಿ,ಶಿರ್ವ 

"ಮಳೆ" ಹಾಯ್ಕು

ಬಾಡಿದ ಬೆಳೆ
ವರುಣನ ಮುನಿಸು
ರೈತ ಕಂಗಾಲು

---

ಒಣ ಧರತಿ
ವಿಮುಖವಾದ ವರ್ಷ
ವರುಣ ಪೂಜೆ

---

ಬಾನಲ್ಲಿ ದೃಷ್ಟಿ
ಮೇಘಗಳ ಚೆಲ್ಲಾಟ
ಸೋತ ಕಂಗಳು

---

ಕಷ್ಟದ ಕಾಲ
ಏರುತ್ತಿರುವ ಸಾಲ
ವಿವಶ ರೈತ

---
ಖಾಲಿ ಬಾಣಲೆ
ಮನೆಯಲ್ಲಿಲ್ಲ ಧಾನ್ಯ
ಹಸಿದ ಹೊಟ್ಟೆ

---

ಬಂಜರು ಭೂಮಿ
ಹೃದಯ ಸೀಳು ಸೀಳು
ಚುಚ್ಚುವ ಮುಳ್ಳು

---

ಬರಿದು ಬಾವಿ
ಒಣ ನದಿ ಕಾಲುವೆ
ಕಣ್ಣೀರ ಗತಿ

by ಹರೀಶ್ ಶೆಟ್ಟಿ, ಶಿರ್ವ 

Monday, March 3, 2014

ನನ್ನ ಮುರಿದ ಹೃದಯದಿಂದ

ನನ್ನ ಮುರಿದ ಹೃದಯದಿಂದ 
ಯಾರಾದರು ಇಂದಿದು ಕೇಳಲಿ 
ನನ್ನ ಅವಸ್ಥೆ ಏನೆಂದು 
ನನ್ನ ಅವಸ್ಥೆ ಏನೆಂದು
ನನ್ನ ಮುರಿದ ಹೃದಯದಿಂದ......

ಭಾಗ್ಯ ನಿನ್ನ ಪದ್ಧತಿ ಅದ್ಭುತವಾದದ್ದು 
ಅದು ನಿಷ್ಕಪಟನನ್ನು ವಂಚಿಸುವಂತಹದ್ದು
ಹೂವು ಅರಳಿದರೆ ಶಾಖೆ ಮುರಿಯುವುದು
ಒಲವೆಂದು ತಿಳಿದದ್ದು 
ನನ್ನ ದೃಷ್ಟಿಯ ದೋಷವಾಗಿತ್ತು
ಯಾರದು ಏನು ತಪ್ಪು ಇದರಲಿ
ನನ್ನ ಮುರಿದ ಹೃದಯದಿಂದ
ಯಾರಾದರು ಇಂದಿದು ಕೇಳಲಿ.....

ಕೇಳಿದ್ದು ಒಲವು ಪಡೆದದ್ದು ವಿರಹದ ಬೇಗೆ
ಇಷ್ಟವಾಗಲಿಲ್ಲ ಈ ಜಗತ್ತು ನನಗೆ
ಪ್ರಥಮ ಹೆಜ್ಜೆಯಲ್ಲಿಯೇ ಉರುಳಿ ಬಿದ್ದೆ ಹೀಗೆ
ಸದಾ ಮುಕ್ತವಾಗಿ ಸಂಚರಿಸುತ್ತಿದ್ದೆ
ನನಗೆ ಗೊತ್ತೇ ಏನಿತ್ತು
ಪ್ರೀತಿ ಅಂದರೆ ಏನೆಂದು
ನನ್ನ ಮುರಿದ ಹೃದಯದಿಂದ
ಯಾರಾದರು ಇಂದಿದು ಕೇಳಲಿ.....

ಮೂಲ : ಕ಼ಮರ್ ಜಲಲಾಬಾದಿ
ಅನುವಾದ: ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಚ್ಚಲಿಯ

Mere Toote Hue Dil Se Koi To Aaj Ye Puchhe
Ke Tera Haal Kya Hai, Ke Tera Haal Kya Hai
Mere Toote Hue Dil Se..................

Kismat Teri Reet Niraali,\-2
O Chhaliye Ko Chhalane Vaali
Phool Khila To Tooti Daali
Jise Ulafat Samajh Baitha,
Meri Nazaron Ka Dhokha Tha
Kisi Ki Kya Khata Hai \-2
Mere Toote Hue Dil Se..................

Maangi Muhabbat Paai Judaai, \-2
Duniya Mujh Ko Raas Na Aai
Pahale Qadam Par Thokar Khaai
Sada Aazaad Rahate The,
Hamen Maalum Hi Kya Tha
Muhabbat Kya Bala Hai \-2
Mere Toote Hue Dil Se..................

http://www.youtube.com/watch?v=u_RevIlDtMk

ಹಾಯ್ಕು

ಉಣ್ಣುವ ಮಗು 
ಹಸಿದಿದ್ದ ಅಮ್ಮನ 
ತೃಪ್ತಿಯ ನೋಟ 

---

ವೇಶ್ಯ ಬಜಾರ 
ನಿತ್ಯ ಸಾಯುವ ದೇಹ 
ಕನಸ ಶ್ರಾದ್ಧ 

by ಹರೀಶ್ ಶೆಟ್ಟಿ,ಶಿರ್ವ

ಕೆಲವು ಹಾಯ್ಕುಗಳು

ಸೋಲಿನ ಭಯ 
ಬಣ್ಣವ ಬಳಸಿದ್ದ 
ಚಹರೆಯಲಿ

---

ಪಾರಿತೋಷಕ
ಸತ್ಯ ತಿರುಚಿದಕ್ಕೆ 
ಪುರಾಣಗಳ 

---

ಕಲ್ಲುಗಳಂತೆ 
ಈ ಹೃದಯಗಳೆಲ್ಲ
ಮೌನ ವಿಮರ್ಶೆ 

---

ಸಿದ್ಧತೆಯಲಿ
ತೇಲುವ ಮೇಘಗಳು,
ಧರೆಯ ಹರ್ಷ 

---

ಮುಪ್ಪು ನಿರೀಕ್ಷೆ
ಅಂಚೆಯಲಿ ಬಂದದ್ದು
ಸಾವಿನ ಸುದ್ಧಿ 

---

ಕಜ್ಜಳಯುಕ್ತ
ಕಂಗಳಲ್ಲಿ ಅನೇಕ 
ಶ್ವೇತ ಕನಸು 

by ಹರೀಶ್ ಶೆಟ್ಟಿ,ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...