Wednesday, 26 February, 2014

ಚಾಯಿವಾಲ

ಮುಂಜಾನೆ ೬.೩೦ ಯ ಸಮಯ, ರಮಾ ಅವಸರದಲ್ಲಿದ್ದಳು.

ಬ್ಯಾಗನ್ನು ಹಿಡಿದು " ಅಮ್ಮ ಬರುತ್ತೇನೆ" ಎಂದು ಹೇಳಿ ಹೊರಟಳು . 

ಹೊಸ ಕೆಲಸ, ತಡವಾಗಿ ಹೋದರೆ ಕಚೇರಿಯಲ್ಲಿದವರು ಏನು ತಿಳಿಯಬಹುದು ಎಂದು ಭಯ ಅವಳಿಗೆ, ಹಾಗೆ ಅವಳ ಕೆಲಸ ಸೇರುವ ಸಮಯ ೮ ಗಂಟೆ, ಅವಳ ಮನೆಯಿಂದ ೧ ಗಂಟೆಯ ಹಾದಿ, ಬಸ್'ಲ್ಲಿ ಹೋಗಬೇಕು, ಅದಕ್ಕೆ ಬೆಳಿಗ್ಗೆ ಸ್ವಲ್ಪ ಬೇಗನೆ ಎದ್ದು  ೬.೩೦ ಸಮವಾಗಿ ಮನೆಯಿಂದ ಹೊರಡುತ್ತಿದ್ದಳು. ಸ್ವಲ್ಪ ದಿನ ಮುಂಚೆಯೇ ಅವಳು ತನ್ನ ಗ್ರಾಜುಯೇಷನ್ ಮುಗಿಸಿ ಈ ಕೆಲಸ ಸೇರಿದ್ದು.

ಮನೆಯಿಂದ ಕೆಳಗೆ ಬಂದಾಗ, ಅವಳ ದೃಷ್ಟಿ ಎದುರು ಕಡೆ ಇದ್ದ ಆ ಚಹಾದ ಸ್ಟಾಲ್'ಗೆ(ಸಣ್ಣ ಅಂಗಡಿ) ಹೋಯಿತು, ಚಹಾ ಮಾಡುತ್ತಿದ್ದ ಮನುಷ್ಯ ಅವಳನ್ನೇ ಒಂದು ವಿಚಿತ್ರ ದೃಷ್ಟಿಯಿಂದ ನೋಡುತ್ತಿದ್ದ , ಅವನ ವಯಸ್ಸು ೪೫ ಇರಬೇಕು . 

ರಮಾ ಮನಸ್ಸಲ್ಲಿಯೆ "ಅಯ್ಯೋ , ಹಾಳು ಮನುಷ್ಯ , ಅವನ ಕಣ್ಣು ಹೊಡೆದು ಹಾಕಬೇಕು", ಯಾಕೋ ರಮಾಳಿಗೆ ಆ ಚಹಾ ಮಾಡುವವ ಅವಳನ್ನು ಒಂದು ವಿಚಿತ್ರ ದೃಷ್ಟಿಯಿಂದ ನೋಡುವುದು ಇಷ್ಟವಾಗುತ್ತಿರಲಿಲ್ಲ. ಆರು ತಿಂಗಳ ಮುಂಚೆಯೇ ಅವನು ಇಲ್ಲಿ ಬಂದು ಈ ಚಹಾದ ಅಂಗಡಿ ಮಾಡಿದ್ದ ಹಾಗು ಎಲ್ಲರೂ ಅವನನ್ನು "ಚಾಯಿವಾಲ" ಎಂದು ಕರೆಯುತ್ತಿದ್ದರು. ಆದರೆ ರಮಾಳಿಗೆ ಅವನು ಈ ದೃಷ್ಟಿಯಿಂದ ನೋಡುವುದರಿಂದ ಅವಳಿಗೆ ಅವನ ಮೇಲೆ ಸಿಟ್ಟು ಹುಟ್ಟಿಸುತ್ತಿತ್ತು, ಮನೆಯಲ್ಲಿ ಸಹ ತಂದೆಯ ಹತ್ರ ಹೇಳಿದಳು, ಆದರೆ ಅವರು ನಗುತ "ನನ್ನ ಮಗಳು ಇಷ್ಟು ಸುಂದರಿ ಇರುವಾಗ ಯಾರು ತಾನೇ ನೋಡಲಾರರು" ಎಂದು ತಮಾಷೆಯಿಂದ ಹೇಳಿ ಮಾತನ್ನು ಹಾರಿಸುತ್ತಿದ್ದರು. ಆದರೆ ನಿಜವಾಗಿ ಅವರು ಎರಡು ಮೂರು ಸಲ ಹೋಗಿ ಆ ಚಾಯಿವಾಲನ ಸ್ಟಾಲ್'ಗೆ ಹೋಗಿ ಹೀಗೆಯೇ ಚಹಾ ಕುಡಿದು ಹಾಗು ಅವನ ಹತ್ತಿರ ಅಲ್ಲಿ ಇಲ್ಲಿಯ ವಿಷಯ ಮಾತಾಡಿ  ಬಂದಿದ್ದರು, ಆದರೆ ಅವರಿಗೇನು ಆ ಚಾಯಿವಾಲ ಅಷ್ಟೇನೂ ದುಷ್ಟ ಮನುಷ್ಯನೆಂದು ಅನಿಸಲಿಲ್ಲ. ಆದರೆ ರಮಾಳಿಗೆ ಅವನನ್ನು ನೋಡಿದ್ದರೆ ಆಗುತ್ತಿರಲಿಲ್ಲ.

ಆ ದಿವಸ ಕಚೇರಿಯಲ್ಲಿ ಮೀಟಿಂಗ್ ಇದ್ದ ಕಾರಣ ರಮಾಳಿಗೆ ಕಚೇರಿಯಿಂದ ಹೊರಡುವಾಗ ೮.೩೦ ಆಯಿತು. ಸಾಮಾನ್ಯವಾಗಿ ದಿನನಿತ್ಯ ಅವಳು ೬.೩೦ ತನಕ  ಮನೆಗೆ ತಲುಪುತಿದ್ದಳು. ಮನೆಗೆ ಫೋನ್ ಮಾಡಿ ತಿಳಿಸಿದರಿಂದ ಅವಳಿಗೆ ಸ್ವಲ್ಪ ಸಮಾಧಾನ ಇತ್ತು. ಬಸ್ ಹತ್ತುವಾಗ ಅವಳ ಹಿಂದೆ ಒಬ್ಬ ಯುವಕ ಅವಳ ಮೈ ಮುಟ್ಟಿದಂತೆ ಆಯಿತು, ಹಿಂತಿರುಗಿ ನೋಡುವಾಗ, ಒಬ್ಬಾತ ಅವಳನ್ನು ನೋಡಿ ನಗುತ್ತಿದ್ದ, ಅಯ್ಯೋ ಅಸಹ್ಯ ನಗು, ಅವನಿಗೆ ಒಂದು ಬಾರಿಸ ಬೇಕೆಂದಾಯಿತು ಅವಳಿಗೆ, ಆದರೆ ಆ  ಜನಜಂಗುಳಿ, ಆ ಗರ್ದಿಯಲ್ಲಿ ಅವಳಿಗೆ ಒಳಗೆ ನುಗ್ಗುವಷ್ಟೇ ಸಾಕಾಯಿತು. 

ಹೇಗೋ ಬಸ್ ಒಳಗೆ ಬಂದಳು, ಆ ಯುವಕ ಅವಳ ಹಿಂದೆಯೇ ಇದ್ದ, ಬಸ್ ಒಳಗೆ ಬಂದ ನಂತರ ಅವಳು ತನ್ನನ್ನು ಸ್ವತಃ ಸಮಾಧಾನ ಪಡಿಸಿ ಶಾಂತವಾಗಿ ನಿಂತಳು. ಆ ಯುವಕ ಪದೇ ಪದೇ ಅವಳ ಗರ್ದಿಯ ನೆಪದಿಂದ ಅವಳ ಮೈ ಮುಟ್ಟುತ್ತಿದ್ದ, ಆದರೆ ರಮಾಳಿಗೆ ಏನು ಮಾಡುವುದೆಂದು ತೋಚಲಿಲ್ಲ. ರಮಾಳ ಬಸ್ ಸ್ಟಾಪ್ ಬಂದ ಕೂಡಲೇ ರಮಾ ಬೇಗ ಬೇಗ ಇಳಿದಳು, ಆ ಯುವಕ ಅವನು ಅವಳ ಹಿಂದೆಯೇ ಇಳಿದ. ರಮಾ ಬೇಗ ಬೇಗ ನಡೆಯಲಾರಂಭಿಸಿದರು, ಬಸ್ ಸ್ಟಾಪ್ ಹಾಗು ಅವಳ ಮನೆಯ ಮಧ್ಯೆ ಐದು ನಿಮಿಷದ ಹಾದಿ ಇತ್ತು. ಒಳ ರಸ್ತೆ ಆದ ಕಾರಣ ರಸ್ತೆಯಲ್ಲಿ ಕತ್ತಲೆ ಇತ್ತು, ಆ ಯುವಕ ಅವಳ ಹಿಂದೆಯೇ ಇದ್ದ, ರಮಾಳಿಗೆ ಈಗ ಹೆದರಿಕೆ ಶುರು ಆಯಿತು, ರಸ್ತೆಯಲ್ಲಿ ಯಾರೂ ಇರಲಿಲ್ಲ ,ರಮಾ ಬೇಗ ಬೇಗನೆ ಹೆಜ್ಜೆ ಇಟ್ಟಳು, ಅವಳ ಬಿಲ್ಡಿಂಗ್ ಎದುರೆ ಕಾಣುತ್ತಿತ್ತು ಅವಾಗಲೇ ಆ ಯುವಕ ಅವಳನ್ನು ಓಡಿ ಬಂದು ಹಿಡಿದು ಒಂದು ಮೂಲೆಗೆ ಎಳೆಯಲು ಆರಂಭಿಸಿದ. ರಮಾ ಜೋರಿನಿಂದ ಕಿರುಚಿದಳು, ಆದರೆ ಈಗ ಆ ಯುವಕ ಅವಳ ಬಾಯಿಗೆ ಕೈ ಇಟ್ಟು ಎಳೆಯಲು ಪ್ರಯತ್ನಿಸಿದ, ಅವಾಗಲೇ ಅಲ್ಲಿ ಆ ಚಾಯಿವಾಲ ಬಂದ, ಅವನು ಬಂದು ಮೊದಲು ಅವಳನ್ನು ಅವನಿಂದ ಬಿಡಿಸಿದ ಹಾಗು ಅವನಿಗೆ ಸರಿ ತುಳಿದು ಹೊಡೆದು ಹದ ಮಾಡಿದ ಹಾಗು ಅಲ್ಲೇ ಕಟ್ಟಿ ಹಾಕಿದ,  ಅಲ್ಲಿ ಜನರೆಲ್ಲಾ ಒಟ್ಟಾದರು, ರಮಾಳ ತಂದೆ ತಾಯಿಗೆ ಸಹ ಸುದ್ಧಿ ತಿಳಿಯಿತು, ಅವರೂ ಅಲ್ಲಿಗೆ ಬಂದರು. ಸ್ವಲ್ಪ ಹೊತ್ತಿನಲ್ಲಿಯೇ ಪೋಲಿಸ್ ಸಹ ಬಂದರು. 

ವಿಷಯ ಎಲ್ಲಾ ತಿಳಿದು ಪೊಲೀಸರು ಚಾಯಿವಾಲನಿಗೆ "ಒಳ್ಳೆಯ ಕೆಲಸ ಮಾಡಿದೆ ನೀನು ಮಹರಾಯ, ಇಂತಹವರನ್ನು ಯಾವಗಲು ಬಿಡಬಾರದು" ಎಂದು ಆ ಯುವಕನಿಗೆ ಎರಡು ಬಾರಿಸಿದ್ದರು. 

ಚಾಯಿವಾಲ ಸ್ವಲ್ಪ ಭಾವುಕನಾಗಿ "ಹೇಗೆ ಬಿಡಲಿ ಸಾಹೇಬರು, ಇವಳ ಪ್ರಾಯದ ನನ್ನ ಸಹ ಒಂದು ಮಗಳಿದ್ದಳು, ಒಂದು ದಿವಸ ಅವಳು ಮನೆಯಲ್ಲಿ ಒಬ್ಬಳೇ ಇರುವಾಗ ಇವನಂತಹ ಒಬ್ಬ ಅಮಾನುಷ ಬಂದು ಅವಳ ಅತ್ಯಾಚಾರ ಮಾಡಿ ಓಡಿ ಹೋದ. ಅವಮಾನ ತಾಳಲಾರದೆ ಆ ಮುದ್ದು ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು" ಎಂದು ಅಳಲಾರಂಭಿಸಿದ.

ಅವನ ಮಾತು ಕೇಳಿ ರಮಾ ಸ್ತಬ್ಧಳಾದಳು, ಅವಳು ಚಾಯಿವಾಲನನ್ನು ಎಷ್ಟು ತಪ್ಪು ತಿಳಿದಿದ್ದಳು, ಆದರೆ .... ಆಯ್ಯೋ ,  ನನ್ನ ಹಾಳು ವಿಚಾರಗಳೇ.

ಪೊಲೀಸರು ಅವನಿಗೆ "ಸಮಾಧಾನ ಮಾಡಿಕೊಳ್ಳು, ನೀನೊಬ್ಬ ಒಳ್ಳೆ ಮನುಷ್ಯ , ನಿನ್ನ ಒಳ್ಳೆಯದಾಗಲಿ".

ರಮಾ ಚಾಯಿವಾಲನ ಬಳಿ ಬಂದು "ನೀವು ನಿಮಗೆ ಮಗಳಿಲ್ಲ ಎಂದು ತಿಳಿಯಬೇಡಿ, ಇಂದಿನಿಂದ ನಾನೇ ನಿಮ್ಮ ಮಗಳು". 

ಚಾಯಿವಾಲ ತನ್ನ ಕಣ್ಣೀರು ಒರೆಸುತ್ತಾ ಅವಳನ್ನು ಅಕ್ಕರೆಯಿಂದ ನೋಡಲಾರಂಭಿಸಿದ. 

by ಹರೀಶ್ ಶೆಟ್ಟಿ,ಶಿರ್ವ 

ವಿವಿಧ

ಕರಿ ಕತ್ತಲೆ 
ಕಳ್ಳರಿಗೆ ಮಾಫಿ 
ಮಹಾ ಶಿವರಾತ್ರಿ 

----

ಅವಳ ಜಡೆ 
ನಾ ತಂದ ಮಲ್ಲಿಗೆ 
ಸುಗಂಧ ಎಲ್ಲೆಡೆ 

----

ಅವಳ ತಾಂಡವ 
ಪತಿಯ ನಡುಗು 
ದಾಸನ ಜನ್ಮ 

----

ಸಮುದ್ರದ ಬಂಡೆ
ಕೆತ್ತಿದ ಅವಳ ಹೆಸರು 
ಅವಿಸ್ಮರಣೀಯ ನೆನಪು

----

ಕನ್ನಡಿಯ ಪ್ರತಿಬಿಂಬ
ಸುಕ್ಕುಗಟ್ಟಿದ ಚಹರೆ
ಸತ್ಯತೆಯ ಸಾಕ್ಷಾತ್ಕಾರ

----

ವಿದೇಶದಲ್ಲಿ ಮೃತ್ಯು 
ವಿಮಾನದಿಂದ ಬರುವ ಶವಪೆಟ್ಟಿಗೆ

ಇಲ್ಲಿ ಜೀವಂತ ಶವವಾದ ತಂದೆ ತಾಯಿ 

by ಹರೀಶ್ ಶೆಟ್ಟಿ,ಶಿರ್ವ

Tuesday, 25 February, 2014

ನೆನಪು

ಸಾಗರ
ನಿನ್ನ ಒಂದೊಂದು ತರಂಗ
ಅವಳ ಒಂದೊಂದು ನೆನಪು
ಹುಟ್ಟಿಸುತ್ತದೆ

---------

ಅವಳ ನೆನಪು ಕಟ್ಟಿ
ಅಟ್ಟಕ್ಕೆ ಬಿಸಾಡಿದೆ
ಈಗ
ದಿನ ಅಟ್ಟದಲ್ಲಿ
ಮಲಗುವ ಆಸೆ

---------

ಅವಳ ನೆನಪು
ಹುಟ್ಟಿಸುವ ಪತ್ರಗಳನ್ನು
ಅಮ್ಮ ಸುಟ್ಟು ಬಿಟ್ಟಳು
ಪತ್ರದ ಬೂದಿ ನೋಡಿ
ಪತ್ರದ ವಿಷಯಗಳೆಲ್ಲ
ಮನಸ್ಸಲ್ಲಿ ಮುದ್ರಿತವಾಯಿತು

----------

ಮೋಂಬತ್ತಿಯಂತೆ  
ಅವಳ ನೆನಪು
ಮನಸ್ಸಲ್ಲೇ
ಪ್ರಕಾಶಮಾನವಾಗಿ
ಅಲ್ಲೇ ಕರಗಿ ಹೆಪ್ಪುಗಟ್ಟುತ್ತದೆ

by ಹರೀಶ್ ಶೆಟ್ಟಿ, ಶಿರ್ವ 

ಈಗಂತೂ ನಿನ್ನಿಂದಲೇ


ಈಗಂತೂ ನಿನ್ನಿಂದಲೇ
ಎಲ್ಲ ಸುಖಗಳು ನನ್ನ
ನಿನ್ನನ್ನೆ ಪ್ರೀತಿಸಿ ಸಾಯುವುದೇ
ಜೀವನ ನನ್ನ

ನಿನ್ನಿಂದ ಈ ಹೃದಯ
ಮರುಳಾದಾಗ
ಏನೇ ಹೇಳಲಿ ನನಗೆ
ಈ ಜಗದವರು ಆಗ
ಯಾರು ಎಷ್ಟೇ ಕಟ್ಟಲಿ ಮಾತುಗಳನ್ನ

ಈಗಂತೂ ನಿನ್ನಿಂದಲೇ
ಎಲ್ಲ ಸುಖಗಳು ನನ್ನ
ನಿನ್ನನ್ನೆ ಪ್ರೀತಿಸಿ ಸಾಯುವುದೇ
ಜೀವನ ನನ್ನ

ನಿನ್ನ ಪ್ರೀತಿಯಲಿ ನಾನು
ದೂರ ದೂರ ತನಕ ಅಪಕಿರ್ತಿ ಪಡೆದೆ
ನಿನ್ನೊಟ್ಟಿಗೆ ಒಲವೆ
ನಾನೂ ಪ್ರಸಿದ್ಧಿ ಪಡೆದೆ
ನೋಡುವ ಎಲ್ಲಿಗೆ ಒಯ್ಯುತ್ತದೆ
ಈ ಪ್ರೀತಿಯ ಅಮಲು ನನ್ನ

ಈಗಂತೂ ನಿನ್ನಿಂದಲೇ
ಎಲ್ಲ ಸುಖಗಳು ನನ್ನ
ನಿನ್ನನ್ನೆ ಪ್ರೀತಿಸಿ ಸಾಯುವುದೇ
ಜೀವನ ನನ್ನ

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು: ಲತಾ ಮಂಗೇಶ್ಕರ್
ಸಂಗೀತ : ಎಸ್ . ಡಿ.ಬರ್ಮನ್
ಚಿತ್ರ : ಅಭಿಮಾನ್

ab to hain tum se, har khushee apanee
tum pe maranaa hai, jindagee apanee

jab ho gayaa tum pe, ye dil diwaanaa
fir chaahe jo bhee kahe, hum ko jamaanaa
koee banaaye baaten, chaahe ab jitanee

tere pyaar mein badanaam  door door ho gaye
tere saath hum bhee sanam  mashahoor ho gaye
dekho kahaa le jaaye, bekhudee apanee

http://www.youtube.com/watch?v=c5SS152G7oU

Monday, 24 February, 2014

ಮುಳ್ಳೇ ಮುಳ್ಳೂ

ನಿನ್ನಿಂದ ನನಗೆ ಸಿಗುವುದು ಮುಳ್ಳೇ ಮುಳ್ಳೂ ಎಂದು ತಿಳಿದರೂ
ನಿನ್ನ ಹೆಜ್ಜೆಯ ಮುಂದೆ ಹೂಗಳನ್ನು ಹಾಸುವುದನ್ನು ನಾನು ಬಿಡಲಾರೆ 
by ಹರೀಶ್ ಶೆಟ್ಟಿ,ಶಿರ್ವ

ಬರಹ

ಅವನು ಪುಸ್ತಕ ತೆರೆದು ನೋಡಿದ
ಬರಹಗಳೆಲ್ಲ ಅಳುತ್ತಿದ್ದವು
ಓದುಗರಿಲ್ಲದೆ 
---------

ಭಾವಗಳ ನದಿ ಹರಿಯುತ್ತಿತ್ತು 
ಆದರೆ ಬರಹದ ದೋಣಿ ತೇಲಲಿಲ್ಲ 
ಬರಹಗಳು ತುಂಬಿ ತುಳುಕುತ್ತಿತ್ತು

----------

ಅರ್ಥವಾಗದ ಬರಹ
ತುಂಬಾ ಜನ ಭೇಷ್ ಭೇಷ್ ಎಂದು ಹೊಗಳಿದರು
ಕವಿಗೆ ಆಶ್ಚರ್ಯ ಅಂಥದೇನು ಬರೆದೆಯೆಂದು

---------

ಕವಿಗೆ ಫೇಸ್ ಬುಕ್'ಲ್ಲಿ ಲೈಕ್ ಒತ್ತುವ
ಅಭಿಮಾನಿಯ ಭೇಟಿ
ಅಭಿಮಾನಿ ಹೋದ ಮೇಲೆ ತಿಳಿಯಿತು
ಅವನ ಹೆಚ್ಚಿನ ಕವನಗಳನ್ನು ಅವನು ಓದಲೇ ಇಲ್ಲವೆಂದು

--------

ಅವನು ಒಳ್ಳೆ ಬರೆಯುತ್ತಿದ್ದ
ಮನಸ್ಸಲ್ಲಿ ಬಂದ ಭಾವಗಳನ್ನು
ಕಾಗದಕ್ಕೆ ಚೆಲ್ಲುತ್ತಿದ್ದ
ಕತೆ, ಕವನ, ಹನಿ, ಚುಟುಕು, ಹಾಯ್ಕು
ಏನೆಂದು ತಿಳಿಯುವ ಗೋಚರಕ್ಕೆ ಅವನು ಹೋಗಲಿಲ್ಲ

by ಹರೀಶ್ ಶೆಟ್ಟಿ,ಶಿರ್ವ

ನೀನು ಪ್ರೀತಿಯ ಸಾಗರ

ನೀನು ಪ್ರೀತಿಯ ಸಾಗರ-೨
ನಿನ್ನ ಒಂದು ಹನಿಯ ದಾಹದಲಿ ನಾವು-೨
ಹಿಂತಿರುಗಿಸಿದರೆ ನಮ್ಮನ್ನು-೨
ತೆರಳುವೆ ಈ ಜಗತ್ತಿನಿಂದ ನಾವು-೨

ನೀನು ಪ್ರೀತಿಯ ಸಾಗರ-೨
ನಿನ್ನ ಒಂದು ಹನಿಯ ದಾಹದಲಿ ನಾವು-೨

ಗಾಯಗೊಂಡ ಮನಸ್ಸಿನ
ಮರುಳು ಪಕ್ಷಿ
ಹಾರುವ ತವಕದಲಿ-೨
ರೆಕ್ಕೆ ಕೋಮಲ
ಕಣ್ಣು ಮಸುಕು
ಹೋಗಲಿದೆ ಸಾಗರ ದಾಟಿ ಆಚೆಯಲಿ-೨
ಈಗ ನೀನೇ ಇದಕ್ಕೆ ತಿಳಿಸು-೨
ಹಾದಿ ಮರೆತೇ ಎಲ್ಲಿಂದ ನಾವು-೨

ನೀನು ಪ್ರೀತಿಯ ಸಾಗರ
ನಿನ್ನ ಒಂದು ಹನಿಯ ದಾಹದಲಿ ನಾವು-೨

ಇಲ್ಲಿ ನಲಿಯುತ
ಹಾಡುತ್ತಿದೆ ಜೀವನ
ಅಲ್ಲಿ ಸಾವು ನಿಂತಿದೆ-೨
ಯಾರಿಗೇನು ತಿಳಿದಿದೆ ಎಲ್ಲಿದೆ ಸೀಮೆ
ಗೊಂದಲವಾಗುತ್ತಿದೆ-೨
ಕಿವಿಯಲಿ ಸ್ವಲ್ಪ ಹೇಳು-೨
ಬರಲಿ ಯಾವ ದಿಶೆಯಿಂದ ನಾವು-೨

ನೀನು ಪ್ರೀತಿಯ ಸಾಗರ
ನಿನ್ನ ಒಂದು ಹನಿಯ ದಾಹದಲಿ ನಾವು-೨

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮನ್ನಾ ಡೇ
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಸೀಮಾ


Manna Dey:
Tu Pyaar Ka Saagar Hai - 2
Teri Ek Boond Ke Pyaase Hum - 2
Lauta Jo Diya Tune - 2
Chale Jaayenge Jahaan Se Hum - 2

Chorus:
Tu Pyaar Ka Saagar Hai - 2
Teri Ek Boond Ke Pyaase Hum - 2
Tu Pyaar Ka Saagar Hai


Mm Mm Mm Mm Mm, Mm Mm Mm Mm Mm
Mm Mm Mm Mm Mm

Manna Dey:
Ghaayal Mann Ka Paagal Panchhi
Udne Ko Beqaraar - 2
Pankh Hai Komal, Aankh Hai Dhundli
Jaana Hai Saagar Paar - 2
Ab Tu Hi Isse Samjha - 2
Raah Bhoole The Kahan Se Hum - 2

Chorus;
Tu Pyaar Ka Saagar Hai
Teri Ek Boond Ke Pyaase Hum - 2
Tu Pyaar Ka Saagar Hai

Mm Mm Mm Mm Mm, Mm Mm Mm Mm Mm
Mm Mm Mm Mm Mm

Manna Dey:
Idhar Jhoom Ke Gaaye Zindagi
Udhar Hai Maut Khadi - 2
Koi Kya Jaane Kahaan Hai Seema
Uljhan Aan Padi - 2
Kaanon Mein Zara Keh De - 2
Ke Aaye Kaun Disha Se Hum - 2
Tu Pyaar Ka Saagar Hai
Teri Ek Boond Ke Pyaase Hum - 2
Tu Pyaar Ka Saagar Hai - 2
http://www.youtube.com/watch?v=e2D-kjOMNF0

Sunday, 23 February, 2014

ನಾನು ಬದುಕಿನ


ನಾನು ಬದುಕಿನ
ಜೊತೆ ನೀಡುತ್ತಲೇ ಹೋದೆ
ಪ್ರತಿ ಚಿಂತೆಯನ್ನು ಹೊಗೆಯಲ್ಲಿ
ಹಾರಿಸುತ್ತಲೇ ಹೋದೆ
ಪ್ರತಿ ಚಿಂತೆಯನ್ನು ಹೊಗೆಯಲ್ಲಿ....

ನಷ್ಟ ಕಷ್ಟಗಳ
ಶೋಕ ಮಾಡುವುದು ವ್ಯರ್ಥವಾಗಿತ್ತು-೨
ಮಾಡುವುದು ವ್ಯರ್ಥವಾಗಿತ್ತು-೩
ನಷ್ಟ ಕಷ್ಟಗಳ ಉತ್ಸವ
ಆಚರಿಸುತ್ತಲೆ ಹೋದೆ-೨
ಪ್ರತಿ ಚಿಂತೆಯನ್ನು ಹೊಗೆಯಲ್ಲಿ....

ಯಾವುದು ಸಿಕ್ಕಿತೋ
ಅದನ್ನೇ ಭಾಗ್ಯ ಎನಿಸಿದೆ -೨
ಭಾಗ್ಯ ಎನಿಸಿದೆ -೨
ಯಾವುದನ್ನು ಕಳೆದುಕೊಂಡೆ
ಅದನ್ನು ಮರೆಯುತ್ತಲೇ ಹೋದೆ
ಪ್ರತಿ ಚಿಂತೆಯನ್ನು ಹೊಗೆಯಲ್ಲಿ....

ಎಲ್ಲಿ ದುಃಖ ಹಾಗು ಸುಖದಲ್ಲಿ
ವ್ಯತ್ಯಾಸ ತಿಳಿಯುದಿಲ್ಲವೋ-೨
ವ್ಯತ್ಯಾಸ ತಿಳಿಯುದಿಲ್ಲವೋ-೨
ನಾನು ಹೃದಯವನ್ನು
ಆ ಹಂತಕ್ಕೆ ತರುತ್ತಲೇ ಹೋದೆ-೨
ಪ್ರತಿ ಚಿಂತೆಯನ್ನು ಹೊಗೆಯಲ್ಲಿ....

ನಾನು ಬದುಕಿನ
ಜೊತೆ ನೀಡುತ್ತಲೇ ಹೋದೆ
ಪ್ರತಿ ಚಿಂತೆಯನ್ನು
ಹೊಗೆಯಲ್ಲಿ ಹಾರಿಸುತ್ತಲೇ ಹೋದೆ

ಮೂಲ : ಸಾಹಿರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಜೈ ದೇವ್
ಚಿತ್ರ : ಹಮ್ ದೋನೋ

Main Zindagi Ka Saath Nibhaata Chala Gaya
Har Fikar Ko Dhein Mein Udata Chala Gaya

Har Fikar Ko Dhein Mein Uda...

Barbadiyon Ka Shok Manana Fizul Tha-2
Manana Fizul Tha-3
Barbadiyon Ka Jashan Manata Chala Gaya-2

Har Fikar Ko Dhein Mein Uda...

Jo Mil Gaya Usi Ko Muqaddar Samajh Liya-2
Muqaddar Samajh Liya-2
Jo Kho Gaya Mein Usko Bhulata Chala Gaya

Har Fikar Ko Dhein Mein Uda...

Gham Aur Khushi Mein Farq Na Mehsoos Ho Jahan-2
Na Mehsoos Ho Jahan-2
Main Dil Ko Us Muqaam Pe Laata Chala Gaya-2

Main Zindagi Ka Saath Nibhaata Chala Gaya
Har Fikar Ko Dhein Mein Udata Chala Gaya...!!!
http://www.youtube.com/watch?v=BCUUgyIoPm8

Saturday, 22 February, 2014

ವಿಪರ್ಯಾಸ

ಅಟ್ಟದಲ್ಲಿಟ್ಟ 
ಬೆಲ್ಲದ ಡಬ್ಬದಲ್ಲಿ
ಇರುವೆಗಳ ಸಾಮ್ರಾಜ್ಯ 
_______

ಕಹಿ ಬೇವಿನ 
ಕೃಪೆಯಿಂದ 
ಅವನಿಗೆ ಕಾಯಿಲೆಯಿಂದ ಮುಕ್ತಿ
ಈಗ ಅವನ ಮನೆ ಸುತ್ತ ಮುತ್ತ ಕಹಿ ಬೇವಿನ ಮರಗಳು 
_______

ಬೆರೆಸಿ
ಅದೆಷ್ಟೋ ಮಸಾಲೆಗಳನ್ನು
ಅವನು ಮಾಡಿದ ಸಾರು
ಆಸ್ಪತ್ರೆಗೆ ಸೇರಿದರು ಆ ಸಾರನ್ನು ತಿಂದ ಊರಿನ ಜನರು
_______

ಕತ್ತೆಯ ಕುತ್ತಿಗೆಯಲ್ಲಿ
ಮುತ್ತಿನ ಸರ
ಮನೆ ಒಡತಿಯ ಮೈಯಲ್ಲಿ ತಾಳಿ ಸಹ ಇಲ್ಲ
_______

ಮನೆ ಬಾವಿಯಲ್ಲಿ ನೀರಿಲ್ಲ
ತೆಂಗಿನ ಮರದಲ್ಲಿ
ಕುಳಿತು ಎಳನೀರು
ಕುಡಿಯುತ್ತಿತ್ತು ಮಂಗಗಳ ತಂಡ

by ಹರೀಶ್ ಶೆಟ್ಟಿ,ಶಿರ್ವ

Friday, 21 February, 2014

ಮುಂದಿನದ್ದು ತಿಳಿದಿಲ್ಲ ನಿನಗೆ

!!ಮುಂದಿನದ್ದು ತಿಳಿದಿಲ್ಲ ನಿನಗೆ 
ಹಿಂದಿನದ್ದು ತಿಳಿದಿಲ್ಲ ನಿನಗೆ 
ಏನಾದರೂ ಇದೆಯೆಂದಾದರೆ
ಕೇವಲ ಈ ಕ್ಷಣ ಇದೆ!! 

!!ಅಪರಿಚಿತ ನೆರಳುಗಳ 
ಹಾದಿಯಲಿ ನೆಲೆ ಇದೆ 
ಕಾಣದ ಬಾಹುಗಳು
ನಮ್ಮೆಲ್ಲರನ್ನು ಸೆರೆಹಿಡಿದು ಕೊಂಡಿದೆ 
ಈ ಕ್ಷಣ ಬೆಳಕಿದೆ 
ನಂತರ ಕತ್ತಲಿದೆ
ಈ ಕ್ಷಣ ವ್ಯರ್ಥಗೊಳಿಸದಿರು
ಈ ಕ್ಷಣವೆ ನಿನ್ನದಾಗಿದೆ
ಬದುಕುವವನೆ ಯೋಚಿಸು
ಇದೇ ಕ್ಷಣ ಇದೆ
ಬಯಕೆ ಪೂರ್ಣಗೊಳಿಸು!!
ಮುಂದಿನದ್ದು .....

!!ಈ ಕ್ಷಣದ ಉತ್ಸವ
ಸಭೆಯನ್ನು ಅಲಂಕರಿಸಿದೆ
ಈ ಕ್ಷಣದ ತಾಪವೂ
ಹೃದಯಬಡಿತ ಏರಿಸಿದೆ
ಈ ಕ್ಷಣ ಇದ್ದಲ್ಲಿ
ಜಗತ್ತು ನಮ್ಮದಾಗಿದೆ
ಈ ಕ್ಷಣ ಒಂದುವೇಳೆ ನೋಡಿದರೆ
ಶತಮಾನಕ್ಕಿಂತಲೂ ಮಹತ್ವಪೂರ್ಣವಾಗಿದೆ
ಬದುಕುವವನೆ ಯೋಚಿಸು
ಇದೇ ಕ್ಷಣ ಇದೆ
ಬಯಕೆ ಪೂರ್ಣಗೊಳಿಸು!!
ಮುಂದಿನದ್ದು .....

!!ಈ ಕ್ಷಣದ ನೆರಳಲ್ಲಿ
ನಮ್ಮ ಠಿಕಾಣಿ ಇದೆ
ಈ ಕ್ಷಣದ ನಂತರ
ಪ್ರತಿ ವಸ್ತು ಕಟ್ಟುಕತೆಯಾಗಿದೆ
ನಾಳೆಯನ್ನು ಯಾರು ನೋಡಿದ್ದಾರೆ
ನಾಳೆಯನ್ನು ಯಾರು ಅರಿತ್ತಿದ್ದಾರೆ
ಈ ಕ್ಷಣದಿಂದ ಪಡೆಯುವೆ ನೀನು
ಪಡೆಯಬಹುದುದ್ದನ್ನೆಲ್ಲ
ಬದುಕುವವನೆ ಯೋಚಿಸು
ಇದೇ ಕ್ಷಣ ಇದೆ
ಬಯಕೆ ಪೂರ್ಣಗೊಳಿಸು!!
ಮುಂದಿನದ್ದು .....

ಮೂಲ : ಸಾಹಿರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಆಶಾ ಭೋಂಸ್ಲೆ
ಸಂಗೀತ : ರವಿ
ಚಿತ್ರ : ವಕ಼್ತ್
आगे भी जाने ना तू, पीछे भी जाने ना तू
जो भी हैं बस यही एक पल हैं

अनजाने सायों का, राहों में डेरा हैं
अनदेखी बाहों ने, हम सब को घेरा हैं
ये पल उजाला हैं, बाकी अंधेरा हैं
ये पल गवाँना ना, ये पल ही तेरा हैं
जीने वाले सोच ले, यही वक्त हैं कर ले, पूरी आरजू

इस पल के जलवों ने, महफ़िल सवारी हैं
इस पल की गर्मी ने, धड़कन उभारी हैं
इस पल से होने से, दुनियाँ हमारी हैं
ये पल जो देखो तो, सदियों पे भारी हैं
जीने वाले सोच ले, यही वक्त हैं कर ले, पूरी आरजू

इस पल के साये में, अपना ठिकाना हैं
इस पल के आगे फिर, हर शय़ फसाना हैं
कल किस ने देखा हैं, कल किस ने जाना हैं
इस पल से पायेगा, जो तुझ को पाना हैं
जीने वाले सोच ले, यही वक्त हैं कर ले, पूरी आरजू

http://www.youtube.com/watch?v=9ookSneuHOA

ಕವಿ

ಕವಿ ಮೌನ
ಆದರೆ ಅವನ ಕವಿತೆಗಳ ಗಲಾಟೆ 

--------

ಕವಿ ಬೇಸರದಲಿ
ಹೃದಯ ನೋವಿನಲಿ 
ಅತ್ಯುತ್ತಮ ಕವನಗಳ ಉತ್ಪನ್ನ ಜೋರಲ್ಲಿ 

--------

ಕವಿ ತಟದಲ್ಲಿ ನಿಲ್ಲಿದ
ಭಾವಗಳು ಹರಿಯುತ್ತಿತ್ತು

-------

ಕವಿಯನ್ನು ತಡೆದರು
ಕವಿತೆ ರಭಸದಿಂದ ಹೊರ ಬರಲಾರಂಭಿಸಿತು

------

ಇನ್ನು ವಿದಾಯ ಎಂದು
ಕವಿಯ ಹಠ
ಆದರೂ ನಿಲ್ಲಲಿಲ್ಲ ಬರೆಯುವ ಚಟ

by ಹರೀಶ್ ಶೆಟ್ಟಿ,ಶಿರ್ವ

Thursday, 20 February, 2014

ಮರೆತು ಹೋದ ನೆನಪುಗಳೇ

!!ಮರೆತು ಹೋದ ನೆನಪುಗಳೇ
ನನ್ನನ್ನು ಇಷ್ಟೊಂದು ಕಾಡಬೇಡಿ
ಈಗ ನೆಮ್ಮದಿಯಲ್ಲಿರಲು ಬಿಡಿ
ನನ್ನ ಸನಿಹ ಬರಬೇಡಿ!!
ಮರೆತು ಹೋದ....

!!ಮಡಿಲಲ್ಲಿಟ್ಟು ಕುಳಿತಿರುವೆ
ಮುರಿದ ತಾರೆಗಳನ್ನು-೨
ಯಾವಾಗ ತನಕ ನಾನು ಬದುಕಲಿ
ಇಟ್ಟು ಸ್ವಪ್ನಗಳ ಆಸರೆಯನ್ನು-೨
ಮರುಳು ನಾನು
ನನ್ನನ್ನಿನ್ನೂ ಮರುಳು ಮಾಡಬೇಡಿ!!
ಈಗ ನೆಮ್ಮದಿಯಲ್ಲಿರಲು ಬಿಡಿ
ನನ್ನ ಸನಿಹ ಬರಬೇಡಿ

!!ದೋಚಬೇಡಿ ನನ್ನೆಲ್ಲವನ್ನೂ
ಹೀಗೆ ನಡು ಹಾದಿಯಲ್ಲಿ ತಂದು ನನ್ನನ್ನು -೨
ಹೀಗೆ ಕರೆಯಬೇಡಿ
ತೋರಿಸಿ ಒಂದು ಹೊಸ ದಾರಿಯನ್ನು -೨
ಬಿದ್ದು ಬಿದ್ದು ನಿಭಾಯಿಸಿದ್ದೇನೆ ಹೇಗೋ
ನನ್ನನ್ನು ಪುನಃ ಬೀಳಿಸಬೇಡಿ!!
ಈಗ ನೆಮ್ಮದಿಯಲ್ಲಿರಲು ಬಿಡಿ
ನನ್ನ ಸನಿಹ ಬರಬೇಡಿ

ಮರೆತು ಹೋದ....

ಮೂಲ : ರಾಜಿಂದರ್ ಕೃಷ್ಣ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು:ಮುಕೇಶ್
ಸಂಗೀತ : ಮದನ್ ಮೋಹನ್
ಚಿತ್ರ : ಸಂಜೋಗ್

 (Bhuli huyi yaadon mujhe itana na sataao
 Abb chain se rehane do mere paas na aao) - (2)
 Bhuli huyi yaadon

 Daaman mein liye baitha hoon tute huye taare
 Tute huye taare
 Kab tak main jiyunga yuun hi khaabon ke sahaare
 Khaabon ke sahaare
 Deewaana hoon abb aur na deewaana banaao
 Abb chain se rehane do, mere paas na aao
 Bhuli huyi yaadon

 Luton na mujhe iss tarah do raahe pe laake
 Do raahe pe laake
 Aawaaj na do ek nayi raaha dikhaake
 Nayi raaha dikhaake
 Sambhala hoon main gir girake mujhe phir na giraao
 Abb chain se rehane do mere paas na aao
 Bhuli huyi yaadon mujhe itana na sataao
 Abb chain se rehane do mere paas na aao
 Bhuli huyi yaadon
http://www.youtube.com/watch?v=EZk_ZYwWojs

Wednesday, 19 February, 2014

ಪ್ರಯತ್ನಗಳೆಲ್ಲ

ನನ್ನ ಪ್ರಯತ್ನಗಳೆಲ್ಲ 
ವಿಫಲವಾದರೂ
ಹೃದಯದಲ್ಲಿ 
ಯಾಕೋ ಒಂದು 
ತೃಪ್ತಿಯ ಅರಿವು 

by ಹರೀಶ್ ಶೆಟ್ಟಿ,ಶಿರ್ವ

Tuesday, 18 February, 2014

ಪುನರ್ಮಿಲನ


ಕೊಂಚ ಅನುಮಾನ ಅವನಿಗೆ, ಅದರೂ ಅವನ ಮನಸ್ಸು ಹೇಳಿತು "ಅಲ್ಲ, ಇದು ಅವಳೇ ಎಂದು",ಆದರೆ ಇದೇನು?

ಇಷ್ಟು ಕೃಶವಾಗಿದ್ದಾಳೆ, ಹೃದಯ ವೇದನೆಯಿಂದ ಕಿರುಚಿತು ಅವನ "ಇದಕ್ಕೆ ಕಾರಣ ನೀನೆಯೆಂದು".

"ಹೋಗಿ ಭೇಟಿ ಮಾಡಿ ಬರಲೇ, ಬೇಡ,  ಸುಮ್ಮನೆ ಇನ್ಯಾಕೆ, ಅವಳ ಪ್ರಪಂಚದಲ್ಲಿ ನುಗ್ಗುವುದು, ಹೇಗೋ ಪ್ರತ್ಯೇಕವಾಗಿ ನಾಲ್ಕು ವರ್ಷ ಆಗಿದೆ" ಎಂದು ಅವನು ಮನಸ್ಸಲ್ಲೇ ಯೋಚಿಸಿದ.

"ಪುನಃ ಮದುವೆ ಆಗಲಿಲ್ಲ ಕಾಣುತ್ತದೆ, ಕುತ್ತಿಗೆಯಲ್ಲಿ ತಾಳಿ ಕಾಣುವುದಿಲ್ಲ, ಧೈರ್ಯ ಇಟ್ಟು ಹೋಗಿ ಮಾತನಾಡಿ ಬರುವೆ, ಏನೇ ಆದರೂ ಐಫ಼ು ವರ್ಷ ಒಟ್ಟಿಗೆ ಸಂಸಾರ ಹೂಡಿದವರು ನಾವಿಬ್ಬರು" ಎಂದು ಅವನ ಮನಸ್ಸು ನುಡಿಯಿತು.

"ಸುಮಾ" ಎಂದು ಅವನು ಅವಳ ಹೆಸರು ಕೂಗಿ ಕರೆದ.

ಹಿಂತಿರುಗಿ ನೋಡಿದಳು ಅವಳು, ಮುಖದಲ್ಲಿ ಆಶ್ಚರ್ಯದ ಒಟ್ಟಿಗೆ ಸ್ವಲ್ಪ ಸಂತಸ ಸಹ ಕಂಡು ಬಂತು.

"ಹೇಗಿದ್ದೀರಾ"

"ಸೌಖ್ಯ, ನೀನು "?

"ಸೌಖ್ಯವಾಗಿದ್ದೇನೆ" ಎಂದು ಉತ್ತರಿಸಿದ್ದಳು.

"ನಿಮ್ಮ ಹೆಂಡತಿ ಎಲ್ಲಿ"? ಎಂದು ಕೇಳಿದಳು ಅವಳು.

ಅವನಿಗೆ ಮದುವೆ ಆಗಲಿಲ್ಲ ಎಂದು ಹೇಳಲಾಗಲಿಲ್ಲ ಸುಳ್ಳು ಹೇಳಿದ  "ಅವಳು ಮನೆಯಲ್ಲಿಯೇ ಇದ್ದಾಳೆ, ಬರಲಿಲ್ಲ"

ಅವಳು "ಏನು ಅವರ ಹೆಸರು, ಮನೆಯಲ್ಲೇ ಇರುತ್ತಾರೆಯೇ,  ಹೆಂಗಸು ಕೆಲಸ ಮಾಡುವುದು ನಿಮಗೆ ಇಷ್ಟವಿರಲಿಲ್ಲವಲ್ಲ" ಎಂದು ಅವರು ಪ್ರತ್ಯೇಕವಾದ ಕಾರಣವನ್ನು ಅವಳು ಸ್ವಲ್ಪ ಒತ್ತಿಯೆ ಹೇಳಿದಳು.

ಹೌದು ಅವಳು ಕೆಲಸ ಮಾಡುವುದು ಆವನಿಗೆ ಇಷ್ಟವಿರಲಿಲ್ಲ, ಆದರೆ ಮೊದಲಿನಿಂದಲೂ ಅವನಿಗೆ ಇಷ್ಟವಿರಲಿಲ್ಲ  ವೆಂದೆನಿಲ್ಲ, ಅವಳು ಕೆಲಸದಿಂದ ರಾತ್ರಿ ತಡಾವಾಗಿ ಬಂದು, ಸೋತು ಮನೆಯ ಕೆಲಸದಲ್ಲಿ ಏರು ಪೇರು ಆಗುವಾಗ, ದಿನ ನಿತ್ಯ ಚಿಕ್ಕ ಪುಟ್ಟ ವಿಷಯಕ್ಕೆ ಅವರ ಮಧ್ಯೆ ಜಗಳವಾಗುತ್ತಿತ್ತು, ಆ ನಂತರ ಆ ಜಗಳಗಳೆಲ್ಲ ವಿಕೃತ ರೂಪದಿಂದ ಬೆಳೆದು ಅವರಿಗೆ ಪ್ರತ್ಯೇಕವಾಗ ಬೇಕಾಯಿತು.

"ಏನು , ಎಲ್ಲಿ ನಿಮ್ಮ ಗಮನ ಎಲ್ಲಿದೆ ? ಎಂದು ಅವಳು ಪುನಃ ಕೇಳಿದಳು.

"ಏನಿಲ್ಲ,  ಮತ್ತೇನು ವಿಶೇಷ, ಎಲ್ಲಿ ನಿನ್ನ ಗಂಡ? ಎಂದು ಅವನು ಕೇಳಿದ.

ಅವಳು ಮೌನವಾದಳು, ಸ್ವಲ್ಪ ತಡೆದು "ಯಾಕೆ ಸುಳ್ಳು ಹೇಳುತ್ತಿರಿ , ನೀವು ಸಹ ಮದುವೆಯಾಗಲಿಲ್ಲವೆಂದು ನನಗೆ ತಿಳಿದಿದೆ, ಸುಮ್ಮನೆ ಬೇಕೆಂದೇ ಕೇಳಿದೆ ನಿಮಗೆ".

ಯಾಕೋ ಕಣ್ಣಿಂದ ಕಣ್ಣೀರು ಹರಿಯಿತು, ಮೆಲ್ಲನೆ ಕೇಳಿದೆ "ನಾವಿಬ್ಬರೂ ಯಾಕೆ ಪುನಃ ಒಂದಾಗಬಾರದು ?

ಅವಳೂ ಅಳುತ್ತಲೇ " ನಾಲ್ಕು ವರುಷ ಬೇಕಾಯಿತೆ ನಿಮಗೆ ಈ ಪ್ರಶ್ನೆ ಕೇಳಲು".

"ನನಗೆ ನನ್ನ ತಪ್ಪು ತಿಳಿದಿತ್ತು, ಆದರೆ ಪುನಃ ನಿನ್ನಲ್ಲಿಗೆ ಬರಲು ಧೈರ್ಯವಾಗಲಿಲ್ಲ".

"ನಾನೇನು ರಾಕ್ಷಸಿಯೇ " ಎಂದು ಅಳುತ್ತಲೇ ನಕ್ಕಳು.

"ಆದರೆ ನಿನಗೆ ಸಹ ಬರಬಹುದಿತ್ತಲ್ಲ" ಎಂದು ಕೇಳಿದ ಅವನು.

"ನಾನು ಈ ನಗರದಲ್ಲೇ ಇರಲಿಲ್ಲ ,ಕೆಲಸ ಬಿಟ್ಟು ಊರಿಗೆ ಹೋದೆ, ಊರಲ್ಲಿಯೇ ಇದ್ದೆ, ನೀವು ಬರುವಿರಿ ಎಂದು ಮನಸ್ಸಲ್ಲಿ ವಿಶ್ವಾಸ ಇತ್ತು, ಆದರೆ ನೀವು ಬರಲೇ ಇಲ್ಲ, ಮೊನ್ನೆ ನಿಮ್ಮ ಮಿತ್ರ ಆನಂದ ಸಿಕ್ಕಿದರು ಅವರು ನೀವಿನ್ನು ಮದುವೆ ಆಗಲಿಲ್ಲ ಎಂದು ತಿಳಿಸಿದರು, ನೀವು ಹೇಗೋ ಬರಲಿಲ್ಲ , ಕೊನೆಗೆ ಸೋತು ನಾನೇ ನಗರಕ್ಕೆ ಬಂದೆ, ಆದರೆ ಈ ರೀತಿ ನಿಮ್ಮ ಭೇಟಿಯಾಗಬಹುದು ಎಂದು ಯೋಚಿಸಿರಲಿಲ್ಲ" ಎಂದು ಹೇಳಿ ನಕ್ಕಳು.

ಅವನೂ ನಕ್ಕು ಅವಳನ್ನು ಅಪ್ಪಿಕೊಂಡ.

by ಹರೀಶ್ ಶೆಟ್ಟಿ, ಶಿರ್ವ 

Monday, 17 February, 2014

ನಿನ್ನ ಕಂಗಳ ಹೊರತು

ನಿನ್ನ ಕಂಗಳ ಹೊರತು
ಜಗದಲಿ ಇನ್ನೇನಿದೆ
ಇದು ತೆರೆದರೆ ಬೆಳಕ ಪ್ರಭಾವಳಿ
ಇದು ತಗ್ಗಿದರೆ ಸಂಜೆಯ ಗೋಧೂಳಿ
ನನ್ನ ಬದುಕು
ನನ್ನ ಸಾವು
ಇದೇ ಕಣ್ರೆಪ್ಪೆಯ ಅಡಿಯಲಿ

ಕಣ್ರೆಪ್ಪೆಗಳ ಗಲ್ಲಿಯಲಿ
ಮುಖ ವಸಂತದ ನಗುತ್ತಿದೆ
ನನ್ನ ಕನಸಿನ ಅದೆಷ್ಟೋ ನಗರ
ಇದರಲ್ಲಿ ನೆಲೆಸುತ್ತಿದೆ
ಇದು ತೆರೆದರೆ.....

ಇದರಲ್ಲಿ ನನ್ನ ಬರುವ
ಸಮಯದ ಚಿತ್ರವಿದೆ
ಪ್ರೀತಿಯ ಕಾಡಿಗೆಯಿಂದ ಬರೆದ
ನನ್ನ ಭಾಗ್ಯವಿದೆ
ಇದು ತೆರೆದರೆ.....

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಮದನ್ ಮೋಹನ್
ಚಿತ್ರ : ಚಿರಾಗ್

तेरी आँखों के सिवा दुनिया में रखा क्या है
ये उठे सुबह चले, ये झुके शाम ढले
मेरा जीना, मेरा मरना
इन्हीं पलकों के तले

पलकों की गलियों में चेहरे बहारों के हंसते हुए
है मेरे ख़्वाबों के क्या-क्या नगर इनमें बसते हुए
ये उठे सुबह...

इनमें मेरे आने वाले ज़माने की तस्वीर है
चाहत के काजल से लिखी हुई मेरी तकदीर है
ये उठे सुबह...
http://www.youtube.com/watch?v=ZcS-Cx_yIwc

ನಿಟ್ಟುಸಿರು

ನಿನ್ನ 
ಮದುವೆ ಮುಂಚೆಯ 
ನಿಟ್ಟುಸಿರು 
ನಿನ್ನ ಒಪ್ಪಿಗೆಯ 
ಸೂಚಕವಾಗಿತ್ತು

ನಿನ್ನ 
ಈಗಿನ 
ನಿಟ್ಟುಸಿರು
ನನ್ನ ಮಾತಿಗೆ 
ನಿನ್ನ ಒಪ್ಪಿಗೆಯಿಲ್ಲವೆಂಬುದರ
ಸೂಚಕ
by ಹರೀಶ್ ಶೆಟ್ಟಿ,ಶಿರ್ವ

Sunday, 16 February, 2014

ಮಹತ್ವ


ಅಮ್ಮ ಅಪ್ಪ ಇಬ್ಬರಲ್ಲಿ 
ನನಗೆ ಅಮ್ಮ ಅಂದರೆ ಜೀವ 
ಎನ್ನುತ್ತಿದ್ದ ಆ ಹುಡುಗ 
ತಂದೆ ಹಿಂದೆ ನಿಂತು ನಗುತ್ತಿದ್ದ

-----------

ಮಾಲಿ 
ಗುಲಾಬಿ ಹೂವನ್ನು 
ಕಿತ್ತು ಜೋಪಾನವಾಗಿ ಇಟ್ಟ
ಅದರ ಮುಳ್ಳನ್ನು ಕಿತ್ತು ಎಸೆದ

----------

ಮರವೊಂದು ಬಿತ್ತು
ಜನರೆಲ್ಲಾ "ಮರ ಬಿತ್ತು, ಮರ ಬಿತ್ತು"
ಎಂದು ಕೂಗಿದರು,
ಮಣ್ಣಲ್ಲಿ ತುಂಡಾದ ಬೇರು
ಅಳುವುದನ್ನು ಯಾರೂ ಕಂಡಿಲ್ಲ

----------

ಅಂಗಿಯ ಬಟನ್
ತುಂಡಾಗಿ ಬಿತ್ತು
ದಾರ ಅಂಗಿಯಲಿ
ನೇಲುತ್ತಿತ್ತು

---------

ಮಂದಿರದಲ್ಲಿ ತುಂಬಿದ
ದೇಣಿಗೆ ಡಬ್ಬಿಯಲ್ಲಿ
ಅವನು ಬಲಯುತವಾಗಿ
ನೋಟು ತೂರುತ್ತಿದ್ದ
ಹೊರಗೆ ಕುಳಿತ ಭಿಕ್ಷುಕನಿಗೆ
ಒಂದಾಣೆ ಸಹ ನೀಡಲಿಲ್ಲ

by ಹರೀಶ್ ಶೆಟ್ಟಿ, ಶಿರ್ವ

Saturday, 15 February, 2014

ಕಾಣದ ಬೇಲಿಗಳು

ಆ ಮನೆಯಲ್ಲಿ ಬೇಲಿ ಇದೆ
ಮುಳ್ಳುಗಳ ಸರಳಿನ ಅಲ್ಲ
ಅವಿಶ್ವಾಸದ
ಸುಳ್ಳು ಪ್ರೀತಿಯ
ಬಲಹೀನ ಸಂಬಂಧದ

ದೈವ ಇಷ್ಟರು ಇದ್ದ ಮನೆ
ಎಳೆಯುತ್ತದೆ ಜೀವ ಅಲ್ಲಿಗೆ
ಹೋಗಲೇ ಬೇಕು ಅಲ್ಲಿಗೆ
ನಮ್ಮ ಮಣ್ಣು ಅದು
ಜನ್ಮದ ಹೊನ್ನು ಅದು

ಆದರೆ ಈಗ್ಯಾಕೋ ಬೇಸರ
ಮನೆ ಖಾಲಿ ಖಾಲಿ
ಇದ್ದವರಿಗೆ ಯಾವುದರ ಗೋಚರವಿಲ್ಲ
ಮುಳುಗಿದ್ದಾರೆ ತನ್ನದೆ ಲೋಕದಲಿ
ಬಂದಾಗಲೇ ಗುರುತು

ಈಗ ಸುತ್ತ ಮುತ್ತ ಹಸಿರಿಲ್ಲ
ಕೃಷಿ ಇಲ್ಲದೆ ಒಣಗಿದ ಗದ್ದೆಗಳು
ತೋಟದಲ್ಲಿ ಆ ಮೊದಲ ಅಂದವಿಲ್ಲ
ಹಕ್ಕಿಗಳ ಚಿಲಿಪಿಲಿಯ ಮಧ್ಯೆದಲ್ಲೂ ಒಂದು ಶಾಂತತೆ
ಮುಗಿಯದ ಏಕಾಂತತೆ

ಈಗ ಅಲ್ಲಿ ಅಕ್ಕಿಯ ಮುಡಿ ಇಲ್ಲ
ಸೌತೆ ಕಾಯಿಯ ಸಾಲಿಲ್ಲ
ಅದೆಲ್ಲ ಈಗ ಒಂದು ಸುಂದರ ಸ್ವಪ್ನ
ಎಲ್ಲವೂ ಪೇಟೆಗೆ ಹೋಗಿ ತರಬೇಕು
ಆಗಲೇ ಒಳ್ಳೆ ಊಟ ತಿಂಡಿ

ಕಾಣದ ಬೇಲಿಗಳು
ಕೊನೆ ಉಸಿರು ಎಳೆಯುತ್ತಿದ್ದ ಸಂಬಂಧಗಳು
ಗುರುತ್ತಿದ್ದು ಗುರುತಿಲ್ಲದಂತೆ ವ್ಯವಾರಿಸುವ ಮಿತ್ರರು
ಅಪರಿಚಿತರಾದ ನರೆಹೊರೆಯವರು
ಆದರೆ ಇದಕ್ಕೆಲ್ಲ ಕಾರಣ ಯಾರು
ನಾವು ಸ್ವತಃ ಅಲ್ಲದೆ ಬೇರೆ ಯಾರು

by ಹರೀಶ್ ಶೆಟ್ಟಿ, ಶಿರ್ವ 

ನೀನಿಲ್ಲವೆಂದು

ಈಗಲೂ ಕೆಲವೊಮ್ಮೆ 
ಮರೆಯುತ್ತೇನೆ 
ಇನ್ನು ನೀನಿಲ್ಲವೆಂದು
ಇದ್ದಕ್ಕಿದಂತೆ ಜ್ಞಾಪಕವಾದಾಗ
ಮನಸ್ಸಲ್ಲಿ ವಿಷಾದ 
ಹೃದಯ ಭಾರ ಭಾರ
ಕಣ್ಣಲ್ಲಿ ಕಣ್ಣೀರ ಧಾರಾ

by ಹರೀಶ್ ಶೆಟ್ಟಿ,ಶಿರ್ವ

ಒಂದು ಕಣ್ಣೀರ ಹನಿ

ಬ್ಯಾಗ್ ಹಿಡಿದು
ಇನ್ನು ಹೊರಡುವೆ ಎಂದೆ
ಅಳಲಿಲ್ಲ ಅವಳು
ಆದರೆ ಕೇವಲ
ಒಂದು ಕಣ್ಣೀರ ಹನಿ
ಅವಳ ಗಲ್ಲದಲ್ಲಿ ತೇಲಿ ಬಂತು
ಅವಳ ಆ ಕಣ್ಣೀರಲ್ಲಿ
ನಾ ತೇಲಿ ಬಿಟ್ಟೆ
ಪುನಃ ಹಿಂತಿರುಗಿ ಬಂದು ಬ್ಯಾಗನ್ನು ಇಟ್ಟೆ.

by ಹರೀಶ್ ಶೆಟ್ಟಿ,ಶಿರ್ವ

Friday, 14 February, 2014

ಕವಿತೆ

ಸಹಜವಾಗಿ
ಮೂಡಿ ಬರುವ
ಪದಗಳೆ
ಕವಿತೆ

--------

ಕೋಗಿಲೆಯ ಗಾನ
ಹಕ್ಕಿಗಳ ಚಿಲಿಪಿಲಿಗಳೆಲ್ಲ
ನಿಸರ್ಗದ
ನೈಸರ್ಗಿಕ
ಕವಿತೆ

---------
ಯಾರು ಜನ್ಮದಾತೆ ?
ಕವಿತೆ
ನಿರ್ಮಿಸಿದ
ಕವಿಯೇ
ಕವಿಯನ್ನು
ಸ್ಥಾಪಿಸಿದ
ಕವಿತೆಯೆ
--------

ಅವನು
ಜನ್ಮ ನೀಡಿದ್ದು
ಕವಿತೆ ಅಲ್ಲವಂತೆ
ಆ ಕವಿಗೆ
ಬಂಜೆ ಎಂದು ಅಪವಾದ
-------

ಕವಿಯಿಂದ
ಭಾವಗಳ ಬಸಿರು
ಹುಟ್ಟಿದ
ಕವಿತೆ
ಹಸಿರು ಹಸಿರು

by ಹರೀಶ್ ಶೆಟ್ಟಿ,ಶಿರ್ವ

Thursday, 13 February, 2014

ಪುತ್ರ-ಮೋಹ

ನನ್ನ ನೆಚ್ಚಿನ ಹಿಂದಿಯ ಮಹಾನ ಲೇಖಕರಾದ ಪ್ರೇಮಚಂದ್ ಅವರ ಒಂದು ಸಣ್ಣ ಕಥೆ "ಪುತ್ರ ಪ್ರೇಮ್" ಕನ್ನಡದಲ್ಲಿ ಅನುವಾದಿಸಿದ್ದೇನೆ. ನಿಮಗೆ ಇಷ್ಟವಾಗಬಹುದೆಂದು ಆಶಿಸುವೆ.

ಮೂಲ ಕೃತಿ : ಪ್ರೇಮಚಂದ್

ಕನ್ನಡಾನುವಾದ : ಹರೀಶ್ ಶೆಟ್ಟಿ, ಶಿರ್ವಪುತ್ರ-ಮೋಹ
1
ರಾಮಮೂರ್ತಿಯವರು ಅರ್ಥಶಾಸ್ತ್ರ ಕಲಿತವರು, ಕೇವಲ ಕಲಿತ್ತದ್ದೆ ಅಲ್ಲ , ದಿನನಿತ್ಯದ ವ್ಯವಹಾರಗಳಲ್ಲಿ ಅದರ ಯೋಗ್ಯ ಉಪಯೋಗ ಸಹ ಮಾಡುತ್ತಿದ್ದರು. ಅವರು ವಕೀಲರಾಗಿದ್ದರು, ಎರಡು ಮೂರು ಊರಲ್ಲಿ ಅವರ ಜಮೀನ್ದಾರಿಕೆ ಸಹ ಇತ್ತು ಹಾಗು ಬ್ಯಾಂಕ್'ಲ್ಲಿ ಸಹ ಸ್ವಲ್ಪ ಹಣ ಸಂಪಾದಿಸಿ ಇಟ್ಟಿದ್ದರು. ಇದೆಲ್ಲ ಆ ಅರ್ಥಶಾಸ್ತ್ರ ಜ್ಞಾನದ ಫಲವಾಗಿತ್ತು. ಯಾವುದೇ ಖರ್ಚು ಎದುರು ಬಂದಾಗ ಅವರ ಮನಸ್ಸಲ್ಲಿ ತನ್ನಂತಾನೆ ಪ್ರಶ್ನೆ ಮೂಡುತ್ತಿತ್ತು "ಇದರಿಂದ ನನಗೆ ಲಾಭವೇ ಅಥವಾ ಇನ್ಯಾರಿಗೋ ಲಾಭ ಇದೆಯಾ"? ಅದರಿಂದ ಯಾರಿಗೂ ಲಾಭ ಇಲ್ಲದಿದ್ದರೆ ಅವರು ತುಂಬಾ ಕ್ರೂರತೆಯಿಂದ ಆ ಖರ್ಚಿನ ಕತ್ತು ಹಿಸುಕುತ್ತಿದ್ದರು. ವ್ಯರ್ಥವನ್ನು ಅವರು ವಿಷವೆಂದು ತಿಳಿಯುತ್ತಿದ್ದರು, ಅರ್ಥಶಾಸ್ತ್ರದ ಸಿದ್ಧಾಂತ ಅವರ ಜೀವನದ ಆಧಾರಸ್ತಂಭವಾಗಿತ್ತು.

ರಾಮಮೂರ್ತಿಯವರಿಗೆ ಎರಡು ಪುತ್ರರಿದ್ದರು. ದೊಡ್ಡವನ ಹೆಸರು ಪ್ರಭುದಾಸ, ಸಣ್ಣವನ ಶಿವದಾಸ. ಇಬ್ಬರೂ ಕಾಲೇಜ್ ಹೋಗುತ್ತಿದ್ದರು, ಅವರಲ್ಲಿ ಕೇವಲ ಒಂದು ವರ್ಗದ ಅಂತರವಿತ್ತು. ಇಬ್ಬರೂ ಚತುರ ಹಾಗು ಪ್ರತಿಭಾವಂತರಾಗಿದ್ದರು. ಆದರೆ ಪ್ರಭುದಾಸನ  ಮೇಲೆ ತಂದೆಯ ಮೋಹ ಹೆಚ್ಚು. ಅವನಲ್ಲಿ ಸ್ವಲ್ಪ ಉತ್ಸಾಹ ಹೆಚ್ಚು ಹಾಗು ತಂದೆ ಅವನಿಂದ ದೊಡ್ಡ ದೊಡ್ಡ ಆಸೆ ಇಟ್ಕೊಂಡಿದ್ದರು. ಅವರು ಅವನನ್ನು ಉನ್ನತ ಶಿಕ್ಷಣ ಗೋಸ್ಕರ ಇಂಗ್ಲೆಂಡ್ ಕಳಿಸಲು ಯೋಚಿಸುತ್ತಿದ್ದರು. ಅವನನ್ನು ಬ್ಯಾರಿಸ್ಟರ್ ಮಾಡುವುದು ಅವರ ಜೀವನದ ಅತಿ ದೊಡ್ಡ ಬಯಕೆಯಾಗಿತ್ತು.
                                                                                    2
ಆದರೆ ಆಕಸ್ಮಿಕವಾಗಿ ಪ್ರಭುದಾಸನಿಗೆ ಬಿ. ಏ ಪರೀಕ್ಷೆಯ ನಂತರ ಜ್ವರ ಬರಲು ಶುರುವಾಯಿತು. ಡಾಕ್ಟರನ್ನು ಕರೆಯಲಾಯಿತು, ಮದ್ದು ಶುರುವಾಯಿತು, ಒಂದು ತಿಂಗಳು ಸತತ ದಿನನಿತ್ಯ ಡಾಕ್ಟರ ಬಂದರು, ಆದರೆ ಜ್ವರ ಕಡಿಮೆಯಾಗಲಿಲ್ಲ. ಬೇರೆ ಡಾಕ್ಟರನ್ನು ಕರೆದು ತೋರಿಸಿದರು, ಅದರಿಂದಲೂ ಲಾಭವಾಗಲಿಲ್ಲ. ಪ್ರಭುದಾಸನ ಶರೀರ ದಿನ ದಿನ ಕ್ಷೀಣವಾಗುತ್ತ ಹೋಯಿತು. ಎದ್ದೇಳುವ ಶಕ್ತಿಯೂ ಕುಸಿಯಿತು, ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣವಾದ ಸುದ್ಧಿ ಕೇಳಿ ಸಹ ಅವನ ಮುಖದಲಿ ಹರ್ಷ ಕಂಡು ಬರಲಿಲ್ಲ. ಅವನು ಯಾವಗಲು ಚಿಂತೆಯಲ್ಲಿ ಮುಳುಗಿರುತ್ತಿದ್ದ. ಅವನಿಗೆ ಅವನ ಜೀವನ ಒಂದು ಭಾರವಾದಂತಾಯಿತು. ಒಂದು ದಿವಸ ರಾಮಮೂರ್ತಿಯವರು ಡಾಕ್ಟರರವರಿಗೆ  ಕೇಳಿದರು "ಏನಿದು ಎರಡು ತಿಂಗಳು ಕಳೆಯಿತು ಆದರೆ ಇನ್ನೂ ಮದ್ದಿನಿಂದ ಏನು ಉಪಯೋಗವಾಗಲಿಲ್ಲ"?

ಡಾಕ್ಟರ ಸ್ವಲ್ಪ ಮೌನದ ನಂತರ "ನೋಡಿ ನಾನು ನಿಮಗೆ ಕತ್ತಲಲ್ಲಿ ಇಡುವುದಿಲ್ಲ, ನನಗೆ ಅನುಮಾನ ಇವನಿಗೆ ಕ್ಷಯರೋಗ ಇದೆಯೆಂದು".

ರಾಮಮೂರ್ತಿಯವರು ವ್ಯಗ್ರವಾಗಿ " ಕ್ಷಯ"?

ಡಾಕ್ಟರ "ಹೌದು, ಎಲ್ಲ ಲಕ್ಷಣ ಕಂಡು ಬರುತ್ತಿದೆ".

ರಾಮಮೂರ್ತಿಯವರು ಅವಿಶ್ವಾಸದಿಂದ "ಕ್ಷಯರೋಗವೇ" ಎಂದು ನುಡಿದರು.

ಡಾಕ್ಟರ ತುಂಬಾ ವಿಷಾದದಿಂದ  "ಈ ರೋಗ ತುಂಬಾ ಗುಪ್ತ ರೀತಿಯಿಂದ ಶರೀರದಲ್ಲಿ ಪ್ರವೇಶಿಸುತ್ತದೆ ".

ರಾಮಮೂರ್ತಿಯವರು "ಆದರೆ ನನ್ನ ಕುಟುಂಬದಲ್ಲಿ ಯಾರಿಗೂ ಈ ರೋಗ ಇರಲಿಲ್ಲ".

ಡಾಕ್ಟರ "ಯಾರೋ ಮಿತ್ರರಿಂದ ಈ ಜರ್ಮ್(ರೋಗಾಣು) ಸಿಕ್ಕಿರುವ ಸಾಧ್ಯತೆ ಇದೆ".

ರಾಮಮೂರ್ತಿಯವರು ತುಂಬಾ ಕ್ಷಣ ಯೋಚಿಸಿದ ನಂತರ "ಈಗ ಏನು ಮಾಡಬೇಕು".

ಡಾಕ್ಟರ "ಔಷದಿ ಮಾಡುತ ಇರಿ, ಈಗಂತೂ ಶ್ವಾಸಕೋಶದಲ್ಲಿ ಪರಿಣಾಮವಾಗಲಿಲ್ಲ, ಸೌಖ್ಯವಾಗುವ ಆಶಯ ಇದೆ".

ರಾಮಮೂರ್ತಿಯವರು "ನಿಮ್ಮ ವಿಚಾರದಲ್ಲಿ ಯಾವಾಗ ತನಕ ಔಷದಿಯ ಪ್ರಭಾವ ಬೀಳಬಹುದು".

ಡಾಕ್ಟರ "ನಿಶ್ಚಿತವಾಗಿ ಹೇಳಲಾರೆ, ಆದರೆ ನಾಲ್ಕು ತಿಂಗಳಲ್ಲಿ ಇವರು  ಆರೋಗ್ಯಕರವಾಗಬಹುದು, ಚಳಿಯಲ್ಲಿ ಈ ರೋಗದ ಏರಿಕೆ ಕಡಿಮೆಯಾಗುತ್ತದೆ".

ರಾಮಮೂರ್ತಿಯವರು "ಸೌಖ್ಯವಾದ ನಂತರ ವಿಧ್ಯಾಭ್ಯಾಸದಲ್ಲಿ ಇವನು ಪರಿಶ್ರಮ ಮಾಡುವ ಸಾಧ್ಯತೆ ಇದೆಯಾ"?

ಡಾಕ್ಟರ " ಮಾನಸಿಕ ಪರಿಶ್ರಮದ ಯೋಗ್ಯವಾಗುವ ಸಾಧ್ಯತೆ ಕಡಿಮೆ ಕಂಡು ಬರುತ್ತದೆ ".

ರಾಮಮೂರ್ತಿಯವರು "ಯಾವುದೇ ಅರೋಗ್ಯಧಾಮಕ್ಕೆ ಕಳಿಸಿದ್ದಾರೆ ಹೇಗೆ"?

ಡಾಕ್ಟರ "ತುಂಬಾ ಉತ್ತಮ".

ರಾಮಮೂರ್ತಿಯವರು" ಅವಾಗ ಇವನು ಪೂರ್ಣ ಆರೋಗ್ಯವಂತನಾಗುತ್ತಾನೆ ಎಂಬ ಧೈರ್ಯ ಇದೆಯಾ "?

ಡಾಕ್ಟರ " ಆಗಬಹುದು, ಆದರೆ ಈ ರೋಗವನ್ನು ಓಡಿಸಲು ಮಾನಸಿಕ ಒತ್ತಡದಿಂದ ದೂರ ಇರುವುದೇ ಒಳ್ಳೆಯದು".

ರಾಮಮೂರ್ತಿಯವರು ನಿರಾಸೆಯಿಂದ "ಹಾಗಾದರೆ ಇವನ ಜೀವನ ನಷ್ಟವಾಯಿತು".

ಬೇಸಿಗೆಯ ದಿನಗಳು ಮುಗಿದು, ಮಳೆಗಾಲದ ದಿನ ಶುರುವಾಯಿತು, ಪ್ರಭುದಾಸನ ದಶೆ ದಿನದಿಂದ ದಿನ ಹಾಳಾಗುತ್ತ ಹೋಯಿತು. ಅವನು ಹಾಸಿಗೆಯಲ್ಲಿಯೆ ಮಲಗಿಕೊಂಡು ಕ್ಷಯ ರೋಗದ ಬಗ್ಗೆ ಇದ್ದ ಪುಸ್ತಕಗಳನ್ನೆಲ್ಲ ಓದುತ್ತಿದ್ದ, ಅದರಿಂದ ತನ್ನ ತುಲನೆ ಮಾಡುತ್ತಿದ್ದ. ಮೊದಲ ಕೆಲವು ದಿನ ತನಕ ಅವನು ಅಸ್ಥಿರವಾಗಿದ್ದ, ನಾಲ್ಕು ಐದು ದಿವಸ ಸಹ ಸ್ವಲ್ಪ ದಶೆ ಒಳ್ಳೆಯದಾಗಿರುವಾಗ ಪುಸ್ತಕ ಓದಲಾರಂಭಿಸುತ್ತಿದ್ದ ಹಾಗು ಪ್ರದೇಶ ಯಾತ್ರೆಯ ಬಗ್ಗೆ ಚರ್ಚಿಸುತ್ತಿದ್ದ.  ಜ್ವರದ ತೀವ್ರತೆ ಏರಿರುವಾಗ ಅವನಿಗೆ ನಿರಾಸೆ ಉಂಟಾಗುತ್ತಿತ್ತು.  ಆದರೆ ತುಂಬಾ ತಿಂಗಳ ನಂತರ ಅವನಿಗೆ ವಿಶ್ವಾಸವಾಯಿತು ಈ ರೋಗದಿಂದ ಮುಕ್ತವಾಗಲು ಕಠಿಣವೆಂದು, ಆ ನಂತರ ಅವನು ಜೀವನದ ಚಿಂತೆ ಬಿಟ್ಟು ಬಿಟ್ಟ, ಪಥ್ಯೆ ಮಾಡುತ್ತಿರಲಿಲ್ಲ, ಮನೆಯವರ ಕಣ್ಣು ತಪ್ಪಿಸಿ ಔಷದಿಯನ್ನು ಚೆಲ್ಲುತ್ತಿದ್ದ, ಮಿತ್ರರ ಸಂಗ ಕುಳಿತು ಮಾತಾಡಿ ಮನಸ್ಸನ್ನು ಉಲ್ಲಾಸಗೊಳಿಸುತ್ತಿದ್ದ. ಯಾರಾದರು ಅವನ ರೋಗದ ಬಗ್ಗೆ ಕೇಳಿದರೆ ರೇಗಿಸಿ ಕೊಳ್ಳುತ್ತಿದ್ದ. ಅವನಲ್ಲಿ ಒಂದು ಶಾಂತಿಮಯ ಉದಾಸಿನತೆ ಆವರಿಸಿತು ಹಾಗು ಮಾತಲ್ಲಿ ಫಿಲಾಸಫಿಕಲ್ ಕರುಣೆ ಕಂಡು ಬರುತ್ತಿತ್ತು. ಅವನು ಲೋಕದ ಸುಳ್ಳು ರೀತಿ, ಸಾಮಾಜಿಕ ಆಚರಣೆಯ ವಿರುದ್ಧ ನಿರ್ಭೀತನಾಗಿ ಮಾತನಾಡುತ್ತಿದ್ದ. ರಾಮಮೂರ್ತಿಯವರ ಮನಸ್ಸಲ್ಲಿ ಪದೇ ಪದೇ ಈ ಅನುಮಾನ ಬರುತ್ತಿತ್ತು, ಎಂತೂ ಪರಿಣಾಮ ಇದೇ ಎಂದಾದರೆ ಈ ಪ್ರಕಾರ ಹಣ ನಷ್ಟಗೊಳಿಸುವುದರಲ್ಲಿ ಏನು ಲಾಭ ಆದರೂ ಅವರು ಸ್ವಲ್ಪ ಪುತ್ರ ಮೋಹದಲ್ಲಿ, ಸ್ವಲ್ಪ ಲೋಕದ ಹೆದರಿಕೆಯಿಂದ ಧೈರ್ಯ ಇಟ್ಟುಕೊಂಡಿದ್ದರು ಹಾಗು ಮಗನ ಔಷದಿ ಉಪಚಾರದಲ್ಲಿ ಯಾವುದೇ ಕೊರತೆ ಮಾಡಿಕೊಂಡಿರಲಿಲ್ಲ.

ಚಳಿಯ ಸಮಯವಾಗಿತ್ತು, ರಾಮಮೂರ್ತಿಯವರು ಮಗನ ಬಳಿ ಕುಳಿತು ಡಾಕ್ಟರನ್ನು ಪ್ರಶ್ನಾತ್ಮಕ ದೃಷ್ಟಿಯಿಂದ ನೋಡುತ್ತಿದ್ದರು. ಡಾಕ್ಟರ ತಾಪಮಾನ ನೋಡಿ ಕುಳಿತಾಗ,
ರಾಮಮೂರ್ತಿಯವರು "ಈಗಂತೂ ಚಳಿ ಶುರುವಾಗಿದೆ ನಿಮಗೆ ಏನಾದರೂ ವ್ಯತ್ಯಾಸ ಕಂಡು ಬರುತ್ತದೆಯೇ"?

ಡಾಕ್ಟರ ನಿರಾಸೆಯಿಂದ " ಖಂಡಿತ ಇಲ್ಲ, ಈಗಂತೂ ರೋಗ ಅತ್ಯಂತ ಕಷ್ಟಸಾಧ್ಯವಾದಂತಿದೆ".

ರಾಮಮೂರ್ತಿಯವರು "ಮತ್ತೆ ನೀವು ಯಾಕೆ ನನಗೆ ಈ ಭ್ರಮೆಯಲ್ಲಿ ಇಟ್ಟಿದ್ದಿರಿ, ಚಳಿಯಲ್ಲಿ ಸೌಖ್ಯವಾಗುವನುಯೆಂದು? ಈ ಪ್ರಕಾರ ಯಾರ ಸರಳತೆಯನ್ನು ಉಪಯೋಗಿಸಿ ತನ್ನ ಕಾರ್ಯ ಸಾಧಿಸುವುದು ಸಜ್ಜನತೆ ಅಲ್ಲ".

ಡಾಕ್ಟರ ನಮ್ರತೆಯಿಂದ "ಇಂಥ ದಶೆಯಲ್ಲಿ ನಾವು ಕೇವಲ ಅಂದಾಜು ಮಾಡಬಹುದು ಅಷ್ಟೇ, ಅಂದಾಜು ಸದಾ ಸತ್ಯವಾಗಿರುವುದಿಲ್ಲ, ನಿಮಗೆ ತೊಂದರೆ ಅವಶ್ಯ ಆಯಿತು ಆದರೆ ನನ್ನ ಆಶಯ ನಿಮ್ಮನ್ನು ಭ್ರಮೆಯಲ್ಲಿ ಇಡುವುದು ಖಂಡಿತವಾಗಿ ಇರಲಿಲ್ಲ ಎಂದು ವಿಶ್ವಾಸ ನೀಡುತ್ತೇನೆ".

ಶಿವದಾಸ ತುಂಬಾ ದಿವಸದ ನಂತರ ರಜೆಯಲ್ಲಿ ಮನೆಗೆ ಬಂದಿದ್ದ, ಅವನು ಕೋಣೆಗೆ ಬಂದು "ಡಾಕ್ಟರ ಸಾಹೇಬರೇ, ನಿಮಗೆ ತಂದೆಯವರ ಕಷ್ಟದ ಅಂದಾಜು ಇರಬಹುದು, ಅವರ ಮಾತಿನಿಂದ ನಿಮಗೆ ನೋವಾಗಿದ್ದರೆ, ಕ್ಸಮಿಸಿ".

ರಾಮಮೂರ್ತಿಯವರು ವಾತ್ಸಲ್ಯದಿಂದ ಕಿರಿಯ ಮಗನನ್ನು ನೋಡಿ "ನಿನಗೆ ಇಲ್ಲಿ ಬರುವ ಏನು ಅಗತ್ಯ ಇತ್ತು? ನಿನಗೆ ಎಷ್ಟು ಸಲ ಹೇಳಿದೆ ಇಲ್ಲಿ ಬರಬೇಡ ಎಂದು, ಆದರೆ ನಿನಗೆ ತಾಳ್ಮೆ ಇಲ್ಲ".

ಶಿವದಾಸ ಲಜ್ಜಿತನಾಗಿ " ನಾನು ಈಗಲೇ ಹೋಗುತ್ತೇನೆ, ನೀವು ಬೇಸರಿಸದಿರಿ, ನಾನು ಕೇವಲ ಡಾಕ್ಟರಿಗೆ ಅಣ್ಣನ ಬಗ್ಗೆ ವಿಚಾರಿಸಲು ಬಂದೆ ಅಷ್ಟೇ, ಈಗ ಅಣ್ಣನ ಉಪಚಾರಕ್ಕಾಗಿ ಮುಂದೆ ಏನು ಮಾಡುವುದೆಂದು ಕೇಳಲು".

ಡಾಕ್ಟರ "ಈಗ ಒಂದೇ ಉಪಾಯ ಇದೆ, ಇವರನ್ನು ಇಟಲಿಯ ಆರೋಗ್ಯಧಾಮಕ್ಕೆ ಕಳಿಸಬೇಕು".

ರಾಮಮೂರ್ತಿಯವರು ಎಚ್ಚರಿಕೆಯಿಂದ "ಎಷ್ಟು ಖರ್ಚು ಆಗಬಹುದು"?

ಡಾಕ್ಟರ "ಹೆಚ್ಚಿಂದ ಹೆಚ್ಚು ಮೂರು ಸಾವಿರ ರೂಪಾಯಿ".

ರಾಮಮೂರ್ತಿಯವರು "ಒಂದು ವರುಷ ಇರಬೇಕಾಗುತ್ತದೆ ಏನು? ಖಂಡಿತ  ಸೌಖ್ಯವಾಗಿ ಬರುವನೇ"?

ಡಾಕ್ಟರ " ಹಾಗೇನು ಹೇಳಲಾಗುವುದಿಲ್ಲ , ಇದಂತೂ ಭಯಂಕರ ರೋಗ, ಸಾಧಾರಣ ರೋಗದಲ್ಲೂ ಯಾವುದೇ ಮಾತು ನಿಶ್ಚಿತ ಹೇಳಲಾಗುವುದಿಲ್ಲ".

ರಾಮಮೂರ್ತಿಯವರು "ಇಷ್ಟು ಖರ್ಚು ಮಾಡಿ ಸಹ ಈ ಅವಸ್ಥೆಯಲ್ಲಿಯೆ ಹಿಂತಿರುಗಿ ಬಂದರೆ "?

ಡಾಕ್ಟರ " ನಂತರ ದೇವರ ಇಚ್ಛೆನಿಮಗೆ ಈ ನೆಮ್ಮದಿ ಇರಬಹುದು ಇವರಿಗಾಗಿ ನೀವೇನು ಮಾಡಬೇಕಾದುದೆಲ್ಲ ನೀವು ಮಾಡಿದ್ದಿರಿ ಎಂದು".
                                                        3
ಅರ್ಧ ರಾತ್ರಿ ತನಕ ಪ್ರಭುದಾಸನನ್ನು ಇಟಲಿ ಕಳಿಸುವ ಬಗ್ಗೆ ವಾದ ವಿವಾದ ನಡೆಯಿತು.   ರಾಮಮೂರ್ತಿಯವರ ಪ್ರಕಾರ ಒಂದು ಸಂದೇಹಾಸ್ಪದ ಫಲದ ಚಿಕಿತ್ಸೆಕ್ಕಾಗಿ ಮೂರು ಸಾವಿರ ಖರ್ಚು ಮಾಡುವುದು ಬುದ್ಧಿವಂತಿಕೆಯ ವ್ಯತಿರಿಕ್ತ, ಮಗ ಶಿವದಾಸನ ಮತ ಸಹ ಹೀಗೆಯೇಯಾಗಿತ್ತು. ಆದರೆ ಅವನ ಅಮ್ಮ ಸುನಂದಾ ಇದರ ವಿರುದ್ಧವಾಗಿದ್ದಳು, ಕೊನೆಗೆ ಅಮ್ಮನ ವಿರೋಧದ ಪರಿಣಾಮ ಹೀಗಾಯಿತು ಅಂದರೆ ಮಗ ಶಿವದಾಸ ಲಜ್ಜಿತನಾಗಿ ಅಮ್ಮನ ಕಡೆ ಸೇರಿದ, ರಾಮಮೂರ್ತಿಯವರು ಏಕಾಂಗಿ ಉಳಿದರು. ಸುನಂದಾ ಗಂಡನ ಸೌಹಾರ್ದವನ್ನು ಪ್ರಜ್ವಲಿತ ಮಾಡಲು ಪ್ರಯತ್ನಿಸಿದ್ದಳು, ಧನ ಸಂಪತ್ತು ಎಲ್ಲ ನಶ್ವರ ಎಂದು ತರ್ಕ ನೀಡಿದಳು, ಲೋಕದವರು ಏನು ಹೇಳಬಹುದೆಂದು ಹೆದರಿಸಿದಳು, ಆದರೆ ಎಲ್ಲದರಿಂದ ಸೋತು ಕೊನೆಗೆ ಅಶ್ರು ವರ್ಷ ಮಾಡಲಾರಂಭಿಸಿದಳು. ರಾಮಮೂರ್ತಿಯವರು ಈ ಜಲ ಪ್ರವಾಹದ ಮುಂದೆ ಸೋತರು, ಕೊನೆಗೆ " ಇನ್ನು ಅಳ ಬೇಡ, ನೀನು ಹೇಗೆ ಹೇಳುವೆ , ಹಾಗೆಯೇ ಮಾಡುವೆ" ಎಂದು ಭರವಸೆ ನೀಡಿದ್ದರು.
ಸುನಂದಾ "ಹಾಗಾದರೆ ಯಾವಾಗ"?

ರಾಮಮೂರ್ತಿಯವರು " ರೂಪಾಯಿ ಕೈಯಲ್ಲಿ ಬರಲಿ " .

ಸುನಂದಾ " ಹಾಗಾದರೆ ನೇರ ಯಾಕೆ ಹೇಳುವುದಿಲ್ಲ, ಕಳಿಸಲಿಕ್ಕೆ ಇಲ್ಲವೆಂದು"?

ರಾಮಮೂರ್ತಿಯವರು "ಕಳಿಸಲಿಕ್ಕೆ ಇದೆ, ಆದರೆ ಈಗ ಕೈ ಖಾಲಿ ಇದೆ, ನಿನಗೆ ಗೊತ್ತಿಲ್ಲವೇ "?

ಸುನಂದಾ "ಬ್ಯಾಂಕ್'ಲ್ಲಿ ಇದೆಯಲ್ಲ? ಸಂಪತ್ತು ಇದೆಯಲ್ಲ? ಎರಡು ಮೂರು ಸಾವಿರ ಒಟ್ಟು ಮಾಡಲು ಅಷ್ಟೊಂದು ಏನು ಕಠಿಣ".

ರಾಮಮೂರ್ತಿಯವರು ಹೆಂಡತಿಯನ್ನು ತಿಂದು ಬಿಡುವ ರೀತಿಯಲ್ಲಿ ನೋಡಿದ್ದರು ಮತ್ತೆ ಒಂದು ಕ್ಷಣದ ನಂತರ "ಮಕ್ಕಳ ಹಾಗೆ ಮಾತನಾಡಬೇಡ, ಇಟಲಿಯಲ್ಲಿ ಯಾವುದೇ ಸಂಜೀವನಿ ಇಲ್ಲ , ಚಮತ್ಕಾರ ಆಗುವಂತ. ಅಲ್ಲಿಯೂ ಒಂದು ಪ್ರಯತ್ನವೇ ಮಾಡುವುದು ಎಂದಾದರೆ ನಿಧಾನವಾಗಿ ಮಾಡುವ. ಪೂರ್ವಜರು ಬಿಟ್ಟು ಹೋದ ಸಂಪತನ್ನು ಮತ್ತು ಶ್ರಮದಿಂದ ಗಳಿಸಿ ಜೋಡಿಸಿ ಇಟ್ಟಿದ ಹಣವನ್ನು ನಾನು ಒಂದು ಅನಿಶ್ಚಿತ ಹಿತದ ಆಸೆಯಲ್ಲಿ ಬಲಿದಾನ ಮಾಡಲಾರೆ".

ಸುನಂದಾ ಸ್ವಲ್ಪ ಭಯದಿಂದ "ಅದರಲ್ಲಿ ಅರ್ಧ ಪಾಲು ಪ್ರಭುದಾಸನ ಸಹ ಇದೆ".

ರಾಮಮೂರ್ತಿಯವರು ತಿರಸ್ಕಾರದಿಂದ "ಅರ್ಧ ಅಲ್ಲ, ನಾನು ಅವನಿಗೆ ಸರ್ವಸ್ವ ನೀಡುತ್ತಿದ್ದೆ, ಒಂದು ವೇಳೆ ಅವನಿಂದ ಯಾವುದೇ ಆಶಯ ಇದ್ದಿದ್ದರೆ, ಕುಟುಂಬದ ಮಾನಕ್ಕಾಗಿ, ಏಳಿಗೆಗಾಗಿ ಅವನು ಇನ್ನೂ ಧನ ಸಂಪತ್ತು ,ಐಶ್ವರ್ಯ ಒಟ್ಟು ಗೂಡಿಸಲು ಸಕ್ಷಮನಾಗಿದ್ದರೆ, ಕೇವಲ ಭಾವುಕತೆಯಿಂದ ನಾನು ಈ ಧನ ಸಂಪತ್ತನ್ನು ನಾಶ ಗೊಳಿಸಲಾರೆ". 

ಗೆದ್ದು ಸಹ ಸುನಂದಾ ಸೋತಿದ್ದಳು, ಭಾವೋದ್ವೇಗದಿಂದ ಮಾತೇ ಹೊರಡಲಿಲ್ಲ.

ಇದರ ಆರು ತಿಂಗಳ ನಂತರ ಶಿವದಾಸ ಬಿ. ಏ ಪಾಸಾದ. ರಾಮಮೂರ್ತಿಯವರು ತನ್ನ ಜಮೀನ್ದಾರಿಕೆಯ ಎರಡು ಎಕರೆ ಜಮೀನನ್ನು ಅಡವು ಇಟ್ಟು ಅವನನ್ನು ಉನ್ನತ ಶಿಕ್ಷಣ ಗೋಸ್ಕರ ಇಂಗ್ಲೆಂಡ್ ಕಳಿಸಿದ್ದರು. ಅವನನ್ನು ಬಂಬೈ ಕಳಿಸಲು ಅವರು ಸ್ವತಃ ಹೋದರು. ಅಲ್ಲಿಂದ ಹಿಂತಿರುಗುವಾಗ ಅವರ ಮನಸ್ಸಲ್ಲಿ ತಾನು ಮಾಡಿದ ಈ ಕಾರ್ಯದಿಂದ ಲಾಭ ಒದಗುವುದು ಎಂಬ ಆಸೆ ಅಡಗಿತ್ತು. ಅವರು ಬರುವ ಏಳು ದಿವಸ ನಂತರ ನಿರ್ಭಾಗ್ಯ ಪ್ರಭುದಾಸ ತನ್ನ ಎಲ್ಲ ಆಕಾಂಕ್ಷೆಗಳನ್ನು ಹೊತ್ತು ಸಾವನ್ನು ಅಪ್ಪಿಕೊಂಡ.

                                                                                    4
ರಾಮಮೂರ್ತಿಯವರು ಮಣಿಕರ್ಣಿಕ ಸ್ಮಶಾನ ಭೂಮಿಯಲ್ಲಿ ತನ್ನ ಸಂಬಂಧಿಕರ ಒಟ್ಟಿಗೆ ಚಿತೆ ಜ್ವಾಲೆಯನ್ನು ನೋಡುತ್ತಿದ್ದರು. ಅವರ ಕಣ್ಣಿಂದ ಕಣ್ಣೀರು ಹರಿಯುತ್ತಿತ್ತು. ಪುತ್ರ ಮೋಹ ಅರ್ಥ-ಸಿದ್ಧಾಂತದ ಬಲಿಯಾಗಿ ಹೋಗಿತ್ತು. ಅವರ ವಿರಕ್ತ ಮನಸ್ಸಲ್ಲಿ ಈ ಕಲ್ಪನೆಗಳೆಲ್ಲ ಬರಲಾರಂಭಿಸಿತು. ಒಂದು ವೇಳೆ ನಾನು ಪ್ರಭುದಾಸನನ್ನು ಇಟಲಿಗೆ ಕಳಿಸಿದ್ದುದಾದರೆ, ಅಲ್ಲಿ ಹೋಗಿ ಅವನ ರೋಗ ಗುಣವಾಗುತ್ತಿತ್ತು ಏನೋ, ಆಯ್ಯೋ ನಾನು ಮೂರು ಸಾವಿರಗೋಸ್ಕರ ಪುತ್ರ ರತ್ನ ಕಳೆದುಕೊಂಡೆ. ಈ ಕಲ್ಪನೆ ಕ್ಷಣ ಪ್ರತಿಕ್ಷಣ ಅವರ ಮನಸ್ಸಲ್ಲಿ ಮೂಡಲಾರಂಭಿಸಿತು ಹಾಗು ತೀವ್ರ ಪಶ್ಛಾತ್ತಾಪ, ಶೋಕದ ಬಾಣ ಅವರನ್ನು ಚುಚ್ಚಲಾರಂಭಿಸಿತು. ವೇದನೆಯ ಅಲೆಗಳು ಅವರ ಹೃದಯದಲ್ಲಿ ಏಳಲಾರಂಭಿಸಿತು, ಅವರ ಅಂತರಂಗದ ಜ್ವಾಲೆಯ ದಗೆ ಆ ಚಿತೆಯ ಜ್ವಾಲೆಕ್ಕಿಂತ ಕಡಿಮೆಯೇನು ಇರಲಿಲ್ಲ. ಇದ್ದಕ್ಕಿದಂತೆ ಅವರಿಗೆ ಶಹನಾಯಿಯ ಧ್ವನಿ ಕೇಳಿ ಬಂತು, ತಲೆ ಎತ್ತಿ ನೋಡಿದಾಗ ಅವರಿಗೆ ಮನುಷ್ಯರ ಒಂದು ಗುಂಪು ಒಂದು ಶವವನ್ನು ಎತ್ತಿಕೊಂಡು ಅಂತ್ಯಕ್ರಿಯೆಗೋಸ್ಕರ ಬರುವುದನ್ನು ಕಂಡರು. ಅವರೆಲ್ಲರೂ ಡೋಲು ಬಡಿಯುತ್ತ , ಹಾಡುತ್ತ , ಪುಷ್ಪ ವರ್ಷ ಮಾಡುತ್ತಾ ಬರುತ್ತಿದ್ದರು. ಸ್ಮಶಾನ ಭೂಮಿಗೆ ಬಂದು ಅವರು ಶವ ಕೆಳಗಿಟ್ಟು ಚಿತೆ ಸಿದ್ಧಗೊಳಿಸಲು ಶುರು ಮಾಡಿದ್ದರು. ಅವರಲ್ಲಿ ಒಬ್ಬ ಯುವಕ ರಾಮಮೂರ್ತಿಯವರ ಬದಿಗೆ ಬಂದು ನಿಂತ. ಉತ್ಸುಕವಶ ರಾಮಮೂರ್ತಿಯವರು ಅವನಿಗೆ ಕೇಳಿದರು " ಎಲ್ಲಿ ನಿಮ್ಮ ಮನೆ "?

ಯುವಕ ಉತ್ತರಿಸಿದ "ನಮ್ಮ ಮನೆ ದೂರ ಊರಲ್ಲಿ, ನಿನ್ನೆ ಸಂಜೆ ಹೊರಟಿದ್ದೇವೆ, ಇವರು ನನ್ನ ತಂದೆಯವರು, ಶವಸಂಸ್ಕಾರ ಗೋಸ್ಕರ ನಾವು ಇಲ್ಲಿಗೆ ಬರುವುದು ಕಡಿಮೆ, ಆದರೆ ನನ್ನ ಅಪ್ಪನ ಅಂತಿಮ ಇಚ್ಛೆಯಾಗಿತ್ತು ಇಲ್ಲಿಗೆ ತರಬೇಕೆಂದು.

ರಾಮಮೂರ್ತಿಯವರು "ಇವರೆಲ್ಲ ನಿನ್ನೊಟ್ಟಿಗೆ ಬಂದಿದ್ದಾರ"?

ಯುವಕ "ಹೌದು , ಇನ್ನೂ ನೂರಾರು ಜನ ಹಿಂದಿನಿಂದ ಬರುತ್ತಿದ್ದಾರೆ, ಇಲ್ಲಿಗೆ ಬರಲ್ಲಿಕ್ಕೆ ಸಾವಿರಾರು ರೂಪಾಯಿ ಖರ್ಚು ಆಯಿತು , ಆದರೆ  ಮುದಿ ತಂದೆಯ ಮುಕ್ತಿ ಗೋಸ್ಕರ ಇದೇನು ಮಹಾ, ಹಣ ಮತ್ತೆ ಏತಕ್ಕೆ".

ರಾಮಮೂರ್ತಿಯವರು "ಅವರಿಗೆ ಏನು ಕಾಯಿಲೆ ಇತ್ತು "?

ಯುವಕ ತುಂಬಾ ಸರಳತೆಯಿಂದ ಯಾವುದೇ ಸಂಬಂಧಿಕರ ಒಟ್ಟಿಗೆ ಮಾತನಾಡುವ ಹಾಗೆ ಉತ್ತರಿಸಿದ "ಕಾಯಿಲೆ ಏನೆಂದು ಗೊತ್ತಾಗಲಿಲ್ಲ, ಆದರೆ ಯಾವಗಲು ಜ್ವರ ಬರುತ್ತಿತ್ತು , ದೇಹ ಒಣಗಿ ಕೃಶವಾಗಿತ್ತು , ಕಾಶಿ , ಹರಿದ್ವಾರ , ಪ್ರಯಾಗ ಎಲ್ಲೆಲ್ಲೋ ಕರೆದುಕೊಂಡು ಹೋದೆ, ವೈದ್ಯರು ಹೇಳಿದ ಮದ್ದನು ಮಾಡಿದೆ,ಆದರೆ....".

ಅಷ್ಟರಲ್ಲಿ ಅಲ್ಲಿಗೆ ಯುವಕನ ಒಬ್ಬ ಮಿತ್ರ ಬಂದು "ಸಾಹೇಬರೇ ,ದೇವರು ಮಗ ನೀಡಿದ್ದರೆ, ಇವನಂತ ನೀಡಬೇಕು, ಏನೆಲ್ಲಾ ಮಾಡಲಿಲ್ಲ ಇವನು, ಹಣವನ್ನು ನೀರಿನಂತೆ ಖರ್ಚು ಮಾಡಿದ, ಮನೆಯ ಎಲ್ಲ ಠೇವಣಿ ಬಂಡವಾಳ ತಂದೆಯ ಉಪಚಾರಕ್ಕಾಗಿ ಸ್ವಾಹ ಮಾಡಿದ, ಸ್ವಲ್ಪ ಜಮೀನು ಇತ್ತು , ಅದನ್ನೂ ಮಾರಿದ, ಆದರೆ  ಕಾಲದ ಎದುರು ನಮ್ಮಂತ ಮನುಷ್ಯರ ಏನು ಅಂತಸ್ತು".

ಯುವಕ ಭಾವುಕನಾಗಿ ಹೇಳಿದ " ಅಣ್ಣ ,ಹಣ ಏನುಬರುತ್ತದೆ ಹೋಗುತ್ತದೆ, ಆದರೆ ಮನುಷ್ಯ ಪುನಃ ಬರುದಿಲ್ಲವಲ್ಲ, ಜೀವನ ಇದ್ದರೆ ದುಡಿದು ತಿನ್ನುವೆ, ಕೈ ಕಾಲು ಇದೆಯಲ್ಲ, ಆದರೆ ಮನಸ್ಸಲ್ಲಿ ಕಡುಬಯಕೆ ಉಳಿಯಲಿಲ್ಲವಲ್ಲ, ಅಯ್ಯೋ ವೈದ್ಯರಲ್ಲಿಗೆ ಹೋಗಲಿಲ್ಲ, ಮದ್ದು ಮಾಡಲಿಲ್ಲ, ಹೋಗಿದ್ದಾರೆ ಉಳಿಯುತ್ತಿದ್ದರುರೇನು ಎಂದು. ನಾನು ಹೇಳುವೆ ಯಾರಾದರು ನನ್ನ ಮನೆ ಸಂಪತ್ತು ಎಲ್ಲ ತನ್ನ ಹೆಸರಲ್ಲಿ ಬರೆಯಲಿ, ಆದರೆ ನನ್ನ ಅಪ್ಪನನ್ನು ಒಂದು ಗಳಿಗೆ ಕರೆಯಲಿ. ಈ ಮೋಹ ಮಾಯೆಯ ಹೆಸರೇ ಜೀವನ, ಇಲ್ಲಾದರೆ ಇದರಲ್ಲಿ ಏನಿದೆ? ಹಣದಿಂದ ದೊಡ್ಡ ಜೀವ, ಜೀವದಿಂದ ದೊಡ್ಡ ನಮ್ಮ ನಿಷ್ಠೆ. 

ಅಣ್ಣ ನಿಮಗೆ ಸತ್ಯ ಹೇಳುವೆ, ಒಂದು ವೇಳೆ ಅಪ್ಪನಿಗಾಗಿ ನಾನೇನಾದರೂ ಕೊರತೆ ಮಾಡಿ ಕೊಂಡಿದ್ದರೆ, ಇಂದು ನನಗೆ ಅಳಲು ಸಹ ಸಾಧ್ಯವಾಗುತ್ತಿರಲಿಲ್ಲ, ನನ್ನದೇ ಮನಸ್ಸು ನನ್ನನ್ನು ತೆಗಳುತ್ತಿತ್ತು, ಆದರೆ ಈಗ ನನಗೆ ನಾನೊಂದು ದೊಡ್ಡ ಋಣದಿಂದ ಮುಕ್ತನಾದೆ ಹಾಗು ಇದರಿಂದ ನನ್ನ ಉದ್ಧಾರವಾಯಿತೆಂದು ಭಾವಿಸುತ್ತೇನೆ. ಅಪ್ಪನ ಆತ್ಮ ಸುಖ ಶಾಂತಿಯಿಂದ ಇದ್ದರೆ ನನಗೆ ಎಲ್ಲ ರೀತಿಯಿಂದ ಕ್ಷೇಮಾಭಿವೃದ್ಧಿ ಆಗುತ್ತದೆ.

ರಾಮಮೂರ್ತಿಯವರು ತಲೆ ತಗ್ಗಿಸಿ ಈ ಮಾತನೆಲ್ಲ ಕೇಳುತ್ತಿದ್ದರು. ಒಂದು ಒಂದು ಮಾತು ಅವರ ಹೃದಯದಲ್ಲಿ ಶೂಲದ ಹಾಗೆ ಚುಚುತ್ತಿತ್ತು. ಈ ಉದಾರತೆಯ ಪ್ರಕಾಶದಲ್ಲಿ ಅವರಿಗೆ ತನ್ನ ಹೃದಯ ಹೀನತೆ, ಅವಿಚಾರತೆ, ಅತ್ಮ ಶೂನ್ಯತೆ,ಭೌತಿಕತೆ ಅತ್ಯಂತ ಭಯಂಕರ ಕಂಡು ಬರುತ್ತಿತ್ತು. ಅವರ ಮನಸ್ಸಲ್ಲಿ ಈ ಘಟನೆಯ ಈ ತರಹ ಪ್ರಭಾವ ಬಿತ್ತೆಂದರೆ ಪ್ರಭುದಾಸನ ಉತ್ತರಕ್ರಿಯೆಯಲ್ಲಿ ಅವರು ಸಾವಿರಾರು ರೂಪಾಯಿ ಖರ್ಚು ಮಾಡಿದ್ದರು, ಅವರ ನರಳುತ್ತಿರುವ ಹೃದಯದ ಶಾಂತಿ ಗೋಸ್ಕರ ಇದೊಂದೇ ಉಪಾಯ ಉಳಿದಿತ್ತು.

                                                * ಮುಗಿಯಿತು*