Sunday, June 30, 2013

ನಗುವ ಬಯಕೆ

!!ನಗುವ ಬಯಕೆ
ನನಗಿಷ್ಟು ನೋವು ತಂದಿದೆ
ಯಾರೂ ಸಂತೈಸುವವರಿಲ್ಲ
ಕಷ್ಟವೇ ನನ್ನ ನೆರಳಾಗಿದೆ!!

!!ಹೃದಯ ಸಿಲುಕಿಕೊಂಡಿತ್ತು
ಜೀವನದ ಜಂಜಾಟದಲ್ಲಿಯೇ
ಉಸಿರು ಉರಿಯುತ್ತದೆ
ಕೆಲವೊಮ್ಮೆ ರಾತ್ರಿಯ ಸಮಯದಲ್ಲಿಯೇ
ಯಾರದ್ದೋ ಧ್ವನಿ ಇದು
ಈ ನಗು ಯಾರದಾಗಿದೆ
ಯಾರೂ ಸಂತೈಸುವವರಿಲ್ಲ
ಕಷ್ಟ ನನ್ನ ನೆರಳಾಗಿದೆ!!

!!ಕನಸು ನಡೆಯುತ್ತಲೇ ಇತ್ತು
ಪ್ರತಿ ದಿನ ಹೊಸ ಹಾದಿಯಿಂದ
ಯಾರೋ ಜಾರಿದ್ದಾರೆ
ಈಗಾಗಲೇ ಬಾಹುಗಳಿಂದ!!
ಯಾರದ್ದೋ ವೇದನೆಗೆ
ತಾರೆಗಳಿಗೆ ಪ್ರೀತಿ ಉಕ್ಕಿದೆ
ಯಾರೂ ಸಂತೈಸುವವರಿಲ್ಲ
ಕಷ್ಟ ನನ್ನ ನೆರಳಾಗಿದೆ!!

ಮೂಲ : ಕಪಿಲ್ ಕುಮಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮನ್ನಾ ಡೇ
ಸಂಗೀತ : ಕಾನು ರಾಯ್
ಚಿತ್ರ : ಅವಿಷ್ಕಾರ್

Hasne ki chah ne itna mujhe rulaya hai
Koyi hamdard nahi dard mera saya hai

 Dil toh uljha hi raha jindagi ki bato me
 Sanse jalti hain kabhi kabhi rato me
 Kisi ki aahate ye kaun muskuraya hai
 Koyi hamdard nahi, dard mera saya hai

 Sapne chalte hi rahe roj nayi raho se
 Koyi phisla hai abhi abhi baho se
 Kisi ki aah par taro ko pyar aaya hai
 Koyi hamdard nahi, dard mera saya hai
http://www.youtube.com/watch?v=uomu2WP5CAE

Thursday, June 27, 2013

ವರ್ಷ ಋತುವಿನ ಮಾಸ


ಮುಕೇಶ್ :
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ

ಲತಾ ::
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ

ಮುಕೇಶ್ :
ಹ್ಮ್ಮ್....  ಪವನ ಮಾಡುತ್ತಿದೆ ಗದ್ದಲ

ಲತಾ :ಪವನ ಮಾಡುತ್ತಿದೆ ಗದ್ದಲ

ಮುಕೇಶ್ : ಅರೆ .....ಗದ್ದಲ ಅಲ್ಲ ಗದ್ದಲ, (ಗ ದ್ದ ಲ......)

ಲತಾ : ಪವನ ಮಾಡುತ್ತಿದೆ (ಗ ದ್ದ ಲ.....)

ಮುಕೇಶ್ : ಸರಿ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ

ಮುಕೇಶ್ :
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ

ಲತಾ :
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ

ಮುಕೇಶ್ :
ರಾಮ ಅದ್ಭುತವಾಗಿದೆ
ಈ ಮೂಡಲ ಗಾಳಿ

ಲತಾ :
ದೋಣಿಯನ್ನು ಹಿಡಿದಿಡು
ಮರೆಯಾಗುವೆ ನೀನೆಲ್ಲಿ -೨

ಮುಕೇಶ್ :
ಓ  ಮೂಡಲ ಗಾಳಿಯ ಮುಂದೆ
ನಡೆಯುವುದಿಲ್ಲ ಯಾರದ್ದೂ ಬಲ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ

ಲತಾ/ಮುಕೇಶ್ :
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ

ಲತಾ :
ತರಂಗ ಮಾಡುತ್ತಿದೆ ನನಗೆ
ಇದೆಂತಹ ಇಷಾರೆ

ಮುಕೇಶ್ :
ಹೋಗಲಿದೆಲ್ಲಿಗೆ ಎಂದು
ಕೇಳುತ್ತಿದೆ ನದಿಯ ಧಾರೆ -೨

ಲತಾ :
ಇಚ್ಛೆ ಇದು ನಿನ್ನ ಕೊಂಡೋಗು 
ಎಲ್ಲಿಯೂ ಒಂದು ಸಲ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ

ಮುಕೇಶ್/ಲತಾ:
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ

ಲತಾ :
ಯಾರ ಪ್ರೇಮಿ ದುಷ್ಟರು
ಹೋಗಿದ್ದಾರೆ ವಿದೇಶ

ಮುಕೇಶ :
ಬಂದದೆ ಅವರಿಗೆ ನೋಡು 
ಪ್ರೀತಿಯ ಸಂದೇಶ-೨

ಲತಾ :
ಹಾಹ  ಎಂತಹ ಈ ಸೊಬಗು
ಮುಗಿಲು ಮಿಂಚುಗಳ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ

ಲತಾ/ಮುಕೇಶ್ :
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ

ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್/ಮುಕೇಶ್
ಚಿತ್ರ : ಮಿಲನ್

 Hmm hmm hmm hmm hmm hmm hmm.............
 Sawan ka mahina, pawan kare sor
 Sawan ka mahina, pawan kare shor
 Amm hmm, pawan kare sor, pawan kare shor
 Arey baba shor nahin, sor, sor, sor
 Pawan kare sor, haan......
 Jiyara re jhume aise, jaise banama naache mor
 (sawan ka mahina, pawan kare sor
 Jiyara re jhume aise, jaise banama naache mor) - (2)

 (raama gajab dhaaye yeh purwaiyya
 Naiyya sambhalo kit khoye ho khiwaiyya) - (2)
 Hoy purwaiya ke aage chale naa koyi jor
 Jiyara re jhume aise, jaise banama naache mor
 O o o..... sawan ka mahina, pawan kare sor
 Jiyara re jhoome aise, jaise banmaa naache mor

 (maujawa kare kya jaane hamko isaara
 Jaana kaha hai puchhe nadiyaa ki dhaara) - (2)
 Marji hai tumhari le jaao jis or
 Jiyara re jhume re aise re jaise banama naache mor
 O o o..... sawan ka mahina, pawan kare sor
 Jiyara re jhoome aise, jaise banmaa naache mor

 (jinake balam bairi gaye hain bideswa
 Aaye hain leke unake pyaar ka sandeswa) - (2)
 Kaari matwaari ghataaye ghan ghor
 Jiyara re jhume aise jaise banama naache mor
 Sawan ka mahina, pawan kare sor
 Jiyara re jhume aise, jaise banama naache mor
 Jiyara re jhume re aise re jaise banama naache mor

Tuesday, June 25, 2013

Kabir Doha (ಕಬೀರ ದೋಹ )

ಕಬೀರ ದೋಹ
ಹರಿ ರಸ ಕುಡಿದವನೇ ಅರಿಯುವನು, ಅದರ ಅಮಲು ಎಂದೂ ಹೋಗದು!
ಹುಚ್ಚುಹಿಡಿದವನಂತೆ ಅಲೆಯುವನು, ಗೊಡವೆಯೂ ಇರುವುದಿಲ್ಲ ದೇಹದು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
हरी रस पीया जानिये, कबहू न जाए खुमार |
मैमता घूमत फिरे, नाही तन की सार ||

Saturday, June 22, 2013

Kabir Doha (ಕಬೀರ ದೋಹ )

ಕಬೀರ ದೋಹ
ನಯನದೊಳಗೆ ಬಾ ನೀನು, ಒಳ ತೆಗೊಂಡು ನಯನ ಮುಚ್ಚುವೆ!  
ಬೇರೆ ಯಾರನ್ನೂ ನೋಡಲಾರೆ, ನಿನಗೂ ನೋಡಲು ಬಿಡಲಾರೆ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीरा दोहा  
नैना अंतर आव तू, नैन झापी तोही लेऊ |
न में देखू और को, न तोही देखन देऊ ||
*ಭಕ್ತನಿಗೆ ದೇವರಲ್ಲದೆ ಇತರ ಯಾವುದರ ಗೋಚರ ಇರುವುದಿಲ್ಲ, ಪ್ರತಿ ಕ್ಷಣ ಅವನು ದೇವರ ಸಾನ್ನಿಧ್ಯ ಪಡೆಯಲು ಬಯಸುವನು. ನಯನ ಹೃದಯಕ್ಕೆ ಹೋಗುವ ಮಾರ್ಗದ ಒಂದು ದ್ವಾರ, ಭಕ್ತ ಯಾವಾಗಲು ದೇವರನ್ನು ತನ್ನ ಕಣ್ಣಲ್ಲಿ ತುಂಬಿ ತನ್ನ ಹೃದಯ ಮಂದಿರದಲ್ಲಿ ನೆಲೆಸುವನು.

Thursday, June 20, 2013

Kabir Doha (ಕಬೀರ ದೋಹ )

ಕಬೀರ ದೋಹ
ಕಬೀರ ಚಿಪ್ಪು ಸಮುದ್ರದ, ಅಂಗೀಕರಿಸುವುದಿಲ್ಲ ಉಪ್ಪು ನೀರನ್ನು!
ಕುಡಿಯುವುದು ಸ್ವಾತಿ ಮಳೆನೀರು, ಶೋಭಿಸುವುದು ಸಾಗರವನ್ನು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
कबीरा सीप समुंदर की, खरा जल नाही ले |
पानी पिए स्वाति का, शोभा सागर दे ||
*ಚಿಪ್ಪು ಸಮುದ್ರದಲ್ಲಿದ್ದು ಉಪ್ಪು ನೀರನ್ನು ಅಸ್ವೀಕರಿಸಿ ಸ್ವಾತಿ ಮಳೆಕ್ಕಾಗಿ ಕಾದು ಕೇವಲ ಅದನ್ನೇ ಅಂಗೀಕರಿಸುತ್ತದೆ ಹಾಗು ಸಾಗರದ ಸೌಂದರ್ಯವನ್ನು ಏರಿಸುತ್ತದೆ. 

Wednesday, June 19, 2013

Kabir Doha (ಕಬೀರ ದೋಹ )

ಕಬೀರ ದೋಹ
ಹೇಳುವೆ ಆ ಜಾತಿದವನೆಂದು, ಹೇಳಿ ಬಾರಿಸುವೆ ಡೋಲನ್ನು!
ಉಸಿರು ವ್ಯರ್ಥಗೊಳಿಸುವೆ, ಕಳೆದುಕೊಳ್ಳುವೆ ಮೂರು ಲೋಕದ ಮೌಲ್ಯವನ್ನು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
कहता हूँ कही जात हूँ, कहत बजाये ढोल |
स्वसा ख़ाली जात है, तीन लोक का मोल ||
*ನೀನು ಜಗಕ್ಕೆಲ್ಲ ನೀನೊಬ್ಬ ಉತ್ತಮ ಜಾತಿದವನೆಂದು ಹೆಮ್ಮೆ ಪಡುವೆ, ಆದರೆ ಈ ರೀತಿಯಲ್ಲಿ ನೀನು ತನ್ನ ಜೀವನ ಶಕ್ತಿ ಉಸಿರನ್ನು ವ್ಯರ್ಥಗೊಳಿಸುವೆ, ಯಾಕೆಂದರೆ ನೀನು ಈ ಉತ್ತಮ ಮಾನವ ಜನ್ಮಕ್ಕೆ ಮೌಲ್ಯ ನೀಡುವುದಿಲ್ಲ, ಈ ಜನ್ಮವನ್ನು ಮೂರು ಲೋಕದಿಂದ ಪಡೆಯುವುದು ತುಂಬಾ ಕಷ್ಟ. ಇಲ್ಲಿ ಕಬೀರರು ಮಾನವ ಜನ್ಮ ಎಷ್ಟು ಅಮೂಲ್ಯವಾಗಿದೆಯೆಂದು ಹಾಗು ಜಾತಿವಾದದ ಮೇಲೆ ಒಂದು ತೀಕ್ಷ್ಣ ಪ್ರಹಾರ ಮಾಡಿದ್ದಾರೆ. 

Tuesday, June 18, 2013

Kabir Doha (ಕಬೀರ ದೋಹ )

ಕಬೀರ ದೋಹ
ದಾಸನಾಗುವುದು ಕಠಿಣ, ದಾಸರ ಸೇವೆ ಮಾಡುವೆ ದಾಸನಾಗಿ!!
ಈಗಂತೂ ಹೀಗೆಯೇ ಇದ್ದಿರುವೆ, ಪಾದ ಅಡಿಯ ಹುಲ್ಲಾಗಿ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीरा दोहा
दास कहावन कठिन है, में दासन का दास |
अब तो ऐसा होए रहू, पाँव तले की घास ||

Monday, June 17, 2013

Kabir Doha (ಕಬೀರ ದೋಹ )

ಕಬೀರ ದೋಹ
ಅರೆ ಕ್ಷಣದ ಜ್ಞಾಪಕ ಇಲ್ಲ, ಸಿಂಗರಿಸುವೆ ನಾಳೆಯನ್ನು !
ನಾಳೆ ಇದ್ದಕ್ಕಿದ್ದಂತೆ ಸಾಯುವೆ,  ಹದ್ದು ಹಿಂಡುವಂತೆ ಪಕ್ಷಿಯ ಪ್ರಾಣವನ್ನು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
पाव पलक की सुधि नाहि, करे काल को साज |
काल अचानक मारसी, ज्यों तीतर को बाज़ ||

Sunday, June 16, 2013

Kabir Doha (ಕಬೀರ ದೋಹ )

ಕಬೀರ ದೋಹ
ತೋಟಗಾರ ಬರುವುದನ್ನು ಕಂಡು, ಶುರುವಾಯಿತು ಮೊಗ್ಗುಗಳ ಗೋಳಾಟ!
ಅರಳಿದ ಹೂಗಳನ್ನು ಕೊಯ್ದುಕೊಂಡ, ನಾಳೆ ನಮ್ಮ ಕೂಡ ಮುಗಿಯುವುದು ಆಟ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
मलिन आवत देख के, कलियन करे पुकार |
फूले फूले चुन लिए, काल हमारी बार ||
*ಒಂದಾನೊಂದು ದಿನ ನಮಗೆ ಈ ಸಂಸಾರ ತ್ಯಜಿಸಿ ಹೋಗಬೇಕು ಎಂದು ಪ್ರತಿ ಅನುಭವವುಳ್ಳ ಮನುಷ್ಯನಿಗೆ ತಿಳಿದಿದೆ.  ಈ ಅಲ್ಪ ಜೀವನದಲ್ಲಿ ಒಳ್ಳೆಯ ಕರ್ಮ ಮಾಡಿ ತನ್ನ ಇದ್ದಷ್ಟು ಜೀವನ ಪಾವನ ಮಾಡುವುದೇ ಒಳಿತು ಎಂದು ಇಲ್ಲಿ ಹೇಳುವ ಕಬೀರರ ಮರ್ಮವಾಗಿತ್ತು. 

Saturday, June 15, 2013

Kabir Doha (ಕಬೀರ ದೋಹ )

ಕಬೀರ ದೋಹ
ಕಾಂತಿ ನನ್ನ ಕಂದನ, ನಿನ್ನದೇ ಕಾಂತಿ ಎಲ್ಲಿಯೂ ನೋಡಿದಲ್ಲಿ!
ಕಾಂತಿ ಕಾಣಲು ನಾ ಹೋದೆ, ನಾನೂ ವಿಲೀನವಾದೆ ಆ ಕಾಂತಿಯಲಿ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
लाली मेरे लाल की, जित देखू तित लाल |
लाली देखन में गयी, में भी हो गयी लाल ||
*ಭಕ್ತನಿಗೆ ಒಮ್ಮೆ ದೇವರ ಅರಿವಾದ ನಂತರ ಅವನಿಗೆ ಎಲ್ಲೆಡೆ ದೇವರ ಪ್ರಕಾಶ ಕಂಡು ಬರುತ್ತದೆ ಹಾಗು ಅವನು ದೇವರಲ್ಲಿ ವಿಲೀನವಾಗುತ್ತಾನೆ. ಇಲ್ಲಿ ಕಬೀರರು ಬಹಳ ಸುಂದವಾಗಿ ಇದನ್ನು ವಿವರಿಸಿದ್ದಾರೆ.

Thursday, June 13, 2013

Kabir Doha (ಕಬೀರ ದೋಹ )

ಕಬೀರ ದೋಹ
ಹುಡುಕಿದವರು ಪಡೆದರು, ನೀರಿನ ಆಳಕ್ಕೆ ಧುಮುಕಿ!
ನಾನು ಮೂರ್ಖ ಮುಳುಗುವೆಯೆಂದು ಹೆದರಿ, ತೀರದಲ್ಲಿಯೇ ಉಳಿದೆ ಬಾಕಿ!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीर दोहा
जिन ढूंढा तिन पाईया, गहरे पानी पैठ |
में बोरी डूबन डरी, रही किनारे बैठ ||
*ಮುತ್ತು ಪಡೆಯ ಬೇಕಾದರೆ ನೀರಿನ ಆಳಕ್ಕೆ ಹೋಗ ಬೇಕಾಗುತ್ತದೆ, ಮುಳುಗುವೆಯೆಂದು ಹೆದರಿದವನಿಗೆ ಏನೂ ಸಿಗುದಿಲ್ಲ. ಹಾಗೆಯೇ ದೇವರನ್ನು ತಿಳಿಯಲು ಆಳವಾದ ಧ್ಯಾನ ಮಾಡಿ ದೇವರ ಸಾನ್ನಿಧ್ಯ ಹಾಗು ಪ್ರೀತಿ ಪಡೆಯಬಹುದು.

Wednesday, June 12, 2013

Kabir Doha (ಕಬೀರ ದೋಹ )

ಕಬೀರ ದೋಹ
ನೀನು ನೀನೆಂದು ನಾನು ನಿನ್ನಲ್ಲಿ ವಿಲೀನ, ನನ್ನಲ್ಲಿ ಉಳಿಯಲಿಲ್ಲ ಅಹಂ ಇನ್ನು!
ಪುನರ್ಜನ್ಮದ ಕಷ್ಟ ಕಣ್ಮರೆಯಾಯಿತು, ಎಲ್ಲಿ ನೋಡಿದರೂ ನೀನೆ ನೀನು!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
तू तू करता तू भया, मुझमें रही न हूँ |
बारी फेरी बलि गई, जित देखू तित तू ||
*ದೇವರ ನಾಮ ಜಪಿಸುವವರು ದೇವರ ನಿಕಟವಾಗುತ್ತಾರೆ ಹಾಗು ಅವರು ದೇವಲೋಕದಲ್ಲಿ ತಲುಪುತ್ತಾರೆ. ಇದರಿಂದ ಅವರು ಪುನರ್ಜನ್ಮದ ಚಕ್ರದಿಂದ ಮುಕ್ತವಾಗುತ್ತಾರೆ, ಹನಿ ಸಮುದ್ರದಲ್ಲಿ ಸೇರಿದ ನಂತರ ಅಗಲಿಕೆಯ ಪ್ರಶ್ನೆ ಎಲ್ಲಿ ಉಳಿಯುತ್ತದೆ. 

Tuesday, June 11, 2013

ವಿಸ್ಮಯ


                                                                ಫೋಟೋ ಕೃಪೆ :ಗೂಗಲ್
ಒಹ್ ಸಂಜೆ ಆಯಿತೆ ?
ಸೂರ್ಯನ ಸವಾರಿ ಹೊರಟಿತೆ?
ಮುಪ್ಪು ಬಂದದ್ದು ಗೊತ್ತೇ ಆಗಲಿಲ್ಲವಲ್ಲ?
ಸೂರ್ಯ ದಿನ ಉದಯವಾಗುವಂತೆ
ಯಾಕೆ ಪುನಃ ಯೌವನ ಬರಬಾರದು
ಛೆ ಬೇಡ,
ಪುನಃ ಯೌವನ ಪಡೆದು ಏನನ್ನು ಸಾಧಿಸುವುದು
ನಿಷ್ಠೆಯಿಂದ, ಭಕ್ತಿಯಿಂದ
ಯೌವನದಲ್ಲಿ ಕಷ್ಟ ಪಟ್ಟು
ಜೀವನವನ್ನು ಚಿತ್ರಿಸಿದೆ
ಆದರೆ ಈಗ ಆ ಚಿತ್ರದಲ್ಲಿ ಯಾವ ಬಣ್ಣವೂ ಇಲ್ಲ
ಎಲ್ಲ ಅಳಿಸಿ ಹೋಗಿದೆ
ಬಿಡಿ,
ಆದರೆ ಯಾಕೆ ಪುನಃ ಬಾಲ್ಯ ಬರಬಾರದು
ಮಜಾ ಅಲ್ಲವೇ
ಹ್ಮ್ಮ್ ಎಂಥ ಮಜಾ
ಬಾಲ್ಯದಲ್ಲಿ ಪಡೆದ  ಕಷ್ಟ ಮರೆತು ಹೋಯಿತೇ
ಬೇಡ ಪುನಃ ಆ ತೊಂದರೆ
ಸಾಕು
ಬಾಲ್ಯವೂ ಬೇಡ, ಯೌವನವೂ ಬೇಡ
ಜೀವನದ ಶರತ್ಕಾಲದಲಿ
ಇನ್ನೆಂಥ ಆಸೆ
ಮಕ್ಕಳು ಹೋದರು ಒಂದೊಂದಾಗಿ
ನನ್ನನ್ನು ಅಸಹಾಯ ಬಿಟ್ಟು
ಸ್ನೇಹಿತರು ದೂರವಾದರು
ಇನ್ನು ಈ ಭೂಮಿಯಲಿ ನಾಲ್ಕು ಅಡಿ ಜಾಗ ಸಿಕ್ಕಿದರೆ ಸಾಕು
ಹೇ ಆದರೆ ನನಗೆ ಜಾಗ ಯಾಕೋ ?
ನಾನು ಹಿಂದೂ ಅಲ್ಲವೇ
ಸತ್ತ ನಂತರ ಸುಟ್ಟು ಬೂದಿಯಾಗುವವನು
ಹೋಗಲಿ ಬಿಡಿ,
ಆ ಪರಮಾತ್ಮನ ಇಚ್ಛೆ
ಮಾಡುವ ಎಲ್ಲ ಧರ್ಮ ಕರ್ತವ್ಯ ಪ್ರಾಮಾಣಿಕತೆಯಿಂದ ಮಾಡಿ ಮುಗಿಸಿದೆ
ಆದರೆ ಫಲ ನೀಡುವ ಅವನ ಮನಸ್ಸಲಿ ಏನಿದೆಯೋ ?
ಇನ್ನು ಎಷ್ಟು ಜೀವನದ ಸತ್ಯ ತೋರಿಸುತ್ತಾನೋ ?
ಆಗಲಿ ನೋಡುವ
ಕಣ್ಣು ಯಾಕೋ ಈ ತನಕ ಚುರುಕಾಗಿದೆ
ನೋಡದನ್ನೂ ನೋಡಿ ಆಗಿದೆ
ಈಗ ಎಂಥ ಭಯ
ಕ್ಷಣ ಕ್ಷಣ ಜನರಲ್ಲಿ ಆಗುವ ಬದಲಾವಣೆ ಕಂಡು
ಈಗ ನನಗೆ ಎಲ್ಲವೂ ವಿಸ್ಮಯ
ಕೇವಲ ವಿಸ್ಮಯ....
by ಹರೀಶ್ ಶೆಟ್ಟಿ,ಶಿರ್ವ 

Kabir Doha (ಕಬೀರ ದೋಹ )

ಕಬೀರ ದೋಹ
ಹುಡುಕಿ ಹುಡುಕಿ ಹೇ ಗೆಳತಿ, ಕಬೀರ ಮರೆಯಾದನು!
ಹನಿ ಸಮುದ್ರದಲಿ ಸೇರಿದೆ, ಹುಡುಕುವುದು ಹೇಗೆ ಅದನ್ನು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीरा दोहा
हेरत हेरत हे सखी, रहा कबीर हेराय |
बूँद समानी समुंदर में, सो कत हेरी जाय ||
*ಭಗವಂತನ ಮಾಯೆ ಅದ್ಭುತ ಹಾಗು ವ್ಯಾಪಕವಾಗಿದೆ, ಅವನನ್ನು ಹುಡುಕಲು ಹೋದವನು ಅವನಲ್ಲಿಯೇ ಮರೆಯಾಗುವನು ಎಂದು ಸಮುದ್ರದಲ್ಲಿ ಸೇರಿದ ಹನಿಯ ಉದಾಹರಣೆ ಕೊಟ್ಟು ಕಬೀರರು ಹೇಳಿದ್ದಾರೆ.

Monday, June 10, 2013

Kabir Doha (ಕಬೀರ ದೋಹ )

ಕಬೀರ ದೋಹ
ಖನನ ಅಗೆಯುವಿಕೆ ಭೂಮಿ ಸಹಿಸಿಕೊಳ್ಳುವುದು,  ಕಡಿಯುವುದನ್ನು ಕಾಡು!
ಕುಟಿಲ ನುಡಿ ಋಷಿ ಮುನಿ ಸಹಿಸಿಕೊಳ್ಳುವರು,ಇತರರಿಂದ ಸಹಿಸಲಾಗದು!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीर दोहा
खोद्खाद धरती सहे, काटकूट बनराय |
कुटिल वचन साधू  सहे, और से सहा न जाय ||

Sunday, June 9, 2013

ಇಷ್ಟು ಶಕ್ತಿ ನೀಡು ನಮಗೆ ಭಗವಂತ

!!ಇಷ್ಟು ಶಕ್ತಿ ನೀಡು ನಮಗೆ ಭಗವಂತ
ಮನಸ್ಸಿನ ವಿಶ್ವಾಸ ಕ್ಷೀಣವಾಗದಿರಲಿ
ನಾವು ನಡೆದ್ದಿದ್ದೇವೆ ಸತ್ಯ ಪಥದಲಿ
ನಮ್ಮಿಂದ
ಮರೆತು ಸಹ ಯಾವುದೇ ತಪ್ಪಾಗದಿರಲಿ!!

!!ದೂರ ಅಜ್ಞಾನದವಿರಲಿ ಅಂಧಕಾರ
ನೀನು ನಮಗೆ ಜ್ಞಾನದ ಬೆಳಕು ನೀಡು
ಪ್ರತಿಯೊಂದು ದುಷ್ಕರ್ಮದಿಂದ
ತಪ್ಪಿಸಿಕೊಂಡು ಬಂದ್ದಿದೇವೆ ನಾವು
ಅದೆಷ್ಟು ನೀಡುವೆಯೋ
ಒಳ್ಳೆಯ ಜೀವನ ನೀಡು
ವೈರ ಯಾರಿಂದಲೂ ಇರದಿರಲಿ
ಮನಸ್ಸಿನಲ್ಲಿ ದ್ವೇಷದ ಭಾವನೆ ಇರದಿರಲಿ!!
ನಾವು ನಡೆದ್ದಿದ್ದೇವೆ......

!!ನಮಗೇನು ಸಿಕ್ಕಿದೆ
ಎಂಬ ಯೋಚನೆ ಬರದಿರಲಿ
ನಾವೇನು ಮಾಡಿದ್ದೇವೆ ಅರ್ಪಣೆ
ಎಂಬ ಯೋಚನೆ ಇರಲಿ
ಕುಸುಮ ಖುಷಿಯ ಹಂಚಲಿ ಎಲ್ಲರಿಗೆ
ಎಲ್ಲರ ಜೀವನ ಮಧುಬನ ಆಗಲಿ
ತನ್ನ ಕರುಣೆಯ ಜಲ ಸುರಿಸಿ
ನೀನು ಪವಿತ್ರಗೊಳಿಸು ಪ್ರತಿಯೊಂದು ಮನಸ್ಸಿನ ಗಲ್ಲಿ !!
ನಾವು ನಡೆದ್ದಿದ್ದೇವೆ......

ಮೂಲ : ಅಭಿಲಾಶ್
ಅನುವಾದ :ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಪುಷ್ಪ ಪಗ್ದರೆ , ಸುಷ್ಮಾ ಶ್ರೇಷ್ಠ
ಸಂಗೀತ : ಕುಲದೀಪ್ ಸಿಂಗ್
ಚಿತ್ರ : ಅಂಕುಶ್
इतनी शक्ती हमे देना दाता, मन का विश्वास कमजोर हो ना
हम चले नेक रस्ते पे हम से, भूलकर भी कोई भूल हो ना

दूर अज्ञान के हो अँधेरे, तू हमें ज्ञान की रोशनी दे
हर बुराई से बचते रहे हम, जितनी भी दे भली ज़िन्दगी दे
बैर हो ना किसी का किसी से, भावना मन में बदले की हो ना

हम ना सोचें हमें क्या मिला हैं, हम यह सोचे किया क्या हैं अर्पन
फूल खुशियों के बाँटे सभी को, सब का जीवन ही बन जाये मधुबन
अपनी करुणा का जल तू बहा के, कर दे पावन हर एक मन का कोना
http://www.youtube.com/watch?v=-w_P5Pr6eEQ

Kabir Doha (ಕಬೀರ ದೋಹ )

ಕಬೀರ ದೋಹ
ಒಂದು ದಿನ ಹೀಗೆ ಬರುವುದು,ಅಗಲುವೆ ಎಲ್ಲದಿಂದ ನೀನು!
ರಾಜ ರಾಣಿ ಸಾಹುಕಾರ ಬಡವ ಎಲ್ಲರ ಗತಿ ಒಂದೇ, ಎಚ್ಚರಿಸುವುದಿಲ್ಲ ಯಾಕೆ ನೀನು!!
ಅನುವಾದ :ಹರೀಶ್ ಶೆಟ್ಟಿ,ಶಿರ್ವ
कबीर दोहा
एक दिन ऐसा होयेगा, सब सो परे बिछोहू |
राजा रानी राव रंक, सावध क्यों नाहि होहु ||
*ಅಂತ್ಯ ಸಮಯ ಎಲ್ಲರ ಗತಿ ಒಂದೇ, ಇಲ್ಲಿ ಕಬೀರರು ಆಸೆ ಆಕಾಂಕ್ಷೆ ಮೋಹ ಕೋಪ ಲೋಭ ಮತ್ಸರ ಇದರಿಂದ ದೂರ ಇರಿ ಎಂದು ಎಚ್ಚರಿಸುತ್ತಿದ್ದಾರೆ .

Saturday, June 8, 2013

Kabir Doha (ಕಬೀರ ದೋಹ )

ಕಬೀರ ದೋಹ
ಕಾಗೆ ಯಾರದ್ದು ಸಂಪತ್ತು ಕದಿಯದು, ಕೋಗಿಲೆ ಯಾರಿಗೂ ಏನನ್ನೂ ನೀಡದು!
ಆದರೆ ಸಿಹಿ ನುಡಿ ಹಾಡಿ ಕೋಗಿಲೆ, ಜಗವನ್ನು ತನ್ನ ಮಾಡುವುದು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಕಬೀರ್ ದೋಹ
कागा काको धन हरे, कोयल काको देत |
मीठे शब्द सुनायके, जग अपनों कर लेत ||
*ತನ್ನ ಪ್ರಕೃತಿ ಮತ್ತು ಸ್ವಭಾವ ಪ್ರಕಾರ ನಾವು ಇತರರನ್ನು ಮೆಚ್ಚಿಸ ಬಹುದು ಹಾಗು ನಮ್ಮವರನ್ನಾಗಿ ಮಾಡ ಬಹುದು .

Thursday, June 6, 2013

ಬಂದು ನಿನ್ನ ಬಾಹುಗಳಲ್ಲಿ

ಎಸ್.ಪಿ:
!!ಬಂದು ನಿನ್ನ ಬಾಹುಗಳಲ್ಲಿ  
ಪ್ರತಿ ಸಂಜೆ ಅನಿಸುತ್ತದೆ ಚಂದ-೨
ನನ್ನ ಮನಸ್ಸು ಸುಗಂಧಿಸುತ್ತಿದೆ-೨
ನಿನ್ನ ಮನಸ್ಸಿನ ಕಸ್ತೂರಿಯಿಂದ

ಲತಾ:
ಬಂದು ನಿನ್ನ ಬಾಹುಗಳಲ್ಲಿ
ಪ್ರತಿ ಸಂಜೆ ಅನಿಸುತ್ತದೆ ಚಂದ-೨
ನನ್ನ ಮನಸ್ಸು ಸುಗಂಧಿಸುತ್ತಿದೆ-೨
ನಿನ್ನ ಮನಸ್ಸಿನ ಕಸ್ತೂರಿಯಿಂದ!!

ಎಸ್.ಪಿ:
ಬಂದು ನಿನ್ನ ಬಾಹುಗಳಲ್ಲಿ
ಪ್ರತಿ ಸಂಜೆ ಅನಿಸುತ್ತದೆ ಚಂದ

ಲತಾ :
ಬಂದು ನಿನ್ನ ಬಾಹುಗಳಲ್ಲಿ
ಪ್ರತಿ ಸಂಜೆ ಅನಿಸುತ್ತದೆ ಚಂದ

ಎಸ್.ಪಿ:
!!ಸುವಾಸಿತ ಗಾಳಿ
ಸೆರಗು ಹಾರುತ್ತಿದೆ
ಸುಂದರ ಕೇಶ
ಬಾನಲ್ಲಿ ಕರಿ ಮುಗಿಲಿದೆ-೨
 
ಲತಾ:
ಪ್ರೇಮ ಅಮೃತ
ನಯನದಿಂದ ಹರಿಯುತ್ತಿದೆ
ಕುಡಿಯಲು ಜೀವನ
ಹಂಬಲಿಸುತ್ತಿದೆ

ಎಸ್.ಪಿ :
ಬಾಹುಗಳಲ್ಲಿ ಬಂಧಿಸಲು ಕೊಡು
ಪ್ರೀತಿಯ ಚುಂಬನ ನೀಡಲು ಬಿಡು-೨
ಈ ಅಧರದಿಂದ ಚೆಲ್ಲಿ ಹೋಗದಿರಲಿ-೨
ಈ ಯೌವನದ ಆನಂದ!!

ಲತಾ :
ಬಂದು ನಿನ್ನ ಬಾಹುಗಳಲ್ಲಿ
ಪ್ರತಿ ಸಂಜೆ ಅನಿಸುತ್ತದೆ ಚಂದ

ಎಸ್.ಪಿ:
ಬಂದು ನಿನ್ನ ಬಾಹುಗಳಲ್ಲಿ
ಪ್ರತಿ ಸಂಜೆ ಅನಿಸುತ್ತದೆ ಚಂದ

ಲತಾ :
!!ಸುಂದರತೆಯ
ಹರಿಯುವ ಸಾಗರ
ನಿನಗಾಗಿದೆ
ಈ ರೂಪದ ಅಂಬರ-೨

ಎಸ್.ಪಿ .
ಇಂದ್ರಧನುಸ್ಸು
ಬಣ್ಣ ಕದಿಯುವೆ
ನಿನ್ನ ಹಣೆಗೆ
ಕುಂಕುಮ ಹಚ್ಚುವೆ

ಲತಾ :
ಎರಡು ಹೂವುಗಳು ಅರಳುವ
ಇದೇ ಸಮಯ ಮಿಲನದ -೨
ಬಾ ಇಂದು ನಾವು ಅಳಿಸುವ
ನಮ್ಮ ಅಂತರದ ಬಂಧ!!

ಎಸ್.ಪಿ :
ಬಂದು ನಿನ್ನ ಬಾಹುಗಳಲ್ಲಿ
ಪ್ರತಿ ಸಂಜೆ ಅನಿಸುತ್ತದೆ ಚಂದ

ಲತಾ : ಬಂದು ನಿನ್ನ ಬಾಹುಗಳಲ್ಲಿ
ಪ್ರತಿ ಸಂಜೆ ಅನಿಸುತ್ತದೆ ಚಂದ

ಮೂಲ : ಸಮೀರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್ , ಎಸ್.ಪಿ. ಬಾಲಸುಬ್ರಮಣ್ಯ
ಸಂಗೀತ : ಆನಂದ್ ಮಿಲಿಂದ್
ಚಿತ್ರ : ವಂಶ್

(Aa Ke Teree Baahon Me,
Har Shaam Lage Sindooree)-2
Mere Man Ko Mahakaye-2,
Tere Man Kee Kastooree
(Aa Ke Teree Baahon Me,
Har Shaam Lage Sindooree)-2
Mere Man Ko Mahakaye-2,
Tere Man Kee Kastooree
(Aa Ke Teree Baahon Me,
Har Shaam Lage Sindooree)-2

(Mahakee Hawaayen Udataa Aanchal
Lat Ghoongharaale Kaale Baadal)-2
Parem Sudhaa Nainon Se Barase,
Pee Lene Ko Jeewan Tarase
(Baahon Mein Kas Lene De,
Pareet Kaa Chunban Dene De)-2
In Adharon Se Chhalak Naa Jaaye-2,
Yauwan Ras Angooree
(Aa Ke Teree Baahon Me,
Har Shaam Lage Sindooree)-2

(Sundarataa Kaa Bahataa Saagar,
Tere Liye Hain Rup Ke Baadal)-2
Indrdhanush Ke Rang Churaoo,
Teree Julmee Maang Sajaaoo
(Do Foolon Ke Khilane Kaa,
Wakt Yahee Hain Milane Kaa)-2
Aajaa Mil Ke Aaj Mitaa De-2,
Thodee See Ye Dooree
(Aa Ke Teree Baahon Me,
Har Shaam Lage Sindooree)-2
Mere Man Ko Mahakaye-2,
Tere Man Kee Kastooree
(Aa Ke Teree Baahon Me,
Har Shaam Lage Sindooree)-2  
http://www.youtube.com/watch?v=5rMFbltxgOA                                                               

Kabir Doha (ಕಬೀರ ದೋಹ )

ಕಬೀರ ದೋಹ
ಎಲ್ಲಾ ಭೂಮಿ ಕಾಗದ ಮಾಡುವೆ, ಲೇಖನಿ ಮರಗಳನ್ನೆಲ್ಲಾ!
ಏಳು ಸಾಗರ ಮಸಿ ಮಾಡುವೆ, ಆದರೂ ಗುರು ಮಹಿಮೆ ಬರೆಯಲು ಸಾಧ್ಯವಿಲ್ಲ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
सब धरती कागज करूँ, लेखनी सब बनराय!
सात समुंदर की मसि करूँ, गुरुगुण लिखा न जाय!!
*ಗುರು ಕೀರ್ತಿ ಅಷ್ಟು ಅದ್ಭುತ, ಎಷ್ಟು ವಿವರಿಸಿದರೂ ಕಡಿಮೆ.

Wednesday, June 5, 2013

Kabir Doha (ಕಬೀರ ದೋಹ )

ಕಬೀರ ದೋಹ
ದುರ್ಬಲರಿಗೆ ಸತಾಯಿಸದಿರಿ, ಅವರ ಶಾಪ ದೊಡ್ಡದು!
ಸತ್ತ ಶರೀರದ ಉಸಿರಿಂದ, ಕಬ್ಬಿಣ ಭಸ್ಮವಾಗುವುದು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
दुर्बल को न सताइये, जाकी मोटी हाय |
मरी खाल की सांस से, लोह भसम हो जाय ||

Tuesday, June 4, 2013

Kabir Doha (ಕಬೀರ ದೋಹ )

ಕಬೀರ ದೋಹ
ಯಾರಾದರು ನಿನಗೆ ಮುಳ್ಳು ಚುಚ್ಚಿದರೆ,ನೀನು ಅವರಿಗಾಗಿ ಹೆಕ್ಕು ಹೂವುಗಳ!
ನಿನಗೆ ಹೂವಿನ ಬದಲು ಸಿಗುವುದು ಹೂವು,  ಮುಳ್ಳಿಗೆ ಸಿಗುವುದು ತ್ರಿಶೂಲ!!  
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा  
जो तोको कांटा बुवै, ताहि तू बुवै फूल |
तो को फूल को फूल है , काँटा को तिरसूल ||

Monday, June 3, 2013

Kabir Doha (ಕಬೀರ ದೋಹ )

ಕಬೀರ ದೋಹ
ಕಬೀರ ಹೇಳುವನು ಏತಕ್ಕೆ ಹೆದರುವೆ, ಇದ್ದಾಗ ತಲೆಯ ಮೇಲೆ ದೇವನ ಕರ!
ಆನೆ ಸವಾರಿ ಹೆದರುವುದಿಲ್ಲ, ನಾಯಿಗಳು ಬೊಗಳಿದರೇನು ಸಾವಿರ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीरा दोहा
कबीरा कहे काहे को डरे, सर पर सिरजन हार |
हस्ती चढ़ी न डरिये, कुतिया भोंके हज़ार ||

Sunday, June 2, 2013

Kabir Doha (ಕಬೀರ ದೋಹ )

ಕಬೀರ ದೋಹ
ಬರುವುದು ನಿಂದನೆ ಏಕ, ಪ್ರತಿಕ್ರಿಯಿಸಿದ್ದರೆ ಆಗುವುದು ಅನೇಕ!
ಹೇಳುವನು ಕಬೀರ ಪ್ರತಿಕ್ರಿಯಿಸದಿರಿ,ಏಕ ಉಳಿಯುವುದು ಏಕ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
आवत गारी एक है, उलटत होत अनेक |
कहे कबीर न उलटिए, बनी एक को एक ||

Saturday, June 1, 2013

ಜೀವನದ ಹುಡುಕಾಟದಲಿ

!!ಜೀವನದ ಹುಡುಕಾಟದಲಿ
ಸಾವಿನ ಎಷ್ಟು ನಿಕಟ ಬಂದೆ ನಾನು
ಇದನ್ನು ಯೋಚಿಸಿದಾಗ ಹೆದರಿದೆ
ಬಂದೆ ನಾನಿದೆಲ್ಲಿಗೆ ಬಂದೆ ನಾನು !!
ಜೀವನದ ಹುಡುಕಾಟದಲಿ.....

!!ನಾನು ಇಂತಹ ಪ್ರಯಾಣಕ್ಕೆ
ಹೊರಟೆ ಅಂದರೆ
ಅದರ ಯಾವುದೇ ಗಮ್ಯವೇ ಇಲ್ಲ
ನಾನು ಜೀವಮಾನದಲಿ
ಮಾಡಿದೆ ಏನೆಲ್ಲ
ಆದರೆ ಸಾಧಿಸಿದ್ದು ಅದರಿಂದ
ಏನೂ ಇಲ್ಲ -೨
ಒಂದು ಖುಷಿಯ ಹುಡುಕಾಟದಲಿ
ಎಷ್ಟು ದುಃಖ ಪಡೆದೆ ನಾನು
ಇದನ್ನು ಯೋಚಿಸಿದಾಗ ಹೆದರಿದೆ
ಬಂದೆ  ನಾನಿದೆಲ್ಲಿಗೆ ಬಂದೆ ನಾನು!!
ಜೀವನದ ಹುಡುಕಾಟದಲಿ.....

!!ನಾನೆಷ್ಟು ನಿಸ್ಸಹಾಯಕವಾಗಿದೆ ಅಂದರೆ
ಮಾಡದನ್ನೂ ಮಾಡಿ ಬಿಟ್ಟೆ
ಹಿಂತಿರುಗಿ ನೋಡಿದಾಗ ಸ್ವಲ್ಪ
ತನ್ನ ಅವಸ್ಥೆ ಕಂಡು ಭಯ ಪಟ್ಟೆ -೨
ತನ್ನ ಬಗ್ಗೆ ಯೋಚಿಸಿದಾಗ
ತನ್ನಿಂದಲೇ ಲಜ್ಜಿಸಿದೆ ನಾನು
ಇದನ್ನು ಯೋಚಿಸಿದಾಗ ಹೆದರಿದೆ
ಬಂದೆ  ನಾನಿದೆಲ್ಲಿಗೆ ಬಂದೆ ನಾನು!!

ಜೀವನದ ಹುಡುಕಾಟದಲಿ
ಸಾವಿನ ಎಷ್ಟು ನಿಕಟ ಬಂದೆ ನಾನು

ಮೂಲ : ಸಮೀರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಕುಮಾರ್ ಸಾನು
ಸಂಗೀತ : ನದೀಮ್ ಶ್ರವಣ್
ಚಿತ್ರ : ಸಾಥಿ
Zindagee kee talaash me ham, maut ke kitne paas aa gaye
jab yeh socha toh ghabara gaye, aa gaye ham kaha aa gaye
Zindagee kee talaash me ham, maut ke kitne paas aa gaye

ham the aise safar pe chale, jisakee koyee manjil nahee
ham ne saaree umar jo kiya, (usaka koyee bhee haasil nahee -2)
ik khushee kee talaash me the, kitne gham hamko tadapa gaye
jab yeh socha toh ghabara gaye, aa gaye ham kaha aa gaye

socho ham kitne majbur the, jo naa karna tha woh kar gaye
pichhe mud ke jo dekha jara, (apane haalat se darr gaye -2)
khudh ke baare me soche jo ham, apne aap se sharma gaye
jab yeh socha toh ghabara gaye, aa gaye ham kaha aa gaye

Zindagee kee talaash me ham, maut ke kitne paas aa gaye
www.youtube.com/watch?v=NT3wT4b1Xec

Kabir Doha (ಕಬೀರ ದೋಹ )

ಕಬೀರ ದೋಹ
ಸಜ್ಜನ ಮನುಷ್ಯ ಅವನೇ, ರಕ್ಷಾ ಕವಚದ ಹಾಗೆ ಇರುವನು!
ದುಃಖದಲ್ಲಿ ಮುಂದೆ ಇರುವನು , ಸುಖದಲಿ ಹಿಂದೆ ಅವನು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
सज्जन जन वही है जो, ढाल सरीखा होए |
दुःख में आगे रहे, सुख में पाछे होए ||

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...