Sunday, March 31, 2013

ಇನ್ನೂ ಅರಿಯಲಿಲ್ಲವಲ್ಲ ಹೇಗೆ ಎಂದು ?


ಇನ್ನೂ ಅರಿಯಲಿಲ್ಲವಲ್ಲ ಹೇಗೆ ಎಂದು ?
ಗೊತ್ತಿರಲಿಲ್ಲ ಅಗಲುವುದು ಅಂದರೆ ಇಷ್ಟು ಸುಲಭವೆಂದು
ಅರಿಯುವುದಿಲ್ಲ ಯಾಕೆ ನೀ ಮನಸ್ಸಿನಲ್ಲಿ ಉಳಿದೆಯೆಂದು

ಬಂಧ ಅಂದರೆ ಇದೆ ಇರಬೇಕು
ಇಲ್ಲಾದರೆ ಯಾಕೆ ಈ ಕಣ್ಣುಗಳು ಸುರಿಯಬೇಕು ?
ಒಟ್ಟು ಕೂಡಿ ಬಾಳುವನೆಂದವನು
ಯಾಕೆ ಹೀಗೆ ಕೂಡಲೇ ಕೈ ಬಿಟ್ಟು ಹೋಗಬೇಕು ?

ಒಮ್ಮೆ ತಿಳಿದಿದ್ದರೆ ಹೇಗೆ ಎಂದು ?

ಜೀವನ ಪಥ, ಯಾವುದು ಸರಿ ?

!!ಸಾಧಿಸುವ ಛಲವಿತ್ತು 
ಕನಸು ಹೆಣೆದು ಹೆಣೆದು 
ಈಗ ನನ್ನ ಧ್ಯೇಯ 
ಆ ಎಲ್ಲಾ ಕನಸನ್ನು 
ತನ್ನ ಪರಿಶ್ರಮದಿಂದ 
ಸಾಕಾರಗೊಳಿಸುವಲ್ಲಿ 
ನನ್ನ ಹೆಜ್ಜೆ ಸಾಗುತ್ತಿತ್ತು !!

!!ಸತ್ಯಕ್ಕೆ ಸಾವಿಲ್ಲವೆಂದು 
ಹೇಳಿದರು ಅಪ್ಪನವರು 
ನಡೆದೇ ಆ ಪಥದಲಿ
ವಿಶ್ವಾಸದಿಂದ
ಕಲ್ಲು ಮುಳ್ಳು ಎನ್ನದೆ
ಸಿಕ್ಕಿದು ಕೇವಲ
ಸೋಲು, ಅಪಯಶ, ಹತಾಶೆ. ನಿರಾಶೆ!!

!!ಯಶಸ್ಸಿನ ಅಂಬರಕ್ಕೆ
ಸೀಮೆ ಇಲ್ಲವೆಂದರು ಅಪ್ಪನವರು
ಆದರೆ ನನಗೆ ಯಶಸ್ಸು ಶಿಖರದಂತೆ
ಕಾಣುತ್ತಿತ್ತು
ಕುಗ್ಗಿದ ದೇಹದಲಿ ಶಕ್ತಿ ಎಲ್ಲಿ ಏರಲು
ಉತ್ಸಾಹ ಸಹ ಕುಂದಿತ್ತು
ಆಲಸ್ಯ ನೆತ್ತಿಗೆ ಏರಿ ಹೋಗಿತ್ತು!!

!!ಅಪ್ಪನ ಮಾತು ನಿರ್ಲಕ್ಷಿಸಿ
ಹೊಕ್ಕಿದೆ
ಖೋಟ ಜಗತ್ತಿನ ಜಗಮಗದಲಿ
ಎಲ್ಲವೂ ಸುಲಭ ಸುಲಭ
ಹಣ ನೀರಿನಂತೆ ಹರಿಯಿತು
ಐಶ್ವರ್ಯ ಸಂಪತ್ತಿನ ಮಳೆ ಸುರಿಯಿತು
ಅಂತಸ್ತು ಏರಿತು!!

!!ಆದರೆ ಅಪ್ಪ ಬರಲಿಲ್ಲ
ಮಗನ ಆಡಂಬರದ ಮೆರೆಯಲಿ
ನನ್ನ ಈ ರೂಪ
ಅವರ ಸೋಲಾಗಿತ್ತು
ಆದರೆ ಅಹಂ ಅಭಿಮಾನದಿಂದ
ನನ್ನ ಕಣ್ಣು ಕುರುಡಾಗಿತ್ತು
ನನ್ನಲ್ಲಿಯ ಮನುಷ್ಯ ಸತ್ತು ಹೋಗಿತ್ತು !!
by ಹರೀಶ್ ಶೆಟ್ಟಿ, ಶಿರ್ವ

ಕವಿ ಮೌನವಾದ

ಒಂದು 
ಕವಿ ಮೌನವಾದ 
ಕಾವ್ಯ ಲೋಕದಲಿ 
ಬೆಳಕು ಬೀರಿ 
ಅಸ್ತವಾದ 
:( :( :(

ನೀನು ಮುಂಗೋಪಿ ಎಂದು ಗೊತ್ತು ನನಗೆ 
ಆದರೆ ಹೀಗೆ ಹೇಳದೆ ಕೇಳದೆ ಮುನಿಸಿ ಬಿಟ್ಟು ಹೋಗುವೆ ಎಂದು ತಿಳಿದಿರಲಿಲ್ಲ :(

ಸಂಪಿಗೆಯ

ಸಂಪಿಗೆಯ
ಘಮ ಘಮ
ಪರಿಮಳ 
ನನ್ನವಳ 
ಕೂದಲಲಿ 
ನನ್ನ 
ಭಾಗ್ಯದಿಂದ 
ಸಂಪಿಗೆ 
ಹೂವೂ 
ಕೊರಗುತ್ತಿದೆ 
ಅಸೂಯೆಯಲಿ 
by ಹರೀಶ್ ಶೆಟ್ಟಿ, ಶಿರ್ವ

ಅದ್ಭುತ ನಯನ

ಅದ್ಭುತ 
ನಯನ 
ಅವಳ 
ನೋಡಿದಂತೆ 
ಆಗುವುದು
ನನ್ನ 
ಹೃದಯ 
ಶೀತಲ
by ಹರೀಶ್ ಶೆಟ್ಟಿ, ಶಿರ್ವ

Friday, March 29, 2013

ಬರುತ್ತಿದೆ ಚುನಾವಣೆ

ಬರುತ್ತಿದೆ ಚುನಾವಣೆ
ಮರೆಯದಿರಿ
ನಿಮ್ಮ ವೋಟಿಗೆ ನೀವೇ ಹೊಣೆ

ಬರುತ್ತಿದೆ ಚುನಾವಣೆ
ಮರೆಯದಿರಿ
ವಿಧಾನ ಸಭೆಯಲ್ಲಿ ನಡೆದ ಸೆಕ್ಸ್ ವೀಡಿಯೊ ಘಟನೆ

ಬರುತ್ತಿದೆ ಚುನಾವಣೆ
ಮರೆಯದಿರಿ
ರಾಜಕಾರಣಿಗಳ ವಿಕೃತ ಮನಸ್ಸಿನ ಚಿತ್ರನೆ

ಬರುತ್ತಿದೆ ಚುನಾವಣೆ
ಮರೆಯದಿರಿ
ಐದು ವರುಷದಲಿ ನಿಮ್ಮ ಆದ ಶೋಷಣೆ

ಬರುತ್ತಿದೆ ಚುನಾವಣೆ
ಮರೆಯದಿರಿ
ಭ್ರಷ್ಟಾಚಾರ, ದುರಾಚಾರದ ಶಾಸನೆ

ಬರುತ್ತಿದೆ ಚುನಾವಣೆ
ಮರೆಯದಿರಿ
ಅರಿಯಿರಿ ನಿಮ್ಮ ಅಮೂಲ್ಯ ಮತದ ಮಹತ್ವ, ಬೇಡ ಬೇರೆ ಚಿಂತನೆ

ಬರುತ್ತಿದೆ ಚುನಾವಣೆ
ಮರೆಯದಿರಿ ಎಲ್ಲವನ್ನೂ
ಪಾರ್ಟಿ ಅಲ್ಲ ಅಭ್ಯರ್ಥಿ ನೋಡಿ ಮತ ನೀಡುವಿರೆಂದು ಮಾಡಿ ಆಣೆ
by ಹರೀಶ್ ಶೆಟ್ಟಿ, ಶಿರ್ವ

ಹಿಂತಿರುಗಿ ಹೋಗು

ರೂಮಿ

ಹಿಂತಿರುಗಿ ಹೋಗು
ಹಿಂತಿರುಗಿ ಹೋಗು ನಿದ್ರಿಸಲು

ಹೌದು ,ನಿನಗೆ ನೀಡಲಾಗಿದೆ ಅನುಮತಿ
ನಿನ್ನ ಹೃದಯದಲಿ ಇಲ್ಲ ಪ್ರೀತಿ
ನೀನು ಹಿಂತಿರುಗಿ ಹೋಗಬಹುದು ನಿದ್ರಿಸಲು

ಪವಿತ್ರ ಪ್ರೇಮದ ಶಕ್ತಿ
ವಿಶಿಷ್ಟವಾಗಿ ಕೇವಲ ನಮಗೆ ಲಭ್ಯವಾಗಿದೆ
ನೀನು ಹಿಂತಿರುಗಿ ಹೋಗಬಹುದು ನಿದ್ರಿಸಲು

ನಾನು ಸುಟ್ಟು ಹೋಗಿದ್ದೇನೆ
ಈ ಪ್ರೀತಿಯ ಅಗ್ನಿಯಿಂದ
ನಿನ್ನ ಹೃದಯದಲಿ ಅಂತಹದು ಯಾವುದೇ ಹಂಬಲ ಇಲ್ಲ
ಹಿಂತಿರುಗಿ ಹೋಗು ನಿದ್ರಿಸಲು

ಪ್ರೀತಿಯ ಪಥಗಳ
ಎಪ್ಪತ್ತೆರಡು ಮಡಿಕೆ ಹಾಗು ಅಸಂಖ್ಯಾತ ಭಾಗಗಳಿವೆ
ನಿನ್ನ ಪ್ರೀತಿ ಮತ್ತು ಧರ್ಮ
ಎಲ್ಲಾ ವಂಚನೆ, ಆಡಳಿತೆ ಹಾಗು ಕಾಪಟ್ಯ ಹೊಂದಿವೆ

ನಾನು ನನ್ನ ಮಾತಿನ ನಿಲುವಂಗಿಯನ್ನು ತುಣುಕು ತುಣುಕು ಮಾಡಿದೆ
ಹಾಗು ತನ್ನ ಬಯಕೆಗಳಿಗೆ ಮಾತನಾಡಲು ಅವಕಾಶ ನೀಡಿದೆ
ನೀನು ಇನ್ನೂ ಬತ್ತಲೆಯಾಗದವನು
ನೀನು ಹಿಂತಿರುಗಿ ಹೋಗಬಹುದು ನಿದ್ರಿಸಲು
ಅನುವಾದ by ಹರೀಶ್ ಶೆಟ್ಟಿ, ಶಿರ್ವ
Rumi
“Go back,
go back to sleep.

Yes, you are allowed.
You who have no Love in your heart,
you can go back to sleep.

The power of Love
is exclusive to us,
you can go back to sleep.

I have been burnt
by the fire of Love.
You who have no such yearning in your heart,
go back to sleep.

The path of Love,
has seventy-two folds and countless facets.
Your love and religion
is all about deceit, control and hypocrisy,
go back to sleep.

I have torn to pieces my robe of speech,
and have let go of the desire to converse.
You who are not naked yet,
you can go back to sleep.”

ಕಳೆದಿದೆ ಆ ದಿನಗಳು

ಕಳೆದಿದೆ ಆ ದಿನಗಳು
ಈಗ ಅಲ್ಲಿ ಹೂವು ಅರಳುವುದಿಲ್ಲ
ಮೌನವಿದೆ ಅಲ್ಲಿ
ಶಾಂತತೆ ಪಸರಿದೆ
ಒಣಗಿದ ಮುಳ್ಳುಗಳು ಕೊನೆ ಉಸಿರೆಲೆಯುತ್ತಿದೆ

ಕಳೆದಿದೆ ಆ ದಿನಗಳು
ಹಾಡುವ ಭ್ರಮರ
ಈಗ ಅಲ್ಲಿ ಸುಳಿಯುವುದಿಲ್ಲ
ಒಮ್ಮೆ ಬಂದು ಗಾಯಗೊಂಡಿದೆ
ನಿಷ್ಕರುಣಿ ಮುಳ್ಳಿನ ಏಟಿನಿಂದ

ಕಳೆದಿದೆ ಆ ದಿನಗಳು
ಸದಾ ಚಿಲಿಪಿಲಿ ಎಂಬ ಸಂಗೀತ ನುಡಿಯುವ
ಹಕ್ಕಿಗಳು ಈಗ ಬರುವುದಿಲ್ಲ
ಸುತ್ತ ಮುತ್ತ ಹಬ್ಬಿದ ಪೊದೆಗಳಲ್ಲಿ
ಸಿಕ್ಕಿಕೊಳ್ಳುವ ಭಯದಿಂದ

ಕಳೆದಿದೆ ಆ ದಿನಗಳು
ಈಗ ಹಗಲಲ್ಲೂ
ಕತ್ತಲೆಯ ಸಾಮ್ರಾಜ್ಯ
ವಿಚಿತ್ರ ವಾತಾವರಣ
ಎಲ್ಲೆಡೆ ದುಃಖ ವೇದನೆಯ ಅನಾವರಣ
by ಹರೀಶ್ ಶೆಟ್ಟಿ, ಶಿರ್ವ

Thursday, March 28, 2013

ಒಂದು ಪ್ರೀತಿಯ ಗೀತೆ ಇದು

ಲತಾ -
!!ಒಂದು ಪ್ರೀತಿಯ ಗೀತೆ ಇದು 
ಅಲೆಗಳ ಪ್ರವಾಹ ಇದು -೨ 
ಜೀವನ ಬೇರೇನಲ್ಲ 
ನಿನ್ನ ನನ್ನ ಕಥೆ ಇದು!!-೨ 

ಲಾಲಾ ಲಾಲಾಲಾ ಲಾಲಾ ಲಾಲಾಲಾ 
!!ಕೆಲವೊಂದನ್ನು ಪಡೆದು ಕಳೆದುಕೊಳ್ಳುವುದು 
ಕೆಲವೊಂದನ್ನು ಕಳೆದು ಪಡೆಯುವುದು 
ಜೀವನ ಅಂದರೆ 
ಬರುವುದೋಗುವುದು
ಎರಡು ಕ್ಷಣದ ಜೀವನದಿಂದ
ಒಂದು ವಯಸ್ಸನ್ನು ಕದಿಯುವುದು !!

ಮುಕೇಶ್-
ಜೀವನ ಬೇರೇನಲ್ಲ
ನಿನ್ನ ನನ್ನ ಕಥೆ ಇದು


ಮುಕೇಶ್/ಲತಾ-
ಒಂದು ಪ್ರೀತಿಯ ಗೀತೆ ಇದು...

ಮುಕೇಶ್-
ನೀನು ಧಾರೆ ನದಿಗಳ 

ನಾನು ನಿನ್ನ ತಟವಾಗಿರುವೆ

ಲತಾ-
ನೀನು ನನ್ನ ಆಸರೆ 

ನಾನು ನಿನ್ನ ಆಸರೆಯಾಗಿರುವೆ
ಕಣ್ಣಲ್ಲಿ ಸಾಗರವಿದೆ 

ಬಯಕೆಗಳ ನೀರಿರುವುದು
ಜೀವನ ಬೇರೇನಲ್ಲ
ನಿನ್ನ ನನ್ನ ಕಥೆ ಇದು

ಮುಕೇಶ್/ಲತಾ-
ಒಂದು ಪ್ರೀತಿಯ ಗೀತೆ ಇದು...

ಮುಕೇಶ್-
ಬಿರುಗಾಳಿ ಬರಲಿದೆ

ಬಂದು ಹೋಗಲಿದೆ
ಮುಗಿಲು ಕೆಲವು ಕ್ಷಣದ 

ಹರಡಿಕೊಂಡು ಮಾಯವಾಗಲಿದೆ
ಉಳಿಯುವುದು ನೆರಳು 

ಗುರುತು ಉಳಿಯುವುದು
ಜೀವನ ಬೇರೇನಲ್ಲ
ನಿನ್ನ ನನ್ನ ಕಥೆ ಇದು
ಒಂದು ಪ್ರೀತಿಯ ಗೀತೆ ಇದು...

ಮೂಲ :ಸಂತೋಷ್ ಆನಂದ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು :ಮುಕೇಶ್/ಲತಾ ಮಂಗೇಶ್ಕರ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೇಲಾಲ್
ಚಿತ್ರ :ಶೋರ್

--FEMALE--
Mm Mm Mm, Mm Mm Mm Mm
Mm Mm Mm Mm Mm Mm, Mm Mm Mm Mm, Mm Mm Mm Mm
Ek Pyar Ka Nagma Hai, Maujon Ki Ravaani Hai - 2
Zindagi Aur Kuch Bhi Nahin
Teri Meri Kahaani Hai
Ek Pyar Ka Nagma Hai, Maujon Ki Ravaani Hai
Zindagi Aur Kuch Bhi Nahin
Teri Meri Kahaani Hai
Ek Pyar Ka Nagma Hai
La La La La La La, La La La La La La
Kuch Paakar Khona Hai, Kuch Khokar Paana Hai
Jeevan Ka Matlab To Aana Aur Jaana Hai
Do Pal Ke Jeevan Se Ek Umr Churaani Hai

--MALE--
Zindagi Aur Kuch Bhi Nahin
Teri Meri Kahaani Hai

--BOTH--
Ek Pyar Ka Nagma Hai

--MALE--
Tu Dhaar Hai Nadiya Ki, Main Tera Kinaara Hoon

--FEMALE--
Tu Mera Sahaara Hai, Main Tera Sahaara Hoon
Aankhon Mein Samandar Hai, Aashaaon Ka Paani Hai
Zindagi Aur Kuch Bhi Nahin
Teri Meri Kahaani Hai

--BOTH--
Ek Pyar Ka Nagma Hai

--MALE--
Toofaan To Aana Hai, Aakar Chale Jaana Hai
Baadal Hai Yeh Kuch Pal Ka, Chhaakar Dhal Jaana Hai
Parchhaaniyan Reh Jaati, Reh Jaati Nishaani Hai
Zindagi Aur Kuch Bhi Nahin
Teri Meri Kahaani Hai
Ek Pyar Ka Nagma Hai, Maujon Ki Ravaani Hai
Zindagi Aur Kuch Bhi Nahin
Teri Meri Kahaani Hai
Ek Pyar Ka Nagma Hai
http://www.youtube.com/watch?v=qdJabkWQIg0

ಹೆದರಿಕೆ ಓಡಿಸು

Rumi
Challenge Fear
"Run from what’s comfortable. 
Forget safety. 
Live where you fear to live. 
Destroy your reputation. 
Be notorious."
ರೂಮಿ 
ಹೆದರಿಕೆ ಓಡಿಸು 
"ಆರಾಮದಾಯಕ ಇದ್ದಲ್ಲಿ ನಿಲ್ಲದಿರು.
ಸುರಕ್ಷೆ ಮರೆತುಬಿಡು.
ಎಲ್ಲಿರಲು ಭಯ ಪಡುವೆ ನೀನು ಅಲ್ಲೇ ವಾಸಿಸು.
ನಿನ್ನ ಪ್ರಸಿದ್ಧಿಯನ್ನು ನಾಶಗೊಳಿಸು.
ಕುಖ್ಯಾತನಾಗು."

ಅನುವಾದ : ಹರೀಶ್ ಶೆಟ್ಟಿ, ಶಿರ್ವ 

ಪ್ರಾರ್ಥನೆ

Rumi
When I am with you, everything is prayer.
ರೂಮಿ 
ನಾನು ನಿನ್ನೊಂದಿಗೆ ಇರುವಾಗ ,ಎಲ್ಲವೂ ಪ್ರಾರ್ಥನೆ .
 ಅನುವಾದ : ಹರೀಶ್ ಶೆಟ್ಟಿ, ಶಿರ್ವ 

ಇದು ಯಾವುದು ಎಲೆ ಬಿತ್ತು ಶಾಖೆಯಿಂದ ?

ಇದು ಯಾವುದು ಎಲೆ ಬಿತ್ತು ಶಾಖೆಯಿಂದ ?
ಇದರ ಬಣ್ಣ ಯಾವುದು ?
ಇದರ ಜಾತಿ ಯಾವುದು ?
ಇದರ ಗಮ್ಯ ಯಾವುದು ?
ಇದರ ಧ್ಯೇಯ ಏನು ?
ಇದರ ಗತಿ ಏನು ?
ಯಾಕೆ ಈ ಎಲ್ಲ ಪ್ರಶ್ನೆಗಳು?
ನಾಲ್ಕು ದಿನದ ಆಟ ಜೀವನ
ರಂಗು ರಂಗಿನ ನೋಟ ಜೀವನ
ಪ್ರೀತಿ ,ಆತ್ಮೀಯತೆಯ ಪಾಠ ಜೀವನ 
ಪ್ರೀತಿ ನೀಡಿದರೆ ಪ್ರೀತಿ ಸಿಗುವುದು
ಇದೇ ವಹಿವಾಟು ಬದುಕಿನ
by ಹರೀಶ್ ಶೆಟ್ಟಿ, ಶಿರ್ವ

Tuesday, March 26, 2013

ಹೋಳಿ


ಹೋಳಿ
_______
ಅವನು ಮುಸ್ಲಿಂ.
ಯಾವುದೇ ಮಾತಿಗೆ ಅವನ ಹಾಗು
ಅವನ ಹಿಂದೂ ಮಿತ್ರನ ಮಧ್ಯೆ ಜಗಳವಾಯಿತು.
ಹಲವು ದಿನದಿಂದ ಇಬ್ಬರ ಮಧ್ಯದಲ್ಲಿ ಮಾತು ಇರಲಿಲ್ಲ.
ಹೋಳಿಯ ಹಬ್ಬದ ದಿನ ಅವನು ಕೈಯಲ್ಲಿ
ರಂಗು ಹಿಡಿದು ಹಿಂದೂ ಮಿತ್ರನ ಮನೆಗೆ ಬಂದ.
ಒಬ್ಬರಿಗೊಬ್ಬರು ರಂಗು ಹಚ್ಚಿದರು .
ಇಬ್ಬರ ಕಣ್ಣಲ್ಲಿ ಕಣ್ಣೀರು ಇತ್ತು.
_____________
ಅವನು ಕೋಪಿಷ್ಠನೆಂದು ಪ್ರಸಿದ್ದ.
ಅವನ ಸ್ವಭಾವ ಅರಿತು
ಅವನ ಮನೆಯ ಕಡೆ ಯಾರೂ ಸುಳಿಯುತ್ತಿರಲಿಲ್ಲ.
ಏನೋ ಕೆಲಸದಿಂದ ಹೋಳಿಯ ದಿವಸ
ಮನೆಯಿಂದ ಹೊರ ಬಂದ.
ಹೋಳಿ ಆಡುವ ಮಕ್ಕಳಲ್ಲಿ
ಯಾರು ಅವನ ಸುದ್ದಿಗೆ ಹೋಗಲಿಲ್ಲ.
ಆಗ ಅವನ ಮೇಲೆ ಬಣ್ಣ ತುಂಬಿದ ಬಲೂನು ಬಂದು ಬಿತ್ತು.
ಕೋಪದಿಂದ ಹಿಂತಿರುಗಿ ನೋಡಿದ.
ಪುಟ್ಟ ಬಾಲಕನೊಬ್ಬ ಚಪ್ಪಾಳೆ ತಟ್ಟುತ್ತಿದ್ದ.
ಮನ ಕರಗಿತು ಅವನ
ಬಾಲಕನ ಮುದ್ದು ನಗು ಬಣ್ಣದಲಿ.
______________

ಎಷ್ಟೋ ವರುಷದ
ಅವನ ನಿಯಮ
ಹೋಳಿಯ ದಿವಸ
ಮನೆ ಮನೆಗೆ ಹೋಗಿ
ಮನೆಯವರೆಲ್ಲರ ಹಣೆಗೆ ಬಣ್ಣದ ತಿಲಕ ಹಚ್ಚುವುದು
ಹಾಗು ಶಾಂತಿಯಿಂದ ನಗು ಬೀರಿ ಹೋಗುವುದು.
ಆದರೆ ಈ ಹೋಳಿಯಲಿ ಅವನ ಸುಳಿವಿಲ್ಲ.
ಆಗ ಯಾರೋ ಬಂದು ಹೇಳಿದರು
ಅನ್ಯರ ಜೀವನದಲ್ಲಿ ರಂಗು ಬೀರುವವನು ಇನ್ನಿಲ್ಲವೆಂದು.
by ಹರೀಶ್ ಶೆಟ್ಟಿ, ಶಿರ್ವ

ಬಾ ಹಚ್ಚುವ ಬಣ್ಣವನ್ನು

!!ಬಾ ಹಚ್ಚುವ ಬಣ್ಣವನ್ನು 
ನೀನು ನನಗೆ 
ನಾನು ನಿನಗೆ 
ಎಲ್ಲ ಕಹಿಯನ್ನು ತೊರೆದು 
ಹಚ್ಚುವ ಪ್ರೀತಿ ಪ್ರೇಮದ ಬಣ್ಣವನ್ನು !!
ಬಾ ಹಚ್ಚುವ ಬಣ್ಣವನ್ನು ....

!!ಬಾ ಮರೆತು ಬಿಡುವ ಇಂದು 
ನಮ್ಮಲ್ಲಿದ್ದ ಭಿನ್ನಾಭಿಪ್ರಾಯಗಳನ್ನು 
ಬಾ ಈ ಬಣ್ಣದಿಂದ 
ಮುಚ್ಚಿ ಬಿಡುವ ನಮ್ಮ ಅಹಂ, ಅಭಿಮಾನವನ್ನು
ಇಡುವ ಹೊಸ ಬಣ್ಣದ ಹೆಜ್ಜೆ
ಸಿಂಗಾರಿಸುವ ನಮ್ಮ ಹೊಸ ಬಾಳನ್ನು!!
ಬಾ ಹಚ್ಚುವ ಬಣ್ಣವನ್ನು.....

!!ಬಾ ದಹನ ಮಾಡುವ ಇಂದು
ನಮ್ಮಲ್ಲಿದ ಭೇದ ಭಾವಗಳನ್ನು
ಬಾ ರಂಗು ರಂಗಿನ ಈ ಬಣ್ಣದಿಂದ
ಮಧುರ ಮಾಡುವ ನಮ್ಮ ಸಂಬಂಧವನ್ನು
ನೋಡುವ ಹೊಸ ಬಣ್ಣ ಬಣ್ಣದ ಕನಸನ್ನು
ಜೀವನದಲಿ ಹಂಚುತಿರುವ ಪ್ರೀತಿಯನ್ನು !!
ಬಾ ಹಚ್ಚುವ ಬಣ್ಣವನ್ನು.....
by ಹರೀಶ್ ಶೆಟ್ಟಿ, ಶಿರ್ವ

ಕರಗುವ ಮಂಜಾಗು

Rumi
Be melting snow. Wash yourself of yourself.
ರೂಮಿ
ಕರಗುವ ಮಂಜಾಗು, ನಿನ್ನಲ್ಲಿದ್ದ ನಿನ್ನನ್ನು ತೊಳೆದುಕೊಳ್ಳು.
ಅನುವಾದ : ಹರೀಶ್ ಶೆಟ್ಟಿ,ಶಿರ್ವ 

ಅರ್ಧಾಂಗಿ

!!ತುಟಿಯಲಿ ನಗು 
ಮನಸ್ಸು ನಿರ್ಮಲ 
ಕಣ್ಣಲ್ಲಿ ನನಗಾಗಿ ಕನಸು 
ಇದೇ ಅವಳ ಭಂಗಿ 
ಜೊತೆಗಾತಿ, ನನ್ನ ಅರ್ಧಾಂಗಿ !!

!!ಪ್ರೇಮ ಅಪಾರ 
ಹೊತ್ತು ಕುಟುಂಬದ ಭಾರ
ಅವಳಿಂದ ಜೀವನ ನನ್ನ ಸೊಗಸು
ಅವಳಿಲ್ಲದೆ ನಾನು ಏಕಾಂಗಿ
ತ್ಯಾಗಮಯಿ, ನನ್ನ ಅರ್ಧಾಂಗಿ !!

!!ಸಹನಶೀಲೆ
ಗೃಹ ಕಾರ್ಯ ನಿಪುಣಿ
ಅವಳಿಂದಲೇ ಸಾಗುತ್ತಿದೆ ಜೀವನದ ದೋಣಿ
ಅವಳಿಂದ ನನ್ನ ಬದುಕು ಮಧುರ ಸಾರಂಗಿ
ಜೀವನ ಸಂಗಾತಿ, ನನ್ನ ಅರ್ಧಾಂಗಿ !!
by ಹರೀಶ್ ಶೆಟ್ಟಿ, ಶಿರ್ವ

Monday, March 25, 2013

ನೋಡಿದೆ ಜಗದ ಮೋಹಗಳನ್ನೆಲ್ಲ


!!ನೋಡಿದೆ ಜಗದ ಮೋಹಗಳನ್ನೆಲ್ಲ
ದೂರವಾದರು
ದೂರವಾದರು ಒಂದೊಂದಾಗಿ ಎಲ್ಲ!!

!!ಏನು ಪಡೆದು ಸಿಗುವುದು
ಈ ಜಗತ್ತಿಂದ,
ಕಣ್ಣೀರಲ್ಲದೆ ಬೇರೇನೂ ಬಳಿಯಿಲ್ಲ
ಅದೆಷ್ಟೋ ಹೂಗಳಿತ್ತು ಬಳಿಯಲ್ಲಿ
ಆದರೆ ಈಗ ಮುಳ್ಳುಗಳ ಆಸೆಯೂ ಇಲ್ಲ
ಸ್ವಾರ್ಥದ ಜಗವೆಲ್ಲ !!
ದೂರವಾದರು
ದೂರವಾದರು ಒಂದೊಂದಾಗಿ ಎಲ್ಲ

!!ಸಮಯ ಸುಗಮವಾಗಿದೆ
ಬಯಕೆ ಯೌವನದಲ್ಲಿದೆ
ನಾಳೆಯ ಯೋಚನೆ ಮಾಡಲೆಂದು
ಇಷ್ಟು ಅವಕಾಶ ಎಲ್ಲಿದೆ !!

!!ಹೀಗೆಯೇ ಈ ಪ್ರಯಾಣ ಸಾಗಲಿ
ಬಣ್ಣ ಬಿರುಸಾಗಲಿ
ರೂಪ ಪ್ರದರ್ಶಿಸಲಿ
ಶರಾಬು ಗ್ಲಾಸು ಬದಲಾಗುತ್ತಿರಲಿ !!

!!ರಾತ್ರಿ ತನಕ ಅತಿಥಿ
ಈ ಮೋಜುಗಳೆಲ್ಲ
ರಾತ್ರಿ ಕಳೆದ ನಂತರ
ಈ ಖುಷಿ ಎಲ್ಲಿ
ಕ್ಷಣದ ಖುಷಿ ಈ ಎಲ್ಲ
ಏರ ತೊಡಗಿತು ತಳಮಳ
ಏರ ತೊಡಗಿತು ತಳಮಳ!!
ನೋಡಿದೆ ಜಗದ ಮೋಹಗಳನ್ನೆಲ್ಲ
ದೂರವಾದರು
ದೂರವಾದರು ಒಂದೊಂದಾಗಿ ಎಲ್ಲ

!!ಹಾರು ಹಾರು ದಾಹದಲ್ಲಿದ್ದ ಭ್ರಮರ
ರಸ ಸಿಗಲಿಕ್ಕಿಲ್ಲ ಕಾರಲ್ಲಿ
ಕಾಗದದ ಹೂವು ಎಲ್ಲಿ ಅರಳುವುದೋ
ಕುಳಿತುಕೊಳ್ಳಬೇಡ ಅಂಥ ಹೂದೋಟದಲಿ
ಮುದ್ದು ಇಚ್ಛೆ ಮರಳಲ್ಲಿ
ನಿರೀಕ್ಷೆಯ ದೋಣಿ ಹಾಯಿಸುತ್ತದೆ
ಒಂದು ಕೈಯಿಂದ ನೀಡುತ್ತದೆ ಪ್ರಪಂಚ
ನೂರು ಕೈಯಿಂದ ಕಸಿದು ಕೊಳ್ಳುತ್ತದೆ
ಸತತ ನಡೆಯುತ್ತಿದೆ ಈ ಆಟಗಳೆಲ್ಲ !!
ದೂರವಾದರು
ದೂರವಾದರು ಒಂದೊಂದಾಗಿ ಎಲ್ಲ

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಎಸ್ .ಡೀ.ಬರ್ಮನ್
ಚಿತ್ರ :ಕಾಗಜ್ ಕೆ ಫೂಲ್
are dekhi zamaane ki yaari
bichhade sabhee, bichhade sabhi baari baari
kya le ke milen ab duniya se, aansu ke siva kuch paas nahi
ya phul hi phul the daaman men, ya kaanton ki bhi aas nahi
matalab ki duniya hai saari
bichhade sabhee, bichhade sabhi baari baari

vaqt hai maharabaan, aarazu hai javaan
fikr kal ki karen, itani fursat kahaan

daur ye chalata rahe rang uchhalata rahe
roop machalata rahe, jaam badalata rahe

raat bhar mahamaan hain bahaaren yahaan
raat gar dhal gayi phir ye khushiyaan kahaan
pal bhar ki khushiyaan hain saari
badhane lagi beqaraari badhane lagi beqaraari
are dekhi zamaane ki yaari
bichhade sabhee, bichhade sabhi baari baari

ud ja ud ja pyaase bhanvare, ras na milega kaaron mein
kaagaz ke phul jahaan khilate hain, baith na un gulazaaro mein
naadan tamanna reti men, ummid ki kashti kheti hai
ik haath se deti hai duniyaa, sau haathon se leti hai
ye khel hai kab se jaari
bichhade sabhee, bichhade sabhi baari baari

www.youtube.com/watch?v=bel9oKzrR2I

ಬೆಳಕು

Rumi
“The wound is the place where the Light enters you.” 
ರೂಮಿ 
"ಗಾಯ ಇರುವ ಸ್ಥಾನದಿಂದಲೇ ನಿಮ್ಮಲ್ಲಿ ಬೆಳಕು ಪ್ರವೇಶಿಸುತ್ತದೆ".
ಅನುವಾದ :ಹರೀಶ್ ಶೆಟ್ಟಿ,ಶಿರ್ವ 

ಕಸದ ಬುಟ್ಟಿ ಮತ್ತು ಕವಿ

ಗೆಳತಿ 
ಕಸದ ಬುಟ್ಟಿ ಮತ್ತು ಕವಿ 
ಇವರ 
ಆತ್ಮಿಯ ಸಂಬಂಧ 
ಯಾಕೆಂದರೆ
ಕವಿಯ ರದ್ದಾದ ಕಾವ್ಯ 
ಹೆಚ್ಚಾಗಿ ಸೇರುವುದು 
ಕಸದ ಬುಟ್ಟಿಗೆ
ಆದುದರಿಂದ 
ಕವಿಯ ಕಾವ್ಯಗಳೆಲ್ಲ 
ಕಸವೆನ್ನುವವರ ತಪ್ಪೇನಿಲ್ಲ
ಯಾಕೆಂದರೆ
ಅದರ
ಹೆಚ್ಚಿನ ಅನುಭವ
ಕಸದ ಬುಟ್ಟಿಗೆ
by ಹರೀಶ್ ಶೆಟ್ಟಿ,ಶಿರ್ವ

ಪ್ರೀತಿಯ ನಶೆ

ಗೆಳತಿ 
ನಿನ್ನ ಪ್ರೀತಿಯ 
ನಶೆ ಅನುಭವಿಸಿದ 
ನನಗೆ 
ಇಂದು ಈ ಶರಾಬು 
ನಶೆ ನೀಡುವುದಿಲ್ಲ 
by ಹರೀಶ್ ಶೆಟ್ಟಿ,ಶಿರ್ವ

ಉಪೇಕ್ಷೆ

ಉಪೇಕ್ಷೆ 
_________
ಯಾಕೋ ಅಸಮಧಾನ 
ಚಿಗುರಿದ ಸಸಿಗೆ 
ಸುತ್ತ ಮುತ್ತ ಇದ್ದ 
ಬೃಹತ್ ಮರಗಳು ಅದನ್ನು ನಿರ್ಲಕ್ಷಿಸಿದಕ್ಕೆ 
by ಹರೀಶ್ ಶೆಟ್ಟಿ, ಶಿರ್ವ

ಬಲವಾದ ಹಗ್ಗ

Rumi
“Why should I stay at the bottom of a well, when a strong rope is in my hand?”
ರೂಮಿ 
"ಯಾಕೆ ನಾನು ಬಾವಿಯ ತಳದಲ್ಲಿ ಇರಬೇಕು, ನನ್ನ ಕೈಯಲ್ಲಿ ಬಲವಾದ ಹಗ್ಗ ಇರುವಾಗ?"
ಅನುವಾದ : ಹರೀಶ್ ಶೆಟ್ಟಿ,ಶಿರ್ವ 

Saturday, March 23, 2013

ಒಂದೇ ಹೃದಯದು ಕೇಳಿ ಜಗದವರೇ

!!ಒಂದೇ ಹೃದಯದು ಕೇಳಿ ಜಗದವರೇ 
ಇಲ್ಲದಿದ್ದರೆ ನನಗೆ ಈಗ ಮೌನವಿರಲು ಕೊಡಿ  
ನಾನು ದುಃಖವನ್ನು ಸುಖ ಹೇಗೆ ಹೇಳಲಿ 
ಯಾರು ಹೇಳುವರೋ ಅವರಿಗೆ ಹೇಳಲು ಕೊಡಿ!! 
ಒಂದೇ ಹೃದಯದು ಕೇಳಿ ಜಗದವರೇ....

!!ಈ ಹೂವು ಹೂದೋಟದಲಿ ಹೇಗೆ ಅರಳಿತು 
ಮಾಲಿಯ ದೃಷ್ಟಿಯಲಿ ಪ್ರೀತಿ ಇಲ್ಲ 
ನಗುನಗುತ ಏನೇನನ್ನು ನೋಡಿದೆ  
ಈಗ ಹರಿಯುತ್ತಿದೆ ಕಣ್ಣೀರು ಹರಿಯಲು ಬಿಡಿ  !!
ಒಂದೇ ಹೃದಯದು ಕೇಳಿ ಜಗದವರೇ..... 

!!ಒಂದು ಕನಸು ಖುಷಿಯ ಕಾಣಲಿಲ್ಲ 
ಕಂಡಿದ್ದನ್ನು ಮರೆತು ಹೋಗಿರುವೆ 
ಕೇಳಿದನ್ನು ನಿಮಗೆ ನೀಡಲಾಗಲಿಲ್ಲ 
ನೀವು ನೀಡಿದನ್ನು ಸಹಿಸಲು ಕೊಡಿ !!
ಒಂದೇ ಹೃದಯದು ಕೇಳಿ ಜಗದವರೇ.....

ಯಾರೇನು ವೇದನೆ ತೆಗೆದು ಕೊಳ್ಳುವರು 
ಇಷ್ಟು ವೇದನೆ ಯಾರಲ್ಲೂ ಇಲ್ಲ 
ಹರಿಯುವ ಕಣ್ಣೀರು ಇನ್ನೂ ಹರಿಯಲಿ 
ಈಗ ಇಂತಹ ಸಾಂತ್ವನೆ ಇರಲಿ ಬಿಡಿ  !!
ಒಂದೇ ಹೃದಯದು ಕೇಳಿ ಜಗದವರೇ..... 

ಮೂಲ : ಕೈಫಿ ಆಜ್ಮಿ 
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
ಹಾಡಿದವರು/ಸಂಗೀತ : ಹೇಮಂತ್ ಕುಮಾರ್ 
ಚಿತ್ರ : ಅನುಪಮ 
yaa dil kee suno dooniyawalo, yaa muz ko abhi chup rehne do
mai gham ko khushi kaise keh du, jo kehte hain unako kehne do

yeh phul chaman me kaisa khila, mali ki najar me pyar nahee
hasate huye kya kya dekh liya, abb behte hain aansu behne do

ek khwab khushi kaa dekha nahee, dekha jo kabhee toh bhul gaye
manga huwa tum kuchh de naa sake, jo tumne diya woh sehne do

kya dard kisi kaa lega koyi, itna toh kisi me dard nahee
behte huye aansu aur bahen, abb aisi tasalli rehne do
www.youtube.com/watch?v=poXBa76JNKk

ಅಹಂ ಎಂಬ ಸಂಕೋಲೆ

ಗೆಳತಿ ...
ಪ್ರೀತಿಯಲಿ 
ಸೋಲುವುದರಿಂದ 
ಅಸೀಮ ಖುಷಿ ಸಿಗುತ್ತದೆಯೆಂದು 
ಹೇಳುವರೆಲ್ಲರೂ 
ಆದರೆ ನಮ್ಮಲ್ಲಿ ಸೋಲನ್ನು ಒಪ್ಪದ ಈ ಹಠ ಯಾಕೆ ?
ನಮ್ಮಲ್ಲಿ ಪ್ರೀತಿ ಇದ್ದು ಈ ಅಹಂ ಎಂಬ ಸಂಕೋಲೆ ಯಾಕೆ ?
by ಹರೀಶ್ ಶೆಟ್ಟಿ, ಶಿರ್ವ

ಕೆಲವು ಬಂಧಗಳು

ಗೆಳತಿ ...
ಕೆಲವು ಬಂಧಗಳು ಹೀಗೆಯೇ 
ಪ್ರೀತಿ ಮಾಡುವವರು 
ಕರ್ತವ್ಯ ಪಾಲಿಸುವವರು 
ಅದನ್ನು 
ವ್ಯಕ್ತಪಡಿಸುವುದಿಲ್ಲ 
by ಹರೀಶ್ ಶೆಟ್ಟಿ, ಶಿರ್ವ
(ಒಂದು ಹಿಂದಿ ಜಾಹೀರಾತು ಪ್ರೇರಿತವಾಗಿ ಬರೆದದ್ದು )

ಹುರುಪು

Rumi
Passion makes the old medicine new:
Passion lops off the bough of weariness.
Passion is the elixir that renews:
how can there be weariness
when passion is present?
Oh, don't sigh heavily from fatigue:
seek passion, seek passion, seek passion 
ರೂಮಿ 
ಹುರುಪು ಹಳೆ ಔಷದಿಯನ್ನು ಹೊಸತಾಗಿ ಮಾಡುವುದು. 
ಹುರುಪು ಆಲಸ್ಯದ ಶಾಖೆಯನ್ನು ಕಡಿದು ಹಾಕುವುದು.
ಹುರುಪು ಸಂಜೀವನಿ, ಶುದ್ಧಗೊಳಿಸುವುದು
ಹೇಗೆ ಇಲ್ಲಿ ಆಲಸ್ಯ ಉಳಿಯುವುದು
ಹುರುಪು ಇರುವಾಗ ?
ಒಹ್, ಆಯಾಸಗೊಂಡು ಬಹಳವಾಗಿ ನಿಟ್ಟುಸಿರು ತೆಗೆದುಕೊಳ್ಳದಿರು
ಹುರುಪು ಅರಸು , ಹುರುಪು ಅರಸು , ಹುರುಪು ಅರಸು
ಅನುವಾದ : ಹರೀಶ್ ಶೆಟ್ಟಿ, ಶಿರ್ವ

Thursday, March 21, 2013

ಜೀವನ ನೀಡಿದವನೆ ಕೇಳು


!!ಜೀವನ ನೀಡಿದವನೆ ಕೇಳು
ನಿನ್ನ ಜಗದಿಂದ ಸಾಕಾಗಿದೆ
ನಾನಿಲ್ಲಿ ಬದುಕಿದ್ದೂ ಸತ್ತಂತಾಗಿದೆ!!
ಜೀವನ ನೀಡಿದವನೆ ಕೇಳು....

!!ರಾತ್ರಿ ಸರಿಯುವುದಿಲ್ಲ
ಹಗಲು ಕಳೆಯುವುದಿಲ್ಲ
ಗಾಯ ಹೀಗೆ ಕೊಟ್ಟೆರುವೆ
ಅಂದರೆ ವಾಸಿ ಆಗುವುದಿಲ್ಲ
ಕಣ್ಣು ಬರಿದಾಗಿದೆ
ಹೃದಯ ನೋವಲ್ಲಿದೆ
ದುಃಖ ಏರುತ್ತಿದೆ
ಯಾರೋ ಜಾದೂ ಮಾಡಿದಂತಾಗಿದೆ !!
ಜೀವನ ನೀಡಿದವನೆ ಕೇಳು....

!!ದೋಷವಿಲ್ಲದೆ ನನ್ನಿಂದ
ನೀನು ಖುಷಿ ಕಸಿದುಕೊಂಡೆ
ಜೀವದಲ್ಲಿಟ್ಟೆ ಆದರೆ
ಜೀವನ ಕಸಿದುಕೊಂಡೆ
ಮಾಡಿದೆ ಹತ್ಯೆ ಹೃದಯದು
ಯಾವಾಗ ತನಕ ಸುಮ್ಮನಿರುವುದು,
ನೇರ ಯಾಕೆ ಹೇಳಬಾರದು
ನೀನು ನನ್ನ ಸುಖದಿಂದ ಅಸೂಯೆ ಪಟ್ಟಿರುವೆ!!
ಜೀವನ ನೀಡಿದವನೆ ಕೇಳು....

ಮೂಲ :ಶಕೀಲ್ ಬದಯೂನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ತಲತ್ ಮೆಹಮೂದ್
ಸಂಗೀತ : ಗುಲಾಮ್ ಮೊಹಮ್ಮದ್
ಚಿತ್ರ : ದಿಲ್  ಯೆ ನಾದಾನ್

Zi.Ndagii Dene Vaale Sun
Terii Duniyaa Se Dil Bhar Gayaa
Mai.N Yahaa.N Jiite Jii Mar Gayaa

Raat Katatii Nahii.N Din Guzarataa Nahii.N
Zakm Aisaa Diyaa Hai Ke Bharataa Nahii.N
Aa.Nkh Viiraan Hai, Dil Pareshaan Hai, Gam Kaa Saamaan Hai
Jaise Jaaduu Koi Kar Gayaa
Zi.Ndagii Dene Vaale Sun...

Bekataa Tuune Mujh Se Khushii Chhiin Lii
Zi.Ndaa Rakhaa Magar Zi.Ndagii Chhiin Lii
Kar Diyaa Dil Kaa Khuu.N, Chup Kahaa.N Tak Rahuu.N, Saaf Kyuu.N Naa Kahuu.N
Tuu Khushii Se Merii Jal Gayaa
Zi.Ndagii Dene Vaale Sun...
http://www.youtube.com/watch?v=AE0ViVMEJMg

ಮೂಕ ರೀತಿ

Rumi
“I closed my mouth and spoke to you in a hundred silent ways.” 
ರೂಮಿ 
"ನಾನು ನನ್ನ ಬಾಯಿ ಮುಚ್ಚಿ ನಿನ್ನಿಂದ ನೂರು ಮೂಕ ರೀತಿಯಲ್ಲಿ ಮಾತನಾಡಿದೆ."
ಅನುವಾದ : ಹರೀಶ್ ಶೆಟ್ಟಿ,ಶಿರ್ವ 

Wednesday, March 20, 2013

ಅಮೃತ ಪ್ರೀತಮ್ ಅವರ ಒಂದು ಸಂಸ್ಮರಣೆ

ಅಮೃತ ಪ್ರೀತಮ್ ಅವರ ಒಂದು ಸಂಸ್ಮರಣೆ, ಕನ್ನಡದಲ್ಲಿ ನಿಮಗಾಗಿ ಅನುವಾದಿಸಿದೆ.
__________________________________________________

ಅವಾಗ ನನ್ನ ವಯಸ್ಸು ೧೧ ಇರಬೇಕು . ಇದ್ದಕ್ಕಿದಂತೆ ನನ್ನ ಅಮ್ಮನ ಅರೋಗ್ಯ ಕೆಟ್ಟಿತು. ಅರೋಗ್ಯ ಸರಿ ಇಲ್ಲದೆ ಒಂದು ವಾರ ಆಗಿರಬೇಕು, ಆಗ ನಾನು ನೋಡಿದೆ ಅಮ್ಮನ ಹಾಸಿಗೆಯ ಬದಿಯಲ್ಲಿ ಕುಳಿತವರೆಲ್ಲ ಭಯಭೀತರಾಗಿದ್ದರು.

"ನನ್ನ ಬಿನ್ನ (ಅಮೃತ ಪ್ರೀತಂ ಅವರ ಮನೆ ಹೆಸರು ) ಎಲ್ಲಿ ?"ಎಂದು ನನ್ನ ಅಮ್ಮ ಕೇಳಿದರಂತೆ , ನನ್ನ ಅಮ್ಮನ ಗೆಳತಿ ನನ್ನ ಬಳಿ ಬಂದು ನನ್ನ ಕೈ ಹಿಡಿದು ಅಮ್ಮನ ಬಳಿ ತಂದಳು, ಆದರೆ ಅಮ್ಮನವರು ಎಲ್ಲಿ ಪ್ರಜ್ನೆಯಲ್ಲಿದ್ದರು.

ನನ್ನ ಅಮ್ಮನ ಗೆಳತಿ ನನಗೆ " ನೀನು ದೇವರಿಂದ ಅಮ್ಮಗೊಸ್ಕರ ಪ್ರಾರ್ಥಿಸು, ಯಾರಿಗೊತ್ತು ಅವರ ಮನಸ್ಸಲ್ಲಿ ದಯೆ ಹುಟ್ಟಿದರೆ ,ದೇವರು ಮಕ್ಕಳ ಮಾತನ್ನು ಕೇಳುತ್ತಾನೆ, ತಪ್ಪುವುದಿಲ್ಲ"ಎಂದು ಹೇಳಿದಳು .

ನಾನು ಹಾಸಿಗೆಯ ಬಳಿ ನಿಂತು ಕಲ್ಲಿನಂತೆ ಆದೆ. ನಾನು ನನ್ನ ಸಣ್ಣ ವಯಸ್ಸಿನಿಂದಲೇ ದೇವರನ್ನು ಪ್ರಾರ್ಥಿಸುತ್ತಿದ್ದೆ ಹಾಗು ಈಗ ಒಂದು ಬೇಡಿಕೆ ಸಹ ಇತ್ತು, ನಾನು ಎಷ್ಟೋ ಗಂಟೆ ಕಣ್ಣು ಮುಚ್ಚಿ ದೇವರ ಧ್ಯಾನದಲ್ಲಿ ಕುಳಿತೆ ಹಾಗು ದೇವರಿಗೆ ಹೇಳಿದೆ " ದೇವರೇ ನನ್ನ ಅಮ್ಮನನ್ನು ಕೊಲ್ಲಬೇಡ ".

ಅಮ್ಮನ ಹಾಸಿಗೆಯಿಂದ ಈಗ ಅವರು ವೇದನೆಯಿಂದ ನರಳುವ ಶಬ್ದ ಬರುತ್ತಿರಲಿಲ್ಲ. ಆದರೆ ಅವರ ಬದಿಯಲ್ಲಿದ್ದವರೆಲ್ಲ ಗಾಬರಿಗೊಂಡಿದ್ದರು. ಇವರು ಬೇಕಂತೆ ಭಯ ಪಡುತ್ತಿದ್ದಾರೆ, ಈಗ ಅಮ್ಮನವರಿಗೆ ವೇದನೆ ಇಲ್ಲ , ನಾನು ದೇವರಿಗೆ ಹೇಳಿದ್ದೇನೆ ಹಾಗು " ಅವರು ಮಕ್ಕಳ ಮಾತು ತಪ್ಪುವುದಿಲ್ಲ".
ಆಗ ಅಮ್ಮನವರು ಮೌನವಾಗಿದ್ದರೂ ಆದರೆ ಅಲ್ಲಿ ಇತರರು ಜೋರಲ್ಲಿ ಅಳುವ ಶಬ್ದ ಕೇಳಿತು , ನನ್ನ ಅಮ್ಮ ಸತ್ತಿದರು.

ಆ ದಿನದಿಂದ ನನ್ನ ಮನಸ್ಸಲ್ಲಿ ರೋಷ ನಿರ್ಮಾಣವಾಯಿತು "ದೇವರು ಯಾರದ್ದು ಕೇಳುವುದಿಲ್ಲ , ಮಕ್ಕಳದ್ದು  ಸಹ ".

ಆ ದಿನದ ನಂತರ ಎಷ್ಟೋ ವರ್ಷದಿಂದ ದೇವರನ್ನು ಪ್ರಾರ್ಥಿಸುವ ನನ್ನ ನಿಯಮವನ್ನು ಬಿಟ್ಟು ಬಿಟ್ಟೆ.

ತಂದೆಯ ಆಜ್ಞೆ ತುಂಬಾ ಕಟೋರವಾಗಿತ್ತು,ಆದರೆ ನನ್ನ ಹಠದ ಮುಂದೆ ಅವರ ನಡೆಯಲಿಲ್ಲ .

"ದೇವರಿಲ್ಲ "

"ಹೀಗೆ ಹೇಳಬಾರದು "

"ಯಾಕೆ ?"

"ಅವರಿಗೆ ಕೋಪ ಬರಬಹುದು "

" ಬರಲಿ , ನನಗೆ ಗೊತ್ತುಂಟು ದೇವರಿಲ್ಲ ಎಂದು "

"ನಿನಗೆ ಹೇಗೆ ಗೊತ್ತು? "

"ಅವನಿದ್ದರೆ , ನನ್ನ ಕೇಳುವುದಿಲ್ಲವೇ "
"ನೀನು ಅವರಿಂದ ಏನು ಕೇಳಿದೆ? "

"ನಾನು ಅವರಿಗೆ ಹೇಳಿದೆ , ನನ್ನ ಅಮ್ಮನನ್ನು ಕೊಲ್ಲಬೇಡ ಎಂದು "
"ನೀನು ಎಂದೂ ಅವರನ್ನು ನೋಡಿದಿಯಾ  , ಅವರು ಕಾಣುವುದಿಲ್ಲ ?"

"ಆದರೆ ಅವನಿಗೆ ಕೇಳುವುದು ಸಹ ಇಲ್ಲ "........

ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಮೌನದಲಿ ವಾಕ್ಸಂಪತ್ತು

Rumi
“In Silence there is eloquence. Stop weaving and see how the pattern improves.”
ರೂಮಿ 
"ಮೌನದಲಿ ವಾಕ್ಸಂಪತ್ತು ಇರುತ್ತದೆ. ನೇಯುವುದನ್ನು ನಿಲ್ಲಿಸಿ ಹಾಗು ನೋಡಿ ಹೇಗೆ ಸ್ವರೂಪ ಸುಧಾರಿಸುತ್ತದೆ ಎಂದು" .
ಅನುವಾದ :ಹರೀಶ್ ಶೆಟ್ಟಿ,ಶಿರ್ವ 

ಹೋಗ ಬೇಡ ಒಡೆಯ


!!ಹೋಗ ಬೇಡ ಒಡೆಯ
ಬಿಟ್ಟು ನನ್ನ ಕೈಯ
ಆಣೆ ನಿನ್ನ ನಾನು ಅತ್ತು ಬಿಡುವೆ
ಅತ್ತು ಬಿಡುವೆ
ಬೇಡುತ್ತಿದೆ ಮಾಂಗಲ್ಯ ನನ್ನ
ಒಂದು ವೇಳೆ ನೀನಿಲ್ಲದಿದ್ದರೆ ನನ್ನದೇನು
ನನ್ನದೇನು !!-೨

!!ಈ ಹರಡಿದ ಕೇಶ
ಈ ಅರಳಿದ ಹೂಮಾಲೆ
ಈ ಸುಗಂಧಿತ ಸೆರಗು
ಈ ಮನಸ್ಸಿನ ಮಧಿರೆ -೨
ಇದೆಲ್ಲ ನಿನಗಾಗಿಯೇ ಪ್ರೀಯತಮ
ನಾನಿಂದು ನಿನ್ನನ್ನು ಹೋಗಲು ಬಿಡಲಾರೆ
ಹೋಗಲು ಬಿಡಲಾರೆ !!
ಹೋಗ ಬೇಡ ಒಡೆಯ...

!!ನಾನಿನ್ನ ದಾಸಿ
ಜನ್ಮದಿಂದ ದಾಹದಲಿ
ನೀನೆ ನನ್ನ ಸಿಂಗಾರ ಪ್ರೀಯತಮ-೨
ನಿನ್ನ ಹಾದಿಯ ಧೂಳನ್ನು ನಾನು
ನನ್ನ ಹಣೆಯಲಿ ಸದಾ ತುಂಬುವೆ
ಸದಾ ತುಂಬುವೆ !!
ಹೋಗ ಬೇಡ ಒಡೆಯ...

!!ನನ್ನಿಂದ ಕಣ್ಣು ತಪ್ಪಿಸಿಕೊಳ್ಳುವೆಯೆಂದರೆ
ನನ್ನದು ಇಷ್ಟು ಮನವಿ ಕೇಳು -೨
ನಿನ್ನ ಚರಣದ ದಾಸಿ ನಾನು
ಇನ್ನು ಇಲ್ಲೇ ಜೀವಿಸುವೆ ಇಲ್ಲೇ ಸಾಯುವೆ
ಇಲ್ಲೇ ಸಾಯುವೆ !!
ಹೋಗ ಬೇಡ ಒಡೆಯ...

ಮೂಲ : ಶಕೀಲ್ ಬದಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಗೀತ ದತ್
ಸಂಗೀತ : ಹೇಮಂತ್ ಕುಮಾರ್
ಚಿತ್ರ : ಸಹಬ್ ಬಿವಿ ಔರ್ ಗುಲಾಮ್

N Jaao Saiyyaa, Chhudaa Ke Baiyyaa
kasam Tumhaaree Main Ro Padoongee
machal Rahaa Hain Suhaag Meraa
jo Tum Naa Honge, To Kyaa Karungee

ye Bikharee Julfe, Ye Khilataa Gajaraa
ye Mahakee Chunaree, Ye Man Kee Madeeraa
ye Sab Tumhaare Liye Hain Pareetam
mai Aaj Tum Ko Naa Jaane Doongee, Jaane Naa Doongee

mai Tumharee Daasee, Janam Kee Pyaasee
tum Hee Ho Meraa Singaar Pareetam
tumhaare Rasate Kee Dhool Le Kar
mai Maang Apanee Sadaa Bharungee, Sadaa Bharungee

jo Muz Se Aakhiyaan Churaa Rahe Ho
to Meree Itanee Arja Bhee Sun Lo
tumhaare Charanon Mein Aa Gayee Hoo
yahee Jioongee, Yahee Marungee, Yahee Marungee
http://www.youtube.com/watch?v=OOVfz1GX63Y

Tuesday, March 19, 2013

ಸಮಯ ಮಾಡಿದೆ



!!ಸಮಯ ಮಾಡಿದೆ
ಎಂತಹ ಮೋಹಕ ದುಷ್ಟತನ
ನೀನಾಗಿ ನೀನು ಉಳಿಯಲಿಲ್ಲ,
ನಾನಾಗಿ ನಾನು ಉಳಿಯಲಿಲ್ಲ!!

!!ಹಂಬಲಿಸುವ ಹೃದಯಗಳು
ಈ ರೀತಿ ಸಿಕ್ಕಿದೆ
ಆ ರೀತಿ ಅಂದರೆ
ನಾವೆಂದೂ ಪ್ರತ್ಯೇಕವಾಗಿರಲಿಲ್ಲ
ನೀನೂ ಮರೆಯಾದೆ
ನಾನೂ ಮರೆಯಾದೆ
ಒಂದೇ ಹಾದಿಯಲಿ
ನಡೆದು ಎರಡೆಜ್ಜೆ !!
ಸಮಯ ಮಾಡಿದೆ.....

!!ಹೋಗುವುದೆಲ್ಲಿ
ಅರಿಯುವುದಿಲ್ಲ
ಹೊರಟ್ಟಿದ್ದೇವೆ  ಆದರೆ
ಹಾದಿಯೇ ಇಲ್ಲ
ಏನು ಹುಡುಕಾಟವಿದೆ
ಏನೂ ತಿಳಿದಿಲ್ಲ
ಹೃದಯ ರಚಿಸುತ್ತಿದೆ
ಕನಸು ಕ್ಷಣ ಕ್ಷಣ!!
ಸಮಯ ಮಾಡಿದೆ....

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಗೀತ ದತ್
ಚಿತ್ರ : ಕಾಗಜ್ ಕೆ ಫೂಲ್

Waqt ne kiya kya haseen sitam
tum rahe ne tum, ham rahen na ham

Beqaraar dil is tarah mile
jis tarah kabhi hum juda na the
Tum bhi Kho gaye
Hum bhi kho gaye
Ek raah pe chalke do kadam

Jayenge Kaha Soojhta nahi
Chal pade magar raasta nahin
Kya talaash hain kuch pata nahin
bun rahe hain dil khwab dam badam

http://www.youtube.com/watch?v=gir2ccDdiGE

ಈ ನಯನ ಭಯ ಭಯದಲಿ

ಈ ನಯನ ಭಯ ಭಯದಲಿ
ಈ ಶರಾಬು ಗ್ಲಾಸು ತುಂಬಲಿ 
ಸ್ವಲ್ಪ ಕುಡಿಯಲು ಕೊಡು 
ನಾಳೆಯ ಅರಿವು ಯಾರಿಗಿದೆ 
ಒಂದು ರಾತ್ರಿ ಭಯವಿಲ್ಲದೆ 
ನನಗೆ ಬದುಕಲು ಕೊಡು 
ಈ ನಯನ ಭಯ ಭಯದಲಿ .....

ರಾತ್ರಿ ಸುಂದರ
ಈ ಚಂದ್ರ ಸುಂದರ 
ಎಲ್ಲಕ್ಕಿಂತ ಸುಂದರ ನನ್ನ ಒಲವು 
ಮತ್ತು ನಿನ್ನಿಂದ ಸುಂದರ  
ಮತ್ತು ನಿನ್ನಿಂದ ಸುಂದರ.....  ನಿನ್ನ ಪ್ರೀತಿ 
ನಿನಗೆ ಅರಿವಿಲ್ಲ....  
ಈ ನಯನ ಭಯ ಭಯದಲಿ ....

ಪ್ರೀತಿಯಲ್ಲಿದೆ ಜೀವನದ ಖುಷಿ
ಕೊಡುತ್ತದೆ ಖುಷಿ 
ಕೆಲವು ದುಃಖ ಸಹ
ನಾನು ಒಪ್ಪಿದರೂ ಒಂದು ವೇಳೆ 
ನಾನು ಒಪ್ಪಿದರೂ ಒಂದು ವೇಳೆ ಸೋಲನ್ನು
ನೀನು ಒಪ್ಪುವುದಿಲ್ಲ.....
ಈ ನಯನ ಭಯ ಭಯದಲಿ ....

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ ,ಶಿರ್ವ
ಹಾಡಿದವರು/ಸಂಗೀತ :ಹೇಮಂತ್ ಕುಮಾರ್
ಚಿತ್ರ : ಕೋಹರ
ये नयन डरे-डरे, ये जाम भरे-भरे
ज़रा पीने दो
कल की किसको खबर, इक रात हो के निडर
मुझे जीने दो

रात हसीं, ये चाँद हसीं
पर सबसे हसीं मेरे दिलबर
और तुझसे हसीं तेरा प्यार
तू जाने ना
ये नयन डरे डरे...

प्यार में है जीवन की खुशी
देती है खुशी कई गम भी
मै मान भी लूँ कभी हार
तू माने ना
ये नयन डरे डरे...

www.youtube.com/watch?v=2gMhbWeo30o

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...