Thursday, February 28, 2013

ಒಲವೆ ಒಲವೆ ಒಲವೆ ಒಲವೆ


!!ಒಲವೆ ಒಲವೆ ಒಲವೆ ಒಲವೆ
ನೀನಿಲ್ಲದೆ ನನ್ನ ಹೃದಯ
ಮಿಡಿಯುವುದಿಲ್ಲ ಒಲವೆ
ನೀನಿಲ್ಲದೆ ನನ್ನ ಹೃದಯ
ಮಿಡಿಯುವುದಿಲ್ಲ ಒಲವೆ
ನಯನ ನಿನ್ನ ಯಾವ ರೀತಿಯ
ಜಾದು ಮಾಡಿದೆ ಒಲವೆ  !!
ನೀನಿಲ್ಲದೆ ನನ್ನ ಹೃದಯ
ಮಿಡಿಯುವುದಿಲ್ಲ ಒಲವೆ ....

!!ನೀನಿಲ್ಲದೆ ಎನಗೆ
ನೆಮ್ಮದಿ ಇಲ್ಲ
ಹೃದಯ ಬಡಿಯುತ್ತಿದೆ
ಮನ ಹೆದರುತ್ತಿದೆ ಒಲವೆ
ಬಾಂಸುರಿಯ ನಾದ
ಕೇಳು ಒಲವೆ
ಬಾಂಸುರಿಯ ನಾದ
ಕೇಳು ಒಲವೆ
ನೀನಿಲ್ಲದೆ ಎನಗೆ
ಯಾವುದರಲ್ಲೂ ರುಚಿಯಿಲ್ಲ ಒಲವೆ !!
ಒಲವೆ ಒಲವೆ ಒಲವೆ ಒಲವೆ  ...

!!ಪ್ರೀತಿಯ ಕುಸುಮ
ಇಟ್ಟಿದ್ದೇನೆ ಒಲವೆ
ಹಾದಿ ಕಾದು ಕಾದು
ನಿನ್ನ ನಾ ಸೋತೆ ಒಲವೆ
ಹಗಲು ಸಂಜೆ
ನೋಡಿದಲ್ಲಿ ಒಲವೆ
ಹಗಲು ಸಂಜೆ
ನೋಡಿದಲ್ಲಿ ಒಲವೆ
ನಿನ್ನದೇ ಮುಖ
ನಾನು ಕಾಣುವೆ ಒಲವೆ !!
ಒಲವೆ ಒಲವೆ ಒಲವೆ ಒಲವೆ ...

ಮೂಲ : ಕ್ಷಮಿಸಿ ,ಅರಿವಿಲ್ಲ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ನುಸರತ್  ಫತೆ ಅಲಿ ಖಾನ್

 Piya rey, piya rey, piya rey, piya rey
Tharey bina lageynahee mara jiya rey hooooa
Tharey bina lagey nahee mara jiya rey
Naina ney tharee kaisa jadoo kiya rey
Tharey bina lagey nahee mara jiya rey hoooa.....

 harey bina mohey chaien na awey
Dhuk, dhuk, dhuk, mara jee ghabrawey
Boley basureya sunley sawariya
Boley basuriya sunley sawariya
Tharey bina mohey kuch nahee bahwey
Piya rey, piya rey, piya rey, piya rey.....

 Pyar kee kaliyan kub kee rakhiyan
Yahan wahan tuk tuk mey tey tahkiyan
Sanjh sawerey deykhun lagey
Sanjh sawerey deykhun lagey
Tharee surateiya maree ankhiyan
Piya rey, piya rey, piya rey, piya rey.....
http://www.youtube.com/watch?v=pFSUosi5zn4

ಅಸೂಯೆ ಮುಕ್ತ ಆತ್ಮ

Rumi 
“People want you to be happy.
Don't keep serving them your pain!

If you could untie your wings
and free your soul of jealousy,

you and everyone around you
would fly up like doves.” 
ರೂಮಿ 
ಜನರು ನಿನ್ನ ಸಂತೋಷ ಬಯಸುವರು
ಅವರಿಗೆ ನಿನ್ನ ನೋವನ್ನು ಬಡಿಸದಿರು

ಬಿಚ್ಚಿದರೆ ನಿನ್ನ ರೆಕ್ಕೆಗಳನ್ನು
ಅಸೂಯೆ ಮುಕ್ತ ಮಾಡಿದರೆ ನಿನ್ನ ಆತ್ಮವನ್ನು

ನೀನು ಮತ್ತು ನಿನ್ನ ಸುತ್ತಮುತ್ತಲಿನ ಎಲ್ಲರೂ
ಪಾರಿವಾಳ ಹಾರುವಂತೆ ಹಾರಬಲ್ಲರು

ಅನುವಾದ : ಹರೀಶ್ ಶೆಟ್ಟಿ,ಶಿರ್ವ 

ನೆನಪ ಹೆಜ್ಜೆ

ಗೆಳತಿ...
ನಿನ್ನನ್ನು ಬಿಟ್ಟು 
ಹಿಂದೆ ನೋಡದೆ 
ನಿನ್ನಿಂದ ದೂರ ದೂರ ಬಂದೆ 
ಒಮ್ಮೆ ಮನಸ್ಸು ತಾಳದೆ 
ಹಿಂತಿರುಗಿ ನೋಡಿದರೆ 
ಹಿಂದೆ ನಿನ್ನ ನೆನಪ ಹೆಜ್ಜೆಗಳ ಸಾಲುಗಳೇ 
by ಹರೀಶ್ ಶೆಟ್ಟಿ, ಶಿರ್ವ

Wednesday, February 27, 2013

ಶಿಲೆ ನಾನು


ಶಿಲೆ ನಾನು
ಸಾಗರದ ತೀರ
ಎಷ್ಟೋ ವರ್ಷದಿಂದ ನಿಂತಿದ್ದೇನೆ
ಅಲೆಗಳ ಏಟು ತಿಂದು ತಿಂದು,
ಮಳೆ ಬಿರುಗಾಳಿ ಎನ್ನದೆ
ಸತತ ಒಂದೇ ಸ್ಥಾನದಲಿ ನನ್ನ ವಾಸ !!

ಪ್ರೀತಿ ಮಾಡುವವರು
ನನ್ನಲ್ಲಿ ಪ್ರೇಮ ನಾಮ
ಪ್ರೇಮ ಚಿಹ್ನೆ ಕೆತ್ತಿ ಹೋಗುವರು
ನನಗೆ ನೋವಾದರೂ ಸಹಿಸುವೆ
ಅವರ ಪ್ರೀತಿಗೆ ಆನಂದ ಪಡುವೆ
ನನ್ನಲ್ಲಿ ಅಂಕಿತವಾದದ್ದು ಎಂದೂ ಆಗದು ಅಳಿಸ !!

ಕೆಲವು ಏಕಾಂತ ಜೀವಿ
ಬಂದು ನನ್ನ ಮೇಲೆ ಕುಳಿತು
ನನ್ನನ್ನು ಕಣ್ಣೀರಿಂದ ಮೀಯಿಸಿ
ತನ್ನ ಮನಸ್ಸು ಹಗುರಗೊಳಿಸಿ
ಶಾಂತಿ ಪಡೆಯುವರು
ಅವರ ದುಃಖ ನೋವನ್ನು ನನ್ನಿಂದಾಗದು ಬಣ್ಣಿಸ!!

ಹಲವರು ಜನ
ಕೋಪದಿಂದಲೋ ಅಸೂಯೆಯಿಂದಲೋ
ಬಂದು ನನ್ನನ್ನು ಕೆದಕುವರು
ಆಶ್ಚರ್ಯ,ಅವರಿಗೆ ಎನನ್ನು ಮಾಡದ ನನಗೆ ಯಾಕೆ ಕೆದಕುವರೆಂದು
ಕ್ಷಮಿಸುವೆ ಅವರನ್ನು,ನೋವಾದರೂ ಕೆದಕಲಿ ಎನ್ನುವೆ
ಹೇಗೂ ಕೋಪ ಅಸೂಯೆ ತುಂಬಿದ ಜನರ ಜೀವನ ನಿರಸ !!

ಶಿಲೆ ನಾನು
ಸಾಗರದ ತೀರ
ಎಷ್ಟೋ ವರ್ಷದಿಂದ ನಿಂತಿದ್ದೇನೆ
ಅಲೆಗಳ ಏಟು ತಿಂದು ತಿಂದು,
ಮಳೆ ಬಿರುಗಾಳಿ ಎನ್ನದೆ
ಸತತ ಒಂದೇ ಸ್ಥಾನದಲಿ ನನ್ನ ವಾಸ !!
by ಹರೀಶ್ ಶೆಟ್ಟಿ, ಶಿರ್ವ

ಪ್ರೇಮಿ

Rumi
“Two there are who are never satisfied- the lover of the world and the lover of knowledge.” 
ರೂಮಿ 
"ಇಬ್ಬರಿದ್ದಾರೆ ಎಂದಿಗೂ ತೃಪ್ತಿ ಪಡೆಯದವರು -ಪ್ರೇಮಿ ಜಗದ ಮತ್ತು ಪ್ರೇಮಿ ಜ್ಞಾನದ"
ಅನುವಾದ : ಹರೀಶ್ ಶೆಟ್ಟಿ , ಶಿರ್ವ 

Tuesday, February 26, 2013

ಇನ್ನೊಬ್ಬ ದೇವದಾಸ


ಇನ್ನೊಬ್ಬ ದೇವದಾಸ
_____________
ಕಳ್ಳನೊಬ್ಬ ಗೋಡೆಯ ಹಿಂದೆ ಅವಿತುಕೊಂಡಿದ್ದ.

ಆಗ ಒಬ್ಬ ತನ್ನದೇ ಗುಂಗಿನಲ್ಲಿ ಬರುವುದನ್ನು ಕಂಡ.

ಕಳ್ಳ ಗೋಡೆಯ ಹಿಂದೆಯಿಂದ ಬಂದು , ಅವನನ್ನು ನಿಲ್ಲಿಸಿ.

"ಹೇ , ನಿನ್ನಲ್ಲಿದ್ದದೆಲ್ಲ ಬೇಗ ಈಚೆ ಕೊಡು " ಕಳ್ಳ ಅವನಿಗೆ ಬೆದರಿಸಿದ.

ಅವನು " ನನ್ನದು ಏನಿದೆ ಇಲ್ಲಿ, ಎಲ್ಲ ನಿನ್ನದೇ, ಹೇಳು ಏನು ಬೇಕು"?

ಕಳ್ಳ " ಹೆಚ್ಚು ಚಾಲಕಿ ಬೇಡ, ಬೇಗ ಈ ನಿನ್ನ ಗಡಿಯಾರ ನನಗೆ ಕೊಡು "

ಅವನು "ನನ್ನ ಸಮಯ ಅವಳು ಹೋದ ದಿನವೇ ನಿಂತು ಹೋಗಿತ್ತು, ಇದರ ಉಪಯೋಗ ನನಗೆ ಹೇಗೂ ಇಲ್ಲ, ನೀನೆ ತೆಗೆದುಕೊಳ್ಳು ಮಹರಾಯ" ಎಂದ.

ಕಳ್ಳ " ಕೇವಲ ಇದು ಸಾಲದು, ಈ ನಿನ್ನ ಬ್ಯಾಗಲ್ಲಿ ಏನಿದೆ, ಬೇಗ ಕೊಡು "?

ಅವನು "ಇದರಲ್ಲಿಯೇ, ಹ್ಮ್ಮ್ "ಅವನು ನಕ್ಕ.... ವಿಚಿತ್ರ ನಗು ಅವನದ್ದು, ಹೇಳಿದ " ಈ ಬ್ಯಾಗಲ್ಲಿ ಅವಳು ಬರೆದ ಪತ್ರಗಳಿವೆ, ಹೇಗೋ ನಾನು ಇದನ್ನು ಸಮುದ್ರಕ್ಕೆ ಬಿಸಾಡಲು ಹೋಗುತ್ತಿದ್ದೇನೆ, ನೀನೆ ತೆಗೆದುಕೊಳ್ಳು"ಎಂದ.

ಕಳ್ಳ "ಏನೋ ನಿನ್ನ ರಾಮಾಯಣ, ಬೇಗ ಈಚೆ ತಾ, ಎಂದು ಅವನ ಬ್ಯಾಗ್ ಎಳೆದು ಅದರಲ್ಲಿ ನೋಡಿದ, ಅದರಲ್ಲಿ ಕಾಗದದ ಗಂಟಲ್ಲದೆ ಬೇರೆ ಏನೂ ಇರಲಿಲ್ಲ, ಕಳ್ಳ ಕೋಪದಿಂದ  " ನೀನೊಬ್ಬ ಭಗ್ನ ಪ್ರೇಮಿ, ಇನ್ನು ಬೇಗ ನಿನ್ನ ಪರ್ಸ್ ತೆಗೆ" ಎಂದು ಕಿರುಚಿದ.

ಅವನು " ಈ ಪರ್ಸ್ ಲ್ಲಿ ಏನಿದೆ ಮಹರಾಯ , ಇದರಲ್ಲಿ ಕೇವಲ ಅವಳ ಚಿತ್ರ ಇದೆ, ಹೇಗೋ ಅವಳ ಚಿತ್ರ ನನ್ನ ಹೃದಯ, ಮನಸ್ಸಲ್ಲಿ ಶಾಶ್ವತವಾಗಿ ನೆಲೆಸಿದೆ, ನೀನೆ  ತೆಗೆದುಕೊಳ್ಳು" ಎಂದು ಹೇಳಿ ಪರ್ಸ್ ತೆಗೆದು ಕಳ್ಳನಿಗೆ ನೀಡಿದ.

ಕಳ್ಳ ಪರ್ಸ್ ಅವನಿಂದ ತೆಗೆದುಕೊಂಡು ನೋಡಿದ ಅದರಲ್ಲಿ ಒಂದು ಹೆಂಗಸಿನ ಚಿತ್ರ ಅಲ್ಲದೆ ಒಂದು ನಾಕಾಣೆ ಸಹ ಇರಲಿಲ್ಲ, ಕಳ್ಳನ ಕೋಪ ನೆತ್ತಿಗೇರಿತು.

ಕಳ್ಳ " ನೀನೊಬ್ಬ ಯಾವ ಊರಿನ ಬಿಕನಾಸಿ ಮಾರಾಯ, ನಿನ್ನಂತವರೂ ಈ ಲೋಕದಲ್ಲಿ ಇದ್ದಾರೆಯೇ ".

ಅವನು " ನಾನೆಲ್ಲಿದ್ದೇನೆ ,ಇಲ್ಲಿ ಇರುವುದು ಕೇವಲ ನನ್ನ ಶರೀರ, ನನ್ನದೆಲ್ಲ ಅವಳು ನನ್ನನ್ನು ಬಿಟ್ಟು ಹೋಗುವಾಗ ಅವಳೊಟ್ಟಿಗೆ ಹೋಗಿದೆ".

ಕಳ್ಳ " ಐಯ್ಯೊ........  ನೀನೊಬ್ಬ ದೇವದಾಸ, ನನ್ನ ದಿನ ಹಾಳಾಯಿತು, ಇಲ್ಲಿ ಸಿಕ್ಕಿದೆ ನನಗೆ ಮೇಲೆ ಸಿಗ ಬೇಡ ".

ಅವನು "ಆಗಲಿ , ಒಂದು ನೂರು ರೂಪಾಯಿ ಕೊಟ್ಟು ಹೋಗು,  ಒಂದು ಪೆಗ್ ಶರಾಬು ಕುಡಿದು ಅವಳನ್ನು ಮರೆಯಲು ಪ್ರಯತ್ನಿಸುವೆ".

ಕಳ್ಳ ಬೆಚ್ಚಿ ಬಿದ್ದ.

by ಹರೀಶ್ ಶೆಟ್ಟಿ, ಶಿರ್ವ


ನನಗೆ ಹಾಡಲಿದೆ

Rumi
“I want to sing like the birds sing, not worrying about who hears or what they think.” 
ರೂಮಿ 
"ನನಗೆ ಹಾಡಲಿದೆ ಹಕ್ಕಿಗಳು ಹಾಡುವ ಹಾಗೆ, ಚಿಂತಿಸುವುದಿಲ್ಲ ಯಾರು ಕೇಳುವರೆಂದು ಅಥವಾ ಅವರು ಏನು ಯೋಚಿಸುತ್ತಾರೆಂದು"
ಅನುವಾದ : by ಹರೀಶ್ ಶೆಟ್ಟಿ,ಶಿರ್ವ 

Monday, February 25, 2013

ಆಣೆ ಸಂಜೆಯ ಕೊರಗಿನ

!!ಆಣೆ ಸಂಜೆಯ ಕೊರಗಿನ
ದುಃಖದಲ್ಲಿದ್ದೇನೆ ನಾನು ಈ ದಿನ
ನೀನು ಬಾ ನೀನು ಬಾ
ನನ್ನ ರಾಣಿ ಒಲವಿನ!!
ಆಣೆ ಸಂಜೆಯ ಕೊರಗಿನ ....

!!ಹೃದಯ ವ್ಯಥೆಯಲ್ಲಿದೆ
ರಾತ್ರಿ ಬರಡಾಗಿದೆ
ನೋಡಿ ಹೋಗು ಹೇಗೆ
ಏಕಾಂಗಿಯಾಗಿದ್ದೇನೆ ನಾ!!
ಆಣೆ ಸಂಜೆಯ ಕೊರಗಿನ ....

!!ನೆಮ್ಮದಿ ಎಂಥ
ಬಳಿಯಲ್ಲಿ ನೀನಿಲ್ಲದೆ
ಕೊಲ್ಲಲಿದೆ ಈ ಅಗಲಿಕೆಯ
ನೋವು ನನಗೆ
ಪರಿಸರ ಆಹ್ಲಾದಕರವಾಗಿದ್ದರೇನು
ಚಂದಿರ ಇದ್ದರೇನು
ಚಂದ್ರ ಕಷ್ಟದ
ಅಗಲಿಕೆ ನೋವಿನ!!
ಆಣೆ ಸಂಜೆಯ ಕೊರಗಿನ ....

!!ಈಗಾದರೂ ಬಾ ನೀನು
ರಾತ್ರಿಯೂ ಮಲಗಿದೆ
ಜೀವನ ದುಃಖದ
ಮರುಭೂಮಿಯಲ್ಲಿ ಮರೆಯಾಗಿದೆ-೨
ಹುಡುಕುತ್ತಿದೆ ನಯನ
ಆದರೆ ನೀನೆಲ್ಲಿರುವೆ
ಕಾಯುತ ಕಾಯುತ
ಸೋತಿದೆ ಕಣ್ಣು ನನ್ನ  !!
ಆಣೆ ಸಂಜೆಯ ಕೊರಗಿನ ....

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
ಹಾಡಿದವರು : ತಲತ್ ಮೆಹಮೂದ್ 
ಸಂಗೀತ : ಖಯಾಮ್
ಚಿತ್ರ : ಫುಟ್ ಪಾತ್
Shaam e gham ki qasam aaj gamgeen hain ham
aa bhi jaa aa bhi jaa aaj mere sanam
shaam e gham ki kasam

dil pareshaan hai raat veeran hai
dekh jaa kis tarah aaj tanha hain ham
shaam e gham ki kasam

chain kaisa jo pahloo me tu hi nahin
maar daale na dard e judaai kahin
rut haseen hai to kya chaandni hai to kya
chandni zulm hai aur judaai sitam
Shaam e gham ki kasam 

Ab to aa jaa ke ab raat bhi so gayi
zindagi gham ke sehraaon me kho gayi-2
dhoondhti hai nazar tu kahan hai magar
dekhte dekhte aaya aankhon me dam
Shaam e gham ki kasam 

ನಿಮ್ಮ ಕನ್ನಡಿ

Rumi
"If you are irritated by every rub, how will your mirror be polished?” 
ರೂಮಿ 
"ಪ್ರತಿ ಸಲ ಉಜ್ಜುವುದರ ಮೂಲಕ ನಿಮಗೆ ಕಿರಿಕಿರಿ ಉಂಟಾದರೆ , ಹೇಗೆ ನಿಮ್ಮ ಕನ್ನಡಿ ಹೊಳೆಯುವುದು ?

ದೂಳು

Rumi
I am the dust that dances in the light. 
ರೂಮಿ 
ನಾನು ಬೆಳಕಿನಲ್ಲಿ ನೃತ್ಯ ಮಾಡುವ ದೂಳು.
ಅನುವಾದ : by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿಯ ಕಿಟಕಿ

Rumi
At night, I open the window
and ask the moon to come
and press its face against mine.
Breathe into me.
Close the language-door
and open the love-window.
The moon won't use the door,
only the window.” 
ರೂಮಿ
ರಾತ್ರಿಯಲಿ, ನಾನು ಕಿಟಕಿ ತೆರೆದೇ
ಹಾಗು ಚಂದ್ರನನ್ನು ಕರೆದೆ
ಅದರ ಮುಖವನ್ನು
ನನ್ನ ಮುಖದೊಂದಿಗೆ ಒತ್ತಿ
ನನ್ನಲ್ಲಿ ಉಸಿರಾಡಲು ಹೇಳಿದೆ.
ಮುಚ್ಚಿರಿ ಭಾಷೆಯ ಬಾಗಿಲನ್ನು
ತೆರೆಯಿರಿ ಪ್ರೀತಿಯ ಕಿಟಕಿಯನ್ನು
ಚಂದ್ರ ಬಳಸುವುದಿಲ್ಲ ಬಾಗಿಲನ್ನು
ಬಳಸುವುದು ಕೇವಲ ಕಿಟಕಿಯನ್ನು
ಅನುವಾದ : by ಹರೀಶ್ ಶೆಟ್ಟಿ, ಶಿರ್ವ

Saturday, February 23, 2013

ಏನನ್ನು ಹುಡುಕುತ್ತಿರುತ್ತದೆ


!!ಏನನ್ನು ಹುಡುಕುತ್ತಿರುತ್ತದೆ
ಕಣ್ಣು ನನ್ನಲ್ಲಿ
ಬೂದಿಯ ರಾಶಿಯಲಿ
ಜ್ವಾಲೆಯೂ ಇಲ್ಲ ಕಿಡಿಯೂ ಇಲ್ಲ!!-೨

!!ಈಗ ಆ ಪ್ರೀತಿಯೂ ಇಲ್ಲ
ಆ ಪ್ರೀತಿಯ ನೆನಪೂ ಉಳಿದಿಲ್ಲ
ಉರಿಯಿತು ಹೀಗೆ ಹೃದಯ
ಏನೂ ಇರಲಿಲ್ಲ ಏನೂ ಉಳಿಯಲಿಲ್ಲ !!

!!ಯಾರ ಚಿತ್ರ ನೀನು
ಕಂಗಳಲ್ಲಿ ತುಂಬಿಕೊಂಡಿರುವೆಯೋ
ಆ ಪ್ರೇಮಿ ನಾನಲ್ಲ
ನಾನದರ ಮೌನ ಚಿತೆಯಾಗಿದ್ದೇನೆ !!
ಏನನ್ನು ಹುಡುಕುತ್ತಿರುತ್ತದೆ.....

!!ಜೀವನ ನಗುತ್ತಲೇ ಸಾಗುತ್ತಿದ್ದರೆ
ತುಂಬಾ ಒಳ್ಳೆಯದಿತ್ತು
ಹೋಗಲಿ, ನಗುತ ಅಲ್ಲದೆ
ಅಳುತ್ತಲೇ ಸಾಗಬಹುದು !!

!!ಬೂದಿ ಭಗ್ನ ಪ್ರೀತಿಯ
ಉಳಿಸಿಟ್ಟಿದೇನೆ-೨
ಪುನಃ ಪುನಃ ಇದನ್ನು
ಕೊರೆದರೆ ಕೆದರುತ್ತದೆ!!
ಏನನ್ನು ಹುಡುಕುತ್ತಿರುತ್ತದೆ.....

!!ಬಯಕೆ ಅಪರಾಧ
ನಿಷ್ಠೆ ಅಪರಾಧ
ಇಚ್ಛೆ ತಕ್ಸೀರು
ಇದು ಆ ಜಗತ್ತಂದರೆ
ಇಲ್ಲಿ ಪ್ರೀತಿಯಾಗಲು ಸಾಧ್ಯವಿಲ್ಲ !!

!!ಹೇಗೆ ಈ ಬಾಜಾರದ ನಿಯಮ
ನಿನಗೆ ವಿವರಿಸಲಿ
ಮಾರಾಟ ಆದವನು
ಖರೀದಿದಾರನಾಗಲು ಸಾಧ್ಯವಿಲ್ಲ !!
ಏನನ್ನು ಹುಡುಕುತ್ತಿರುತ್ತದೆ.....

ಮೂಲ :ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಖಯ್ಯಾಮ್
ಚಿತ್ರ : ಶೋಲ ಔರ್ ಶಬನಮ್

jaane kya dhoondhti rehti hai
ye aankhe mujh mein
raakh ke dher mein
shola hai na chingaari hai-2


ab na wo pyaar
na us pyaar ki yaaden baaki
aag yoon dil mein lagi
kuchh na raha
kuchh na bacha

jis ki tasveer
nigaahon mein liye baithi ho
main wo dildaar nahi
us ki hoon khamosh chita

jaane kya ....

zindagi has ke guzarti to
bahut achha tha
khair has ke na sahi
ro ke guzar jaayegi

raakh barbad muhabbat ki
bacha rakhi hai-2
baar baar is ko jo
chheda to bikhar jaayegi

jaane kya ...

aarzoo zurm wafa zurm
tamanna hai gunaah-
ye wo duniya hai jahaan
pyaar nahi ho sakta

kaise bazar ka dastoor
tumhe samjhaun
bik gaya jo
wo khareedar nahi ho sakta-2

jaane kya ....2

ಪ್ರತಿಬಿಂಬ

Rumi
Let the waters settle. You will see stars and moon mirrored in your being.
ರೂಮಿ
ನೀರನ್ನು ನೆಲೆಗೊಳಿಸಲು ಅವಕಾಶ ನೀಡು. ನಿನ್ನಲ್ಲಿ ನಕ್ಷತ್ರ ಹಾಗು ಚಂದ್ರ ಪ್ರತಿಬಿಂಬಿಸುವುದನ್ನು ನೀನು ನೋಡಬಹುದು.
ಅನುವಾದ : by ಹರೀಶ್ ಶೆಟ್ಟಿ, ಶಿರ್ವ 

ಬದಲಾವಣೆ

Rumi
Yesterday I was clever, so I wanted to change the world.
Today I am wise, so I am changing myself.
ರೂಮಿ 
ನಿನ್ನೆ ನಾನು ಜಾಣನಾಗಿದೆ , ಅದ್ದರಿಂದ ನಾನು ಜಗತ್ತನ್ನು ಬದಲಾಯಿಸಲು ಬಯಸಿದೆ.
ಇಂದು ನಾನು ಬುದ್ದಿವಂತ ,ಅದ್ದರಿಂದ ನಾನು ನನ್ನನ್ನೇ ಬದಲಾಯಿಸುತ್ತಿದ್ದೇನೆ.
ಅನುವಾದ : by ಹರೀಶ್ ಶೆಟ್ಟಿ, ಶಿರ್ವ 

Thursday, February 21, 2013

ನೆನಪಿನ ಬೆಳೆ


ಗೆಳತಿ...
ನನ್ನ
ಮನಸ್ಸ ನಿರ್ಜನ ಭೂಮಿಯಲಿ
ಕೇವಲ ನಿನ್ನ
ನೆನಪಿನ ಬೆಳೆಗಳ ರಾಶಿ
ಕಾರಣ
ನನ್ನ ಕಣ್ಣೀರ ಒಸರು
ಮರೆಯಲಾಗದ ಪ್ರೀತಿಯ ಗೊಬ್ಬರ
by ಹರೀಶ್ ಶೆಟ್ಟಿ, ಶಿರ್ವ

Sulah


Koulte Khoon se Sulah ki Ummeed mat kar HARISH
Kar Lene de unko apna khoon thanda
by Harish Shetty, Shirva

Zakhm


Har Zakhm ka ilaaj Dawa hi nahin hotha HARISH
kuch Zakhm meete bol se bi teek kiya jaa sakte hai
by Harish Shetty. Shirva

Bandh Darwaze


Bandh Darwaze pe Itna Dastak Kyon Detha Hai HARISH
Ye to tab hi khulega Jab Andharwale ka Dil chahega
by  Harish Shetty, Shirva


Shikayat


Mujhe kisise koi shikayat nahin hai HARISH
Bas khafa hoon main khudi se
by Harish Shetty, Shirva

Gum-e-Saagar

Gum-e-Saagar mein Doobna to thay tha HARISH,
Pyar mein gote khane ka Shouk jo chada tha
by Harish Shetty, Shirva

ಜನ ಬಿನ್ನ ಬಿನ್ನ


ಗೆಳತಿ
ಕೆಲವೊಮ್ಮೆ ಯಾಕೆ
ನನಗೆ ಹೀಗೆ ಅನಿಸುತ್ತದೆ
ನನ್ನಿಂದ ಎಲ್ಲರು ದೂರ
ಹೋಗುತ್ತಿದ್ದರೆಂದು !

ನಾ ಅವರಲ್ಲಿ
ಚಾಚಿದ ಕೈಯನ್ನು
ತಿರಸ್ಕರಿಸಿ
ನನ್ನಿಂದ ದೂರ ದೂರ
ಸರಿಯುತ್ತಿದ್ದರೆಂದು !

ಕೆಲವೊಮ್ಮೆ
ಬೇಸರ ಸಹ ಆಗುತ್ತದೆ
ಆದರೆ ನಂತರ
ತನ್ನನ್ನು ತಾನೇ
ಸಾವರಿಸಿ ಕೊಳ್ಳುತ್ತೇನೆ !

ಆದರೆ
ಈ ಅಲ್ಪ ಪರಿಚಿತ
ಜನರಿಂದಲೂ ನಾನ್ಯಾಕೆ
ಇಷ್ಟೆಲ್ಲಾ ನಿರೀಕ್ಷಿಸುತ್ತೇನೆ
ಅವರ ಅವರ ಇಷ್ಟ ಅಲ್ಲವೇ !

ಹೋಗಲಿ ಬಿಡು
ಅವರವರ ತಲೆಗೆ
ಅವರವರ ಕೈ
ಅವರವರ ಕಷ್ಟ ಸುಖಗಳ ಭಾರ
ಅವರವರಿಗೆ !

ಸುಮ್ಮನೆ
ನಾನ್ಯಾಕೆ ನಿನಗೆ
ಇದೆಲ್ಲ ಹೇಳುತ್ತಿದ್ದೇನೆ
ಎಲ್ಲ ಜನರ ಸ್ವಭಾವ ಬಿನ್ನ ಬಿನ್ನ
ಇದು ನಿನಗೂ ತಿಳಿದಿದ್ದ ವಿಷಯ !
by ಹರೀಶ್ ಶೆಟ್ಟಿ, ಶಿರ್ವ

ಚಂದನದಂತಹ ಮೈ ಚಂಚಲ ದೃಷ್ಟಿ


!!ಚಂದನದಂತಹ ಮೈ ಚಂಚಲ ದೃಷ್ಟಿ
ನಿನ್ನ ಈ ಮೋಹಕ ನಸುನಗೆ
ನನ್ನನ್ನು ದೂರದಿರಿ ಜಗದವರೇ
ಒಂದು ವೇಳೆ ನಾನು ಮರುಳಾದರೆ!!

!!ಈ ಬಿಲ್ಲಿನಂತ ನಿನ್ನ ಹುಬ್ಬುಗಳು
ಕಣ್ರೆಪ್ಪೆಯ ತುದಿಯಲಿ ಕಾಡಿಗೆಯ ಅಲಂಕಾರ
ಹಣೆಯ ಮೇಲೆ ಕುಂಕುಮದ ಸೂರ್ಯ
ಅಧರದಲಿ ಜ್ವಲಿಸುವ ಬೆಂಬೂದಿ ಜ್ವಾಲ
ನೆರಳು ಸಹ ನಿನ್ನನ್ನು ಸೋಕಿದರೆ
ಅರಳುವುದು ಈ ನಿರ್ಜನ ಹೃದಯವೂ!!
ಚಂದನದಂತಹ ಮೈ ಚಂಚಲ ದೃಷ್ಟಿ

!!ದೇಹವೂ ಸುಂದರ ಮನವೂ ಸುಂದರ
ನೀನು ಸುಂದರತೆಯ ಮೂರ್ತಿ ಆಗಿರುವೆ
ಇನ್ಯಾರಿಗೂ ಬಹುಶಃ ಕಡಿಮೆ ಇರಬಹುದು
ನನಗೆ ನಿನ್ನ ತುಂಬಾ ಅಗತ್ಯವಿದೆ
ಮೊದಲೂ ಈ ಹೃದಯ ತುಂಬಾ ಹಂಬಲಿಸಿದೆ
ನೀನು ಇನ್ನು ಈ ಹೃದಯವನ್ನು ಹಂಬಲಿಸದಿರು!!
ಚಂದನದಂತಹ ಮೈ ಚಂಚಲ ದೃಷ್ಟಿ

ಮೂಲ : ಇಂದೀವರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಕಲ್ಯಾಣ್ ಜೀ ಆನಂದ್ ಜೀ
ಚಿತ್ರ : ಸರಸ್ವತಿ ಚಂದ್ರ

चन्दन सा बदन चंचल चितवन
धीरे से तेरा ये मुसकाना
मुझे दोष ना देना जगवालों
हो जाऊ अगर मैं दीवाना

ये काम कमान भावे तेरी
पलको के किनारे कजरारे
माथेपर सिंदूरी सूरज
होठों पे दहकते अंगारे
साया भी जो तेरा पड जाए
आबाद हो दिल का विराना

तन भी सुन्दर, मन भी सुन्दर
तू सुन्दरता की मूरत है
किसी और को शायद कम होगी
मुझे तेरी बहोत जरुरत है
पहले भी बहोत दिल तरसा है
तू और ना दिल को तरसाना
http://www.youtube.com/watch?v=qnimQYX6Eu0

Wednesday, February 20, 2013

ಇಲ್ಲಿ ಪ್ರತಿ ಮನುಷ್ಯ ಅಪಘಾತದಿಂದ ಹೆದರುತ್ತಾನೆ


!!ಇಲ್ಲಿ ಪ್ರತಿ ಮನುಷ್ಯ ಪ್ರತಿ ಕ್ಷಣ
ಅಪಘಾತದಿಂದ ಹೆದರುತ್ತಾನೆ
ಮಣ್ಣಿನ ಆಟಿಕೆಯಾಗಿದ್ದ ಮನುಷ್ಯ
ಮಣ್ಣಲ್ಲಿ ನಾಶವಾಗಲು ಹೆದರುತ್ತಾನೆ !!

!!ನನ್ನ ಹೃದಯದ ಯಾವುದೇ ಮೂಲೆಯಲ್ಲಿದ್ದ 
ಒಂದು ಮುದ್ದು ಮಗು
ದೊಡ್ಡವರ ನೋಡಿ ಪ್ರಪಂಚ
ದೊಡ್ಡವನಾಗಲು ಹೆದರುತ್ತಾನೆ !!

!!ಇವನ ಹತೋಟಿಯಲಿ ಜೀವನ ಇಲ್ಲ
ಮೃತ್ಯು ಇಲ್ಲ ಇವನ ನಿಯಂತ್ರಣದಲಿ
ಆದರೂ ಮನುಷ್ಯ ಎಲ್ಲಿ
ದೇವರಾಗಲು ಹೆದರುತ್ತಾನೆ!!

!!ವಿಚಿತ್ರ ಈ ಜೀವನ ಅಂದರೆ
ಬಂಧನದಲ್ಲಿದ್ದಾನೆ ಜಗತ್ತಿನ ಪ್ರತಿ ಮನುಷ್ಯ
ಬಿಡುಗಡೆ ಕೇಳುತ್ತಾನೆ ಆದರೆ
ಬಿಡುಗಡೆಯಾಗಲು ಹೆದರುತ್ತಾನೆ!!

ಮೂಲ : ಕ್ಷಮಿಸಿ , ಅರಿವಿಲ್ಲ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಪಂಕಜ್ ಉಧಾಸ್
ಆಲ್ಬಮ್ :ಜಶ್ನ್

yahan har shaks har pal haadsa hone se darta hai
khilona hai jo mitti ka fana hone se darta hai

mere dil ke kisi kone mein ek massom sa baccha
badon ki dekhkar duniya bada hone se darta hai

na bus mein zindagi iske na kaboo maut par iska
magar insaan phir bhi kab khuda hone se darta hai

ajab ye zindagi ki kaid hai, duniya ka har insaan
rihaai mangta hai aur riha hone se darta hai
http://www.youtube.com/watch?v=qRC6XgVaGL4

ರೇಲು

ಗೆಳತಿ ...
ನಿನ್ನ 
ರೇಲು ಸರಿ ಸಮಯಕ್ಕೆ 
ಇದೆ 
ಆದರೆ ನಿನ್ನ ನನ್ನ 
ಮನಸ್ಸು ಯಾಕೆ 
ಇದು ರದ್ದಾಗಬೇಕೆಂದು ಬೇಡುತ್ತಿದೆ 
by ಹರೀಶ್ ಶೆಟ್ಟಿ, ಶಿರ್ವ

ಹೆದರಿಕೆ

ಗೆಳತಿ...
ನೀನಿನ್ನೂ 
ಸುಖವಾಗಿರು 
ಎಂದು ನಾನು ಬೇಡುವೆ 
ಆದರೂ 
ನನ್ನ ನೆನಪು ಬಂದಾಗ 
ನೀನು ದುಃಖದಿಂದ ಬಳಲುವೆ 
ಎಂಬ ಹೆದರಿಕೆ ಈ ಮನಸ್ಸಿಗೆ !
by ಹರೀಶ್ ಶೆಟ್ಟಿ, ಶಿರ್ವ

ಕಣ್ಣೀರಿನ ವ್ಯಯ

ಗೆಳತಿ... 
ಇನ್ನು ನಿರ್ಧಾರ ಮಾಡಿದ 
ನಂತರ 
ಈಗ ಈ ಕಣ್ಣೀರಿನ ವ್ಯಯ ಯಾಕೆ ?
ಉಳಿಸಿಡು ಇದನ್ನು,
ನಾನೂ ಉಳಿಸಿದ್ದೇನೆ, 
ಮುಂದೆ ಇಡಿ ಜೀವನ
ನಮಗಿಬ್ಬರಿಗೆ ಇದರ ಆವಶ್ಯಕತೆ ಇದೆ!
by ಹರೀಶ್ ಶೆಟ್ಟಿ, ಶಿರ್ವ

ಎಲೆ ಎಲೆ ಗಿಡ ಗಿಡ


!!ಎಲೆ ಎಲೆ ಗಿಡ ಗಿಡ
ಅವಸ್ಥೆ ನಮ್ಮ ಅರಿಯುತ್ತಿದೆ
ಅದೇಕೋ ಹೂವಿಗೆ ಅರಿವಿಲ್ಲ
ಆದರೆ ಉದ್ಯಾನಕ್ಕೆ ಎಲ್ಲ ಅರಿವಿದೆ!!

!!ಯಾರಾದರು ಯಾರನ್ನು ಪ್ರೀತಿಸಿದ್ದರೆ
ಅದನ್ನು ಅಪರಾಧವೆಂದು ಭಾವಿಸುವರು ಯಾಕೆ
ಯಾರಾದರು ಯಾರಿಗೋಸ್ಕರ ಹಂಬಲಿಸಿದರೆ
ಜನ ನಗುತ್ತಾರೆ ಯಾಕೆ
ಅಪರಿಚಿತ ಈ ಜಗತೆಲ್ಲ
ಇಲ್ಲಿ ನಮ್ಮ ವೇದನೆಯ
ಯಾರಿಗೆ ಅರಿವಿದೆ !!
ಎಲೆ ಎಲೆ...

!!ಪ್ರೀತಿಯ ಹೂವು ಅರಳುವುದು
ಬೀಸುತಿರಲಿ ಎಷ್ಟೇ ಬಿರುಗಾಳಿ
ಕಟ್ಟುವ ಪ್ರೀತಿಯ ವಸತಿ
ನಾವು ಇದೇ ಸ್ಥಳದಲಿ
ಈ ಜಗತ್ತು ಮಿಂಚು ಬೀಳಿಸುತ್ತಿರಲಿ
ಈ ಜಗತ್ತು ಮುಳ್ಳು ಹರಡಿಸುತ್ತಿರಲಿ
ಆದರೆ ಪ್ರೀತಿ ಎಲ್ಲಿ ಕೇಳುತ್ತದೆ !!
ಎಲೆ ಎಲೆ...

!!ತೋರಿಸುವ ಈ ಜಗತ್ತಿಗೆ
ಸ್ವಲ್ಪ ದಿನ ಈ ಜೀವನವಿದೆ ಇನ್ನು
ಹೇಗೆ ನಮ್ಮ ಮಿಲನವಾಗದು
ನಾವು ಸಹ ನಿಶ್ಚಯಿಸಿದ್ದೇವೆ ಇನ್ನು
ಈ ಪ್ರೀತಿಸುವ ಹೃದಯವನ್ನು
ಈ ಪ್ರೀತಿ ಮಾಡುವವರ ಹೃದಯದ ಮಾತಿನ 
ಯಾರಿಗೆ ಏನು ಅರಿವಿದೆ!!
ಎಲೆ ಎಲೆ...

ಮೂಲ : ಮಜ್ರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್
ಸಂಗೀತ : ಲಕ್ಷ್ಮಿಕಾಂತ್ ಪ್ಯಾರೇಲಾಲ್
ಚಿತ್ರ : ಏಕ ನಜರ್
patta patta buta buta, hal hamara jane hai
jane na jane, gul hee na jane, bag toh sara jane hai

koee kisiko chahe, toh kyo gunah samajate hain log
koee kisee kee khatir tadape agar toh hasate hain log
begana aalam hain sara, yaha toh kaee hamara
dard nahee pahachane hai

chahat ke gul khilenge, chalatee rahe hajar aandhiya
ham toh isee chaman me, bandhege pyar ka aashiya
yeh duniya bijalee giraye, yeh duniya kante bichhaye
ishk magar kab mane hai

dikhalayenge jahan ko, kuchh din jo jindaganee hain aur
kaise na ham milenge, hamane bhee dil me thhanee hain aur
abhee matwale dilo kee, mohabbat wale dilo kee
bat koee kya jane hai
http://www.youtube.com/watch?v=M7gxUpB5knk

Tuesday, February 19, 2013

ಒಂದು ವೇಶ್ಯೆಯ ಕಥೆ

ಪ್ರತಾಪ ಬಂದು ಬಾಗಿಲು ತೆರೆದ. 

ದ್ವಾರದಲ್ಲಿ ಸುಮಾರು ೪೫ ವಯಸ್ಸಿನ ಹೆಂಗಸು ನಿಂತಿದ್ದಳು, ಅವಳ ಕೈಯಲ್ಲಿ ಬ್ಯಾಗ್ ಹಾಗು ಹಿಂದೆ ಮೂರು, ನಾಲ್ಕು ಪೆಟ್ಟಿಗೆ ಇತ್ತು.

ಅವನ ಮುಖ ಕೆಂಪೇರಿತು "ಹೇಗೆ ಬಂದೆ? ಪತ್ರ ಆದರೂ ಬರೆಯ ಬೇಕಿತಲ್ಲವೇ" ಎಂದು ಅಸಮಾಧಾನದಿಂದ ನುಡಿದ.

ಅವಳು ನಸು ನಗುತ "ಮಗನ ಮನೆಗೆ ಬರಲಿಕ್ಕೆ ಯಾಕೆ ಇದು ಎಲ್ಲ, ಹೀಗೆಯೇ ಮನಸ್ಸಾಯಿತು ಬಂದೆ" ಎಂದು ಉತ್ತರಿಸಿದಳು.

ಮನಸ್ಸಿಲ್ಲದೆ ಅವನು ಅವಳಿಗೆ ಒಳಗೆ ಬರಲು ಹಾದಿ ಬಿಟ್ಟ.

ಒಳಗಿನಿಂದ ಚಿಂಟು ಓಡಿ ಬಂದ "ಅಜ್ಜಿ ".

ಇವಳು ಸಂತಸದಿಂದ "ಒಹ್ ಒಹ್ ಒಹ್, ಚಿಂಟು ಎಷ್ಟು ದೊಡ್ಡ ಆಗಿದೆ ನೀನು".


ಆಗ ಒಳಗಿನಿಂದ ಪ್ರತಾಪನ ಹೆಂಡತಿ ಗೀತಾ ಬಂದು "ಚಿಂಟು , ಬಾ ಒಳಗೆ" ಎಂದು ಅವನನ್ನು ಎಳೆದು ಒಳಗೆ ನಡೆದಳು.

ಇವಳಿಗೆ ಹೇಗೋ ಅನಿಸಿತು, ಆದರೂ ತನ್ನನ್ನು ಸಾವರಿಸಿ "ಮತ್ತೇನು ವಿಶೇಷ ಪ್ರತಾಪ, ನೀವೆಲ್ಲ ಸೌಖ್ಯ ತಾನೇ?" ಎಂದು ಕೇಳಿದಳು.

ಪ್ರತಾಪ ಮನಸ್ಸಿಲ್ಲದೆ " ಹ್ಮ್ಮ್ , ಸೌಖ್ಯ" ಎಂದು ಉತ್ತರಿಸಿದ. 


ಆಗ ಒಳಗಿನಿಂದ ಗೀತಾ "ರೀ ,ಇಲ್ಲಿ ಬನ್ನಿರಿ " ಎಂದು ಜೋರಾಗಿ ಕರೆದಳು.

ಪ್ರತಾಪ ಒಳಗೆ ಬಂದು "ಏನು? "

ಗೀತಾ "ಇವರು ಇಲ್ಲಿ ಯಾಕೆ ಬಂದಿದ್ದಾರೆ? ಇಲ್ಲಿ ಯಾರಿಗಾದರೂ ಗೊತ್ತದ್ದರೆ ನಮ್ಮ ಮರ್ಯಾದೆ ಬೀದಿ ಪಾಲಾಗುತ್ತದೆ, ಬೇಗ ಅವರಿಗೆ ಏನೋ ನೆಪ ಹೇಳಿ ಇಲ್ಲಿಂದ ಕಳಿಸಿ".

ಪ್ರತಾಪ "ನಾನೇನು ಮಾಡಲಿ ಹೇಳದೆ ಕೇಳದೆ ಬಂದಿದ್ದಾಳೆ".

ಗೀತಾ "ನನಗೇನು ಗೊತ್ತಿಲ್ಲ, ಅವರಿಗೆ ನೇರ ಹೇಳಿ, ಇಲ್ಲಿ ಬಂದು ನಮ್ಮ ಜೀವನ ಹಾಳು ಮಾಡುವುದು ಬೇಡ ಅಂತ".

ಪ್ರತಾಪ ಹೊರಗೆ ಬಂದ, ಅವನ ಮುಖ ನೋಡಿ ಎಲ್ಲ ತಿಳಿದ ಆ ತಾಯಿಗೆ ಬೇಸರವಾದರೂ "ಏನಾಯಿತು ಪ್ರತಾಪ"?

ಪ್ರತಾಪ " ಅಮ್ಮ ನೋಡು, ನಿನ್ನ ವಿಷಯ ಇಲ್ಲಿ ಯಾರಿಗಾದರೂ ತಿಳಿದರೆ ನಮ್ಮ ಜೀವನ ಹಾಳಾಗುತ್ತದೆ, ನೀನು ಇಲ್ಲಿ ಬರಬೇಡ ಅಮ್ಮ, ಬೇಕಾದರೆ ವರುಷಕ್ಕೊಮ್ಮೆ ನಾನೇ ನಿನ್ನಲ್ಲಿಗೆ ಬಂದು ಹೋಗುತ್ತೇನೆ".

ಅವಳ ಮುಖದಲ್ಲಿ ವಿಷಾದ ನಗು ಮೂಡಿತು.


ಮಗ ಹೇಳುವುದು ಸಹಜ ಅಲ್ಲವೇ?


ಅವನ ತಾಯಿ ಆದರೂ ನಾನೊಂದು ವೇಶ್ಯೆ ಎಂಬ ಸತ್ಯ ಸುಲ್ಲಾಗುದಿಲ್ಲವಲ್ಲ?

ಏನಾಯಿತು ವೇಶ್ಯೆಯ ದಾರುಣ ಜೀವನ ಸಾಗಿಸಿ ಸಹ ಇವನಿಗೆ ಒಳ್ಳೆ ಬೋರ್ಡಿಂಗ್ ಶಾಲೆಯಲ್ಲಿ ಕಲಿಸಿ, ಉತ್ತಮ ಶಿಕ್ಷಣ ಕೊಟ್ಟು ಇಂಜಿನಿಯರ್ ಮಾಡಿದರೆ?

ಏನಾಯಿತು ದಿನ ಹತ್ತು ಹದಿನೈದು ಜನರನ್ನು ತೃಪ್ತ ಗೊಳಿಸಿ ಪಡೆದ ಹಣದಿಂದ ತನಗಾಗಿ ಏನೂ ಇಡದೆ ಇವನಿಗಾಗಿ ಜೀವನದ ಎಲ್ಲ ಸುಖ ಸೌಕರ್ಯ ಒದಗಿಸಿದರೆ?

ಏನಾಯಿತು ಜೀವನದ ಎಲ್ಲ ಉಳಿಸಿದ ಹಣದಿಂದ ಇವನಿಗೆ ಈ ಮನೆ ಮಾಡಿ ಕೊಟ್ಟಿದ್ದರೆ?

ಈ ಸೂಳೆ ಒಂದು ದಿನ ನಾನು ಮಗ, ಸೊಸೆ ,ಮೊಮ್ಮಗನೊಟ್ಟಿಗೆ ಸುಖವಾಗಿರುವೆ ಎಂಬ ಕನಸು ಕಂಡಿದ್ದು ತಪ್ಪಲ್ಲವೆ ?

ಈ ದಿನ ನಿತ್ಯದ ವೇದನೆಯಿಂದ ಇಷ್ಟು ಬೇಗ ಮುಕ್ತಿ ಸಿಗುವುದು ಎಂದು ಎನಿಸಿದ್ದು ತಪ್ಪಲ್ಲವೆ?

ಅವಳ ಕಣ್ಣಿಂದ ಕಣ್ಣೀರು ಹರಿಯಲಾರಂಭಿಸಿತು.

ಬೇಗನೆ ಕಣ್ಣೀರು ಒರೆಸಿ " ಪ್ರತಾಪ ಈ ಮೂರು ಪೆಟ್ಟಿಗೆಯಲ್ಲಿ ನಿಮಗಾಗಿ ಉಡುಗೊರೆ, ಬಟ್ಟೆ, ತಿಂಡಿ ತಿನಿಸು ತಂದಿದ್ದೇನೆ, ನಾನಿನ್ನೂ ಬರುತ್ತೇನೆ, ಸುಖವಾಗಿರಿ" ಎಂದು ಹೇಳಿದಳು.

ಪ್ರತಾಪ "ಅಮ್ಮ ಬೇಜಾರ ಮಾಡಬೇಡ.... "

"ಬೇಜಾರ.... ಹ್ಹ್ಮ್ .. ನನಗೆ ಎಂತಹ ಬೇಜಾರ " ಅವಳು ಕಣ್ಣೀರು ಅಡಗಿಸಿ ನಕ್ಕಳು, "ಆಯಿತು ಬರುತ್ತೇನೆ, ಸುಖವಾಗಿರಿ" ಎಂದು ಹೇಳಿ ಹೊರಟಳು.



ಮರಳಿ ಪುನಃ ಅದೇ ಜೀವನಕ್ಕೆ , ದಿನ ನಿತ್ಯ ಸಾಯಲು ಅದೇ ನರಕ ಯಾತನೆ ತುಂಬಿದ ಜೀವನಕ್ಕೆ.



by ಹರೀಶ್ ಶೆಟ್ಟಿ, ಶಿರ್ವ

Monday, February 18, 2013

ಇನ್ನು ಸ್ವಲ್ಪ ಮೆಲ್ಲನೆ

ನನ್ನ ತುಂಬಾ ಮೆಚ್ಚಿನ ಒಂದು ಪಂಕಜ್ ಉದಾಸ್ ಹಾಡಿದ ಘಜಲ್.....
_______________________________________ 

ಇನ್ನು ಸ್ವಲ್ಪ ಮೆಲ್ಲನೆ ನೀನು ನುಡಿ 
ಯಾರೋ ನಿನ್ನ ಹೃದಯಬಡಿತ ಕೇಳುತ್ತಿರಬಹುದು!-೨ 

ಪದಗಳು ಅಧರದಿಂದ ಬೀಳದಿರಲಿ
ಸಮಯದ ಕೈಗಳು ಅದನ್ನು ಆರಿಸಬಹುದು
ಈ ದ್ವಾರ ಗೋಡೆಗಳಿಗೂ ಕಿವಿಗಳಿವೆ
ನಿನ್ನ ಗುಟ್ಟಿನ ಮಾತುಗಳೆಲ್ಲ ಕೇಳಬಹುದು!
ಇನ್ನು ಸ್ವಲ್ಪ....

ಹೀಗೆ ಹೇಳು ನಿನ್ನ ಹೃದಯದ ಕಥೆಯನ್ನು
ಹೃದಯ ಕೇಳಲಿ ಹಾಗು ಕಣ್ಣು ಪುನರಾವರ್ತಿಸಲಿ -೨
ನಮ್ಮ ಸುತ್ತಲಿನ ಈ ಜಗತ್ತು
ಉಸಿರಿನ ಸದ್ದನ್ನೂ ಕೇಳದಿರಲಿ

ಕೇಳದಿರಲಿ!
ಇನ್ನು ಸ್ವಲ್ಪ....

ಬಾ ಈ ಬಾಗಿಲನ್ನು ಮುಚ್ಚುವ
ರಾತ್ರಿ ಕನಸು ಕದಿಯದಿರಲಿ-೨
ಯಾವುದೇ ಅಲೆಮಾರಿ ಬೀಸುವ ಗಾಳಿ
ಹೃದಯದ ಮಾತನ್ನು ದೂರ ಸರಿಸದಿರಲಿ

ದೂರ ಸರಿಸದಿರಲಿ!
ಇನ್ನು ಸ್ವಲ್ಪ....

ಇಂದು ಇಷ್ಟು ಸನಿಹ ಬಾ ನೀನು
ಅಂತರದ ಯಾವುದೇ ಗುರುತು ಇರದಿರಲಿ -೨
ಹೀಗೆ ಮರೆಯಾಗುವ ನಾನು ನಿನ್ನಲಿ ನೀನು ನನ್ನಲಿ
ನಮ್ಮ ನಡುವೆ ಯಾವುದೇ ಅಂತರವಿರದಿರಲಿ
 
ಅಂತರವಿರದಿರಲಿ !
ಇನ್ನು ಸ್ವಲ್ಪ....

ಮೂಲ : ಕ್ಷಮಿಸಿ , ಅರಿವಿಲ್ಲ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಪಂಕಜ್ ಉದಾಸ್
ಆಲ್ಬಮ್ : ವೊಹ್ ಚಾಂದನಿ ರಾತೆ
aur aahista kijiye baatein, dhadkanein koyi sun raha hoga-2

labj girane na paaye honto se, waqt ke haat inako chun lenge
kaan rakhate hai yeh daro deewaar, raaj ki saari baat sun lenge
aur.....

aise bolo ke dil ka afsaana, dil sune aur nigaah dohraaye - 2
apane chaaron taraf ki yeh duniya
saans ka shor bhi na sun paaye, na sun paaye
aur....

aayiye band kar le darwaaje, raat sapane chura na le jaaye-2
koyi jhonka hawa ka aawaara
dil ki baaton ko uda na le jaaye, na le jaaye
aur.....

aaj itane kareeb aa jaao, duriyon ka kahin nishaan na rahein -2
aise ek dusare mein gum ho jaayein
faasala koyi darmiya na reh jaaye, na reh jaaye
aur.....

http://www.youtube.com/watch?v=lWBZypQpwSM

ದುರ್ಭಾಗ್ಯ

ದುರ್ಭಾಗ್ಯ 
____
ಕಲ್ಲಿನ ಕೋಟೆಯಲಿ 
ಮಲ್ಲಿಗೆಯ ಹೂವು 
ಅರಳಿ ಬಾಡುತಿದೆ
______________
ನದಿಯ ತಟದಲಿ 
ನಿಂತ ಹಳೆ ದೋಣಿಗೆ 
ನೀರಲ್ಲಿ ತೇಲುವ ಮನಸ್ಸಾಗುತ್ತಿದೆ 
___________________
ಗುಡಿಸಲ ಮಣ್ಣ ಅಡಿಯಲಿ
ಕಳ್ಳನೊಬ್ಬ ಬಚ್ಚಿಟ್ಟ
ಅಪಾರ ಸಂಪತ್ತು ಅಡಗಿದೆ
ಗುಡಿಸಲಲ್ಲಿ ವಾಸಿಸುವ
ಬಡ ಕುಟುಂಬ ಹಸಿವಿನಿಂದ
ಬಳಲುತ್ತಿದ್ದಾರೆ ಅನ್ನವಿಲ್ಲದೆ
____________________
ಅವನೊಬ್ಬ
ಪ್ರಸ್ಸಿದ್ದ ಮಿಠಾಯಿ ಉದ್ಯಮಿ
ಆದರೆ ಅವನಿಗೆ
ಸಿಹಿ ತಿನ್ನುವ ಭಾಗ್ಯವಿಲ್ಲ
ಯಾಕೆಂದರೆ ಅವನಿಗೆ ಸಿಹಿ ರೋಗ
____________________
ಹಕ್ಕಿವೊಂದು ಮರದಲಿ
ಗೂಡು ಕಟ್ಟಿ
ಹೊಟ್ಟೆ ಪಾಡಿಗಾಗಿ
ಹೊರ ಹೋಯಿತು
ಹಿಂತಿರುಗಿ ಬಂದು ನೋಡಿದರೆ
ಆ ಮರವೇ ಇರಲಿಲ್ಲ
by ಹರೀಶ್ ಶೆಟ್ಟಿ, ಶಿರ್ವ

Sunday, February 17, 2013

ಮನಸ್ಸಿನ ಒಡ್ಡೋಲಗದಲಿ

ಮನಸ್ಸಿನ ಒಡ್ಡೋಲಗದಲಿ 
ನಿನ್ನದೆ ನೆನಪುಗಳ ಸುಳಿದಾಟ 
by ಹರೀಶ್ ಶೆಟ್ಟಿ, ಶಿರ್ವ

ಶೋಷಣೆ

ಶೋಷಣೆ 
______
ಬರಹಗಾರ ಬರೆದು ಕಳಿಸಿದ 
ಬರಹವನ್ನು 
ಪತ್ರಿಕೆಯ ಸಂಪಾದಕ ಓದದೇ
ಕಸದ ಬುಟ್ಟಿಗೆ ಬಿಸಾಕಿದ 
by ಹರೀಶ್ ಶೆಟ್ಟಿ, ಶಿರ್ವ

ಸತ್ಯ ಸುಳ್ಳು

ಸತ್ಯ 
ಭೂಮಿಯ ಮಣ್ಣಲ್ಲಿ ಚಿಗುರಿದ ಸಸಿ 
ಸುಳ್ಳು 
ಆ ಭೂಮಿ ಬಂಜರವಾಗಿದೆ 
by ಹರೀಶ್ ಶೆಟ್ಟಿ, ಶಿರ್ವ

Saturday, February 16, 2013

ಬರೆದು ಮರೆತ ಕತೆ

ನಾನು ಅನುಭವಿಸಿ 
ಬರೆದು ಮರೆತ ಕತೆ 
ಓದುಗರ ಮನಸ್ಸಲಿ ಇಂದೂ ಜೀವಿತ 
by ಹರೀಶ್ ಶೆಟ್ಟಿ, ಶಿರ್ವ

ಒಂದು ಪುಟ್ಟ ಸಸಿ

ಭೂಕಂಪ ಬಂದು ಎಲ್ಲ ನಾಶವಾಯಿತು 
ಅಲ್ಲಿ ಮಣ್ಣಿಂದ ಬೀಜ ಮೊಳಕೆ ಒಡೆದು ಒಂದು ಪುಟ್ಟ ಸಸಿ ಜೀವನ ಆರಂಭಿಸಿತು 
by ಹರೀಶ್ ಶೆಟ್ಟಿ, ಶಿರ್ವ

Friday, February 15, 2013

ಜಾಗೃತಿ

ಕಹಿ ಮದ್ದು ಆದರೇನು
ರೋಗ ಗುಣವಾದರೆ
ತಲೆ ತಗ್ಗಿದ್ದರೇನು
ಬುದ್ದಿ ತಲೆಯಲಿ ಹೊಕ್ಕಿದರೆ
ಕಾಲು ಜಾರಿ ಬಿದ್ದರೇನು
ನಡಿಕೆ ಕಲಿಸಿ ಹೋದರೆ
ಮುಳ್ಳು ಚುಚ್ಚಿದರೇನು
ಸುಂದರ ಹೂವನ್ನು ಪಡೆದರೆ
ಬಿರುಗಾಳಿ ಜೀವನದಲಿ ಬಂದರೇನು
ಬದುಕ ಮಾರ್ಗ ತಿಳಿಸಿ ಹೋದರೆ
by ಹರೀಶ್ ಶೆಟ್ಟಿ, ಶಿರ್ವ 

ನೋವಿನ ಹೊರತಾಗಿ

ಮುಖವಾಡಗಳ ಜಗತ್ತು

ಮನಸ್ಸ ಬಾನಲ್ಲಿ

ಪ್ರೀತಿಯ ಬೇರು

ಮಲ್ಲಿಗೆ ಹೂವು

ಆಶಿಸುತ್ತೇನೆ

Saturday, February 9, 2013

ಸಂಜೆಯಿಂದ ಕಂಗಳು


ನನ್ನ ಮೆಚ್ಚಿನ ಗಝಲ್ ಗಾಯಕ ಜಗಜಿತ್ ಸಿಂಗ್ ಅವರ ನೆನಪಿನಲ್ಲಿ ...
"ಶಾಮ್ ಸೆ ಆಂಖ್ ಮೇ ನಮಿ ಸಿ ಹೈ"  ಅದರ ಅನುವಾದದ ಪ್ರಯತ್ನ
___________________________________________
ಸಂಜೆಯಿಂದ ಕಂಗಳು
ತೇವಗೊಂಡತಾಗಿದೆ
ಇಂದು ಪುನಃ ನಿನ್ನ ಕೊರತೆ
ಉಂಟಂತಾಗಿದೆ
ಸಂಜೆಯಿಂದ ಕಂಗಳು....

ದಫನ ಮಾಡು ನನ್ನನ್ನು
ಅಂದರೆ ಉಸಿರು ಸಿಗಲಿ
ನಾಡಿಮಿಡಿತ ಸ್ವಲ್ಪ ಹೊತ್ತಿನಿಂದ
ನಿಂತಂತಾಗಿದೆ
ಸಂಜೆಯಿಂದ ಕಂಗಳು....

ಸಮಯ ನಿಲ್ಲುವುದಿಲ್ಲ
ಎಲ್ಲಿಯೂ ಸ್ಥಿರವಾಗಿ
ಇದರ ಸ್ವಭಾವವೂ
ಮನುಷ್ಯನಾಗೆಯೇ ಇದೆ
ಸಂಜೆಯಿಂದ ಕಂಗಳು....

ಯಾವುದೇ ಸಂಬಂಧ
ಉಳಿಯಲಿಲ್ಲ ಆದರೂ
ಒಂದು ಒಪ್ಪಂದದ
ಅಗತ್ಯವಿರುವಂತಾಗಿದೆ
ಸಂಜೆಯಿಂದ ಕಂಗಳು....

shaam se aankh mein nami si hai
aaj phir aapaki kami si hai
shaam se aankh

dafn kar do hamein ke saans mile
nabz kuchh der se thami si hai
aaj phir aapaki

vaqt rahataa nahin kahin tik kar
isaki aadat bhi aadami si hai
aaj phir aapaki

koyi rishtaa nahin rahaa phir bhi
ek tasalim laazami si hai
shaam se aankh
http://www.youtube.com/watch?v=RdEbI8_pp7Y

ಧಾರಾಕಾರ ಮಳೆ


ಗೆಳತಿ ...
ಅಲ್ಲಿ ನಿನ್ನ ಹೃದಯದಲಿ
ಗುಡುಗು ಮಿಂಚಿನ ಅರ್ಬಟ
ಇಲ್ಲಿ ನನ್ನ ಕಂಗಳಿಂದ
ಸುರಿಯುತ್ತಿದೆ
ಧಾರಾಕಾರ ಮಳೆ ಪಟ ಪಟ
by ಹರೀಶ್ ಶೆಟ್ಟಿ, ಶಿರ್ವ

ಒಂದು ಹೊಸ ದಿನ

ಮುಂಜಾನೆಯ ತಣ್ಣ ಪವನ 
ರವಿಯ ಆಗಮನ 
ಕೋಗಿಲೆಯ ಮಧುರ ತಾನ 
ಹಕ್ಕಿಗಳ ಚಿಲಿಪಿಲಿ ಗಾನ 
ಅರಳುವ ಹೂಗಳ ಯೌವನ 
ದುಂಬಿ ಪರಾಯಣ 
ಚಿಟ್ಟೆಯ ಉಲ್ಲಾಸ ಪ್ರಯಾಣ 
ನಿಸರ್ಗದ ನವೀನ ಚಿತ್ರಣ 
ಒಂದು ಹೊಸ ದಿನ 
ಒಂದು ಹೊಸ ಜೀವನ 
ಶುಭ ಮುಂಜಾನೆ.

ಏಕಾಂತದ ಅರ್ಥ

ಆ ಆಕಾಶದ 
ಪೂರ್ಣ ಚಂದ್ರನಿಗೆ ಕೇಳಿ
ಏಕಾಂತದ ಅರ್ಥ 
ನಕ್ಷತ್ರಗಳು ಸುತ್ತ ಮುತ್ತ 
ಆದರೆ ಅವನು ಶಾಂತ ಚಿತ್ತ 
ದಿನ ಪ್ರತಿದಿನ ಕ್ಷೀಣವಾಗುವನು ಕರಗುತ 
by ಹರೀಶ್ ಶೆಟ್ಟಿ, ಶಿರ್ವ

Thursday, February 7, 2013

ಬೆಳಗುತ್ತಿದೆ ಯಾರಿಗಾಗಿ

ಬೆಳಗುತ್ತಿದೆ ಯಾರಿಗಾಗಿ
ನಿನ್ನ ಕಂಗಳ ಜ್ಯೋತಿ 
ಹುಡುಕಿ ತಂದಿರುವೆ ನಾನದೇ ಗೀತೆ ನಿನಗಾಗಿ

ನೋವಾಗಿ ನನ್ನ ಹೃದಯದಲಿ ಉಳಿದದ್ದು
ಮಾಯವಾಗಲಿಲ್ಲ 
ಮಾಯೆಯಂತೆ ನಿನ್ನ ಕಣ್ಣಲ್ಲಿ ನಿಂತೋಯಿತು
ತೆರಳಲಿಲ್ಲ
ಇಂದು ತಂದಿರುವೆ ನಾನದೇ ಗೀತೆ ನಿನಗಾಗಿ

ಹೃದಯದಲ್ಲಿಡು ಇದನ್ನು ಕೈಯಿಂದ ಇದು
ಇಳಿಯದಿರಲಿ 
ಗಾಜಿಗಿಂತ ನಾಜೂಕು ನನ್ನ ಗೀತೆ
ತುಂಡಾಗದಿರಲಿ 
ಗುನುಗುನಿಸುವೆ ನಾನಿದೇ ಗೀತೆ ನಿನಗಾಗಿ 

ಯಾವ ತನಕ ನಿನ್ನ ರಸ ತುಂಬಿದ ಅಧರದಿಂದ
ಇದು ಸ್ಪರ್ಶಿಸದೆ ಇದ್ದಲ್ಲಿ 
ಹೀಗೆಯೇ ಸೋಮಾರಿ ಅಲೆಯುವುದು
ಇದು ನಿನ್ನ ಕೇಶ ರಾಶಿಯ ಅಡಿಯಲ್ಲಿ 
ಹಾಡುತ್ತಿರುವೆ ಇದೇ ಗೀತೆ ನಾನು ನಿನಗಾಗಿ 

ಮೂಲ : ಮಜ್ರೂಹ್  ಸುಲ್ತಂಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
ಹಾಡಿದವರು : ತಲತ್  ಮೆಹಮೂದ್ 
ಸಂಗೀತ : ಎಸ್. ಡೀ.  ಬರ್ಮನ್ 
ಚಿತ್ರ :ಸುಜಾತ 

Jalte hain jiske liye, teri aakhon ke diye,
Dhoond laya hoon wohi geet main tere liye

Dard ban ke jo mere dil mein raha dhal na saka
Jadu ban ke teri aankhon mein ruka chal na saka
Aaj laya hun wohi geet main tere liye

Dil main rakh lena ise haathon se ye chhoote na kahin,
Geet naazuk hai mera sheeshe se bhi toote na kahin
Gungunaaoonga yehi geet main tere liye

Jab talak na yeh tere ras ke bhare honton se mile,
Yunhi aawara phirega yeh teri zulfon ke tale
Gaaye jaaoonga yehi geet main tere liye

ಕಳೆಯಲಾಗುವುದಿಲ್ಲ ಇರುಳು


ಲತಾ :
!!ಕಳೆಯಲಾಗುವುದಿಲ್ಲ ಇರುಳು 
ವಿರಹ ಮಾಡುತ್ತಿದೆ ಇರುಳು
ತೇವಗೊಂಡಿದ ಕಂಗಳು
ಎಷ್ಟೋ ಬಾರಿ ಆರಿಸಿತು ಇರುಳು!!

!!ಕಳೆದೋದ ನುಡಿಗಳು
ಯಾರಾದರೂ ಪುನಃ ನುಡಿದರೆ
ಮರೆತೋದ ಹೆಸರಿಂದ
ಯಾರಾದರೂ ಕರೆದರೆ
ಚಂದ್ರ ...ಚಂದ್ರ !!
ಹೊ ಹೊ ................ಹೊ

ಭೂಪಿಂದರ್ :
!!ಓ ಚಂದ್ರವಿಲ್ಲದೆ ಅವಳು  
ಅವಳಿಲ್ಲದೆ ಇರುಳು
ಎಚ್ಚರವಿದ್ದ ಕಂಗಳಲ್ಲಿ ಈ ಗಳಿಗೆ ಬರಲಿಲ್ಲ ಇರುಳು
ಕಳೆಯಲಾಗುವುದಿಲ್ಲ ಇರುಳು....

ಭೂಪಿಂದರ್ :
ಯುಗ ಬರುತ್ತದೆ ಹಾಗು
ಯುಗ ತೆರಳುವುದು
ಸಣ್ಣ ಸಣ್ಣ ನೆನಪಿನ

ಲತಾ :
ಕ್ಷಣ ಹೋಗದು
ಸುಳ್ಳಂತೆ ಕಪ್ಪೆನಿಸುತ್ತಿದೆ 
ಕಪ್ಪೆನಿಸುತ್ತಿದೆ ರಾತ್ರಿ
ಮುನಿದ ಕಂಗಳು
ಎಷ್ಟೋ ಬಾರಿ ಒಲಿಸಿತು ಇರುಳು

ಲತಾ/ಭೂಪಿಂದರ್ :
!!ಕಳೆಯಲಾಗುವುದಿಲ್ಲ ಇರುಳು
ವಿರಹ ಮಾಡುತ್ತಿದೆ ಇರುಳು
ತೇವಗೊಂಡಿದ ಕಂಗಳು
ಎಷ್ಟೋ ಬಾರಿ ಆರಿಸಿತು ಇರುಳು !!

ಮೂಲ : ಗುಲ್ಶಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು :ಲತಾ ಮಂಗೇಶ್ಕರ್ /ಭೂಪಿಂದರ್ ಸಿಂಗ್ :
ಸಂಗೀತ : ಆರ್. ಡೀ . ಬರ್ಮನ್
ಚಿತ್ರ : ಪರಿಚಯ್
लता:
बीती न बिताई रैना बिरहा की जाई रैना
भीगी हुई अंखियों ने लाख बुझाई रैना

बीती हुई बतियाँ कोई दोहराये
भूले हुए नामों से कोई तो बुलाये
चाँद ... चाँद ...
हो~ ओ~

ओ~

भुपिन्दर:
ओ~ चाँद की बिन दीवानी, बिन दीवानी रतिया
जागी हुई अंखियों में रात न आई रैना
बीती न बिताई रैना बिरहा की जाई रैना
बीती न बिताई रैना

भुपिन्दर:
युग आते हैं और युग जाए
छोटी छोटी यादों के

लता:
पल नहीं जाए
झूठ से काली लागे, लागे काली रतिया
रूठी हुईं अंखियों ने लाख मनाई रैना

लता, भुपिन्दर:
बीती न बिताई रैना बिरहा की जाई रैना
बीती न बिताई रैना
http://www.youtube.com/watch?v=qp7f0KNu85o

ಅಸೂಯೆ

ಕವಿತೆಯಲ್ಲಿ ದ್ವೇಷ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...